ಈ ವಾರದ ಬಿಗ್ ಬಾಸ್ ಎಲಿಮಿನೇಷನ್ ನಲ್ಲಿ ಬಿಗ್ ಟ್ವಿಸ್ಟ್: ಏನದು?
ವೀಕೆಂಡ್ ಬಂತೆಂದರೆ ಸಾಕು ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬರುವ ಸ್ಪರ್ಧಿಯರಾಗಿರುತ್ತಾರೆ ಎನ್ನುವ ಕುತೂಹಲ ಕಿರುತೆರೆ ಪ್ರೇಕ್ಷಕರಲ್ಲಿ ಇರುತ್ತೆ. ವಾರ ಪೂರ್ತಿ ಬಿಗ್ ಬಾಸ್ ನೋಡದೆ ಇರೋರು ಸಹ ವೀಕೆಂಡ್ ನಲ್ಲಿ ಬಿಗ್ ