ನಾನು ಸೋತು ಗೆದ್ದೆ ; ಬಿಗ್ ಬಾಸ್ ಫಿನಾಲೆ ಬಳಿಕ ಅಶ್ವಿನಿ ಗೌಡ ಮೊದಲ ಪ್ರತಿಕ್ರಿಯೆ-ಗಿಲ್ಲಿ ಹೆಸರೇಳದ ರಾಜಮಾತೆ
''ಬಿಗ್ ಬಾಸ್'' ಅಂದರೆ ರಂಪ-ರಾಮಾಯಣಕ್ಕೆ ಮತ್ತೊಂದು ಹೆಸರು. ಮನೆ ಶಾಂತವಾಗಿದ್ದರೆ ಈ ಮನೆಯತ್ತ ಯಾರು ತಲೆ ಹಾಕಿ ಮಲಗಲ್ಲ. ಅಶಾಂತಿಯೇ ಈ ಮನೆಯ ಲಕ್ಷಣ. ಇಂಥಾ ಮನೆಗೆ ಈಗ ಮತ್ತೊಮ್ಮೆ ತಾತ್ಕಾಲಿಕ ಬೀಗ ಬಿದ್ದಿದೆ. ಹನ್ನೆರಡನೇ ಸೀಸನ್‌ಗೆ ತೆರೆ ಬಿದ್ದಿದೆ. ಗಿಲ್ಲಿ ''ಬಿಗ್ ಬಾಸ್'' ವಿನ್ನರ್ ಆಗಿ ಹೊರ ಹೊಮ್ಮಿದರೆ ರಕ್ಷಿತಾ ರನ್ನರ್ ಅಪ್ ಆಗಿದ್ದಾರೆ.
ಇನ್ನೂ ಈ ಬಾರಿಯ ಗೆಲ್ಲುವ ಸ್ಫರ್ಧಿ ಎಂದೇ ಬಿಂಬಿತವಾದ ಅಶ್ವಿನಿ ಗೌಡ ಮೂರನೇ ಸ್ಥಾನಕ್ಕೆ ತೃಪ್ತಿಯನ್ನು ಹೊಂದಿದ್ದಾರೆ. ಅಶ್ವಿನಿ ಗೌಡ ಅವರ ವಿಚಾರದಲ್ಲಿ ಹಲವರಲ್ಲಿ ಅಸಮಾಧಾನ ಇದೆ. ಕೊನೆ ಪಕ್ಷ ಅಶ್ವಿನಿ ಗೌಡ ರನ್ನರ್ ಅಪ್ ಆಗಬೇಕಿತ್ತು ಎಂಬ ಅಭಿಪ್ರಾಯ ಇದೆ. ಹೀಗಿರುವಾಗ ಅಶ್ವಿನಿ ಗೌಡ ಇಂದು ( ಜನವರಿ 19 ) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪ್ರತ್ಯಕ್ಷರಾಗಿದ್ದಾರೆ. ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಬಂದು ಮಾತನಾಡಿರುವ ಅಶ್ವಿನಿ ಗೌಡ ತಮ್ಮನ್ನು ಬೆಂಬಲಿಸಿದ ತಮ್ಮೆಲ್ಲ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ವೋಟ್ ಮಾಡಿ ಕೊನೆಯವರೆಗೆ ಉಳಿಸಿಕೊಂಡಿದ್ದಕ್ಕೆ ಚಿರಋಣಿ ಎಂದಿದ್ದಾರೆ. ಫಿನಾಲೆ ಒತ್ತಡ ಹೆಚ್ಚಿತ್ತು, ನನ್ನ ಕುಟುಂಬವನ್ನು ನೋಡುವ ಆತುರ ಹೆಚ್ಚಿತ್ತು ಹೀಗಾಗಿ ನಾನು ಸೈಲೆಂಟ್ ಆಗಿ ಹೋದೆ ಎಂದು ಹೇಳಿರುವ ಅಶ್ವಿನಿ ಗೌಡ ಮುಂಬರುವ ದಿನಗಳಲ್ಲಿ ವೈಲೆಂಟ್ ಆಗಿ ಮತ್ತೆ ನಿಮ್ಮ ಮುಂದೆ ಬರುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಇದೇ ಸಮಯದಲ್ಲಿ ತಮ್ಮ ಗುರುಗಳಾದ ನಾರಾಯಣ ಗೌಡರಿಗೂ ಕೂಡ ಧನ್ಯವಾದ ಹೇಳಿರುವ ಅಶ್ವಿನಿ ಗೌಡ ಇಡೀ ಕರ್ನಾಟಕ ರಕ್ಷಣಾ ವೇದಿಕೆ ಕುಟುಂಬಕ್ಕೆ ಕೂಡ ಥ್ಯಾಂಕ್ಯೂ ಎಂದು ಹೇಳಿದ್ದಾರೆ.
