ಕಿರುತೆರೆಯಲ್ಲಿ ಇನ್ಮುಂದೆ ಶುರು 'ದಾದಾ'ಗಿರಿ ; ಸೌರವ್ ಗಂಗೂಲಿ ಸಾರಥ್ಯದಲ್ಲಿ 'ಬಿಗ್ ಬಾಸ್' - ಪಡೆದ ಸಂಭಾವನೆ ಅಷ್ಟಿಷ್ಟಲ್ಲ

''ಬಿಗ್ ಬಾಸ್ '' ಜನಪ್ರಿಯವಾದ ಕಾರ್ಯಕ್ರಮ. ಹಲವರು ಈ ಕಾರ್ಯಕ್ರಮವನ್ನು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡುತ್ತಾರೆ. ಕೇವಲ ಹಿಂದಿಯಲ್ಲಿ ಮಾತ್ರವಲ್ಲ ಕನ್ನಡ, ತೆಲುಗು, ಮಲಯಾಳಂ, ತಮಿಳು ಮತ್ತು ಮರಾಠಿಯಲ್ಲಿ ಈ ಕಾರ್ಯಕ್ರಮಕ್ಕೆ ಅದ್ರದ್ದೇ ಆದ ಡಿಮ್ಯಾಂಡ್ ಇದೆ. ಇನ್ನೂ ಹಿಂದಿಯಲ್ಲಿ ಸಲ್ಮಾನ್ ಖಾನ್ ಉಸ್ತುವಾರಿಯಲ್ಲಿ ಕಳೆದ 19 ವರ್ಷಗಳಿಂದ ಈ ಕಾರ್ಯಕ್ರಮ ನಡೆದುಕೊಂಡು ಬಂದಿದೆ.

ಕನ್ನಡದಲ್ಲಿ ಕಾರ್ಯಕ್ರಮದ ಸಾರಥ್ಯವನ್ನು ಕಳೆದ ಹನ್ನೆರಡು ವರ್ಷದಿಂದ ''ಸುದೀಪ್'' ವಹಿಸಿಕೊಂಡಿದ್ದಾರೆ. ತೆಲುಗಿನಲ್ಲಿ ನಾಗಾರ್ಜುನ ನೇತೃತ್ವದಲ್ಲಿ ಕಾರ್ಯಕ್ರಮ ಮೂಡಿ ಬರುತ್ತಿದೆ. ತಮಿಳಿನಲ್ಲಿ ಈ ಜವಾಬ್ದಾರಿಯನ್ನು ವಿಜಯ್ ಸೇತುಪತಿ'' ಅವರಿಗೆ ವಹಿಸಿಕೊಂಡಿದ್ದಾರೆ. ಮಲಯಾಳಂನಲ್ಲಿ ಮೋಹನ್ ಲಾಲ್ ''ಬಿಗ್ ಬಾಸ್'' ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ. ಮರಾಠಿಯಲ್ಲಿ ರಿತೇಶ್ ದೇಶಮುಖ್ ಈ ಕಾರ್ಯಕ್ರಮದ ನೊಗ ಹೊತ್ತಿದ್ದಾರೆ.

The Ultimate Captain s New Innings Sourav Ganguly Set to Rule the Bigg Boss Bangla House

ಇಂಥಾ ಹಿನ್ನೆಲೆಯ ಈ ಬಿಗ್ ಬಾಸ್ ಅಖಾಡಕ್ಕೀಗ ಕೋಲ್ಕತ್ತಾದ ಮಹಾರಾಜಾ ಮತ್ತು ಭಾರತ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಸೌರವ್ ಗಂಗೂಲಿ ಬಂದಿದ್ದಾರೆ.

ಹೌದು, ನಿಮಗೆ ಗೊತ್ತಿರಲಿ, ಎಲ್ಲಾ ಭಾಷೆಯಲ್ಲಿಯೂ ಶುರು ಮಾಡಿದಂತೆ ''ಬಿಗ್ ಬಾಸ್'' ಕಾರ್ಯಕ್ರಮವನ್ನು ಬೆಂಗಾಲಿಯಲ್ಲಿಯೂ ಕೂಡ ಶುರು ಮಾಡಲಾಗಿತ್ತು. 2013ರಲ್ಲಿ ಬೆಂಗಾಲಿ ''ಬಿಗ್ ಬಾಸ್‌''ನ ಮೊದಲ ಸೀಸನ್ ಪ್ರಸಾರವಾಗಿತ್ತು. ಮಿಥುನ್ ಚಕ್ರವರ್ತಿ ಆಗ ಈ ಕಾರ್ಯಕ್ರಮದ ನಿರೂಪಣೆ ಮಾಡಿದ್ದರು.

ಆದರೆ, ಮರು ವರ್ಷ ಈ ಕಾರ್ಯಕ್ರಮಕ್ಕೆ ಬ್ರೇಕ್ ಬಿತ್ತು. ಆ ನಂತರ ಮತ್ತೆ 2016ರಲ್ಲಿ ಎರಡನೇ ಸೀಸನ್‌ಗೆ ಚಾಲನೆ ನೀಡಲಾಗಿತ್ತು. ಬೆಂಗಾಲಿ ಚಿತ್ರರಂಗದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರಾದ ಜೀತ್ ಈ ಸೀಸನ್‌ನ ಸಾರಥ್ಯ ವಹಿಸಿಕೊಂಡಿದ್ದರು.

