'ಕೋಟ್ಯಧಿಪತಿ'ಯಲ್ಲಿ ಕಮಾಲ್ ಮಾಡಿದ 10ನೇ ಕ್ಲಾಸ್ ಓದಿರುವ ವ್ಯಕ್ತಿ
Recommended Video

'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಈ ವಾರ ಶಿಕ್ಷಕರ ದಿನಾಚರಣೆಯ ವಿಶೇಷ ಸಂಚಿಕೆ ನಡೆಯುತ್ತಿದೆ. ಈ ಸುತ್ತಿನಲ್ಲಿ ಆಯ್ಕೆಯಾದ ಸ್ಪರ್ಧಿ ತಿಮ್ಮಣ್ಣ. ತಿಮ್ಮಣ್ಣ ಅವರು ಓದಿರುವುದು ಎಸ್ ಎಸ್ ಎಲ್ ಸಿ. ಬಾಗಲಕೋಟೆ ಮೂಲದ ತಿಮ್ಮಣ್ಣ ಅವರು ಸದ್ಯ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ ಪವರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಖೋಖೋ ಹೇಳಿಕೊಡುತ್ತಾರೆ.
ಏನಾದರೂ ಸಾಧಿಸಬೇಕು ಎಂಬ ಛಲ ಹೊಂದಿರುವ ತಿಮ್ಮಣ್ಣ ಅವರಿಗೆ ಎಲ್ಲರ ಮುಂದೆ ಚೆನ್ನಾಗಿರಬೇಕು ಎಂಬ ಆಸೆ. ಹಾಗಾಗಿ 'ನಾನು ಏನು ಎಂಬುದನ್ನ ಪ್ರೂವ್ ಮಾಡುವ ಅವಕಾಶ ಸಿಕ್ಕಿದೆ' ಎಂಬ ಉದ್ದೇಶದಿಂದ ಆಟ ಶುರು ಮಾಡಿದರು.
ತಿಮ್ಮಣ್ಣ ಅವರ ಆಟ ಅದ್ಭುತವಾಗಿತ್ತು. ನಿಜಕ್ಕೂ ತಿಮ್ಮಣ್ಣ ಇಷ್ಟರ ಮಟ್ಟಿಗೆ ಆಟವಾಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಅದನ್ನ ಕಣ್ಣಾರೆ ನೋಡಿ ಪ್ರೇಕ್ಷಕರು ಕೂಡ ಒಂದು ಕ್ಷಣ ಅಚ್ಚರಿಯಾಗಿದ್ದಾರೆ. ಹಾಗಿದ್ರೆ, ಕೋಟ್ಯಧಿಪತಿಯಲ್ಲಿ ತಿಮ್ಮಣ್ಣ ಎಷ್ಟು ಗೆದ್ರು.? ಮುಂದೆ ಓದಿ....

ಹನ್ನೊಂದನೇ ಪ್ರಶ್ನೆಗೆ ಸರಿ ಉತ್ತರ ನೀಡಿದ ತಿಮ್ಮಣ್ಣ
'ಕನ್ನಡದ ಕೋಟ್ಯಧಿಪತಿ'ಯ ಈ ವಾರ ಟೀಚರ್ಸ್ ಡೇ ವಿಶೇಷವಾಗಿ ಹಾಟ್ ಸೀಟ್ ನಲ್ಲಿ ಕೂತ ಸ್ಪರ್ಧಿ ತಿಮ್ಮಣ್ಣ ಅವರು ಮೊದಲ ಹನ್ನೊಂದನೇ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿ ದೊಡ್ಡ ಮೊತ್ತವನ್ನ ಗೆದ್ದು ಕೊಂಡರು. ಆದ್ರೆ, ಹನ್ನೆರಡನೇ ಪ್ರಶ್ನೆಯಲ್ಲಿ ತಿಮ್ಮಣ್ಣ ಸಂಕಷ್ಟಕ್ಕೆ ಸಿಲುಕಿದರು.

ತಿಮ್ಮಣ್ಣಗೆ ಕೈಕೊಟ್ಟ ಪ್ರಶ್ನೆ
ಭಾರತದಲ್ಲಿರುವ ಇಲ್ಲಿನ ಯಾವ ಸರೋವರ ಅಂದಾಜು 50 ಸಾವಿರ ವರ್ಷಗಳ ಹಿಂದೆ ಉಲ್ಕೆಯ ಅಪ್ಪಳಿಸುವಿಕೆಯಿಂದ ರೂಪುಗೊಂಡಿತು.?
A ಪಿಚೋಲಾ ಸರೋವರ
B ಚಿಲ್ಕಾ ಸರೋವರ
C ವುಲಾರ್ ಸರೋವರ
D ಲೋನಾರ್ ಸರೋವರ

ಕ್ವೀಟ್ ಮಾಡಿದ ಸ್ಪರ್ಧಿ
ಈ ಪ್ರಶ್ನೆಗೆ ಸರಿಯಾದ ಉತ್ತರ ಗೊತ್ತಾಗದ ಸ್ಪರ್ಧಿ ತಿಮ್ಮಣ್ಣ ಕನ್ನಡದ ಕೋಟ್ಯಧಿಪತಿ ಆಟವನ್ನ ಅರ್ಧಕ್ಕೆ ಕ್ವಿಟ್ ಮಾಡಿದರು. ಇದರ ಪರಿಣಾಮ ಗೆದ್ದಿದ್ದ ಹಣವನ್ನ ಬುದ್ದಿವಂತಿಕೆಯಿಂದ ಉಳಿಸಿಕೊಂಡು ಹೋದರು. ಅಂದ್ಹಾಗೆ, ಮೇಲಿನ ಆ ಪ್ರಶ್ನೆಗೆ ಸರಿ ಉತ್ತರ: D ಲೋನಾರ್ ಸರೋವರ

6.40 ಲಕ್ಷ ಉಳಿಸಿಕೊಂಡ ತಿಮ್ಮಣ್ಣ
ಒಂದು ವೇಳೆ ಆಟವನ್ನ ಮುಂದುವರಿಸಿದ್ದರೇ, ಸರಿ ಉತ್ತರ ನೀಡಲೇಬೇಕಾಗಿತ್ತು. ಸರಿ ಉತ್ತರ ಕೊಟ್ಟರೇ 12.5 ಲಕ್ಷ ಗೆಲ್ಲುತ್ತಿದ್ದರು. ಅದೇ ತಪ್ಪು ಉತ್ತರ ಕೊಟ್ಟಿದ್ದರೇ 3.20 ಲಕ್ಷಕ್ಕೆ ಜಾರುತ್ತಿದ್ದರು. ಅವರ ಬಳಿ ಯಾವುದೇ ಲೈಫ್ ಲೈನ್ ಇರಲಿಲ್ಲ. ಕೊನೆಗೂ ಯೋಚನೆ ಮಾಡಿದ ತಿಮ್ಮಣ್ಣ ಅವರು ಆಟವನ್ನ ಕ್ವಿಟ್ ಮಾಡಿ 6.40 ಲಕ್ಷವನ್ನ ಉಳಿಸಿಕೊಂಡರು.


Click it and Unblock the Notifications











