ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿದ ಪೌರಾಣಿಕ‌ ಧಾರಾವಾಹಿಗಳು ಯಾವುದು ಗೊತ್ತಾ?

By ಅನಿತಾ ಬನಾರಿ

ಈವರೆಗೂ ನೂರಾರು ಧಾರಾವಾಹಿಗಳು ನಾನಾ ರೀತಿಯ ಕಥಾ ಹಂದರವನ್ನಿಟ್ಟುಕೊಂಡು ಕನ್ನಡ ಕಿರುತೆರೆ ಪ್ರೇಕ್ಷಕರನ್ನು ಮನರಂಜಿಸಿದೆ. ಅದರಲ್ಲಿ ಪೌರಾಣಿಕ ಧಾರಾವಾಹಿಗಳು ಕೂಡ ಸೇರಿವೆ.

ಈಗೊಂದು ದಶಕದ ಹಿಂದಿನಿಂದಲೂ ಕನ್ನಡ ಕಿರುತೆರೆಯಲ್ಲಿ ಪೌರಾಣಿಕ ಧಾರಾವಾಹಿಗಳು ಹೆಚ್ಚಾಗಿವೆ. ಸಿನಿಮಾಗಳಲ್ಲಿ ನೋಡಿ ಖುಷಿ ಪಡುತ್ತಿದ್ದ ಸಿನಿಪ್ರಿಯರು ಅದನ್ನು ಮಿಸ್ ಮಾಡಿಕೊಂಡಿದ್ದರು. ಆದ್ರೀಗ ಪೌರಾಣಿಕ ಧಾರಾವಾಹಿಗಳನ್ನು ಕಳೆದ ಒಂದು ದಶಕದಿಂದ ನೋಡಿ ಎಂಜಾಯ್ ಮಾಡುತ್ತಿದ್ದಾರೆ.

These are the Kannada Mythological serials creating buzz in tv

ಶ್ರೀ ಗುರು ರಾಘವೇಂದ್ರ ವೈಭವ

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಶ್ರೀ ಗುರು ರಾಘವೇಂದ್ರ ವೈಭವ" ಧಾರಾವಾಹಿ ಇಡೀ ಕನ್ನಡ ಕಿರುತೆರೆ ಜನಮನ ಗೆದ್ದಿತ್ತು. ಆ ಕಾಲಕ್ಕೆ ಬಹಳ ಪಾಪ್ಯುಲರ್ ಧಾರಾವಾಹಿಯಾಗಿದ್ದ ಇದು ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆಯನ್ನು ಬಹಳ ಅಚ್ಚುಕಟ್ಟಾಗಿ ತೆರೆ ಮೇಲೆ ತಂದು ಕೊಟ್ಟಿತ್ತು. ನಟ ಪರೀಕ್ಷಿತ್ ಎಂಬುವವರು ರಾಘವೇಂದ್ರ ಸ್ವಾಮಿಗಳ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದರು. ತಾರಾಗಣದಲ್ಲಿ ನಟರಾದ ಪವಿತ್ರ ಲೋಕೇಶ್, ಲಕ್ಷ್ಮಿ ಹೆಗ್ಡೆ, ಶ್ರೀನಿವಾಸ್ ಮೂರ್ತಿ, ಮಾಸ್ಟರ್ ಸೌರಭ, ಶಂಕರ್ ಭಟ್ ಮುಂತಾದವರು ಇದ್ದರು. 200 ಕಂತುಗಳ ಇಡೀ ಧಾರವಾಹಿಯಲ್ಲಿ ಸುಮಾರು 45 ದಾಸರ ಪದಗಳನ್ನು ಆಯ್ಕೆ ಮಾಡಿ ಹಾಡಲಾಗಿತ್ತು.

ಹರ ಹರ ಮಹಾದೇವ

2016ರಲ್ಲಿ ಪ್ರಸಾರವಾದ ಮಗದೊಂದು ಪೌರಾಣಿಕ ಧಾರಾವಾಹಿ "ಹರ ಹರ ಮಹಾದೇವ" ಧಾರಾವಾಹಿ ಕೂಡ ಬಹಳ ಖ್ಯಾತಿ ಪಡೆದಿತ್ತು. ಶಿವ ಹಾಗೂ ಶಕ್ತಿಯ ಕಥೆಯಾಗಿದ್ದ ಈ ಧಾರಾವಾಹಿಯಲ್ಲಿ ನಟ ವಿನಯ್ ಗೌಡ ಹಾಗೂ ನಟಿ ಸಂಗೀತ ಶೃಂಗೇರಿ ಅವರು ಮುಖ್ಯ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದರು. ಕಲಾವಿದರಾದ ಪ್ರಿಯಾಂಕಾ ಚಿಂಚೋಳಿ, ಪಲ್ಲವಿ ಪುರೋಹಿತ್, ವಿನಾಯಕ್ ದೇಸಾಯಿ, ಪವನ್ ಮಧುಕರ್ ಮುಂತಾದವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಶನಿ

