ಜೀ ಕನ್ನಡಕ್ಕೆ ಕಾಲಿಟ್ಟ ಬಿಜಾಪುರದ ಆನೆ
''ಆನೆ ಬಂತೊಂದ್ ಆನೆ... ಯಾವ್ ಊರ್ ಆನೆ.. ಬಿಜಾಪುರದ್ ಆನೆ..
ಇಲ್ಲಿಗ್ ಯಾಕೆ ಬಂತು..
ರಾವಣನ ಕಥೆ ಹೇಳಕ್ಕೆ ಬಂತು..''
ಸುದೀಪ್ ಧ್ವನಿಯಲ್ಲಿ ಈ ಡೈಲಾಗ್ ಕೇಳುವ ಮಜವೇ ಬೇರೆ. ಈ ಖದರ್ ಡೈಲಾಗ್ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ಸಿನಿಮಾ 'ದಿ ವಿಲನ್'. ಆದರೆ, ಈ ಚಿತ್ರದ ಬಿಡುಗಡೆ ಬಳಿಕ ಆಗಿದೆ ಬೇರೆ ಬಿಡಿ.
ನಟ ಶಿವರಾಜ್ ಕುಮಾರ್ ಹಾಗೂ ಸುದೀಪ್ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದ 'ದಿ ವಿಲನ್' ಚಿತ್ರ ಈಗ ಕಿರುತೆರೆಗೆ ಕಾಲಿಟ್ಟಿದೆ. ಮೊಟ್ಟ ಮೊದಲ ಬಾರಿಗೆ ಟಿವಿಯಲ್ಲಿ ಈ ಸಿನಿಮಾ ಬರುತ್ತಿದೆ.

ಜೀ ಕನ್ನಡ ವಾಹಿನಿಯಲ್ಲಿ ಈ ಸಿನಿಮಾ ಪ್ರಸಾರ ಆಗಲಿದ್ದು, ಪ್ರೊಮೋವನ್ನು ಹಂಚಿಕೊಳ್ಳಲಾಗಿದೆ. ಈ ಮೂಲಕ ಶೀಘ್ರದಲ್ಲೇ ಸಿನಿಮಾ ಪ್ರಸಾರ ಆಗುತ್ತಿದೆ ಎಂದು ತಿಳಿಸಲಾಗಿದೆ.
ಅಂದಹಾಗೆ, ದಿ ವಿಲನ್ ಚಿತ್ರವನ್ನ ಪ್ರೇಮ್ ನಿರ್ದೇಶನ ಮಾಡಿದ್ದರು. ಆಮಿ ಜಾಕ್ಸನ್ ಈ ಸಿನಿಮಾದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದರು. ಬಾಕ್ಸ್ ಆಫೀಸ್ ನಲ್ಲಿ ಸಾಧಾರಣ ಗಳಿಕೆ ಮಾಡಿದರೂ ಸಿನಿಮಾ ಜನರ ಮನ ಗೆಲ್ಲಲಿಲ್ಲ. ಹೊಗಳಕೆಗಿಂತ ಟೀಕೆಗಳೆ ಚಿತ್ರಕ್ಕೆ ಜಾಸ್ತಿ ಬಂತು.


Click it and Unblock the Notifications











