ನಟನೆಗಾಗಿ ಅಸಲಿ ಹೆಸರನ್ನೇ ಬದಲಿಸಿಕೊಂಡ ಕಿರುತೆರೆ ನಟ-ನಟಿಯರು ಇವರೇ ನೋಡಿ
ನಟನಾ ಕ್ಷೇತ್ರಕ್ಕೆ ಕಾಲಿಟ್ಟ ತಕ್ಷಣ ತಮ್ಮ ಅಸಲಿ ಹೆಸರನ್ನು ಬದಲಿಸಿ ಸ್ಟೇಜ್ ನೇಮ್ ಇಡುವುದು ಈಗೀಗ ಬಹಳ ಸಾಮಾನ್ಯವಾಗಿದೆ. ಬಾಲಿವುಡ್‌ನಿಂದ ಹಿಡಿದು ಚಂದನವನವಷ್ಟೇ ಅಲ್ಲದೆ ಕಿರುತೆರೆಯ ನಟ ನಟಿಯರು ಕೂಡಾ ಇದೀಗ ತಮ್ಮ ಹೆಸರನ್ನು ಬದಲಾಯಿಸುತ್ತಿದ್ದಾರೆ.
ಕನ್ನಡ ಕಿರುತೆರೆ ಕಲಾವಿದರು ಕೂಡ ತಮ್ಮ ಹೆಸರನ್ನು ಬದಲಿಸಿರುವ ಹಲವಾರು ನಿರ್ದೇಶನ ನಮ್ಮೊಂದಿಗಿದೆ. ಟ್ರೆಂಡ್‌ಗಾಗಿ ಅಥವಾ ಹೊಸದೊಂದು ಹೆಸರು ತಂದು ಕೊಡುವ ಶುಭ ಶಕುನಕ್ಕಾಗಿ ಹೀಗೆ ನಾನಾರು ಕಾರಣಗಳಿಗೆ ಕಲಾವಿದರು ತಮ್ಮ ಅಸಲಿ ಹೆಸರನ್ನು ಬದಲಿಸಿ, ಹೊಸ ನಾಮದಿಂದಲೇ ಪ್ರೇಕ್ಷಕರಿಗೆ ಪರಿಚಯವಾಗುತ್ತಿದ್ದಾರೆ. ಈ ರೀತಿ ತಮ್ಮ ಹೆಸರು ಬದಲಿಸಿದ ಒಂದಷ್ಟು ಕನ್ನಡ ಕಿರುತೆರೆ ಕಲಾವಿದರ ಬಗ್ಗೆ ತಿಳಿಯೋಣ ಬನ್ನಿ.

ನಟ ರಕ್ಷಿತ್
'ಪುಟ್ಟಗೌರಿ ಮದುವೆ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟ ರಕ್ಷಿತ್ ನಂತರ 'ಗಟ್ಟಿಮೇಳ' ಧಾರಾವಾಹಿಯ ವೇದಾಂತ್ ವಸಿಷ್ಠ ಪಾತ್ರದ ಮೂಲಕ ಮತ್ತಷ್ಟು ಖ್ಯಾತಿ ಗಳಿಸಿದರು. ಮುಂದೆ ಬೆಳ್ಳಿತೆರೆಗೂ ಕಾಲಿಟ್ಟು, ಅಲ್ಲೂ ನಟನಾ ಕಂಪನ್ನು ಪಸರಿಸಿದ ಇವರು ತಮ್ಮ ಹೆಸರನ್ನು ರಕ್ಷ್ ರಾಮ್ ಎಂದು ಬರೆಸಿಕೊಂಡಿದ್ದಾರೆ.
ನಟಿ ಅನ್ವಿತಾ
'ಗಟ್ಟಿಮೇಳ' ಧಾರಾವಾಹಿಯಲ್ಲಿ ಆದ್ಯಾ ಪಾತ್ರದಲ್ಲಿ ನಟಿಸಿರುವ ನಟಿ ಅನ್ವಿತಾ ಅವರು ಸದ್ಯ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಣ್ಣ ತಂಗಿ' ಧಾರಾವಾಹಿಯಲ್ಲಿ ಜ್ಯೋತಿಯಾಗಿ ಅಭಿನಯಿಸುತ್ತಿದ್ದಾರೆ. ಕಿರುತೆರೆಯ ಹೊರತಾಗಿ ಸಿನಿಮಾಗಳಲ್ಲಿಯೂ ನಟಿಸಿರುವ ಈಕೆ ವೀಕ್ಷಕರಿಗೆ ಅನ್ವಿತಾ ಎಂದೇ ಪರಿಚಯವಿದ್ದರೂ ಸಹ ಇವರ ಇನ್ಸ್ಟಾಗ್ರಾಮ್ ಬಯೋನಲ್ಲಿ ಪಾರ್ವತಿ ಎಂಬ ಹೆಸರನ್ನು ನೋಡಬಹುದಾಗಿದೆ.
ನಟಿ ಅನಿಕಾ ಸಿಂಧ್ಯಾ
ಕಳೆದೊಂದು ದಶಕದಿಂದಲೂ ಕಿರುತೆರೆಯಲ್ಲಿ ಬಹಳ ಸಕ್ರಿಯರಾಗಿರುವ ನಟಿ ಅನಿಕಾ ಸಿಂಧ್ಯಾ, 'ಲಕ್ಷ್ಮೀ ಬಾರಮ್ಮ', 'ಮರಳಿ ಮನಸಾಗಿದೆ' ಮುಂತಾದ ಅನೇಕ ಧಾರಾವಾಹಿಗಳಲ್ಲಿ ನೆಗೆಟಿವ್ ರೋಲ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಸೈ ಎಂಬ ಡ್ಯಾನ್ಸ್ ರಿಯಾಲಿಟಿ ಶೋ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿರುವ ಈ ನಟಿಯ ಮೂಲ ನಾಮ ನೇತ್ರಾ ಸಿಂಧ್ಯಾ.

