ಇವರು ಕಲೆಯನ್ನೇ ಜೀವನ ಆಗಿಸಿಕೊಂಡಿರುವ ಕಲಾ ದಂಪತಿಗಳು

By ಅನಿತಾ ಬನಾರಿ

'ಮುಕ್ತ ಮುಕ್ತ' ಧಾರಾವಾಹಿ ಎಂದಾಕ್ಷಣ ಹಲವರಿಗೆ ನಟಿ ಸೀತಾ ಕೋಟೆ ನೆನಪಿಗೆ ಬರುತ್ತಾರೆ. ಶಾಂಭವಿ ಎಂಬ ಪಾತ್ರದ ಮೂಲಕ ಮನೆ ಮಗಳಂತೆ ಜನ ಮನ ಗೆದ್ದಿರುವ ನಟಿ ಸೀತಾ ಕೋಟೆ ಅಭಿನಯವನ್ನೇ ತಮ್ಮ ಪ್ರಪಂಚವಾಗಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲ್ಲ. ಸುಳ್ಯದ ಮೂಲದ ನಟಿ ಸೀತಾ ಕೋಟೆ ಹಲವು ತುಳು ಸಿನಿಮಾಗಳಲ್ಲೂ ನಟಿಸಿದ್ದಾರೆ. ಭರತನಾಟ್ಯ ಕಲಾವಿದೆಯೂ ಆಗಿರುವ ಈಕೆ, ಕನ್ನಡ ಸಿನಿಮಾಗಳು ಧಾರಾವಾಹಿಗಳು ತುಳು ಸಿನಿಮಾ, ನಾಟಕ ರಂಗಭೂಮಿ ಹೇಗೆ ಸಕ್ರಿಯವಾಗಿ ಅಭಿನಯದಲ್ಲಿ ತೊಡಗಿದ್ದಾರೆ.

'ಕಾಣದಂತೆ ಮಾಯವಾದನು', 'ನಾತಿಚರಾಮಿ', 'ಅಮೃತ ಅಪಾರ್ಟ್ಮೆಂಟ್‌','ಅಂಜನಿಪುತ್ರ', 'ಸಂತೋಷ ಸಂಗೀತ' ಮುಂತಾದ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಸೀತಾ ಕೋಟೆ ತುಳು ಸಿನಿಮಾಗಳಾದ 'ಪಣೊಡಾ ಬೊಡ್ಚಾ', 'ದೇಯಿ ಬೈದೆತ್ತಿ' ಗಳಲ್ಲಿ ನಟಿಸಿದ್ದಾರೆ. ಜೊತೆಗೆ ರಂಗಭೂಮಿಯಲ್ಲಿ ಬಹಳಷ್ಟು ಆ್ಯಕ್ಟಿವ್ ಇರುವ ಈ ನಟಿ ರಂಗಭೂಮಿ ಕಲಾವಿದ ಗಾಯಕ ಕಾರ್ತಿಕ್ ಹೆಬ್ಬಾರ್ ಅವರೊಂದಿಗೆ ಬಹಳಷ್ಟು ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕಿರುತೆರೆ ಧಾರಾವಾಹಿಗಳಾದ 'ಮುಕ್ತ ಮುಕ್ತ', 'ರಾಧಾ ಕಲ್ಯಾಣ', 'ಸಾಗರ ಸಂಗಮ' ಮುಂತಾದವುಗಳಲ್ಲಿ ನಟಿಸಿದ್ದಾರೆ.

These are the artistic couples who are actively recognized in the field of acting

ಇವರ ಪ್ರತಿ ಶಶಿಧರ್ ಕೋಟೆ ಮೂಲತಃ ಗಾಯಕರು. ಕಾಲೇಜ್ ದಿನಗಳಿಂದಲೂ ಬಹಳಷ್ಟು ಸಂಗೀತ ಕಾರ್ಯಕ್ರಮಗಳಲ್ಲಿ ಹಾಡುತ್ತಾ ಬಂದಿರುವ ಈ ಕಲಾವಿದ ಪ್ರಸ್ತುತ ಹಲವು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 2010ರಲ್ಲಿ 4,000ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಹೆಗ್ಗಳಿಕೆ ಇರುವ ಕಲಾವಿದ ಶಶಿಧರ್ ಕೋಟೆ ಅವರು ಕೋಟೆ ಮ್ಯೂಸಿಕ್ ಹಾಗೂ ಆರ್ಟ್ಸ್ ಫೌಂಡೇಶನ್ ಅನ್ನು ಸ್ಥಾಪಿಸಿ ಹಲವು ಮಕ್ಕಳಿಗೆ ಮತ್ತು ಸಂಗೀತ ಸತ್ತರಿಗೆ ಸಂಗೀತ ಅಭ್ಯಾಸ ನೀಡುತ್ತಿದ್ದಾರೆ. ಧಾರಾವಾಹಿಗಳಾದ 'ಪಾರು', 'ಕನಕ', 'ತ್ರಿವೇಣಿ ಸಂಗಮ', 'ಗೆಜ್ಜೆಪೂಜೆ', 'ಮೀನಾಕ್ಷಿ ಮದುವೆ' ಮುಂತಾದವುಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಭಾಗ್ಯಳ ಮಾವನ ಪಾತ್ರದಲ್ಲಿ ನಟಿಸುತ್ತಿದ್ದಾರೆ ನಟ ಶಶಿಧರ್ ಕೋಟೆ.

