'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ

By ಪ್ರಿಯಾ ದೊರೆ

ಈಗ ಎಲ್ಲಾ ವಾಹಿನಿಗಳಲ್ಲೂ ಹೊಸ ಧಾರಾವಾಹಿಗಳದ್ದೇ ಕಾರುಬಾರು. ಕಲರ್ಸ್‌ ಕನ್ನಡ ವಾಹಿನಿಯಲ್ಲಂತೂ ಮೂಡಿಬರುತ್ತಿರುವ ಬಹುತೇಕ ಧಾರಾವಾಹಿಗಳು ಹೊಸದೇ ಆಗಿವೆ. ಧಾರಾವಾಹಿಗಳ ನಡುವೆ ದಿನದಿಂದ ದಿನಕ್ಕೆ ಸ್ಪರ್ಧೆ ಹೆಚ್ಚಾಗ ತೊಡಗಿದೆ. ನಾವು ನಂಬರ್ ಒನ್ ಸ್ಥಾನ ಪಡೆಯಬೇಕು ಎಂದು ಜಿದ್ದಿಗೆ ಬಿದ್ದಂತೆ ಹೊಸ ಹೊಸ ತಿರುವುಗಳನ್ನು ಕೊಡುತ್ತಾ ಮುಂದೆ ಸಾಗುತ್ತಿವೆ.

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಧಾರಾವಾಹಿಗಳಲ್ಲಿ ಕೆಲವು ಪ್ರೇಕ್ಷಕರ ಮನಸನ್ನು ಗೆದ್ದಿವೆ. ಇನ್ನೂ ಸೋಶಿಯಲ್ ಮೀಡಿಯಾ ಹವಾ ಹೆಚ್ಚಾಗಿರುವುದರಿಂದ ಧಾರಾವಾಹಿ ತಂಡಗಳು ಕೂಡ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಜನರನ್ನು ತಲುಪುವುದರಲ್ಲಿ ಸಕ್ಸಸ್‌ ಆಗಿವೆ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಭಾಗ್ಯಲಕ್ಷ್ಮೀ' ಹಾಗೂ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯೂ ಈಗ ಹಿಟ್‌ ಆಗಿದೆ. ಇದರಲ್ಲಿ ಭಾಗ್ಯ ತನ್ನ ತಂಗಿ ಲಕ್ಷ್ಮೀಯನ್ನು ಆಸೆ ಪಟ್ಟು ವೈಷ್ಣವ್‌ಗೆ ಕೊಟ್ಟು ಮದುವೆ ಮಾಡಿದ್ದಾಳೆ.

The prizes of the Lakshmi Baramma and Bhagya Lakshmi serial contest have been distributed

ಲಕ್ಷ್ಮೀಯ ಅತ್ತೆ ಕಾವೇರಿಗೆ ಅಧಿಕಾರದ ದುರಾಸೆ. ಮನೆಯಲ್ಲಿ ನನ್ನನ್ನು ಬಿಟ್ಟರೆ ಬೇರೆ ಯಾರು ಅಧಿಕಾರ ನಡೆಸಬಾರದು. ಜೊತೆಗೆ ಮನೆಯಲ್ಲೂ ತಾನು ಹೇಳಿದಂತೆಯೇ ನಡೆಯಬೇಕು. ತನ್ನ ಮಾತನ್ನೇ ಎಲ್ಲರೂ ಕೇಳಬೇಕು. ಮಗನಿಗೆ ಅಮ್ಮ ಅದೆಷ್ಟು ಪ್ರೀತಿ ಮಾಡ್ತಾಳೆ ಎನಿಸಬೇಕು. ಸೊಸೆ ಬಂದರೂ ಮಗನ ಜವಬ್ದಾರಿ ತಾನೇ ತೆಗೆದುಕೊಳ್ಳಬೇಕು ಎಂದು ಬಯಸಿದವಳು. ಈಗ ಕಾವೇರಿ ಸಂಕಷ್ಟದಲ್ಲಿ ಸಿಲುಕಿದ್ದಾಳೆ. ಲಕ್ಷ್ಮೀ ತಾನೇ ಆರಿಸಿದ ಸೊಸೆ. ಆದ್ರೆ ಏನು ಮಾಡುವುದು ಯಾವ ಕಾರಣಕ್ಕೆ ವೈಷ್ಣವ್‌ನಿಂದ ಕೀರ್ತಿಯನ್ನು ದೂರ ಮಾಡಿದಳೋ ಈಗ ಲಕ್ಷ್ಮೀಯಿಂದ ಅದೇ ನಡೆಯುತ್ತಿದೆ.

