Amruthadhare ; ಅಪ್ಪ-ಅಮ್ಮನ್ನೇ ಆಡಿಸಲು ರೆಡಿಯಾದ ಆಕಾಶ್-ಮಿಂಚು ; ಅಜ್ಜಿ ನಾಟಕ ಭೂಮಿಕಾಗೆ ಗೊತ್ತಾದರೆ..?

''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾನ ಒಂದು ಮಾಡುವ ಪ್ರಯತ್ನವನ್ನು ಆನಂದ್, ಅಪರ್ಣಾ, ಭಾಗ್ಯಮ್ಮ ಮಾಡಿದ್ದಾರೆ. ಆದರೆ, ಯಾರು ಏನೇ ಹೇಳಿದರೂ ಒಡೆದು ಹೋದ‌ ಮನಸು ಒಂದಾಗುತ್ತಿಲ್ಲ. ಭಾವನಾತ್ಮಕವಾಗಿ ಯಾರು ಎಷ್ಟೇ ಬ್ಲಾಕ್ ಮೇಲ್ ಮಾಡಿದರೂ ಕೂಡ ಭೂಮಿಕಾಳ ಕಲ್ಲು ಬಂಡೆಯಂತಹ ಮನಸು ಕರಗುತ್ತಿಲ್ಲ. ಬದಲಿಗೆ ಮನವೊಲಿಸಲು ಬಂದ ಎಲ್ಲರನ್ನೂ ಭೂಮಿಕಾ ನೋವು ಕೊಟ್ಟಿದ್ದಾಳೆ.

ನಿರಾಸೆ ಮಾಡಿದ್ದಾಳೆ. ಹೀಗಿರುವಾಗ ದಿವಾನ್ ಮನೆತನದ ಹಿರಿಯ ಜೀವ ಅಜ್ಜಿ ಮರಳಿ ಬಂದಿದ್ದು ಸದ್ಯ ಜೈದೇವ್ ದೆಸೆಯಿಂದ ವೃದ್ಧಾಶ್ರಮದಲ್ಲಿದ್ದಾಳೆ. ಆದರೆ, ದುಃಖದಲ್ಲಿರುವ ಅಜ್ಜಿಗೆ ಭಾಗ್ಯಮ್ಮ ಸಿಕ್ಕಿದ್ದು, ಮಾತನಾಡಿದ್ದು ಕಂಡು ಖುಷಿಯಾಗಿದೆ.

THE TRAP IS SET Akash amp amp Minchu s Secret Plot What Will Gowtham And Bhoomika Do Now

ಆಗ ಗೌತಮ್ ಮತ್ತು ಭೂಮಿಕಾಗೆ ಬಗ್ಗೆ ಅಜ್ಜಿ ವಿವಾರಿಸಿದ್ದು ಭಾಗ್ಯಮ್ಮ ಅವರಿಬ್ಬರನ್ನೂ ಒಂದು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾಳೆ. ಹೀಗಾಗಿ ಐಡಿಯಾ ಮಾಡಿರುವ ಅಜ್ಜಿ ಸಾಯುವ ನಾಟಕವಾಡಿದ್ದಾಳೆ.

ಭಾಗ್ಯಮ್ಮ ಮತ್ತು ಆನಂದ್ ಮೂಲಕ ಗೌತಮ್ ಮತ್ತು ಭೂಮಿಕಾಗೆ ವಿಚಾರ ತಲುಪಿಸಿರುವ ಅಜ್ಜಿ ಇಬ್ಬರನ್ನೂ ಜೊತೆಯಲ್ಲಿ ನೋಡುವುದೇ ನನ್ನ ಕೊನೆಯಾಸೆ ಎಂದು ಹೇಳಿದ್ದಾಳೆ. ಇದಲ್ಲದೇ ಮಕ್ಕಳನ್ನೂ ಕೂಡ ನೋಡುವ ಆಸೆ ವ್ಯಕ್ತಪಡಿಸಿದ್ದಾಳೆ.

