ಇವರ ಕಿರುತೆರೆಯಲ್ಲಷ್ಟೇ ಅಲ್ಲ ರಿಯಲ್ ಲೈಫ್‌ನಲ್ಲೂ ಜೋಡಿಗಳು; ಯಾರವರು ಹಿನ್ನೆಲೆಯೇನು?
ಧಾರಾವಾಹಿಗಳಲ್ಲಿ ಗಂಡ ಹೆಂಡತಿಯಾಗಿ, ಪ್ರೇಮಿಗಳಾಗಿ ನಟಿಸಿರುವ ಹಲವಾರು ಕಲಾವಿದರು ಇಂದು ನಿಜ ಜೀವನದಲ್ಲೂ ಒಟ್ಟಿಗೆ ತಮ್ಮ ಬಾಳುತ್ತಿದ್ದಾರೆ. ಅದರಲ್ಲೂ ಕನ್ನಡ ಧಾರಾವಾಹಿಯಲ್ಲಿ ಇಂಥ ಜೋಡಿಗಳ ಲಿಸ್ಟ್ ಬಹಳ ದೊಡ್ಡದಿದೆ. ಒಂದಷ್ಟು ಪ್ರಮುಖ ನಟ ನಟಿಯರು ತಮ್ಮ ನಟನೆಯ ಮೂಲಕವೇ ಜನಮನ ಗೆದ್ದು ನಂತರ ನಿಜ ಜೀವನದಲ್ಲೂ ಒಟ್ಟಿಗೆ, ಬಾಳುತ್ತಿದ್ದಾರೆ.
ಹಿಂದಿನಿಂದಲೂ ಧಾರಾವಾಹಿ ಹಾಗೂ ರಿಯಾಲಿಟಿ ಶೋನಲ್ಲಿ ಒಟ್ಟಿಗೆ ನಟಿಸಿ, ಅಲ್ಲೇ ಪ್ರೇಮಾಂಕುರವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ಜೋಡಿಗಳು ಬಳ ಮಂದಿ ಇದ್ದಾರೆ. ಅಂತ ಜೋಡಿಗಳ ಪಟ್ಟಿ ಇಲ್ಲಿದೆ.

ಮಾಳವಿಕಾ ಹಾಗೂ ಅವಿನಾಶ್
'ಮಾಯಾಮೃಗ' ಧಾರಾವಾಹಿ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು ನಟಿ ಮಾಳವಿಕಾ. ಮಾಳವಿಕಾ ಎಂಬ ಪಾತ್ರವನ್ನು ನಿಭಾಯಿಸಿದ್ದ ಇವರು, ಧಾರಾವಾಹಿ ಕಥೆಯುದ್ದಕ್ಕೂ ಬಹಳ ನೊಂದರೂ ಗಟ್ಟಿಯಾಗಿ ನಿಲ್ಲುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರ ಗಂಡನ ಪಾತ್ರದಲ್ಲಿ ಕಾಣಿಸಿಕೊಂಡವರೇ ನಟ ಅವಿನಾಶ್. ಈ ಧಾರಾವಾಹಿ ಮುಗಿಯುತ್ತಿದ್ದಂತೆ ಮಾಳವಿಕಾ ಹಾಗೂ ಅವಿನಾಶ್ ಅವರು ನಿಜ ಜೀವನದಲ್ಲೂ ಗಂಡ ಹೆಂಡತಿಯಾಗಿ ತಮ್ಮ ಬದುಕನ್ನು ಆರಂಭಿಸಿದರು. ಇಂದಿಗೂ ಈ ಕಲಾವಿದರಿಬ್ಬರೂ ಹಲವಾರು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಾ ಬಂದಿದ್ದಾರೆ.
