ಫೆಬ್ರವರಿಯಲ್ಲೇ 'ದಿ ವಿಲನ್' ಕಿರುತೆರೆ ಎಂಟ್ರಿ: ದಿನಾಂಕ-ಸಮಯ ಬಹಿರಂಗ
ಕಳೆದ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ದಿ ವಿಲನ್ ಕಿರುತೆರೆಗೆ ಎಂಟ್ರಿ ಕೊಡ್ತಿದೆ ಎಂಬು ಸುದ್ದಿಯನ್ನ ಈ ಹಿಂದೆ ಫಿಲ್ಮಿಬೀಟ್ ನಲ್ಲಿ ಹೇಳಿದ್ವಿ. ಇದೀಗ, ವಿಲನ್ ಸಿನಿಮಾ ಪ್ರಸಾರ ಯಾವಾಗ ಮತ್ತು ಎಷ್ಟು ಗಂಟೆಗೆ ಎಂಬ ಪಕ್ಕಾ ಮಾಹಿತಿ ಹೊರಬಿದ್ದಿದೆ.
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಮೊದಲ ಸಲ ಒಟ್ಟಿಗೆ ಅಭಿನಯಿಸಿದ್ದ ಈ ಚಿತ್ರವನ್ನ ಪ್ರೇಮ್ ನಿರ್ದೇಶನ ಮಾಡಿದ್ದರು. ಆಮಿ ಜಾಕ್ಸನ್, ಶ್ರೀಕಾಂತ್, ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಸೇರಿದಂತೆ ಹಲವರು ಅಭಿನಯಿಸಿದ್ದರು.
ಸಿನಿಮಾ ಆರಂಭವಾದಾಗನಿಂದಲೂ ಭಾರಿ ಅಬ್ಬರ ಮಾಡಿದ್ದ ದಿ ವಿಲನ್, ತೆರೆಕಂಡ ಮೇಲೂ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಕೆಲವು ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗಿಲ್ಲವಾದರೂ ಬಿಸಿನೆಸ್ ಲೆಕ್ಕಾಚಾರದಲ್ಲಿ ವಿಲನ್ ಹಿಂದೆ ಬಿದ್ದಿಲ್ಲ. ಇಂತಹ ದೊಡ್ಡ ಸಿನಿಮಾ ಇದೇ ತಿಂಗಳು ಕಿರುತೆರೆ ಪ್ರೇಕ್ಷಕರ ಮನೆಗೆ ಬರ್ತಿದೆ. ಯಾವಾಗ.?

ಫೆಬ್ರವರಿ 17ಕ್ಕೆ ಮಹೂರ್ತ ಫಿಕ್ಸ್
ಶಿವಣ್ಣ ಮತ್ತು ಕಿಚ್ಚ ಸುದೀಪ್ ಒಟ್ಟಿಗೆ ಅಭಿನಯಿಸಿದ್ದ ದಿ ವಿಲನ್ ಚಿತ್ರವನ್ನ ಚಿತ್ರಮಂದಿರದಲ್ಲಿ ನೋಡಲು ಮಿಸ್ ಮಾಡಿಕೊಂಡಿದ್ದ ಪ್ರೇಕ್ಷಕರಿಗೆ ಈಗ ಇನ್ನೊಂದು ಅವಕಾಶ ಸಿಕ್ಕಿದೆ. ಈ ಬಾರಿ ಮನೆಯಲ್ಲೇ ಕೂತು ಫ್ಯಾಮಿಲಿ ಜೊತೆ ನೋಡುವ ಅವಕಾಶ. ಹೌದು, ಫೆಬ್ರವರಿ 17 ರಂದು ರಾತ್ರಿ 7 ಗಂಟೆಗೆ ದಿ ವಿಲನ್ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಿದೆ.

ಅತಿ ಹೆಚ್ಚು ಬೆಲೆಗೆ ಸೇಲ್ ಆಗಿದ್ದ ಚಿತ್ರ
ಸ್ವತಃ ನಿರ್ಮಾಪಕರೇ ಹೇಳಿರುವ ಪ್ರಕಾರ, 'ದಿ ವಿಲನ್'ಸ ಸಿನಿಮಾದ ಟಿವಿ ಹಕ್ಕು 6.5 ಕೋಟಿಗೆ ಸೇಲ್ ಆಗಿತ್ತು. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಅತಿ ದೊಡ್ಡ ಮೊತ್ತ ಎಂದು ಹೇಳಲಾಗಿದೆ.

ಅತಿ ಹೆಚ್ಚು ಕಲೆಕ್ಷನ್ ಕಂಡಿದೆ
ದಿ ವಿಲನ್ ಸಿನಿಮಾದ ಗಳಿಕೆಯೂ ದೊಡ್ಡ ಮಟ್ಟದಲ್ಲಿದೆ. ಆದ್ರೆ, ನಿಖರವಾದರ ಮೊತ್ತವನ್ನ ಚಿತ್ರತಂಡ ಬಹಿರಂಗಪಡಿಸಿಲ್ಲ. ಮೊದಲ ದಿನದ ಕಲೆಕ್ಷನ್ 20 ಕೋಟಿ ಇತ್ತು ಎಂದು ಹೇಳಿದ್ದ ನಿರ್ದೇಶಕ ಪ್ರೇಮ್ ಆಮೇಲೆ ಸೈಲೆಂಟ್ ಆದರು.

ನೆಗಿಟೀವ್ ರೆಸ್ಪಾನ್ಸ್ ಚಿತ್ರಕ್ಕೆ ವಿಲನ್ ಆಗಿತ್ತು
ದಿ ವಿಲನ್ ಸಿನಿಮಾನ ಯಾಕೆ ನೋಡ್ಬೇಕು ಎಂದು ಕೇಳೋರಿಗೆ ಎರಡು ಉತ್ತರ. ಮೊದಲನೇಯದು ಶಿವಣ್ಣ ಮತ್ತು ಸುದೀಪ್ ಕಾಂಬಿನೇಷನ್ ನೋಡುವ ಅಪರೂಪದ ಸಿನಿಮಾ ಇದು. ಎರಡನೇಯದು ವಿಲನ್ ಸಿನಿಮಾ ಸುಮಾರು ಜನಕ್ಕೆ ಇಷ್ಟ ಆಗಿಲ್ಲ, ಸೋ, ಯಾಕೆ ಇಷ್ಟ ಆಗಿಲ್ಲ ಎಂದು ತಿಳಿದುಕೊಳ್ಳುವ ಕುತೂಹಲಕ್ಕಾಗಿ ವಿಲನ್ ಚಿತ್ರವನ್ನ ಒಮ್ಮೆ ನೋಡಬೇಕಾಗಿದೆ.


Click it and Unblock the Notifications