2016ರಲ್ಲಿ "ಶನಿ" ಧಾರಾವಾಹಿ ಕೂಡ ಬಹಳಷ್ಟು ಪಾಪುಲ್ಯಾರಿಟಿ ಗಳಿಸಿತ್ತು. ಶನಿ ದೇವರ ಮಹಾತ್ಮೆಯನ್ನು ಬಹಳ ಅಚ್ಚುಕಟ್ಟಾಗಿ ತೆರೆ ಮೇಲೆ ತಂದಿತ್ತು ತಂಡ. ಸುನಿಲ್ ಕುಮಾರ್ ಎಂಬ ಯುವ ಕಲಾವಿದ ಶನಿ ಪಾತ್ರವನ್ನು ಬಹಳ ಅದ್ಭುತವಾಗಿ ನಿಭಾಯಿಸಿ ಎಲ್ಲರ ಮನೆಗೆದ್ದಿದ್ದರು. ನಟ ರಂಜಿತ್ ಕುಮಾರ್ ಶನಿಯ ತಂದೆ ಸೂರ್ಯ ದೇವನ ಪಾತ್ರದಲ್ಲಿ ಬಹಳ ವಿಭಿನ್ನವಾಗಿ ಕಾಣಿಸಿಕೊಂಡಿದ್ದರು. ಇದೇ ಧಾರಾವಾಹಿಯನ್ನು ಹಿಂದಿಯಲ್ಲಿ ಕರ್ಮಫಲದಾತ ಶನಿ ಎಂದು ರೀಮೇಕ್ ಮಾಡಲಾಗಿತ್ತು.

These are the Kannada Mythological serials creating buzz in tv

ಶ್ರೀನಿವಾಸ ಕಲ್ಯಾಣ

ಶ್ರೀನಿವಾಸ ಕಲ್ಯಾಣ ಎಂಬ ಧಾರಾವಾಹಿ ದಶಕದ ವರ್ಷಗಳ ಹಿಂದೆ ಬಹಳ ಸದ್ದು ಮಾಡಿತ್ತು. ನಿರ್ದೇಶಕ ಅರವಿಂದ್ ಕೌಶಿಕ್ ಅವರ ನಿರ್ದೇಶನದಲ್ಲಿ ಶ್ರೀನಿವಾಸ ಕಲ್ಯಾಣ ಧಾರವಾಹಿ ಪದ್ಮಾವತಿ ಹಾಗೂ ಶ್ರೀನಿವಾಸ ಕಲ್ಯಾಣದ ಇಡೀ ಕಥೆಯನ್ನು ಬಹಳ ಅದ್ಭುತವಾಗಿ ತೆರೆ ಮೇಲೆ ತಂದುಕೊಟ್ಟಿತ್ತು.

ಸೀತೆ

2010ರಲ್ಲಿ ಸೀತೆ ಎಂಬ ಧಾರಾವಾಹಿ ಜನಮನ ಗೆದ್ದಿತ್ತು. ರಾಮಾಯಣ ಆಧಾರಿತ ಸೀತೆ ಧಾರಾವಾಹಿಯಲ್ಲಿ ಸೀತೆ ಹಾಗೂ ಆಕೆಯ ಸಹೋದರಿಯರ ಕಥೆ ಬಹಳ ವಿಭಿನ್ನವಾಗಿ ತೋರಿಸಲಾಗಿತ್ತು. ಕಲಾವಿದರಾದ ಶರ್ಮಿಳಾ ಮಾಂಡ್ರೆ, ಸುಂದರ ಶ್ರೀ, ನಿಶಿತಾ ಗೌಡ, ವೀಣಾ ವೆಂಕಟೇಶ್, ಲಂಬು ನಾಗೇಶ್, ಅನಂತವೇಲು ಮುಂತಾದವರು ಧಾರವಾಹಿಯಲ್ಲಿ ನಟಿಸಿದ್ದರು.

ಉಧೋ ಉಧೋ ಶ್ರಿ ರೇಣುಕಾ ಯಲ್ಲಮ್ಮ

ಇತ್ತೀಚೆಗೆ ಆರಂಭವಾದ ಉಧೋ ಉಧೋಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿ ಎಂದು ಬಹಳಷ್ಟು ಪಾಪ್ಯುಲಾರಿಟಿ ಗಳಿಸಿ ಟಿ ಆರ್ ಪಿ ಲಿಸ್ಟ್ ನಲ್ಲಿ ಮೇಲೆ ಏರುತ್ತಲೇ ಇದೆ. ಕಲಾವಿದರಾದ ಯಶಿಕಾ ನಿಸರ್ಗ, ತೇಜಸ್ ಗೌಡ, ಮಹತಿ ವೈಷ್ಣವಿ ಭಟ್, ಅನನ್ಯಾ ಮುಂತಾದವರು ಧಾರಾವಾಹಿಗಳಲ್ಲಿ ನಾನಾ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಉಘೇ ಉಘೇ ಮಾದೇಶ್ವರ

ಕಲಿಯುಗದಲ್ಲಿ ಶಿವ ಮಾದೇಶ್ವರನ ಅವತಾರವೆತ್ತಿ ಲೋಕ ಕಲ್ಯಾಣ ಮಾಡಿದ ಕಥೆಯಿದು. ನಟ ಆರ್ಯನ್ ರಾಜ್ ಮಾದೇಶ್ವರನ ಪಾತ್ರದಲ್ಲಿ ಬಹಳ ಅದ್ಭುತವಾಗಿ ನಟಿಸಿದ್ದರು. ನಟ ಆರ್ಯನ್ ನ ಅಪ್ರತಿಮ ನಟನೆಗೆ ಹೊಸ ಫ್ಯಾನ್ ಫಾಲೋಯಿಂಗ್ ಆರಂಭವಾಗಿತ್ತು.

More from Filmibeat

English summary
These are the Kannada Mythological serials creating buzz in tv;
Read more about: serials anitha banari tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X