ಈ ನಟಿಯ ಮೊದಲ ಧಾರಾವಾಹಿ ಪುನೀತ್ ರಾಜ್‌ಕುಮಾರ್ ನಿರ್ಮಾಣ ಮಾಡಿದ್ರು: ಯಾರಿವರು?

By ಅನಿತಾ ಬನಾರಿ

ನಟಿ ವರ್ಷಿತಾ ಸೇನಿ ಕಿರುತೆರೆಯ ಹೆಸರಾಂತ ಕಲಾವಿದರಲ್ಲಿ ಒಬ್ಬರು. ಯಾವ ರೀತಿಯ ಪಾತ್ರವನ್ನು ಕೂಡ ನಿಭಾಯಿಸಬಹುದಾದ ಚಾಕಚಕ್ಯತೆಯನ್ನು ಹೊಂದಿರುವ ವರ್ಷಿತಾ ಹಲವು ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳ ಮುಖಾಂತರ ಕನ್ನಡ ಕಿರುತೆರೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಇವರು ಮೂಲತಃ ರಂಗಭೂಮಿ ಕಲಾವಿದೆಯಾಗಿದ್ದವರು. ಸರಿಸುಮಾರು 19 ವರ್ಷಗಳ ನಟನಾ ಅನುಭವವನ್ನು ಹೊಂದಿರುವ ನಟಿ ಮೊದಲು ಎಂಟು ವರ್ಷಗಳ ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ನಂತರ ಕಿರುತೆರೆಯಲ್ಲಿ ತಮ್ಮನ್ನು ಪೂರ್ಣವಾಗಿ ತೊಡಗಿಸಿಕೊಂಡ ನಟಿ ಇಂದು ತಮ್ಮದೇ ಆದ ಸ್ಥಾನವನ್ನು ಗಳಿಸಿದ್ದಾರೆ.

Theater actress Varshita Seni is currently busy on television

ಟಿವಿ, ಸಿನೆಮಾ ನೋಡುತ್ತಾ ನಟನೆಯನ್ನು ಕರಗತ ಮಾಡಿಕೊಂಡ ವರ್ಷಿತಾ ಯಾರಾದರೂ ತಮ್ಮ ಬಳಿ ಅಭಿನಯದ ಸಲಹೆ ಕೇಳಿ ಬಂದರೆ ಗೊತ್ತಿರುವುದನ್ನು ಪೂರ್ಣ ಮನಸ್ಸಿನಿಂದ ಹೇಳಿ ಕೊಡುತ್ತಾರೆ. ಅಂದ ಹಾಗೆ ಇವರ ಮೊದಲ ಧಾರಾವಾಹಿ ಪುನೀತ್ ರಾಜಕುಮಾರ್ ನಿರ್ಮಾಣದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನೆದೇವ್ರು.

'ಮನೆದೇವ್ರು' ಬಳಿಕ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಾರು' ಹಾಗೂ 'ಕಸ್ತೂರಿ ನಿವಾಸ'ದಲ್ಲಿ ಅಭಿನಯಿಸಿದ್ದಾರೆ. ಉದಯ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ 'ಜನನಿ' ಧಾರಾವಾಹಿಯಲ್ಲಿ ಇವರು ಮಾಡಿದ ಅನಘಾ ಎಂಬ ಪಾತ್ರ ನಟಿಗೆ ಮತ್ತಷ್ಟು ಹೆಸರನ್ನು ತಂದು ಕೊಟ್ಟಿತು. ಸದ್ಯ ನಟಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಮೇಶ್ ಅರವಿಂದ್ ನಿರ್ಮಾಣದ 'ಆಸೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಧಾರಾವಾಹಿ ಮಾತ್ರವಲ್ಲದೇ ಕೆಲವು ಕಿರು ಚಿತ್ರಗಳಲ್ಲೂ ವರ್ಷಿತಾ ಕಾಣಿಸಿಕೊಂಡಿದ್ದಾರೆ. ರಂಗಭೂಮಿ, ಕಿರು ಚಿತ್ರ, ಕಿರುತೆರೆ ಸಿನೆಮಾ ಎಲ್ಲವೂಗಳನ್ನೂ ಒಂದೇ ಎಂಬಂತೆ ಕಾಣುವ ನಟಿ ಯಾವುದರಲ್ಲಿ ಕೆಲಸ ಮಾಡಿದರೂ ನಟನೆಯೇ ಮಹತ್ವದ್ದಾಗಿರುತ್ತದೆ ಎನ್ನುತ್ತಾರೆ. ಬಹುಶಃ ಸಿನೆಮಾಗಿಂತ ಕೊಂಚ ಹೆಚ್ಚಿನ ಒತ್ತಡವನ್ನು ಕಿರುತೆರೆಯಲ್ಲಿ ಕಾಣಬಹುದು ಎಂಬುದು ವರ್ಷಿತಾರ ಅಭಿಪ್ರಾಯ.

ಅಂದ ಹಾಗೆ ರಂಗಭೂಮಿ ಇವರ ಫೇವರಿಟ್ ವೇದಿಕೆ. ಚಿಕ್ಕ ವಯಸ್ಸಿನಿಂದಲೂ ನಟನೆ, ಗಾಯನ, ನೃತ್ಯ, ಆಟ ಇವೆಲ್ಲವುಗಳಲ್ಲಿ ಸಕ್ರಿಯರಾಗಿದ್ದ ವರ್ಷಿತಾರಿಗೆ ಓದುವುದಕ್ಕಿಂತ ಇವುಗಳ ಮೇಲೆಯೇ ಒಲವು ಹೆಚ್ಚಾಗಿತ್ತು. ಆದರೆ ವೃತ್ತಿ ಪರವಾಗಿ ನಟನೆಯನ್ನೇ ಆರಿಸಿಕೊಳ್ಳಬೇಕು ಎಂಬ ಉದ್ದೇಶವಿರಲಿಲ್ಲ. ಆದರೆ ಕ್ರಮೇಣ ನಟನಾರಂಗದಿಂದ ಬಂದ ಅವಕಾಶಗಳು ಮತ್ತು ಗೌರವಗಳು ಇವರನ್ನು ನಟಿಯಾಗಿ ಮುಂದುವರಿಯಲು ಪ್ರೇರೇಪಿಸಿತು.

ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಆಸೆ' ಧಾರಾವಾಹಿಯಲ್ಲಿ ನಾಯಕ ಸೂರ್ಯನ ಅತ್ತಿಗೆ ರೋಹಿಣಿಯ ಗೆಳತಿ ಪೂಜಾ ಆಗಿ ಅಭಿನಯಿಸುತ್ತಿದ್ದಾರೆ ವರ್ಷಿತಾ ಸೇನಿ. ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳಲ್ಲಿ ನಟಿಸಿ ವೀಕ್ಷಕರ ಮನ ಸೆಳೆಯುತ್ತಿದ್ದಾರೆ ನಟಿ ವರ್ಷಿತಾ ಸೇನಿ‌. ಇಂದಿಗೂ ಬೇರೆ ಬೇರೆ ರಂಗಗಳಲ್ಲಿ ಸಕ್ರಿಯರಾಗಿದ್ದರೂ ಕೂಡ ರಂಗಭೂಮಿಯನ್ನು ಅತಿಯಾಗಿ ಪ್ರೀತಿಸುತ್ತಾರೆ ನಟಿ.

More from Filmibeat

English summary
Varshita Seni, who developed acting through theater, is currently busy on television,
Read more about: actress serial tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X