ಹೀಗೆ ಎರಡು ಸೀಸನ್ ಪ್ರಸಾರವಾದ ಬೆಂಗಾಲಿ ''ಬಿಗ್ ಬಾಸ್''ಗೆ ಆ ನಂತರ ಗ್ರಹಣ ಹಿಡಿದಿತ್ತು. ಆದರೆ ಈಗ ಶಾಪ ವಿಮೋಚನೆಯಾಗಿದೆ. ಬೆಂಗಾಲಿಯಲ್ಲಿ ''ಬಿಗ್ ಬಾಸ್'' ಮೂರನೇ ಸೀಸನ್‌ಗೆ ಚಾಲನೆ ಸಿಕ್ಕಿದೆ. ವಿಶೇಷ ಅಂದರೆ ಈ ಬಾರಿ ಸೌರವ್ ಗಂಗೂಲಿ ಈ ಕಾರ್ಯಕ್ರಮವನ್ನು ಮುನ್ನಡೆಸಲಿದ್ದಾರೆ.

The Ultimate Captain s New Innings Sourav Ganguly Set to Rule the Bigg Boss Bangla House

ಮೊನ್ನೆ ಮೊನ್ನೆ ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಬೆಂಗಾಲಿ ''ಬಿಗ್ ಬಾಸ್'' ಕಾರ್ಯಕ್ರಮದ ಲೋಗೋವನ್ನು ಅನಾವರಣ ಮಾಡಲಾಗಿದೆ. ನಿರೂಪಕರಾಗಿ ಸೌರವ್ ಗಂಗೂಲಿ ಅವರ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಇದೇ ಸಮಯದಲ್ಲಿ ಮಾತನಾಡಿರುವ ಸೌರವ್ ಗಂಗೂಲಿ ''ಬಿಗ್ ಬಾಸ್'' ವ್ಯಕ್ತಿ ಮತ್ತು ವ್ಯಕ್ತಿತ್ವಗಳ ಸಂಘರ್ಷ. ಬಂಗಾಳದಲ್ಲಿ ಈ ಕಾರ್ಯಕ್ರಮ ಆಳವಾಗಿ ಬೇರೂರುವ ವಿಶ್ವಾಸ ಇದೆ ಎಂದು ಹೇಳಿದ್ಧಾರೆ.

ಇನ್ನೂ ಈ ಹಿಂದೆ ಬೆಂಗಾಲಿ ''ಬಿಗ್ ಬಾಸ್'' ಕಾರ್ಯಕ್ರಮ ಈಟಿವಿ ಬಾಂಗ್ಲಾ ಮತ್ತು ಕಲರ್ಸ್ ಬಾಂಗ್ಲಾ ಪ್ರಸಾರ ಮಾಡಿದ್ದವು. ಈ ಬಾರಿ ''ಸ್ಟಾರ್ ಜಲ್ಶಾ'' '' ಬಿಗ್ ಬಾಸ್'' ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ. ಡಿಸ್ನಿ+ ಹಾಟ್‌ಸ್ಟಾರ್ ನಲ್ಲಿ ಕೂಡ ನೋಡಬಹುದು.

ಅಂದ್ಹಾಗೇ ಕ್ರಿಕೆಟ್ ಪಿಚ್‌ದಿಂದ ರಿಯಾಲಿಟಿ ಶೋಗೆ ಬಂದಿರುವ ಸೌರವ್ ಗಂಗೂಲಿ, ''ಬಿಗ್ ಬಾಸ್'' ನಿರೂಪಣೆ ಮಾಡಲು ಭಾರೀ ಸಂಭಾವನೆ ಪಡೆದಿದ್ಧಾರೆ ಎನ್ನುವ ಸುದ್ದಿ ಇದೆ. ಕೋಲ್ಕತ್ತಾದಲ್ಲಿ ಸದ್ಯ ಕೇಳಿ ಬರುತ್ತಿರುವ ಮಾತುಗಳ ಪ್ರಕಾರ ಸೌರವ್ ಗಂಗೂಲಿ ಅವರು ''ಸ್ಟಾರ್ ಜಲ್ಶಾ'' ಜೊತೆ ಬರೊಬ್ಬರಿ 125 ಕೋಟಿ ರೂಪಾಯಿಗಳ ಬೃಹತ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇದು ಭಾರತೀಯ ಪ್ರಾದೇಶಿಕ ಟೆಲಿವಿಷನ್ ಇತಿಹಾಸದಲ್ಲೇ ಅತಿದೊಡ್ಡ ಡೀಲ್ ಎನ್ನುವುದು ಸದ್ಯಕ್ಕೆ ಕೇಳಿ ಬರುತ್ತಿರುವ ಮತ್ತೊಂದು ಸುದ್ದಿ.

ಈ ವರ್ಷದ ಸೆಪ್ಟೆಂಬರ್ ನಲ್ಲಿ ಬೆಂಗಾಲಿ ''ಬಿಗ್ ಬಾಸ್‌'' ಕಾರ್ಯಕ್ರಮ ಪ್ರಸಾರವಾಗುವ ನಿರೀಕ್ಷೆ ಇದ್ದು, ಮೂರು ತಿಂಗಳು ಸೌರವ್ ಗಂಗೂಲಿ ಕಿರುತೆರೆಯ ಮೂಲಕ ಮನರಂಜನೆಯ ರಸದೌತಣ ಬಡಿಸಲಿದ್ದಾರೆ. ವಾರಾಂತ್ಯದಲ್ಲಿ ತಮ್ಮದೇ ಶೈಲಿಯಲ್ಲಿ ಸ್ಫರ್ಧಿಗಳ ಮೈಚಳಿ ಬಿಡಿಸಲಿದ್ದಾರೆ.

More from Filmibeat

English summary
It’s official: Sourav Ganguly is the new host of Bigg Boss Bangla! The legendary captain brings his signature leadership to the most controversial house in India. Click here for exclusive details on Sourav Ganguly’s grand entry into the world of Bigg Boss.
Read more about: bigg boss biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X