For Quick Alerts
  ALLOW NOTIFICATIONS  
  For Daily Alerts

  ಈ ಎಲ್ಲ ಧಾರಾವಾಹಿಗಳ ಕಥೆ ಒಂದೇ ಆಗ್ಬಿಟ್ಟಿದೆ

  By Pavithra
  |

  ಧಾರಾವಾಹಿಗಳು ಇಂದಿನ ದಿನಗಳಲ್ಲಿ ಜನರನ್ನು ಎಷ್ಟರ ಮಟ್ಟಿಗೆ ಆಕರ್ಷಣೆ ಮಾಡುತ್ತಿವೆ ಎಂದರೆ. ಸಂಜೆ ಆಯ್ತು ಅಂದರೆ ಸಾಕು ಮಹಿಳೆಯರು ಕೆಲಸಗಳನ್ನೇಲ್ಲಾ ಮುಗಿಸಿ ಟಿವಿ ಮುಂದೆ ಹಾಜರ್ ಹಾಕಿಬಿಡ್ತಾರೆ. ಅಷ್ಟರ ಮಟ್ಟಿಗೆ ಸೀರಿಯಲ್ ಗಳು ಪ್ರೇಕ್ಷಕರನ್ನು ಇಂಪ್ರೆಸ್ ಮಾಡುತ್ತಿವೆ.

  ಈ ಹಿಂದೆಯಲ್ಲಾ ಬರಿ ಹೆಣ್ಣು ಮಕ್ಕಳು ಮಾತ್ರ ಟಿವಿ ಮುಂದೆ ಕೂತು ಸೀರಿಯಲ್ ಗಳನ್ನು ನೋಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಯುವಕ ಯುವತಿಯರು ಧಾರಾವಾಹಿಗಳನ್ನು ಬಿಡದೇ ನೋಡುವಂತಾಗಿದ್ದಾರೆ. ಇದಕ್ಕೆ ಕಾರಣ ಧಾರಾವಾಹಿಗಳ ಗುಣಮಟ್ಟ ಹಾಗೂ ಕಲಾವಿದರು. ಆದರೆ ಸದ್ಯ ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವ ಸಾಕಷ್ಟು ಪ್ರಖ್ಯಾತಿ ಪಡೆದುಕೊಂಡಿರುವ ಐದು ಧಾರಾವಾಹಿಗಳ ಕಥೆ ಒಂದೇ ಆಗಿದೆ.

  ರೀ ಡೈರೆಕ್ಟರೇ.. ಇವತ್ತಾದ್ರೂ 'ರಾಧಾ ರಮಣ'ನ ಬಾಯಿ ಬಿಡ್ಸಿ, ಒಂದು ಮಾಡ್ಸಿ.. ಪ್ಲೀಸ್.! ರೀ ಡೈರೆಕ್ಟರೇ.. ಇವತ್ತಾದ್ರೂ 'ರಾಧಾ ರಮಣ'ನ ಬಾಯಿ ಬಿಡ್ಸಿ, ಒಂದು ಮಾಡ್ಸಿ.. ಪ್ಲೀಸ್.!

  ಬೇರೆ ಬೇರೆ ವಾಹಿನಿಯಲ್ಲಿ ಪ್ರಸಾರ ಆದರೂ ಕುಡ ಈ ನಾಲ್ಕು ಸೀರಿಯಲ್ ಕಥೆ ಒಂದೇ ಆಗಿರುವುದು ವಿಚಿತ್ರ. ಇದನ್ನ ನೋಡಿದ ಪ್ರೇಕ್ಷಕರು ಕೂಡ ಕೊಂಚ ಗೊಂದಲದಲ್ಲಿದ್ದಾರೆ. ಹಾಗಾದರೆ ಆ ಧಾರಾವಾಹಿಗಳು ಯಾವುವು? ಎಲ್ಲಾ ಸೀರಿಯಲ್ ಕಥೆ ಒಂದೇ ಆಗಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

  'ಮಾಂಗಲ್ಯಂ ತಂತು ನಾನೇನಾ' ಸೀರಿಯಲ್ ನಲ್ಲಿ ಮದುವೆ

  'ಮಾಂಗಲ್ಯಂ ತಂತು ನಾನೇನಾ' ಸೀರಿಯಲ್ ನಲ್ಲಿ ಮದುವೆ

  ಕಲರ್ ಸೂಪರ್ ನಲ್ಲಿ ಪ್ರಸಾರ ಆಗುತ್ತಿರುವ 'ಮಾಂಗಲ್ಯಂ ತಂತು ನಾನೇನಾ' ಧಾರಾವಾಹಿಯಲ್ಲಿ ಪ್ರಮುಖ ಘಟ್ಟ ತಲುಪಿದೆ. ಸೀರಿಯಲ್ ನಲ್ಲಿ ಸದ್ಯ ಮದುವೆ ಸಂಭ್ರಮ ಮನೆ ಮಾಡಿದೆ. ನಾಯಕ ತೇಜಸ್ವಿ ಹಾಗೂ ನಾಯಕಿ ಶ್ರಾವಣಿಯ ಒಲ್ಲದ ಮನಸ್ಸಿನ ಮದುವೆ ಜೋರಾಗಿ ನಡೆಯುತ್ತಿದೆ.