ನಟಿ ಸುಧಾರಾಣಿ
ಚಂದನವನದ ಎಲ್ಲಾ ವೀಕ್ಷಕರಿಗೂ ನಟಿ ಸುಧಾರಾಣಿ ಚೆನ್ನಾಗಿ ಪರಿಚಯವಿದ್ದಾರೆ. ಸದ್ಯಕ್ಕೆ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ನಾಯಕಿ ತುಳಸಿ ಆಗಿ ನಟಿಸುವ ಮೂಲಕ ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಖ್ಯಾತಿ ಗಳಿಸುತ್ತಿರುವ ನಟಿ ಸುಧಾರಾಣಿಯವರ ಮೂಲ ಹೆಸರು ಜಯಶ್ರೀ.
ನಟಿ ರಚಿತಾ ರಾಮ್
'ಬುಲ್ ಬುಲ್' ಸಿನಿಮಾ ಮೂಲಕ ಕನ್ನಡ ಬೆಳ್ಳಿತೆರೆಗೆ ಕಾಲಿಟ್ಟ ನಟಿ ರಚಿತಾ ರಾಮ್ ಇಂದು, ಚಂದನವನದ ಖ್ಯಾತ ನಟಿಯರಲ್ಲೊಬ್ಬರು. ಮೊದಲಿಗೆ 'ಅರಸಿ' ಎಂಬ ಧಾರಾವಾಹಿ ಮೂಲಕ ನಟನಾ ಜರ್ನಿ ಆರಂಭಿಸಿದ ನಟಿ ರಚಿತಾ ರಾಮ್ ಅವರ ಮೂಲ ಹೆಸರು ಬಿಂದ್ಯಾ ರಾಮ್ ಆಗಿತ್ತು.
ನಟಿ ನೇಹಾ ಗೌಡ
'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಮೂಲಕ ಬಹಳಷ್ಟು ಖ್ಯಾತಿ ಗಳಿಸಿರುವ ನಟಿ ನೇಹ ಗೌಡ ಅಲಿಯಾಸ್ ಗೊಂಬೆ, ಇಂದಿಗೂ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಗಳಂತಿದ್ದಾರೆ. ಇತ್ತೀಚಿಗೆ ತಾಯಿಯೂ ಆಗಿರುವ ಈ ನಟಿಯ ಮೂಲ ಹೆಸರು ಮೋನಿಕಾ ಗೌಡ.
ನಟ ಚರಿತ್
'ಮುದ್ದು ಲಕ್ಷ್ಮಿ' ಧಾರಾವಾಹಿಯ ಮೂಲಕ ನಟನ ಕ್ಷೇತ್ರಕ್ಕೆ ಕಾಲಿಟ್ಟ ನಟ ಚರಿತ್, ಧ್ರುವಂತ್ ಎಂಬ ಪಾತ್ರದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನ ಗೆದ್ದರೂ. ಈ ಧಾರಾವಾಹಿಯ ಈ ಪಾತ್ರ ಅವರಿಗೆ ಎಷ್ಟು ಫೇಮ್ ತಂದುಕೊಟ್ಟಿದೆ ಎಂದರೆ ನಟ ಚರಿತ್ ಇಂದು ತಮ್ಮ ಹೆಸರನ್ನು ಧ್ರುವಂತ್ ಎಂದು ಬದಲಾಯಿಸಿಕೊಂಡಿದ್ದಾರೆ.


Click it and Unblock the Notifications