ಮುಂದುವರೆದು ''ಬಿಗ್ ಬಾಸ್'' ನಮಗೆ ಕಣ್ಣಿಗೆ ಕಾಣದ ದೇವರಾದರೆ ನಮಗೆ ಕಾಣುವ ದೇವರು ಅಂದರೆ ಅದು ಸುದೀಪ್ ಎಂದು ಹೇಳಿರುವ ಅಶ್ವಿನಿ ಗೌಡ ನಾನು ನಿಮ್ಮನ್ನು ನನ್ನ ಗುರುಗಳು ಎಂದೇ ಅಂದುಕೊಂಡಿದ್ದೇನೆ, ಯಾಕೆಂದರೆ ನಮ್ಮ ತಪ್ಪುಗಳನ್ನು ತಿದ್ದಿವರು ನೀವು ಎಂದು ಹೇಳಿದ್ದಾರೆ. ನೀವು ನನ್ನ ತಪ್ಪುಗಳನ್ನು ತಿದ್ದಿದ್ದಕ್ಕೆ ನಾನು ಫಿನಾಲೆಯವರೆಗೆ ಬರಲು ಸಾಧ್ಯವಾಯ್ತು ಎಂದಿದ್ದಾರೆ.
ನನ್ನ ಜೊತೆ ಮನೆಯಲ್ಲಿ ಕಾಲ ಕಳೆದ, ನನ್ನ ಏಳು ಬೀಳಿನಲ್ಲಿ ಜೊತೆಯಾದ, ನನ್ನಲ್ಲಿ ಛಲ ತುಂಬಿದ 23 ಜನ ಸ್ಫರ್ಧಿಗಳಿಂದಲೇ ನಾನು ಫಿನಾಲೆವರೆಗೆ ಬರಲು ಆಗಿದ್ದು ಎಂದು ಹೇಳಿರುವ ಅಶ್ವಿನಿ ಗೌಡ ತಮ್ಮ ಸಹ ಸ್ಫರ್ಧಿಗಳಿಗೆ ಕೂಡ ಧನ್ಯವಾದ ಹೇಳಿದ್ದಾರೆ.

ನಾನು ಈಗಾಗಲೇ ಗೆದ್ದು ಆಗಿದೆ, ನಿಮ್ಮೆಲ್ಲರ ಮನಸನ್ನು ಗೆದ್ದಾಗಿದೆ ಎಂದು ಹೇಳಿರುವ ಅಶ್ವಿನಿ ಗೌಡ ಕಪ್ ಇರುವುದು ಒಂದೇ ಅದೇ ಒಬ್ಬರಿಗೆ ಸಿಗಬೇಕು ಎಂದು ಹೇಳಿದ್ದಾರೆ. ಕಪ್ ಯಾರೇ ಗೆದ್ದಿದ್ದರೂ ಕೂಡ ನನಗೆ ಖುಷಿ ಇದೆ ಎಂದು ಹೇಳಿರುವ ಅಶ್ವಿನಿ ಗೌಡ ನಾನು ಸೋತಿದ್ದೇನೆ ಎನ್ನುವ ಬೇಜಾರು ನನಗೆ ಇಲ್ಲ ಎಂದು ಹೇಳಿದ್ದಾರೆ. ಗೆದ್ದಿರುವ ವ್ಯಕ್ತಿಗೆ ಇಲ್ಲಿಂದನೇ ನಾನು ಆಲ್ ದಿ ಬೆಸ್ಟ್ ಎಂದು ಹೇಳುತ್ತೇನೆ ಎಂದಿದ್ದಾರೆ. ಈ ಮೂಲಕ ಗಿಲ್ಲಿಯ ಹೆಸರನ್ನೇಳದೇ ಅಭಿನಂದನೆಯನ್ನು ಅಶ್ವಿನಿ ಗೌಡ ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ತಮ್ಮನ್ನು ಬೆಂಬಲಿಸಿದ ಅಭಿಮಾನಿಗಳನ್ನು ಭೇಟಿಯಾಗುವುದಾಗಿ ಕೂಡ ನಿಮ್ಮ ಪ್ರೀತಿಯಿಂದಲೇ ನಾನು ಫಿನಾಲೆವರೆಗೂ ಬರಲು ಸಾಧ್ಯವಾಗಿದ್ದು, ನಿಮ್ಮೆಲ್ಲರನ್ನು ಹೇಗೆ ಮರೆಯಲು ಸಾಧ್ಯ ಎಂದು ಹೇಳಿದ್ದಾರೆ. ಸದ್ಯ ಹಲವರು ಅಶ್ವಿನಿ ಗೌಡ ಅವರ ಈ ವಿಡಿಯೋಗೆ ಹಲವರು ಪ್ರತಿಕ್ರಿಯೆ ನೀಡಿದ್ದು ನೀವೇ ''ಬಿಗ್ ಬಾಸ್'' ಗೆಲ್ಲಬೇಕಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications











