'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ನಿರೂಪಕರಾಗಿ ಮೋಡಿ ಮಾಡಿದವರು ಇವರೇ ನೋಡಿ

By ಅನಿತಾ ಬನಾರಿ

ಧಾರಾವಾಹಿಗಳ ಜೊತೆಗೆ ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದೆ ಕಲರ್ಸ್ ಕನ್ನಡ‌. ಇತ್ತೀಚೆಗಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 10'ಮುಕ್ತಾಯಗೊಂಡಿತ್ತು. ಇದರ ಬೆನ್ನಲೇ ಎರಡು ಹೊಸ ಶೋಗಳು ಕಲರ್ಸ್ ಕನ್ನಡದಲ್ಲಿ ಶುರುವಾಗಿದೆ. ಅದರಲ್ಲಿ 'ನನ್ನಮ್ಮ ಸೂಪರ್ ಸ್ಟಾರ್' ಕೂಡಾ ಒಂದು.

ಅಮ್ಮ ಮತ್ತು ಮಕ್ಕಳ ನಡುವಿನ ಗೇಮ್ ಶೋ ಇದಾಗಿದ್ದು ಯಶಸ್ವಿಯಾಗಿ ಎರಡು ಸೀಸನ್ ಅನ್ನು ಇದು ಕಂಪ್ಲೀಟ್ ಮಾಡಿದೆ. ಈಗ ಸೀಸನ್ 3 ಕೂಡಾ ಆರಂಭವಾಗಿದ್ದು, ಕಳೆದ ಎರಡು ಸೀಸನ್‌ಗಳಂತೆ ಈ ಸೀಸನ್‌ನಲ್ಲೂ ಮೂರು ಜನ ತೀರ್ಪುಗಾರರು ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೃಜನ್ ಲೋಕೇಶ್, ತಾರಾ ಅನುರಾಧಾ ಹಾಗೂ ಅನುಪ್ರಭಾಕರ್ ಈ ಶೋವಿನ ತೀರ್ಪುಗಾರರಾಗಿ ಮೋಡಿ ಮಾಡಲಿದ್ದಾರೆ. ಉಳಿದಂತೆ ಸುಷ್ಮಾ ರಾವ್ ಈ ಶೋವಿನ ನಿರೂಪಕಿಯಾಗಿ ಮಿಂಚಲಿದ್ದಾರೆ.

These are the ones who charmed as the host for Nannamma Super Star reality show

ಅಂದ್ಹಾಗೆ ಸುಷ್ಮಾ ರಾವ್ ಈ ರಿಯಾಲಿಟಿ ಶೋವಿನ ನಾಲ್ಕನೇ ನಿರೂಪಕಿಯೂ ಹೌದು. ಮೂರು ಸೀಸನ್‌ಗಳಲ್ಲಿ ನಾಲ್ಕು ಜನ ನಿರೂಪಕರಾ ಎಂದು ಆಶ್ಚರ್ಯವಾಗುತ್ತಿದೆಯೇ? ಹಾಗಾದರೆ ಇಲ್ಲಿಯವರೆಗೆ ನನ್ನಮ್ಮ ಸೂಪರ್ ಸ್ಟಾರ್ ಎಂದು ಮಕ್ಕಳೊಡನೆ ಮಕ್ಕಳಾಗಿ ನಿಮ್ಮನ್ನು ರಂಜಿಸಿರುವ ನಿರೂಪಕರು ಯಾರು ಯಾರೆಂದು ತಿಳಿಯೋಣ.

