ಬಿಗ್ ಬಾಸ್‌ನಲ್ಲಿ ಜೋಡಿ ಹಕ್ಕಿಗಳ ಟ್ರೆಂಡ್: ಜೋಡಿಯಾಗಿ ಮೈಂಡ್‌ಗೇಮ್ ಆಗಿದ ಪೇರ್‌ಗಳು ಇವರೇ?
ಕಳೆದ ಹತ್ತು ವರ್ಷಗಳಿಂದ ಬಿಗ್ ಬಾಸ್ ಕನ್ನಡ ಕಿರುತೆರೆ ಪ್ರೇಕ್ಷಕರ ನೆಚ್ಚಿನ ರಿಯಾಲಿಟಿ ಶೋ ಆಗಿದೆ ಎಂದರೆ ತಪ್ಪಾಗಲ್ಲ. ಕನ್ನಡದ ಬಿಗ್ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ನಟ ಸುದೀಪ್ ಅವರ ಮುಂದಾಳುತ್ವ ಹಾಗೂ ನಿರೂಪಣೆಯಲ್ಲಿ ಯಶಸ್ವಿಯಾಗಿ ಮೂಡಿಬರುತ್ತಿದೆ. ಇತ್ತೀಚಿನ ಕೆಲವು ಸೀಜನ್‌ಗಳಲ್ಲಂತೂ ಬಿಗ್ ಬಾಸ್ ಬೇರೆಯದೇ ರೀತಿಯಲ್ಲಿ ಟ್ರೆಂಡ್ ಆಗುತ್ತಿದೆ. ಹೌದು, ಬಿಗ್ ಬಾಸ್‌ನಲ್ಲಿ ಬಹಳಷ್ಟು ಜೋಡಿಹಕ್ಕಿಗಳನ್ನು ಜನ ಇಷ್ಟ ಪಡುತ್ತಿದ್ದಾರೆ.
ನೂರು ದಿನಗಳ ಕಾಲ ಒಂದೇ ಮನೆಯಲ್ಲಿ ನಾನಾ ರೀತಿಯ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಬಿಗ್ ಬಾಸ್ ಸ್ಪರ್ಧಿಗಳ ನಡುವೆ ಕಳಚಿಕೊಳ್ಳಲಾರದಂತಹ ಸಂಬಂಧ ಬೆಸೆದಿರುತ್ತದೆ. ಕೆಲ ಸ್ಪರ್ಧಿಗಳ ನಡುವೆ ಪ್ರೀತಿ ಅನುಬಂಧವೂ ಬೆಸೆದಿದ್ದನ್ನು ನಾವು ನೋಡಿದ್ದೇವೆ. ಜನ ಮೆಚ್ಚಿದ ಅಂತಹ ಬಿಗ್ ಬಾಸ್ ಜೋಡಿ ಹಕ್ಕಿಗಳನ್ನು ನೋಡೋಣ ಬನ್ನಿ.

ರ್‍ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ!
ಬಿಗ್ ಬಾಸ್ ಸೀಸನ್ 5ರ ವಿನ್ನರ್ ರ್‍ಯಾಪರ್ ಚಂದನ್ ಶೆಟ್ಟಿ ಬಿಗ್ ಬಾಸ್ ಮನೆಗೆ ಬಂದು ಹಾಡುಗಳನ್ನು ರಚಿಸಿ ಜನಮನ ಗೆದ್ದಿದ್ದರು. ರೀಲ್ಸ್ ಕ್ವೀನ್ ನಿವೇದಿತಾ ಗೌಡ ಕೂಡ ತಮ್ಮ ಮುದ್ದು ಮೊದ್ದು ಮಾತಿನ ಮೂಲಕವೇ ಜನರಿಗೆ ವಿಶೇಷವಾಗಿ ಇಷ್ಟವಾಗಿದ್ದರು. ಇಬ್ಬರ ಜೋಡಿ ವೀಕ್ಷಕರಿಗೂ ಇಷ್ಟ ಆಗಿತ್ತು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ರ್‍ಯಾಪರ್ ಚಂದನ್ ಶೆಟ್ಟಿ ಒಂದು ಕಾರ್ಯಕ್ರಮದಲ್ಲಿ, ನಿವೇದಿತಾ ಗೌಡಗೆ ಪ್ರಪೋಸ್ ಮಾಡಿ ಸುದ್ದಿಯಾಗಿದ್ದು ಗೊತ್ತೇ ಇದೆ. ಬಳಿಕ ಮದುವೆನೂ ಆಯ್ತು. ಹಾಗೇ ವಿಚ್ಚೇದನ ಕೂಡ ಪಡೆದು ಬೇರೆಯಾಗಿದ್ದಾರೆ.
