ಬಾಡಿಗೆ ಮನೆಗಳಿಗೆ ಹೊತ್ತಿಕೊಂಡ 'ಧರ್ಮ'ದ ಕಿಡಿ, ಬಿಗ್ ಬಾಸ್ ಸ್ಫರ್ಧಿ ಬಿಚ್ಚಿಟ್ಟ ಕಹಿ ಸತ್ಯ..!

ಭಾರತದಲ್ಲಿ ಸದ್ಯ ಧರ್ಮಾಧಾರಿತ ವ್ಯವಸ್ಥೆಯಲ್ಲಿ ಜನ್ಮ ಸ್ಥಾನ ಮತ್ತು ಸಮಯದಿಂದ ಹಿಡಿದು ಸಾಯುವ ತನಕ ಜಾತಿ ಮತ್ತು ಧರ್ಮ ಎಲ್ಲವನ್ನೂ ನಿಭಾಯಿಸುತ್ತೆ. ಕೋಮುದ್ವೇಷದ ಖಾಯಿಲೆ ಬೇರೆ ಎಲ್ಲ ದೇಶಕ್ಕಿಂತ ಭಾರತವನ್ನು ಹೈರಾಣು ಮಾಡಿದೆ.

ಇದಕ್ಕೆ ಇನ್ನೊಂದು ಪುರಾವೆ ಎಂಬಂತೆ ಬಿಗ್ ಬಾಸ್ 18ರಲ್ಲಿ ಭಾಗವಹಿಸಿದ್ದ ಯಾಮಿನಿ ಮಲ್ಹೋತ್ರಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಮುಖ ನೋಡಿ ಮಣೆ ಹಾಕುವ ವ್ಯವಸ್ಥೆಯ ವಿರುದ್ದ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಟಡಿರುವ ಯಾಮಿನಿ ಮಲ್ಹೋತ್ರಾ ನನಗೆ ಮುಂಬೈ ಅಂದರೆ ಅಚ್ಚು ಮೆಚ್ಚು ಆದರೆ ನಾವೆಲ್ಲ ಅಂದುಕೊಂಡಂತೆ ಮುಂಬೈ ಇಲ್ಲ ಎಂದು ಹೇಳಿದ್ದಾರೆ. ಮನೆ ಹುಡುಕಲು ಹೋದರೆ ಧರ್ಮದ ಬಗ್ಗೆ ಮಾತನಾಡ್ತಾರೆ ನೀವು ಹಿಂದೂನಾ ಅಥವಾ ಮುಸಲ್ಮಾನರಾ ಎಂದು ಪ್ರಶ್ನೆಯನ್ನು ಕೇಳುತ್ತಾರೆ ಎಂದಿರುವ ಯಾಮಿನಿ ಇನ್ನೂ ಕೆಲವರು ಗುಜರಾತಿಯಾ ? ಮಾರ್ವಾಡಿಯಾ ಎಂಬ ಪ್ರಶ್ನೆಯನ್ನು ನನಗೆ ಕೇಳುತ್ತಾರೆ ಎಂದು ಹೇಳಿದ್ದಾರೆ.

The religious bias in renting homes Bigg Boss contestant s shocking revelation

ಮುಂದುವರೆದು ನಾನೊಬ್ಬ ನಟಿ ಎಂದು ಹೇಳುತ್ತಿದ್ದಂತೆಯೇ ಮುಖಕ್ಕೆ ಹೊಡೆದಂತೆ ಮನೆ ಕೊಡಲು ನಿರಾಕರಿಸುತ್ತಾರೆ ಎಂದು ಹೇಳಿರುವ ಯಾಮಿನಿ 2025ರಲ್ಲಿ ಕೂಡ ಈ ತರಹದ ಪ್ರಶ್ನೆ ಕೇಳುತ್ತಾರಲ್ಲ ಎನ್ನುವುದು ಅಚ್ಚರಿ ಮತ್ತು ಆಘಾತಕಾರಿ ವಿಚಾರ ಎಂದು ಹೇಳಿದ್ದಾರೆ. ಮುಂಬೈಯನ್ನು ಕನಸಿನ ನಗರವೆಂದು ಕರೆಯುತ್ತಾರೆ ಆದರೆ ಕನಸುಗಳಿಗೆ ಷರತ್ತನ್ನು ಹಾಕುವ ನಗರವನ್ನು ಕನಸಿನ ನಗರವೆಂದು ಕರೆಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. ನಟಿಯರಿಗೆ ಮನೆ ಹೊಂದುವ ಅರ್ಹತೆ ಇಲ್ವಾ ? ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ.

