'ಉಪಾಧ್ಯಕ್ಷ' ಬಳಿಕ ಮಲೈಕಾಗೆ ಪರಭಾಷೆಯಿಂದಲೂ ಬಂತು ಆಫರ್; ಮುಂದಿನ ಹೆಜ್ಜೆ ಏನು?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ನಟಿ ಮಲೈಕಾ ವಸುಪಾಲ್. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನೆ ಮನ ಸೆಳೆದ ಈ ಚೆಲುವೆ ಈಗ ಕಿರುತೆರೆ ಮಾತ್ರವಲ್ಲ, ಸಿನಿಮಾದಲ್ಲಿಯೂ ನಟಿಸಿ ಜೈ ಎನಿಸಿಕೊಂಡಿದ್ದಾರೆ. 'ಉಪಾಧ್ಯಕ್ಷ' ಸಿನಿಮಾ ಮೂಲಕ ನಟಿ ಮಲೈಕಾ ವಸುಪಾಲ್ ಸಿನಿಮಾಗೆ ಪ್ರವೇಶಿಸಿರುವುದು ಸದ್ಯ ಟ್ರೆಂಡಿಂಗ್‌ನಲ್ಲಿರುವ ವಿಚಾರ.

ನಟನೆಯ ಕುರಿತಾಗಿ ಅಪಾರವಾದ ಕನಸನ್ನು ಕಟ್ಟಿಕೊಂಡಿದ್ದ ಮಲೈಕಾ ಈಗ ತುಂಬಾ ಸಂತಸದಿಂದಿದ್ದಾರೆ. ಕಿರುತೆರೆಯ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಈ ಚೆಲುವೆ ಇದೀಗ ಏಕಕಾಲಕ್ಕೆ ಎರಡನ್ನೂ ನಿಭಾಯಿಸಿಕೊಂಡು ಸಾಗುತ್ತಿದ್ದಾರೆ. ಅಂದ ಹಾಗೇ ಮಲೈಕಾ ವಸುಪಾಲ್ ಅವರ ನಟನಾ ಜರ್ನಿ ರೋಚಕ ಎನ್ನಬಹುದು. ವಿವಿಧ ಪ್ರಶಸ್ತಿ ಕಾರ್ಯಕ್ರಮಗಳು ಮತ್ತು ವೀಕೆಂಡ್ ವಿತ್ ರಮೇಶ್‌ನಲ್ಲಿ ಸಾಧನೆಗೈದವರನ್ನು ನೋಡುತ್ತಿದ್ದಾಗ ಮಲೈಕಾ ಅವರ ನಟನೆಯ ಆಸೆಗೂ ಪ್ರೇರಣೆ ಸಿಕ್ಕಿದಂತಾಗುತ್ತಿತ್ತಂತೆ.

There is no difference acting in TV and movies said Upadhyaksha actress Malaika Vasupal

ಮನೆಯವರ ಇಚ್ಛೆಯಂತೆಯೇ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿರುವ ಈಕೆ ನಂತರ ತಮ್ಮ ಕನಸುಗಳ ಬೆನ್ನತ್ತಿ ಹೊರಟಿದ್ದರು. ಈಗ ತನ್ನ ಕನಸುಗಳನ್ನು ಈಡೇರಿಸುವ ಸರದಿ ಎಂದು ಖುಷಿಯಿಂದ ನಟಿ ಮಲೈಕಾ ವಸುಪಾಲ್ ಹಂಚಿಕೊಳ್ಳುತ್ತಿದ್ದಾರೆ. ಇನ್ನು 'ಉಪಾಧ್ಯಕ್ಷ' ಬೆಳ್ಳಿತೆರೆಯಲ್ಲಿ ಮಲೈಕಾರ ಮೊದಲ ಸಿನಿಮಾ. ತನ್ನ ಮೊದಲ ಚಿತ್ರಕ್ಕಾಗಿ ಕ್ಯಾಮೆರಾ ಎದುರಿಸಲು ತಾನು ನಟಿಸಿದ ಧಾರಾವಾಹಿಗಳಲ್ಲಿನ ತನ್ನ ಅನುಭವ ನೆರವಾಗಿದ್ದನ್ನು ಮಲೈಕಾ ಒಪ್ಪಿಕೊಳ್ಳುತ್ತಾರೆ.

"ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಾನು ನಾಯಕಿ ಲೀಲಾ ಆಗಿ ಅಭಿನಯಿಸುತ್ತಿದ್ದೇನೆ. ಕಿರುತೆರೆಯಲ್ಲಿ ಲೀಲಾ ಪಾತ್ರ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದಿದೆ. ಕಿರುತೆರೆಯಲ್ಲಿ ವೀಕ್ಷಕರ ಮನ ಸೆಳೆದಿರುವ ನಾನು ಇದೀಗ ಹಿರಿತೆರೆಗೆ ಪ್ರವೇಶಿಸುವ ಮೂಲಕ ಹಿಂದೆಗಿಂತ ದೊಡ್ಡ ಸಾಧನೆಯನ್ನು ಮಾಡ ಹೊರಟಿದ್ದೇನೆ. ಇದರ ಜೊತೆಗೆ ಧಾರಾವಾಹಿಯಲ್ಲಿ ನಟಿಸುವಾಗ ಕಲಿತ ನಟನಾ ಕೌಶಲ್ಯವು ನನಗೆ ಎಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ನೀಡಿದೆ" ಎಂದು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ನಟಿ ಮಲೈಕಾ ವಸುಪಾಲ್ ಹೇಳಿಕೊಂಡಿದ್ದರು .