ಸಿಲ್ಲಿ ಹಾಗೂ ಪಲ್ಲಿ
'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿ ಸಿಲ್ಲಿ ಪಲ್ಲಿ ಆಗಿ ಕಾಣಿಸಿಕೊಂಡ ನಟ ನಟಿಯರು ಇಂದು ಗಂಡ ಹೆಂಡತಿ. ನಟಿ ರೂಪ ಪ್ರಭಾಕರ್ 'ಸಿಲ್ಲಿ ಲಲ್ಲಿ' ಧಾರಾವಾಹಿ ಮೂಲಕ ಬಹಳಷ್ಟು ಖ್ಯಾತಿ ಪಡೆದರು. ಧಾರಾವಾಹಿಯಲ್ಲಿ ರಾಗ ಎಳೆದು ಮಾತನಾಡುವ ಸಿಲ್ಲಿ ಹಾಗೂ ಆಗಾಗ ಅಸಂಬದ್ಧ ಮಾತುಗಳನ್ನು ಆಡುವ ಪಲ್ಲಿ ಬಹಳ ಫನ್ನಿ ಕ್ಯಾರೆಕ್ಟರ್ ಗಳಾಗಿದ್ದವು. ಈ ಧಾರಾವಾಹಿ ಮುಗಿಯುತ್ತಿದ್ದಂತೆ ಇದರ ಪಾತ್ರಧಾರಿಗಳಾದ ರೂಪ ಪ್ರಭಾಕರ್ ಹಾಗೂ ಪ್ರಶಾಂತ್ ಅವರು ವರಿಸಿದರು.

ನಮಿತಾ ರಾವ್ ಹಾಗೂ ವಿಕ್ರಂ ಸೂರಿ
'ಸಿಲ್ಲಿ ಲಲ್ಲಿ' ಧಾರಾವಾಹಿ ಮೂಲಕವೇ ನರ್ಸ್ ಲಲಿತಾ ಎಂಬ ಪಾತ್ರದಲ್ಲಿ ನಮಿತಾ ರಾವ್ ಬಹಳಷ್ಟು ಖ್ಯಾತಿಗಳಿಸಿದರು. ಅವರ ವೈಯ್ಯಾರದ ಮಾತು ಮತ್ತು ಅಭಿನಯ ಜನರಿಗೆ ಹಿಡಿಸಿತ್ತು. ಇದೇ ಧಾರಾವಾಹಿಯಲ್ಲಿ ವಿಕ್ರಂ ಸೂರ್ಯ ಅವರು ಕೂಡ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯಕ್ಕೆ ನಮಿತಾ ರಾವ್ ಅವರು ನಿರ್ಮಾಪಕರಾಗಿ ಇಂಡಸ್ಟ್ರಿಯಲ್ಲಿ ಹೊಸ ಹೆಜ್ಜೆಯನ್ನು ಇಟ್ಟಿದ್ದಾರೆ. ನಟ ವಿಕ್ರಂ ಸೂರಿ ಕೆಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದ ಅಲ್ಲದೆ ರಿಯಾಲಿಟಿ ಶೋಗಳಲ್ಲಿ ನಟನಾ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜಿಜಿ ಹಾಗೂ ದಿವ್ಯಾ
ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಬಹಳಷ್ಟು ಹೊಸ ಪ್ರತಿಭೆಗಳು ಕನ್ನಡ ಕಿರುತೆರಿಗೆ ಪರಿಚಯವಾದವು. ಇದರಲ್ಲಿ ಗೋವಿಂದೇ ಗೌಡ ಎನ್ನುವ ಕಲಾವಿದರು ಕೂಡ ಜಿಜಿ ಎಂದೆ ಬಹಳಷ್ಟು ಫೇಮ್ ಪಡೆದರು. ಅದೇ ರಿಯಾಲಿಟಿ ಶೋನಲ್ಲಿ ಕಲಾವಿದೆ ದಿವ್ಯಾ ಕೂಡ ತಮ್ಮನ ಅಭಿನಯದ ಮೂಲಕ ಖ್ಯಾತಿ ಗಳಿಸಿದರು. ಈ ರಿಯಾಲಿಟಿ ಶೋ ಮುಗಿದ ನಂತರ ಈ ಎರಡು ಕಲಾವಿದರು ಮದುವೆಯಾಗಿ ಇದೀಗ ಒಂದು ಮುದ್ದಾದ ಮಗುವಿನ ಪೋಷಕರಾಗಿದ್ದಾರೆ.