ಕಲಾವಿದರಾದ ಮಾಳವಿಕಾ ಹಾಗೂ ಅವಿನಾಶ್ 'ಮಾಯಾಮೃಗ' ಧಾರಾವಾಹಿ ಮೂಲಕ ಕಿರುತೆರೆಗೆ ಪರಿಚಯವಾದವರು. ಅಂದಿನಿಂದ ಇಂದಿನವರೆಗೂ ನಾನಾ ರೀತಿಯ ಸಿನಿಮಾಗಳಲ್ಲಿ ಧಾರಾವಾಹಿಗಳಲ್ಲಿ ಪ್ರಮುಖ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರ ಆಗುತ್ತದೆ ಈ ದಂಪತಿ. ತಮ್ಮ ಇಡೀ ಜೀವನವನ್ನೇ ಕಲೆಗೆ ಮುಡಿಪಾಗಿಟ್ಟಿರುವ ದಂಪತಿಗಳಲ್ಲಿ ಇವರೂ ಒಬ್ಬರು.

These are the artistic couples who are actively recognized in the field of acting

ಬಾಲನಟಿಯಾಗಿ ಮಲಯಾಳಂ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ನಟಿ ಮಾಳವಿಕಾ ನಂತರ ಕನ್ನಡ ಇಂಡಸ್ಟ್ರಿಯಲ್ಲೇ ಬಹಳಷ್ಟು ಹೆಸರು ಮಾಡಿದ್ದಾರೆ. 'ಮಾಯಾಮೃಗ' ಧಾರಾವಾಹಿ ಮೂಲಕ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಮಾಳವಿಕಾ ನಂತರ ರಿಯಾಲಿಟಿ ಶೋಗಳಾದ ಬಿಗ್ ಬಾಸ್ ಬದುಕು ಜಟಕಾ ಬಂಡಿ, ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಜಡ್ಜ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳಾದ 'ಕೆಜಿಎಫ್', 'ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಾಚಾರಿ' ಮುಂತಾದವುಗಳಲ್ಲಿ ನಟಿಸಿದ್ದಾರೆ.

ನಟ ಅವಿನಾಶ್ ಕೂಡ ಕನ್ನಡ ಕಿರುತೆರೆ ಹಾಗೂ ಹಿರೀತರೆ ಪ್ರೇಕ್ಷಕರಿಗೆ ಬಹಳ ಚೆನ್ನಾಗಿ ಪರಿಚಯವಿದ್ದಾರೆ. ಅವಿನಾಶ್ ಈವರೆಗೂ ಹಲವು ಸಿನಿಮಾಗಳಲ್ಲಿ ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಜನಮನ ಗೆದ್ದಿದ್ದಾರೆ. ನಾರಾಯಣ್ ರವೀಂದ್ರ ಎಂಬುದು ಅಭಿನಾಶ್ ಅವರ ಮೂಲ ಹೆಸರಂತೆ. ಕನ್ನಡ ಭಾಷೆಯಲ್ಲದೆ ತಮಿಳು ಸಿನಿಮಾಗಳನ್ನು ನಟಿಸಿರುವ ನಟ ಅವಿನಾಶ್ ಹೆಚ್ಚಾಗಿ ಖಳನಾಯಕನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ 'ಆಪ್ತಮಿತ್ರ', 'ಆಪ್ತರಕ್ಷಕ', 'ದಂಡುಪಾಳ್ಯ', 'ಅಪ್ಪು', 'ಯಜಮಾನ' 'ಸಪ್ತಸಾಗರದ ಆಚೆ ಎಲ್ಲೋ', 'ಕೆಜಿಎಫ್ 2' ಹೀಗೆ ಇವರು ನಟಿಸಿರುವ ಸಿನಿಮಾಗಳ ಸಾಲು ಬಹು ದೊಡ್ಡದಿದೆ. ತಮ್ಮ ಅದ್ಭುತ ಅಭಿನಯಕ್ಕೆ ಬಹಳ ಅಷ್ಟು ಅವಾರ್ಡ್ ಗಳನ್ನು ಪಡೆದಿರುವ ಅವಿನಾಶ್ ತಮ್ಮ ಇಡೀ ಜೀವನವನ್ನು ಕಲೆಗೆ ಮುಡಿಪಾಗಿಟ್ಟಿದ್ದಾರೆ ಎಂದರೆ ತಪ್ಪಾಗಲ್ಲ.

More from Filmibeat

English summary
These are the artistic couples who are actively recognized in the field of acting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X