ಅಜ್ಜಿಯ ಆಸೆ ಮತ್ತು ಅನಾರೋಗ್ಯದ ಸುದ್ದಿ ಕೇಳಿ ಗೌತಮ್ ಮತ್ತು ಭೂಮಿಕಾ ಚಿಂತೆಯಲ್ಲಿ ಮುಳುಗಿದ್ದಾರೆ. ಮುಂದೇನು ಮಾಡಬೇಕೆಂದು ಇಬ್ಬರಿಗೆ ದಿಕ್ಕು ತೋಚದಂತಾಗಿದೆ. ಇದೇ ಸಮಯದಲ್ಲಿ ಗೌತಮ್ ಗೆ ನಂಬಿಕೆ‌ ಬರಲಿ ಎಂದು ಅಜ್ಜಿ ಫೋನ್ ನಲ್ಲಿ ಗೌತಮ್ ಜೊತೆ ಮಾತನಾಡಿದ್ದಾಳೆ.

ಈಗಲೋ ಆಗಲೋ ಎಂಬಂತೆ ಇರುವುದಾಗಿ ಹೇಳುವ ಅಜ್ಜಿ ಕೈಯಲ್ಲಿ ಜೀವ ಹಿಡಿದುಕೊಂಡು ಕಾಯುತ್ತಿದ್ದೇನೆ ಆದಷ್ಟು ಬೇಗ ಭೂಮಿಕಾನ‌ ಕರೆದುಕೊಂಡು ಬಾ ಗುಂಡು ಎಂದು ಹೇಳಿದ್ದಾಳೆ. ಅಜ್ಜಿಯ ಆಕ್ಟಿಂಗ್ ಕಂಡು ಭಾಗ್ಯಮ್ಮ ಬಿದ್ದು ಬಿದ್ದು ನಕ್ಕಿದ್ದಾಳೆ. ಅಜ್ಜಿಯ ಈ ಮಾತುಗಳಿಂದ ಗೌತಮ್ ಇನ್ನೂ ಚಿಂತೆಗೀಡಾಗಿದ್ದಾನೆ. ಭೂಮಿಕಾನ ಹೇಗೆ ಒಪ್ಪಿಸೋದು, ಕರೆದುಕೊಂಡು ಹೋಗುವುದು ಎಂದು ಯೋಚನೆ ಮಾಡುತ್ತಾನೆ.

THE TRAP IS SET Akash amp amp Minchu s Secret Plot What Will Gowtham And Bhoomika Do Now

ಇದೇ ಸಮಯದಲ್ಲಿ ಗೌತಮ್ ನ ಭೂಮಿಕಾ‌ ಕರೆದಿದ್ದು, ಭೂಮಿಕಾ ಮನೆಗೆ ಗೌತಮ್ ಹೋಗಿದ್ದಾನೆ. ಆದರೆ ಭೂಮಿಕಾ‌ ಮನೆಗೆ ಗೌತಮ್ ಹೋಗುತ್ತಿರುವುದನ್ನು ಮಿಂಚು ಮತ್ತು ಆಕಾಶ್ ನೋಡಿದ್ದು ಶಾಕ್ ಆಗಿದ್ದಾರೆ. ಆ ನಂತರ ಇಬ್ಬರ ಸಂಭಾಷಣೆಯನ್ನು ಆಕಾಶ್ ಮತ್ತು ಮಿಂಚು ಸದ್ಯ ಕದ್ದು ಕೇಳಿಸಿಕೊಂಡಿದ್ದು ಭೂಮಿಕಾ ಅಜ್ಜಿಯನ್ನು ನೋಡಲು ಜೊತೆಯಲ್ಲಿ ಬರುವುದಾಗಿ ಹೇಳಿದ್ದಾಳೆ.