ಅರವಿಂದ್ ಕೆ ಪಿ ಹಾಗೂ ದಿವ್ಯಾ ಉರುಡುಗ
ಬಿಗ್ ಬಾಸ್ ಸೀಸನ್ ಎಂಟರಲ್ಲಿ ಬೈಕರ್ ಅರವಿಂದ್ ಕೆಪಿ ಅವರು ಜನ ಮೆಚ್ಚಿದ ಬಿಗ್ ಬಾಸ್ ಸ್ಪರ್ಧೆ ಎಂದರೆ ತಪ್ಪಾಗಲ್ಲ. ಕಿರುತೆರೆ ನಟಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಅವರ ನಡುವಿನ ಪ್ರೇಮ ಬಾಂಧವ್ಯ ಬಿಗ್ ಬಾಸ್ ವೀಕ್ಷಕರಿಗಂತೂ ಬಹಳ ಖುಷಿ ಕೊಟ್ಟಿತ್ತು. ಇವರಿಬ್ಬರನ್ನು ಪ್ರೇಕ್ಷಕರು, ಇಂದಿಗೂ ಒಟ್ಟಿಗೆ ಜೋಡಿಯಾಗಿ ನೋಡಲು ಬಯಸುತ್ತಾರೆ. ಇತ್ತೀಚೆಗೆ ಇವರಿಬ್ಬರೂ ಸೇರಿ ಒಂದು ಸಿನಿಮಾದಲ್ಲಿಯೂ ಕಾಣಿಸಿಕೊಂಡರು. ಬಿಗ್ ಬಾಸ್ ಮನೆಯಲ್ಲಿನ ಇವರ ಅನುಬಂಧ, ಪರಸ್ಪರ ಪ್ರೋತ್ಸಾಹ ಹಾಗೂ ಅನ್ಯೂನ್ಯತೆಯಿಂದ ಇದ್ದಿದ್ದು ಬಿಗ್ ಬಾಸ್ ಪ್ರೇಕ್ಷಕರಿಗೆ ಬಹಳ ಖುಷಿ ನೀಡಿತ್ತು.

ದೀಪಿಕಾ ದಾಸ್ ಹಾಗೂ ಶೈನ್ ಶೆಟ್ಟಿ!
ಬಿಗ್ ಬಾಸ್ ಸೀಸನ್ ಏಳರಲ್ಲಿ ಕಿರುತೆರೆ ಕಲಾವಿದರಾದ ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ಇಬ್ಬರದ್ದು ತಮ್ಮದೇ ಆದ ನಟನಾ ಜರ್ನಿಇದೆ. ಇವರಿಬ್ಬರೂ ಬಿಗ್ ಬಾಸ್ ಮನೆಯಲ್ಲಿ ಬಹಳ ಅನ್ಯೋನ್ಯತೆಯಿಂದ ಇದ್ದಿದ್ದು ಅಲ್ಲದೆ, ಬಿಗ್ ಬಾಸ್ ಪ್ರೇಕ್ಷಕರು ಇವರಿಬ್ಬರನ್ನು ಜೋಡಿಯಾಗಿ ನೋಡಲು ಬಹಳ ಇಷ್ಟ ಪಟ್ಟಿದ್ದರು. ಆದರೆ, ಅದು ಕೇವಲ ಬಿಗ್‌ಬಾಸ್‌ಗಷ್ಟೇ ಸೀಮಿತವಾಯ್ತು. ದೀಪಿಕಾ ದಾಸ್ ಈಗ ದೀಪಕ್ ಎನ್ನುವವರನ್ನು ಮದುವೆಯಾಗಿದ್ದು, ಶೈನ್ ಶೆಟ್ಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಕವಿತಾ ಗೌಡ ಹಾಗೂ ಶಶಿ
ಬಿಗ್ ಬಾಸ್ ಸೀಸನ್ ಆರರಲ್ಲಿ ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆಗೆದ್ದ ನಟಿ ಕವಿತಾ ಗೌಡ, ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಸ್ಟ್ರಾಂಗ್ ಸ್ಪರ್ಧೆ ಎನಿಸಿಕೊಂಡಿದ್ದರು. ಶಶಿ ಎಂಬ ರೈತ ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಇವರಿಬ್ಬರು ಸ್ನೇಹವನ್ನು ವೀಕ್ಷಕರು ಮೆಚ್ಚಿಕೊಂಡಿದ್ದರು.
ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅಯ್ಯರ್
ಬಿಗ್ ಬಾಸ್ ಸೀಸನ್ 9ರಲ್ಲಿ ರೂಪೇಶ್ ಶೆಟ್ಟಿ ಹಾಗೂ ಸಾನಿಯಾ ಅಯ್ಯರ್ ಜೋಡಿ ಬಹಳ ಸದ್ದು ಮಾಡಿತ್ತು. ಪುಟ್ಟಗೌರಿ ಮದುವೆ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಬಾಲ ನಟಿಯಾಗಿ ಪರಿಚಯವಾದ ಸಾನಿಯಾ ಅಯ್ಯರ್, ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿಯವರೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು.
