ನಟನೆಗೆ ಬ್ರೇಕ್ ಕೊಟ್ಟವರಿಗೆ ಬ್ರೇಕ್ ಕೊಟ್ಟ 'ಲಕ್ಷ್ಮಿ ನಿವಾಸ'; ಎಲ್ಲಾ ಪಾತ್ರಗಳೂ ಫೇಮಸ್ ಆಗಿದ್ದೇಗೆ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮೀ ನಿವಾಸ' ಧಾರಾವಾಹಿ ಇಂದು ಕನ್ನಡದ ವಿಭಿನ್ನ ಅಭಿಮಾನಿಗಳ ಬಳಗವನ್ನು ಹೊಂದಿದೆ. ಧಾರಾವಾಹಿ ಕಥೆ ಬೇರೆ ಬೇರೆ ಕವಲುಗಳನ್ನು ಹೊಂದಿದ್ದು ಬಹಳ ಆಸಕ್ತಿದಾಯಕವಾಗಿ ಮುನ್ನಡೆಯುತ್ತಿದೆ. ಟಿಆರ್‌ಪಿಯಲ್ಲಿಯೂ ಮುಂದಕ್ಕೆ ಇರುವ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿಯ ತಾರಾಗಣವು ಬಹಳ ವಿಶೇಷವಾಗಿದೆ.
ಮನೆಯ ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅವರೇ ಹಿರಿಯ ಕಲಾವಿದೆ ಎಂ ಎನ್ ಲಕ್ಷ್ಮಿ ದೇವಿ. ಡಾಕ್ಟರ್ ವಿಷ್ಣುವರ್ಧನ್ ಅವರ ಅಭಿನಯದ 'ಯಜಮಾನ' ಸೇರಿದಂತೆ ಕನ್ನಡದ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ, ಬಹಳ ಅಚ್ಚುಮೆಚ್ಚಿನ ಪಾತ್ರ ಇದಾಗಿದೆ.

ಲಕ್ಷ್ಮಿ ನಿವಾಸ ಧಾರಾವಾಹಿಯ ಲಕ್ಷ್ಮಿ ಪಾತ್ರಧಾರಿ ನಟಿ ಶ್ವೇತಾ ಹಲವು ವರ್ಷಗಳ ಹಿಂದೆ 'ಲಕ್ಷ್ಮಿ ಮಹಾಲಕ್ಷ್ಮಿ' ಸಿನಿಮಾ ಸೇರಿದಂತೆ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ನಟಿ. ಸದ್ಯಕ್ಕೆ ಇವರು ತಮಿಳುನಾಡಿನ ಚೆನ್ನೈನಲ್ಲಿ ವಾಸವಾಗಿದ್ದಾರೆ.
ಮನೆಯ ಹಿರಿಯ ಸೊಸೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿಯ ಹೆಸರು ಲಕ್ಷ್ಮಿ ಹೆಗಡೆ. ಮೂಲತಃ ಶಿರಸಿಯವರಾದ ಇವರು ಹಲವು ವರ್ಷದ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮುತ್ತಿನ ತೋರಣ' ಧಾರಾವಾಹಿಯಲ್ಲಿ ಕಲಾವತಿ ಪಾತ್ರದ ಮೂಲಕ ಸದ್ದು ಮಾಡಿದ್ದರು. ಅದಲ್ಲದೆ 'ಮಿಸ್ಟರ್ ಗರಗಸ', 'ಟ್ಯಾಬ್' ಮುಂತಾದ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಇನ್ನು ಮಂಗಳ ಎಂಬ ದುರಾಸೆಯ ಮನೆ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟಿ, ಹಲವು ವರ್ಷಗಳಿಂದ ಪ್ರಸಾರವಾಗುತ್ತಿದ್ದ 'ಮುತ್ತಿನ ತೋರಣ' ಧಾರಾವಾಹಿಯಲ್ಲಿ ಪೂರ್ವಿ ಎಂಬ ಪಾತ್ರದಲ್ಲಿ ನಟಿಸಿ ಖ್ಯಾತಿಗಳಿಸಿದ್ದರು.
ಹಿರಿಯ ಅಣ್ಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟ ಮಧು ಹೆಗಡೆ ಹಲವು ವರ್ಷಗಳ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಲ್ಲವಿ ಅನುಪಲ್ಲವಿ' ಜೀ ಕನ್ನಡದ 'ಪುನರ್ ವಿವಾಹ' ಮುಂತಾದ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳಾದ 'ಈ ಬಂಧನ', 'ಜಾನಿ ಮೇರಾ ನಾಮ ಪ್ರೀತಿ ಮೇರಾ ಕಾಮ್', 'ಕವಚ' ಇತ್ಯಾದಿಗಳಲ್ಲೂ ನಟಿಸಿದ್ದಾರೆ.
ಕಿರಿಯ ತಮ್ಮನ ಪಾತ್ರದಲ್ಲಿ ನಟ ಅಜಯ್ ರಾಜ್ ಹಲವಾರು ವರ್ಷಗಳಿಂದ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಸಕ್ರಿಯವಾಗಿದ್ದು, ದಿಬ್ಬಣ, ಅಭಿಲಾಶ ಮುಂತಾದ ಧಾರಾವಾಹಿಗಳಲ್ಲದೆ 'ಮುಂದಿನ ನಿಲ್ದಾಣ', 'ಒಂದು ಗಂಟೆಯ ಕಥೆ', 'ಅಬ್ಬಬ್ಬಾ' ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಭಾವನಾ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ದಿಶಾ ಮದನ್ ಹಲವು ವರ್ಷಗಳ ಹಿಂದೆ 'ಕುಲವಧು' ಧಾರಾವಾಹಿ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿರುವುದಲ್ಲದೆ, ಸಿನಿಮಾಗಳಾದ 'ಫ್ರೆಂಚ್ ಬಿರಿಯಾನಿ', 'ಹಂಬಲ್ ಪೊಲಿಟಿಷಿಯನ್' ಅಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಮದುವೆ ಹಾಗೂ ವಯಕ್ತಿಕ ಜೀವನ ಎಂದು ಮಾತಾನೆಯಿಂದ ಚಿಕ್ಕ ಬ್ರೇಕ್ ಪಡೆದ್ದಿದ್ದ ಈಕೆ 'ಲಕ್ಷ್ಮಿ ನಿವಾಸ' ಧಾರಾವಾಹಿ ಮೂಲಕ ಮತ್ತೆ ಕಿರುತೆರೆ ಪ್ರೇಕ್ಷಕರಿಗೆ ಇಷ್ಟವಾಗುತ್ತಿದ್ದಾರೆ.
ಹೀಗೆ ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ನಟಿಸಿ ನಂತರ ಒಂದು ಬ್ರೇಕ್ ತೆಗೆದುಕೊಂಡಿದ್ದ ಎಂ ಎನ್ ಲಕ್ಷ್ಮಿ ದೇವಿ, ಅಜಯ್ ರಾಜ್, ಲಕ್ಷ್ಮಿ ಹೆಗ್ಡೆ, ಮಧು ಹೆಗ್ಡೆ, ನಟಿ ಶ್ವೇತಾ ಮತ್ತೆ ವಿಭಿನ್ನ ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡಿರುವುದು ಕನ್ನಡ ವೀಕ್ಷಕರಿಗಂತೂ ಸಂತಸ ತಂದಿದೆ.


Click it and Unblock the Notifications