ಆದರೆ ಇದೇ ವೇಳೆ ಗೌತಮ್ ಅಜ್ಜಿ ನಮ್ಮ ಇಬ್ಬರನ್ನೂ ಮಾತ್ರವಲ್ಲ‌ ಮಕ್ಕಳನ್ನು ಕೂಡ ಕರೆದುಕೊಂಡು ಬರುವಂತೆ ಹೇಳಿದ್ದಾರೆ ಎಂದು ಹೇಳಿದಾಗ ಭೂಮಿಕಾ ನಾನು ಇದರ ಬಗ್ಗೆ ಯೋಚನೆಯೇ ಮಾಡಲಿಲ್ಲ ಎನ್ನುತ್ತಾಳೆ. ಮಕ್ಕಳಿಗೆ ಈ ವಿಷಯ ಹೇಗೆ ಹೇಳೋದು ಎಂದು ಗೌತಮ್ ಯೋಚನೆ ಮಾಡುತ್ತಾನೆ.

ತಂದೆ ತಾಯಿಯ ಈ ಮಾತು ಕೇಳಿಸಿಕೊಂಡ ಆಕಾಶ್ ಮತ್ತು ಮಿಂಚು ಸದ್ಯ ಕರೆದ ತಕ್ಷಣ ನಾವು ಒಪ್ಪಿಕೊಳ್ಳೋದು ಬೇಡ ಎನ್ನುವ ತೀರ್ಮಾನ ಮಾಡಿದ್ದಾರೆ. ಇಬ್ಬರಿಗೂ ಆಟ ಆಡಿಸೋಣ ಎಂದು ಪ್ಲ್ಯಾನ್ ಮಾಡಿದ್ದಾರೆ.

ಮುಂದೇನಾಗುತ್ತೆ..? ಆಕಾಶ್ ಮತ್ತು ಮಿಂಚು ಬಳಿ ಗೌತಮ್ ಮತ್ತು ಭೂಮಿಕಾ ಸತ್ಯ ಹೇಳ್ತಾರಾ..? ಅಥವಾ ಬೇರೆಯ ಕಥೆ ಹೆಣೆಯುತ್ತಾರಾ..? ಅಜ್ಜಿ ಎದುರು ಇಬ್ಬರು ಹೋದ ನಂತರ ಏನಾಗಲಿದೆ..? ಇಬ್ಬರು ಮುನಿಸು ಮರೆತು ಒಂದಾಗ್ತಾರಾ..? ಅಥವಾ ಅಜ್ಜಿ ನಾಟಕ‌ ಮಾಡಿದ ವಿಚಾರ ಗೊತ್ತಾಗಿ ಭೂಮಿಕಾ‌ ಮತ್ತೆ ಮುನಿಸಿಕೊಂಡು ಕೂರುತ್ತಾಳಾ..? ಎನ್ನುವ ಪ್ರಶ್ನೆಗಳು ಸದ್ಯ ಹಲವರನ್ನು ಕಾಡುತ್ತಿವೆ.

ಇನ್ನೂ ಇಬ್ಬರು ಒಂದು ವೇಳೆ ಒಂದಾದರೆ ಸೀರಿಯಲ್ ಕಥೆ ಬಹುತೇಕ ಮುಗಿದಂತೆಯೇ ಹೀಗಾಗಿ ಅಮೃತಧಾರೆ ಮುಗಿಯುವ ಹಂತಕ್ಕೆ ಬಂದಿದೆಯಾ ಎನ್ನುವ ಅನುಮಾನ ಕೂಡ ಸದ್ಯ ಹಲವರನ್ನು ಕಾಡುತ್ತಿದೆ. ಕಥೆ ಮುಗಿಸದೇ ಎಲ್ಲರೂ ಸೇರಿ ಶಕುಂತಲಾ ಮತ್ತು ಜೈದೇವ್ ವಿರುದ್ದ ಸಮರ ಸಾರುತ್ತಾರಾ..? ಎನ್ನುವ ಪ್ರಶ್ನೆ ಕೂಡ ಹಲವರಲ್ಲಿದೆ. ಎಲ್ಲದಕ್ಕೂ ಉತ್ತರ ಶೀಘ್ರದಲ್ಲಿಯೇ ಸಿಗಲಿದೆ.

More from Filmibeat

English summary
Is Akash and Minchu's 'help' actually a betrayal? As Gowtham and Bhoomika make their commitment, discover if they can escape a coordinated trap set by their friends and Ajji.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X