twitter
    For Quick Alerts
    ALLOW NOTIFICATIONS  
    For Daily Alerts

    ಪ್ರಪಂಚದ ಅತಿ ದೊಡ್ಡ ಪ್ರಾಣಿ ಯಾವ ಪರಿಸರದಲ್ಲಿ ಬದುಕುತ್ತದೆ?

    |

    ಪ್ರಪಂಚದ ಅತಿ ದೊಡ್ಡ ಪ್ರಾಣಿ ಯಾವುದು ಎಂದು ಕೇಳಿದ್ರೆ ಹಲವರಿಗೆ ಹಲವು ಪ್ರಾಣಿಗಳು ನೆನಪಾಗುತ್ತೆ. ಆದರೆ ಅದು ಸರಿಯಾದ ಉತ್ತರನಾ ಎಂದು ಗೊಂದಲ ಉಂಟಾಗುತ್ತೆ. ಸರಿಯಾದ ಉತ್ತರ ಆಗಿದ್ದರೂ ತಪ್ಪಾಯ್ತಾ ಎಂಬ ಅನುಮಾನ ಕಾಡ್ತಿರುತ್ತೆ.

    ಇಂತಹದ್ದೇ ಒಂದು ಪ್ರಶ್ನೆ ಕನ್ನಡದ ಕೋಟ್ಯಧಿಪತಿಯ ಮೂರನೇ ಆವೃತ್ತಿಯಲ್ಲಿ ಕೇಳಲಾಯಿತು. ನಾಲ್ಕನೇ ವಾರದ ಮೊದಲ ಸ್ಪರ್ಧಿ ಗೀತಾ ಅವರಿಗೆ 'ಪ್ರಪಂಚದ ಅತಿ ದೊಡ್ಡ ಪ್ರಾಣಿ ಯಾವ ಪರಿಸರದಲ್ಲಿ ಬದುಕುತ್ತದೆ?' ಎಂದು ಕೇಳಲಾಗಿತ್ತು.

    ಕೋಟ್ಯಧಿಪತಿ ಸೆಟ್ ನಲ್ಲಿ ಕಣ್ಣೀರು ಹಾಕಿದ ಯುವತಿ ರೇಣುಕಾ ಕೋಟ್ಯಧಿಪತಿ ಸೆಟ್ ನಲ್ಲಿ ಕಣ್ಣೀರು ಹಾಕಿದ ಯುವತಿ ರೇಣುಕಾ

    ಬಹಳ ಕಾನ್ಫಿಡೆನ್ಸ್ ಆಗಿ ಗೀತಾ ಉತ್ತರ ನೀಡಿದ್ರು. ಆದರೆ ಗೀತಾ ನೀಡಿದ ಉತ್ತರ ಸರಿಯಾಗಿರಲಿಲ್ಲ. ಗೀತಾ ಈ ಪ್ರಶ್ನೆಯಿಂದ ಸ್ವಲ್ಪ ಕನ್ ಫ್ಯೂಸ್ ಮಾಡಿಕೊಂಡ್ರು. ಆಮೇಲೆ ಪುನೀತ್ ಹೇಳಿದ ಸ್ಪಷ್ಟನೆ ಕೇಳಿ ನಿರಾಸೆಯಿಂದ ಹೊರನಡೆದರು. ಅಷ್ಟಕ್ಕೂ, ಪ್ರಪಂಚದ ಅತಿ ದೊಡ್ಡ ಪ್ರಾಣಿ ಯಾವ ಪರಿಸರದಲ್ಲಿ ಬದುಕುತ್ತದೆ? ಮುಂದೆ ಓದಿ.....

    1.60 ಲಕ್ಷದ ಪ್ರಶ್ನೆಗೆ ಉತ್ತರಿಸಲಿಲ್ಲ

    1.60 ಲಕ್ಷದ ಪ್ರಶ್ನೆಗೆ ಉತ್ತರಿಸಲಿಲ್ಲ

    ಸತತ ಏಂಟು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ 80 ಸಾವಿರ ರೂಪಾಯಿ ಗೆದ್ದುಕೊಂಡಿದ್ದ ಗೀತಾ ಅವರು, ಒಂಭತ್ತನೇ ಪ್ರಶ್ನೆಯಲ್ಲಿ ಗೊಂದಲಕ್ಕೆ ಒಳಗಾದರು. ಹೆಚ್ಚು ಯೋಚನೆ ಮಾಡದೇ ಆತುರ ಮತ್ತು ಆತಂಕದಿಂದ ಉತ್ತರ ನೀಡಿ ಕೈಸುಟ್ಟುಕೊಂಡರು. ಅಲ್ಲಿಗೆ 1.60 ಲಕ್ಷದ ಪ್ರಶ್ನೆಯಿಂದ ನಿರ್ಗಮಿಸಿದರು.