  ಸೀತಾ-ವಲ್ಲಭ ಸೀರಿಯಲ್ ನಲ್ಲಿ ವಿವಾಹ ಸಂಭ್ರಮ

  ಸೀತಾ-ವಲ್ಲಭ ಸೀರಿಯಲ್ ನಲ್ಲಿ ವಿವಾಹ ಸಂಭ್ರಮ

  ಕಲರ್ ಕನ್ನಡ ವಾಹಿನಿಯಲ್ಲಿಯೇ ಪ್ರಸಾರ ಆಗುತ್ತಿರುವ 'ಸೀತಾ-ವಲ್ಲಭ' ಧಾರಾವಾಹಿಯಲ್ಲಿಯೂ ಮದುವೆ ಸಂಭ್ರಮ ಜೋರಾಗಿದೆ. ಇಲ್ಲಿಯೂ ನಾಯಕ-ನಾಯಕಿ ಇಷ್ಟವಿಲ್ಲದ ಮನಸ್ಸಿನಲ್ಲಿ ಮನೆಯವರ ಒತ್ತಾಯದ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  'ಸರ್ವ ಮಂಗಳ ಮಾಂಗಲ್ಯೇ' ಸೀರಿಯಲ್ ನಲ್ಲೂ ಇದೇ

  'ಸರ್ವ ಮಂಗಳ ಮಾಂಗಲ್ಯೇ' ಸೀರಿಯಲ್ ನಲ್ಲೂ ಇದೇ

  ಬೆಳ್ಳಿ ತೆರೆಯಿಂದ ಕಿರುತೆರೆಗೆ ಮತ್ತೆ ವಾಪಸ್ ಆಗಿ ಅಭಿನಯ ಮಾಡುತ್ತಿರುವ ಧಾರಾವಾಹಿ 'ಸರ್ವ ಮಂಗಳ ಮಾಂಗಲ್ಯೇ'. 'ಸರ್ವ ಮಂಗಳ ಮಾಂಗಲ್ಯೇ' ಸೀರಿಯಲ್ ನಲ್ಲಿಯೂ ಮದುವೆ ನಡೆಯುತ್ತಿದೆ. ಇಲ್ಲಿಯೂ ನಾಯಕ-ನಾಯಕಿ ಮುನಿಸಿನಲ್ಲಿಯೇ ಮದುವೆ ಆಗಿದ್ದಾರೆ.

  ಜೀ ಕನ್ನಡದಲ್ಲಿ 'ಗಂಗಾ' ಮದುವೆ

  ಜೀ ಕನ್ನಡದಲ್ಲಿ 'ಗಂಗಾ' ಮದುವೆ

  ಜೀ ವಾಹಿನಿಯಲ್ಲಿ ಸಾಕಷ್ಟು ದಿನಗಳಿಂದ ಪ್ರಸಾರ ಆಗುತ್ತಿರುವ ಗಂಗಾ ಸೀರಿಯಲ್ ನಲ್ಲಿಯೂ ವಿವಾಹದ ಎಪಿಸೋಡ್ ನಡೆಯುತ್ತಿದೆ. ಗಂಗಾ ಮತ್ತು ಸಾಗರ್ ಮದುವೆ ಸಂಭ್ರಮ ಇನ್ನು ಕೆಲವೇ ದಿನಗಳಲ್ಲಿ ಜೀ ವಾಹಿನಿಯಲ್ಲಿ ಪ್ರಸಾರ ಆಗಲಿದೆ.

  ಗೊಂದಲದಲ್ಲೇ ಮುಗಿದೋಯ್ತು ಕೃಷ್ಣವೇಣಿ ಮದುವೆ

  ಗೊಂದಲದಲ್ಲೇ ಮುಗಿದೋಯ್ತು ಕೃಷ್ಣವೇಣಿ ಮದುವೆ

  ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಮತ್ತೊಂದು ಹೊಸ ಧಾರಾವಾಹಿ 'ಮನೆಯೇ ಮಂತ್ರಾಲಯ' ಈ ಸೀರಿಯಲ್ ನಲ್ಲಿಯೂ ಕೃಷ್ಣವೇಣಿ ಮದುವೆ ಅದ್ದೂರಿಯಾಗಿ ನಡೆಯುತ್ತಿದ್ದು ವಿಚಿತ್ರ ಎಂದರೆ ಇಲ್ಲಿಯೂ ಗೊಂದಲದಲ್ಲಿಯೇ ಮದುವೆ ಸಮಾರಂಭ ನಡೆಯುತ್ತಿದೆ.

  English summary
  There is a same story in five major Kannada serials. A special wedding episode telecasting in five Kannada serial episodes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X