'ನನ್ನಮ್ಮ ಸೂಪರ್ ಸ್ಟಾರ್ - ಸೀಸನ್ 1'ರ ನಿರೂಪಕಿಯಾಗಿ ಕಾಣಿಸಿಕೊಂಡವರು ಕಿರುತೆರೆ ನಟಿ ಅನುಪಮಾ ಗೌಡ. ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಪುಟ್ಟ ಮಕ್ಕಳೊಂದಿಗೆ ತಾವು ಮಕ್ಕಳಾಗಿ ಅನುಪಮಾ ಗೌಡ ಮೋಡಿ ಮಾಡಿದ್ದರು. ನಟಿಯಾಗಿ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ಅನುಪಮಾ ಗೌಡ 'ಮಜಾಭಾರತ' ಶೋ ನಿರೂಪಣೆ ಮಾಡುವ ಮೂಲಕ ನಿರೂಪಕಿಯಾಗಿ ಭಡ್ತಿ ಪಡೆದರು. ಮುಂದೆ 'ಕನ್ನಡ ಕೋಗಿಲೆ', 'ನನ್ನಮ್ಮ ಸೂಪರ್ ಸ್ಟಾರ್' ನಿರೂಪಣೆ ಮಾಡಿದ್ದ ಈಕೆ ಇದೀಗ ಸುವರ್ಣ ವಾಹಿನಿಯ 'ಜಾಕ್ ಪಾಟ್' ಶೋ ನಿರೂಪಣೆಯಲ್ಲಿ ಬ್ಯುಸಿಯಾಗಿದ್ದಾರೆ.

'ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2'ನ ನಿರೂಪಕಿಯಾಗಿ ಕಾಣಿಸಿಕೊಂಡಿದ್ದು ಜಾನ್ವಿ ರಾಯಲ. ಇವರು ವೃತ್ತಿಯಲ್ಲಿ ದಂತವೈದ್ಯರು. ಹೌದು, ವೃತ್ತಿಯಲ್ಲಿ ಡೆಂಟಿಸ್ಟ್ ಆಗಿರುವ ಜಾನ್ವಿ ರಾಯಲ 2018ರ ಮಿಸ್ ಕರ್ನಾಟಕ ಕಿರೀಟ ತೊಟ್ಟ ಬೆಡಗಿ. ತದ ನಂತರ ಕಾರಣಾಂತರಗಳಿಂದ ಈ ಶೋವಿನಿಂದ ಹೊರಬಂದ ಜಾನ್ವಿ ಮುಂದೆ 'ರಾಜ ರಾಣಿ ಸೀಸನ್ 2'ರ ಸಾರಥ್ಯವನ್ನು ವಹಿಸಿಕೊಂಡರು.

These are the ones who charmed as the host for Nannamma Super Star reality show

ಜಾನ್ವಿ ರಾಯಲ 'ನನ್ನಮ್ಮ ಸೂಪರ್ ಸ್ಟಾರ್' ಕಾರ್ಯಕ್ರಮದಿಂದ ಹೊರಬಂದಿದ್ದರು. ಬಳಿಕ ಆಗ ಆ ಜಾಗಕ್ಕೆ ಬಂದವರು ನಿರಂಜನ್ ದೇಶಪಾಂಡೆ. 'ಮಜಾಭಾರತ' ಶೋ ನಿರೂಪಣೆ ಮಾಡುವ ಮೂಲಕ ನಿರೂಪಕನಾಗಿ ಭಡ್ತಿ ಪಡೆದ ನಿರಂಜನ್ ತದ ನಂತರ 'ತುತ್ತಾಮುತ್ತಾ' ಸೀಸನ್ 1 ಮತ್ತು 2, 'ಸವಾಲಿಗೆ ಸೈ', 'ಗಿಚ್ಚಿಗಿಲಿ ಶೋ ಸೀಸನ್ 1 ಮತ್ತು 2' ಹಾಗೂ 'ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2'ರ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಇದೀಗ 'ಗಿಚ್ಚಿ ಗಿಲಿಗಿಲಿ ಸೀಸನ್ 3'ರ ನಿರೂಪಕನಾಗಿ ನಿರಂಜನ್ ಮೋಡಿ ಮಾಡಲಿದ್ದಾರೆ.

More from Filmibeat

English summary
The new season of Nannamma Super Star has started. Anupama Gowda who has narrated the last two shows
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X