ಸದ್ಯ ಯಾಮಿನಿ ಮಲ್ಹೋತ್ರಾ ಅವರ ಈ ಬರಹ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಧರ್ಮದ ಕುರಿತು ಡಿಬೇಟ್ ನಡೆಯುತ್ತಿದೆ. ಕೇವಲ ಮುಂಬೈ ಮಾತ್ರ ಅಲ್ಲ ಎಲ್ಲ ಮಹಾನಗರಗಳ ಕಥೆ ಕೂಡ ಇದೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ಅಂದ್ಹಾಗೇ ಯಾಮಿನಿ ಅವರದ್ದು ಹಿಂದೂ ಧರ್ಮ. ಶಿವನ ಭಕ್ತೆ. 'ಗುಮ್ ಹೈ ಕಿಸಿ ಕೇ ಪ್ಯಾರ್ ಮೇ', 'ಮೇ ತೇರಿ ತೂ ಮೇರಾ', ಧಾರಾವಾಹಿಯಲ್ಲಿ ಈ ಹಿಂದೆ ಕಾಣಿಸಿಕೊಂಡಿದ್ದರು ಯಾಮಿನಿ ಮಲ್ಹೋತ್ರಾ. ಇದಲ್ಲದೇ ತೆಲುಗು ಚಿತ್ರರಂಗದಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದ ಯಾಮಿನಿ ಮಲ್ಹೋತ್ರಾ ಚುಟ್ಟಾಲ ಅಬ್ಬಾಯಿ ಚಿತ್ರದಲ್ಲಿ ನಟಿಸಿದ್ದರು. ಇನ್ನು ಯಾಮಿನಿ ಕೇವಲ ನಟಿ ಮಾತ್ರ ಅಲ್ಲ ದಂತ ವೈದ್ಯೆ ಕೂಡ ಹೌದು.

ಇಂಥಾ ಯಾಮಿನಿ ಮಲ್ಹೋತ್ರಾ ಮೊನ್ನೆ ಹಿಂದಿಯಲ್ಲಿ ಮುಕ್ತಾಯವಾದ ಬಿಗ್ ಬಾಸ್ 18ನೇ ಸೀಸನ್‌ನಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಆರಂಭವಾಗಿ 44ನೇ ದಿನ ದೊಡ್ಮನೆ ಪ್ರವೇಶಿಸಿದ್ದ ಯಾಮಿನಿ ಮಲ್ಹೋತ್ರಾ 77ನೇ ದಿನ ಮನೆಯಾಚೆ ಬಂದರು. ಇನ್ನುಳಿದಂತೆ ಮನೆ ಹುಡುಕಲು ಹೋದಾಗ ಕೇವಲ ಯಾಮಿನಿ ಅವರಿಗೆ ಮಾತ್ರ ಧರ್ಮದ ಕುರಿತು ಪ್ರಶ್ನೆಯನ್ನು ಕೇಳಿಲ್ಲ. ಪ್ರಿಯಾಂಕ ಚೌಧರಿ, ಉರ್ಫಿ ಜಾವೇದ್, ಅಭಿಷೇಕ್ ಕಪೂರ್, ಅಂಜುಂ, ಶಿರಿನ್ ಮಿರ್ಜಾ, ಹೀಗೆ ಅನೇಕರು ಮನೆ ಹುಡುಕಲು ಹೋದಾಗ ಧರ್ಮದ ಕುರಿತು ಪ್ರಶ್ನೆಗಳನ್ನು ಎದುರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ, ಮಾಧ್ಯಮಗಳಲ್ಲಿ ಈ ಕುರಿತು ತಮ್ಮ ಅಸಮಾಧಾನವನ್ನು ಕೂಡ ಹೊರ ಹಾಕಿದ್ದಾರೆ.

More from Filmibeat

Read more about: home filmibeat news bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X