'ಕರಿಮಣಿ' ಧಾರಾವಾಹಿಯ ಕರ್ಣ ಪಾತ್ರಧಾರಿಯ ರಿಯಲ್ ಸ್ಟೋರಿ ನಿಮಗೆ ಗೊತ್ತೇ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ 'ಕರಿಮಣಿ' ಎಂಬ ಧಾರಾವಾಹಿ ಆರಂಭ ಆಗಿದೆ. "ಕರಿಮಣಿ ಮಾಲೀಕ ನೀನಲ್ಲ.." ಎಂಬ ಹಾಡು ಫೇಮ್ ಪಡೆಯುತ್ತಿರುವಂತೆಯೇ 'ಕರಿಮಣಿ' ಎಂಬ ಧಾರಾವಾಹಿ ಆರಂಭವಾಗಿದ್ದು, ಹಲವಾರು ಪ್ರೇಕ್ಷಕರನ್ನು ತನ್ನತ್ತ ಸೆಳೆದಿದೆ. ಈ ಧಾರಾವಾಹಿ ಒಳ್ಳೆಯ ಕಥೆಯನ್ನು ಇಟ್ಟುಕೊಂಡು ಮುನ್ನುಗ್ಗುತ್ತಿದೆ.
ಈ ಧಾರಾವಾಹಿಯಲ್ಲಿನ ನಾಯಕ ಕರ್ಣ ಪಾತ್ರಧಾರಿ, ಕಥೆಯಲ್ಲಿ ಮೂಲತಃ ಒಳ್ಳೆಯ ಮನುಷ್ಯನಾಗಿದ್ದರೂ ಧಾರಾವಾಹಿಯ ನಾಯಕ ನಟಿಯರ ಪಾಲಿಗೆ ಮಾತ್ರ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾನೆ. ಹಾಗಾದರೆ, ಈ ಕರ್ಣ ಪಾತ್ರಕ್ಕೆ ಜೀವ ಕೊಟ್ಟಿರುವ ನಟನ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಮೂಲತಃ ಮೈಸೂರಿನ ಹುಡುಗನಾಗಿರುವ ನಟ ಅಶ್ವಿನ್ ಅವರು ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಆದರೆ ಸದ್ಯಕ್ಕೆ ಇಂಜಿನಿಯರಿಂಗ್ ವೃತ್ತಿಯಲ್ಲಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಮೊದಲಿನಿಂದಲೂ ನಟನೆಯಲ್ಲಿ ಬಹಳಷ್ಟು ಆಸಕ್ತಿಯುಳ್ಳ ನಟ ಅಶ್ವಿನ್ ಅವರು 'ರಾಗ ಮತ್ತು ತಾಳ' ಎಂಬ ಕಿರು ಚಿತ್ರದಲ್ಲಿ ನಟಿಸಿದ್ದಾರೆ.
ಅಷ್ಟೇ ಅಲ್ಲದೆ ರಂಗಭೂಮಿಯಲ್ಲಿಯೂ ತಮ್ಮನ್ನು ತಾವು ಸಕ್ರಿಯವಾಗಿ ನಟ ಅಶ್ವಿನ್ ತೊಡಗಿಸಿಕೊಂಡಿದ್ದಾರೆ. ನಟನಾ ಕ್ಷೇತ್ರದಲ್ಲಿ ಅಭಿನಯದ ಜೊತೆಗೆ ನಮ್ಮ ಲುಕ್ಸ್ ಕೂಡ ಚೆನ್ನಾಗಿರಬೇಕು, ಫಿಟ್ನೆಸ್‌ಗಂತೂ ಹೆಚ್ಚಿನ ಗಮನ ಕೊಡಲೇಬೇಕು ಎಂಬುದು ಅನೇಕರಿಗೆ ತಿಳಿದಿರುವ ವಿಚಾರ. ಹೀಗಾಗಿ ನಟ ಅಶ್ವಿನ್ ಅವರು ಫಿಟ್ನೆಸ್ ಫ್ರೀಕ್ ಆಗಿದ್ದು, ಸೆಲೆಬ್ರಿಟಿ ಟ್ರೇನರ್ ಶ್ರೀನಿವಾಸ್ ಗೌಡ ಅವರಿಂದ ಫಿಟ್ನೆಸ್ ಟ್ರೈನಿಂಗ್ ಪಡೆದುಕೊಳ್ಳುತ್ತಿದ್ದಾರಂತೆ.

ಸದ್ಯಕ್ಕೆ 'ಕರಿಮಣಿ' ಧಾರಾವಾಹಿಯಲ್ಲಿ ವಿಭಿನ್ನ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಅಶ್ವಿನ್ ಅವರು ತಮ್ಮ ಪಾತ್ರ ಹಾಗೂ ಅಭಿನಯದ ಮೂಲಕ ಜನರ ಮೆಚ್ಚುಗೆ ಪಡೆಯುತ್ತಿದ್ದಾರೆ. ಮುಂದೆ ಇವರ ಪಾತ್ರದಲ್ಲಾಗುವ ಬದಲಾವಣೆಗಳು ಕಥೆಗೆ ಮತ್ತಷ್ಟು ತಿರುವುಗಳನ್ನು ತರುತ್ತದೆ ಎಂದು ನಂಬಿದ್ದಾರೆ ಪ್ರೇಕ್ಷಕರು.
ಇನ್ನು 'ಕರಿಮಣಿ' ಧಾರಾವಾಹಿ ಅಷ್ಟೇ ಅಲ್ಲದೆ ಸಿನಿಮಾಗಳಲ್ಲೂ ನಟಿಸಬೇಕೆಂಬ ಕನಸು ಹೊತ್ತಿರುವ ನಟ ಅಶ್ವಿನ್ ಅವರು ತಮ್ಮ ಕನಸನ್ನು ನನಸು ಮಾಡಲು ಹಲವಾರು ರೀತಿಯ ಟ್ರೈನಿಂಗ್, ಕೋಚಿಂಗ್, ಹಾಗೂ ಫೋಟೋಶೂಟ್ ಇತ್ಯಾದಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.


Click it and Unblock the Notifications