"ಕಿರುತೆರೆಯಾಗಿರಲೀ, ಹಿರಿತೆರೆಯೇ ಆಗಿರಲಿ. ನಾವು ಎಲ್ಲಿ ಕೆಲಸ ಮಾಡುತ್ತಿದ್ದೇವೆ ಎನ್ನುವುದು ಮುಖ್ಯವಲ್ಲ. ಬದಲಿಗೆ ನಾವು ನಮ್ಮ ಪಾತ್ರದ ಅಭಿನಯವನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದು ಕೂಡಾ ಮುಖ್ಯ. ಕ್ಯಾಮೆರಾ ಎದುರಿಸುವ ಕೌಶಲ್ಯ ನಮ್ಮನ್ನು ನಟನೆಯ ಎಷ್ಟೋ ಸಮಸ್ಯೆಗಳಿದ್ದ ದೂರವಿರಿಸುತ್ತದೆ. ಧಾರಾವಾಹಿಯಲ್ಲಾದರೆ ಕಥೆಯೇ ಬಂಡಾಳವಾಗಿರುತ್ತದೆ. ಆದರೆ, ಹಿರಿತೆರೆಗೆ ಬಂದಾಗ ಕಥೆಯು ಸೀಮಿತ ಅವಧಿಗೆ ಮುಕ್ತಾಯವಾಗಬೇಕಾಗುತ್ತದೆ. ಹಾಗಾಗಿ ಇಲ್ಲಿ ನಮ್ಮ ನಟನೆಯು ಹೆಚ್ಚು ಪ್ರಾಶಸ್ತ್ಯವನ್ನು ಹೊಂದಿರುತ್ತದೆ. ನಾವು ಅದನ್ನು ಸಂಪೂರ್ಣವಾಗಿ ನಿಭಾಯಿಸಬೇಕು" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುವಾಗ ಮಲೈಕಾ ಹೇಳಿದ್ದರು .

There is no difference acting in TV and movies said Upadhyaksha actress Malaika Vasupal

ಇನ್ನೊಂದು ವಿಶೇಷವೇನೆಂದರೆ ಮಲೈಕಾ ಸಿನಿಮಾ ಎಂಟ್ರಿ ಹಾಸ್ಯ ಪ್ರಧಾನ ಚಿತ್ರದಿಂದ ಪ್ರಾರಂಭವಾಗಿದೆ. ಕಾಮಿಡಿ ಸೆನ್ಸ್ ಒಂದು ವಿಶೇಷ ಪ್ರತಿಭೆ ಎಂಬುದು ಮಲೈಕಾ ಅವರ ಅಭಿಪ್ರಾಯ. ಸುಮಾರು 250 ಚಿತ್ರಗಳಲ್ಲಿ ಹಾಸ್ಯ ನಟನಾಗಿ ಅಭಿನಯಿಸಿ ಈಗ ಹೀರೋ ಆಗಿರುವ ಚಿಕ್ಕಣ್ಣ ಅವರೊಂದಿಗೆ ಆಫ್ ಸ್ಕ್ರೀನ್‌ನಲ್ಲಿ ಕೆಲಸ ಮಾಡುವುದಕ್ಕೆ ಆರಂಭದಲ್ಲಿ ಮಲೈಕಾಗೆ ಹೆದರಿಕೆ ಇತ್ತಂತೆ. ಆದರೆ, ಇವನ್ನೆಲ್ಲಾ ನಿಭಾಯಿಸುವ ಶಕ್ತಿ ನಮ್ಮೊಳಗೆ ಇರುತ್ತದೆ ಎಂಬುದು ಆಕೆಯ ನಂಬಿಕೆ. ಅದರಲ್ಲೂ ಈಕೆಯ ಮೊದಲ ಸಿನಿಮಾದಲ್ಲಿಯೇ ನಾಯಕನಿಗೆ ಸರಿಸಮಾನವಾದ ಪಾತ್ರ ಸಿಕ್ಕಿರುವುದು ಆಕೆಗೆ ಇನ್ನಷ್ಟು ಪ್ಲಸ್ ಪಾಯಿಂಟ್. ಹಾಗೆಯೇ ಚಿಕ್ಕಣ್ಣ ಜೊತೆಗೆ ರವಿಶಂಕರ್, ಸಾಧು ಕೋಕಿಲ ಅವರಂತಹ ನಟರೊಂದಿಗೆ ಕೆಲಸ ಮಾಡುವ ಅವಕಾಶವೂ ಸಿಕ್ಕಿರುವುದಕ್ಕೆ ಖುಷಿಯಿದೆಯಂತೆ.

ಸ್ಯಾಂಡಲ್‌ವುಡ್‌ನ್ನು ಹೊರತುಪಡಿಸಿ ಬೇರೆ ಭಾಷೆಯಿಂದಲೂ ಆಫರ್‌ಗಳು ಬಂದಿದ್ದರೂ ಸದ್ಯ ಭಾಷೆ ತಿಳಿದಿಲ್ಲದ ಕಾರಣ ಮಲೈಕಾ ಅವುಗಳನ್ನು ನಿರಾಕರಿಸಿದ್ದಾರೆ. ತಮ್ಮನ್ನು ಸಂಪೂರ್ಣವಾಗಿ ನಟನೆಯಲ್ಲಿ ತೊಡಗಿಸಿಕೊಳ್ಳಲು ಇಷ್ಟಪಡುವ ಮಲೈಕಾ ಸದ್ಯ ಬೇರೆ ಭಾಷೆಯ ಗಮನ ನೀಡುವುದಿಲ್ಲ ಎನ್ನುತ್ತಾರೆ.

More from Filmibeat

English summary
Malaika Vasupal who charmed as a heroine Upadhyaksha after Hitler Kalyan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X