    ಕನ್ನಡದ ಕೋಟ್ಯಧಿಪತಿಯಲ್ಲಿ ಭರ್ಜರಿ ಬೇಟೆ ಮಾಡಿದ ಲಾರಿ ಡ್ರೈವರ್ ಈರಪ್ಪಕನ್ನಡದ ಕೋಟ್ಯಧಿಪತಿಯಲ್ಲಿ ಭರ್ಜರಿ ಬೇಟೆ ಮಾಡಿದ ಲಾರಿ ಡ್ರೈವರ್ ಈರಪ್ಪ

    ಯಾವುದು ಆ ಪ್ರಶ್ನೆ?

    ಯಾವುದು ಆ ಪ್ರಶ್ನೆ?

    ಪ್ರಪಂಚದ ಅತಿ ದೊಡ್ಡ ಪ್ರಾಣಿ ಯಾವ ಪರಿಸರದಲ್ಲಿ ಬದುಕುತ್ತದೆ?

    A ಕಾಡು

    B ಪರ್ವತ

    C ಮರುಭೂಮಿ

    D ಸಾಗರ

    ಎಲ್ಲರ ಮನಸ್ಸಲ್ಲಿ ಬರೋದು ಅದೇ.!

    ಎಲ್ಲರ ಮನಸ್ಸಲ್ಲಿ ಬರೋದು ಅದೇ.!

    ವಿಶ್ವದ ಬಹುದೊಡ್ಡ ಪ್ರಾಣಿ ಯಾವುದು ಎಂದಾಕ್ಷಣ ಬಹುತೇಕರಿಗೆ ನೆನಪಾಗುವುದೇ ಆನೆ. ಅದಕ್ಕಿಂತ ದೊಡ್ಡ ಪ್ರಾಣಿಯನ್ನ ಸಾಮಾನ್ಯವಾಗಿ ಹೆಚ್ಚು ಜನರು ನೋಡುವುದಿಲ್ಲ. ಎಲ್ಲೋ ಓದಿ ತಿಳಿದುಕೊಂಡಿದ್ದರು ಅದು ನೆನಪಾಗುವುದಿಲ್ಲ. ಇಲ್ಲಿ ಗೀತಾ ಅವರಿಗೆ ಆಗಿದ್ದು ಇದೇ. ದೊಡ್ಡ ಪ್ರಾಣಿ ಎಂದಾಕ್ಷಣ ಆನೆ ಎಂದರು. ಅದು ಎಲ್ಲಿ ಬದುಕುತ್ತದೆ ಎಂದಾಗ ಕಾಡು ಎಂದರು.

    ಕೋಟ್ಯಧಿಪತಿಯ ಮೊದಲ ಸ್ಪರ್ಧಿಗೆ ಕೈಕೊಟ್ಟ 25 ಲಕ್ಷದ ಆ ಪ್ರಶ್ನೆ ಇದೇ.! ಕೋಟ್ಯಧಿಪತಿಯ ಮೊದಲ ಸ್ಪರ್ಧಿಗೆ ಕೈಕೊಟ್ಟ 25 ಲಕ್ಷದ ಆ ಪ್ರಶ್ನೆ ಇದೇ.!

    ಪ್ರಪಂಚದ ಅತಿ ದೊಡ್ಡ ಪ್ರಾಣಿ ಆನೆಯಲ್ಲ.!

    ಪ್ರಪಂಚದ ಅತಿ ದೊಡ್ಡ ಪ್ರಾಣಿ ಆನೆಯಲ್ಲ.!

    ಅಂದ್ಹಾಗೆ, ಪ್ರಪಂಚದ ಅತಿ ದೊಡ್ಡ ಪ್ರಾಣಿ ಆನೆಯಲ್ಲ, ತಿಮಿಂಗಿಲ. ಇದು ನೂರು ಅಡಿ ಉದ್ದ ಇರುತ್ತೆ. 200 ಟನ್ ನಷ್ಟು ತೂಕ ಇರುತ್ತೆ. ಹಾಗ್ನೋಡಿದ್ರೆ ಆನೆಗಿಂತ ದೊಡ್ದದು. ಲೈಫ್ ಲೈನ್ ಇತ್ತು. ಆದರೆ, ಬಳಸಿಕೊಂಡಿಲ್ಲ. ಹೀಗಾಗಿ, ಅದೃಷ್ಟ ಕೈಕೊಡ್ತು. ಗೆದ್ದಿದ್ದ 80 ಸಾವಿರವನ್ನ ಕಳೆದುಕೊಂಡು ಕೇವಲ 10 ಸಾವಿರ ತೆಗೆದುಕೊಂಡು ಹೋದರು.

    English summary
    Kannadada kotyadhipathi 4: The largest creature in the world lives in which environment? Kannadada kotyadipathi contestant geetha did not answered for this question.
    Monday, July 15, 2019, 17:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X