ತನ್ನ ಮನದೊಳಗೆ ಕೊತ ಕೊತ ಅಂತ ಕಾವೇರಿ ಕುದಿಯಲು ಶುರು ಮಾಡಿದ್ದಾಳೆ. ಮುಂದೆ ಇನ್ಯಾವ ರೀತಿಯಲ್ಲಿ ಲಕ್ಷ್ಮೀಗೆ ಇದು ಸಮಸ್ಯೆಯಾಗಿ ಬದಲಾಗುತ್ತೋ ತಿಳಿಯದು. ಮೊದಲೇ ಸುಪ್ರೀತಾ, ಕುಸುಮಾ ಬಳಿ ಹೇಳಿ ಕಳುಹಿಸಿದ್ದಾಳೆ. ಲಕ್ಷ್ಮೀಗೆ ಹೆಚ್ಚು ತೊಂದರೆಯಾಗುವುದು ತನ್ನಿಂದ ಅಲ್ಲ ನಿನ್ನ ತಂಗಿ ಕಾವೇರಿಯಿಂದಲೇ ಎಂದು ಹೇಳಿದ್ದಾಳೆ. ಲಕ್ಷ್ಮೀ ಮುತುವರ್ಜಿ ವಹಿಸಿಕೊಂಡು ಮನೆ ಕೆಲಸ ಮಾಡುತ್ತಿರುವುದು ಕಾವೇರಿಗೆ ಆತಂಕ ಮೂಡಿಸಿದೆ. ಇನ್ನು ಈ ಧಾರಾವಾಹಿಯಲ್ಲಿ ಡೆಸ್ಟಿನಿ ಮದುವೆಯನ್ನು ಮಾಡಿದ್ದು, ಬಹಳ ಅದ್ಧೂರಿಯಾಗಿ ಮದುವೆಯನ್ನು ಶೂಟ್‌ ಮಾಡಲಾಗಿತ್ತು.

ಇದಕ್ಕಾಗಿ ಧಾರಾವಾಹಿ ತಂಡ ದೊಡ್ಡ ಸ್ಥಳವನ್ನೇ ಬುಕ್‌ ಮಾಡಿಕೊಂಡಿತ್ತು. ಇದರ ಬಗ್ಗೆಯೂ ವಾಹಿನಿ ತನ್ನ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಡೆಸ್ಟಿನಿ ಮದುವೆಯನ್ನು ದಿ ಕಲಾ ನಿವಾಸ್‌ ಎಂಬಲ್ಲಿ ಮಾಡಿದ್ದು, ಇದರ ಬಗ್ಗೆ ವಿಶೇಷವಾದ ವೀಡಿಯೋವನ್ನು ಕೂಡ ಶೇರ್‌ ಮಾಡಿಕೊಂಡಿದೆ. ಇದು ಶೂಟಿಂಗ್‌ಗಾಗಿಯೇ ಹೇಳಿ ಮಾಡಿಸಿದ ಜಾಗ ಎಂಬಂತೆ ಇತ್ತು. ಕಲ್ಯಾಣಿ, ಹಳೆ ಕಾಲದ ಮನೆ, ದೊಡ್ಡ ಖಾಲಿ ಜಾಗ ಇದಾಗಿದೆ.

The prizes of the Lakshmi Baramma and Bhagya Lakshmi serial contest have been distributed

ಇನ್ನು ಈ ಧಾರಾವಾಹಿ ಪ್ರೇಕ್ಷಕರಿಗೆ ಕೆಲ ಪ್ರಶ್ನೆಗಳನ್ನು ಕೇಳಿತ್ತು. ಸರಿಯಾಗಿ ಉತ್ತರ ಕೊಟ್ಟ ಎರಡು ಕುಟುಂಬಗಳಿಗೆ ಸೀರಿಯಲ್‌ ಸೆಟ್‌ಗೆ ಬರುವ ಅವಕಾಶವನ್ನು ಕೂಡ ನೀಡಿತ್ತು. ಧಾರಾವಾಹಿ ತಂಡ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿ ಸೆಟ್‌ಗೆ ಬಂದ ಎರಡು ಕುಟುಂಬಗಳ ವೀಡಿಯೋ ಇದೀಗ ವಾಹಿನಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಚಂದ್ರಕಲಾ ಹಾಗೂ ಅನು ಎಂಬ ಇಬ್ಬರು ಕಾಂಟೆಸ್ಟ್‌ನಲ್ಲಿ ಗೆದ್ದಿದ್ದು, ಇಬ್ಬರೂ ಒಂದೊಂದು ರೇಷ್ಮೆ ಸೀರೆ ಹಾಗೂ 2ಗ್ರಾಂನ ಚಿನ್ನದ ನಾಣ್ಯವನ್ನು ಗೆದ್ದಿದ್ದಾರೆ. ಜೊತೆಗೆ ಶೂಟಿಂಗ್‌ ಹೇಗೆ ನಡೆಯುತ್ತೆ ಎಂಬುದನ್ನು ನೋಡಿ, ಧಾರಾವಾಹಿ ತಂಡದ ಜೊತೆಗೆ ಕುಳಿತು ಊಟ ಮಾಡಿದ್ದಾರೆ.

More from Filmibeat

English summary
The prizes of the Lakshmi Baramma and Bhagya Lakshmi serial contest have been distributed. Here Is The Details of The contest. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X