ಸಂಗೀತ ಶೃಂಗೇರಿ-ಕಾರ್ತಿಕ್ ಮಹೇಶ್
ಬಿಗ್ ಬಾಸ್ ರಿಯಾಲಿಟಿ ಶೋ ನ ಸೀಸನ್ 10 ಬಹಳಷ್ಟು ಕಾರಣಗಳಿಗೆ ಜನಗಮನ ಸೆಳೆದಿತ್ತು. ಇದರಲ್ಲಿನ ಸಂಗೀತ ಶೃಂಗೇರಿ ಹಾಗೂ ಕಾರ್ತಿಕ್ ಮಹೇಶ್ ಅವರ ಒಡನಾಟ ಸ್ನೇಹ, ಬಾಂಧವ್ಯ, ಬಿಗ್ ಬಾಸ್ ಪ್ರೇಕ್ಷಕರಿಗೆ ಬಹಳ ಹಿಡಿಸಿತ್ತು. ಆದರೆ, ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ಇವರಿಬ್ಬರ ಸ್ನೇಹ ನಾನಾ ಕಾರಣಗಳಿಗೆ ಮುರಿದು ಬಿತ್ತು.
ನಮೃತಾ ಗೌಡ-ಸ್ನೇಹಿತ್ ಗೌಡ
ಹಾಗೆಯೇ ನಟಿ ನಮೃತ ಗೌಡ ಹಾಗೂ ಕಿರುತೆರೆ ನಟ ಸ್ನೇಹಿತ್ ಗೌಡ ಜೋಡಿಯೂ ಬಹಳ ಸದ್ದು ಮಾಡಿತ್ತು. ಕಿರುತೆರೆ ನಟ ಸ್ನೇಹಿತ್ ನಮೃತ ಗೌಡ ಅವರನ್ನು ಸ್ನೇಹಿತೆಗಿಂತ ಹೆಚ್ಚಾಗಿಯೇ ಇಷ್ಟಪಟ್ಟಿದ್ದರು ಎನ್ನುವಂತೆ ಮಾತನಾಡುತ್ತಿದ್ದರು. ಬಿಗ್ ಬಾಸ್ ಪ್ರೇಕ್ಷಕರಿಗೂ ಇವರಿಬ್ಬರ ಜೋಡಿ ಬಹಳ ಇಷ್ಟವಾಗಿತ್ತು. ಆದರೆ ಇವರಿಬ್ಬರ ಸ್ನೇಹ ಬಿಗ್ ಬಾಸ್ ಮನೆಯಲ್ಲಿ ಮುರಿದುಬಿತ್ತು.
ತ್ರಿವಿಕ್ರಮ್-ಭವ್ಯಾ ಗೌಡ
ಸೀಸನ್ 11ರ ಬಿಗ್ ಬಾಸ್ ನಲ್ಲಿ, ಜನರು ಸೀಸನ್ ಆರಂಭದಿಂದಲೂ ನಟ ತ್ರಿವಿಕ್ರಮ್ ಹಾಗೂ ನಟಿ ಭವ್ಯಾ ಗೌಡ ಅವರನ್ನು ಜೋಡಿಯಾಗಿಯೇ ಜನ ನೋಡುತ್ತಿದ್ದಾರೆ. ವಿಶೇಷವೆಂದರೆ ಈ ಇಬ್ಬರೂ ಕಲಾವಿದರ ಕೆಮಿಸ್ಟ್ರಿಯು ಬಹಳ ಸೊಗಸಾಗಿದ್ದು, ಮನೆಯಲ್ಲಿ ಇದುವರೆಗೆಯೂ ಒಬ್ಬರಿಗೊಬ್ಬರು ಒಳ್ಳೆಯ ರೀತಿಯಲ್ಲಿ ಸಾಥ್ ನೀಡುತ್ತಾ ಬಂದಿದ್ದಾರೆ. ಇವರಿಬ್ಬರ ನಡುವೆ ಪ್ರೀತಿ ಇದೆಯೇ ಅಥವಾ ಸ್ನೇಹನಾ ಎಂಬ ಪ್ರಶ್ನೆ ಮಾತ್ರ ಎಲ್ಲರಲ್ಲೂ ಹಾಗೆಯೇ ಉಳಿದಿದೆ.
ಈ ರೀತಿ ಇತ್ತೀಚಿನ ಬಿಗ್ ಬಾಸ್ ಸೀಸನ್ ಗಳಲ್ಲಿ, ಸ್ಪರ್ಧಿಗಳನ್ನು ವ್ಯಕ್ತಿಗತವಾಗಿ ಆಗಿ ನೋಡುವ ಬದಲು ಜೋಡಿಯಾಗಿ ನೋಡಲು ಜನರು ಹೆಚ್ಚು ಇಷ್ಟ ಪಡುತ್ತಿರುವ ಟ್ರೆಂಡ್ ಕಾಣುತ್ತಿದೆ.


Click it and Unblock the Notifications