ಕವಿತಾ ಗೌಡ ಹಾಗೂ ಚಂದನ್ ಕುಮಾರ್
'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಜನರಿಗೆ ಪರಿಚಯವಾದವರು ನಟಿ ಕವಿತಾ ಗೌಡ. ಇದೇ ಧಾರಾವಾಹಿಯಲ್ಲಿ ಚಂದು ಪಾತ್ರಧಾರಿ ಚಂದನ್ ಅವರು ಕೂಡ ಜನಮನ ಗೆದ್ದರು. ಇದೀಗ ಕವಿತಾ ಗೌಡ ಹಾಗೂ ಚಂದನವರು ಮದುವೆಯಾಗಿ ಒಂದು ಮಗುವಿನ ಪೋಷಕರಾಗಿದ್ದಾರೆ. ಸದ್ಯಕ್ಕೆ ಇಬ್ಬರು ಸೇರಿ ತಮ್ಮದೇ ಆದ ಬ್ಯುಸಿನೆಸ್ ಅನ್ನು ನಡೆಸುತ್ತಿದ್ದಾರೆ.
ಅಮೃತಾ ರಾಮಮೂರ್ತಿ ಹಾಗೂ ರಘು
'ಮಿಸ್ಟರ್ ಅಂಡ್ ಮಿಸ್ಸೆಸ್ ರಂಗೇ ಗೌಡ' ಧಾರಾವಾಹಿ ಮೂಲಕ ಬಹಳಷ್ಟು ಪಾಪ್ಯುಲರ್ ಆದ ಈ ಜೋಡಿ ಇದೀಗ ದಂಪತಿಗಳು. ಇವರಿಗೆ ಧಾತ್ರಿ ಎಂಬ ಮುದ್ದಾದ ಮಗುವಿದೆ. ನಟಿ ಅಮೃತ ರಾಮಮೂರ್ತಿ 'ಕುಲವಧು' ಧಾರಾವಾಹಿ ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 'ಮಿಸ್ಟರ್ ಅಂಡ್ ಮಿಸಸ್ ರಂಗೇ ಗೌಡ'ದಲ್ಲಿ ಇವರ ಹಾಗೂ ರಘು ಅವರ ಜೋಡಿ ಜನಮನ ಗೆದ್ದಿತ್ತು. ಸದ್ಯಕ್ಕೆ ಈಕೆ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ರಘು ಸದ್ಯಕ್ಕೆ ತೆಲುಗು ಧಾರಾವಾಹಿ ಒಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ವೀಣಾ ಹಾಗೂ ಸುಂದರ್
ನಟಿ ವೀಣಾ-ಸುಂದರ್ ಹಲವಾರು ಧಾರಾವಾಹಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಪತಿ ಸುಂದರ್ ರಾಜ್ ಅವರು ಕೂಡ ಬಹಳ ಮೊದಲಿನಿಂದಲೂ ಧಾರಾವಾಹಿಗಳಲ್ಲಿ ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. 'ಮಾಯಾಮೃಗ' ಧಾರಾವಾಹಿಯಲ್ಲಿಯೂ ಇವರಿಬ್ಬರು ನಟಿಸಿದ್ದರು. ಆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವ ಮೊದಲೇ ಇವರಿಬ್ಬರು ಮದುವೆಯಾಗಿದ್ದರು.
ಜಗಪ್ಪ ಹಾಗೂ ಸುಶ್ಮಿತಾ
'ಮಜಾ ಭಾರತ' ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಕಲಾವಿದರಾದ ಜಗ್ಗಪ್ಪ ಹಾಗೂ ಸುಶ್ಮಿತಾ, ಇತ್ತೀಚೆಗಷ್ಟೇ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಪ್ರಸ್ತುತ ಇವರಿಬ್ಬರೂ ನಾನಾ ರಿಯಾಲಿಟಿ ಶೋಗಳು ಅಷ್ಟೇ ಅಲ್ಲದೆ ಧಾರಾವಾಹಿಗಳಲ್ಲಿಯೂ ನಟಿಸುತ್ತಿದ್ದಾರೆ.


Click it and Unblock the Notifications











