»   » ಈ ನಟಿಯರ ಪ್ರಕಾರ ಕನ್ನಡದಲ್ಲಾರೂ 'ಸ್ಟೈಲಿಶ್' ಕಲಾವಿದರಿಲ್ಲ.!

ಈ ನಟಿಯರ ಪ್ರಕಾರ ಕನ್ನಡದಲ್ಲಾರೂ 'ಸ್ಟೈಲಿಶ್' ಕಲಾವಿದರಿಲ್ಲ.!

Posted By:
Subscribe to Filmibeat Kannada

ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್ ರವರಿಂದ ಹಿಡಿದು ಈಗಿನ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಸುದೀಪ್, ದರ್ಶನ್, ಯಶ್ ವರೆಗೂ ಕನ್ನಡದಲ್ಲಿ ಅನೇಕ ಸ್ಟೈಲಿಶ್ ಹೀರೋಗಳಿದ್ದಾರೆ. ಟ್ರೆಂಡ್ ಸೃಷ್ಟಿ ಮಾಡಿದ ಸ್ಟೈಲಿಶ್ ಹೀರೋಯಿನ್ ಗಳೂ ಇದ್ದಾರೆ. ಇವರೆಲ್ಲರ ಸ್ಟೈಲ್ ಗೆ ಕ್ಲೀನ್ ಬೌಲ್ಡ್ ಆಗಿರುವವರ ಸಂಖ್ಯೆ ಕೂಡ ಕಮ್ಮಿ ಏನಿಲ್ಲ.

ಹೀಗಿರುವಾಗ, ಕನ್ನಡದಲ್ಲಿ ಯಾರೂ 'ಸ್ಟೈಲಿಶ್' ಇಲ್ಲ, 'ಸ್ಟೈಲ್ ಐಕಾನ್' ಗಳಿಲ್ಲ ಎಂಬ ಹೇಳಿಕೆಯನ್ನ ಕನ್ನಡ ನಟಿಮಣಿಯರೇ ನೀಡಿದ್ದಾರೆ. ಇದು ಶಾಕಿಂಗ್ ಆದರೂ ಸತ್ಯ.

'There is no style icons in Kannada Film Industry' says Deepika Dass and Roopashri

ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ 'ನಾಗಿಣಿ' ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್, ''ಕನ್ನಡದಲ್ಲಿ ಯಾರೂ ಸ್ಟೈಲಿಶ್ ಆರ್ಟಿಸ್ಟ್ ಇಲ್ಲ'' ಎಂದಿದ್ದಾರೆ.

''ನಿಮ್ಮ ಪ್ರಕಾರ ಸ್ಟೈಲಿಶ್ ಆರ್ಟಿಸ್ಟ್ ಯಾರು.?'' ಎಂದು ನಿರೂಪಕ ಅಕುಲ್ ಬಾಲಾಜಿ ಕೇಳಿದಕ್ಕೆ, ''ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್'' ಎಂದು ದೀಪಿಕಾ ದಾಸ್ ಉತ್ತರ ಕೊಟ್ಟರು.

ಅದಕ್ಕೆ, ''ಕನ್ನಡದಲ್ಲಿ ಯಾರೂ ಇಲ್ವಾ.? ನಿಮ್ಮನ್ನ ಕನ್ನಡದಲ್ಲಿ ಮ್ಯಾಚ್ ಮಾಡುವವರು ಯಾರೂ ಇಲ್ವಾ.?'' ಎಂದು ಅಕುಲ್ ಕೇಳಿದಕ್ಕೆ, ''ನನ್ನನ್ನೂ ಸೇರಿಸಿ ಹೇಳ್ತಿದ್ದೇನೆ ಯಾರೂ ಇಲ್ಲ'' ಎಂದರು ದೀಪಿಕಾ ದಾಸ್.

ಇನ್ನೂ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ರೂಪಶ್ರೀ ಕೂಡ ಆಲ್ಮೋಸ್ಟ್ ಇದೇ ರೀತಿ ಹೇಳಿಕೆ ಕೊಟ್ಟಿದ್ದಾರೆ.

''ನಿಮ್ಮ ಸ್ಟೈಲ್ ಐಕಾನ್ ಯಾರು.?'' ಎಂದು ಅಕುಲ್ ಬಾಲಾಜಿ ಕೇಳಿದಕ್ಕೆ, ''ದೀಪಿಕಾ ಪಡುಕೋಣೆ, ಆಲಿಯಾ ಭಟ್'' ಅಂತ ಉತ್ತರ ಕೊಟ್ಟರು ನಟಿ ರೂಪಶ್ರೀ. ಅದಕ್ಕೆ ''ಕನ್ನಡದಲ್ಲಿ ಯಾರೂ ಇಲ್ವಾ.?'' ಎಂದು ಕೇಳಿದಾಗ, ''ಇಲ್ಲ, ನನಗೆ ನನ್ನ ಸ್ಟೈಲ್ ಇಷ್ಟ. ನಾನು ಯಾರನ್ನೂ ಕಾಪಿ ಮಾಡಲ್ಲ'' ಎಂದಿದ್ದಾರೆ ನಟಿ ರೂಪಶ್ರೀ.

English summary
'There is no style icons in Kannada Film Industry' says Deepika Dass and Roopashri in Colors Super Channel's popular show 'Super Talk Time'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada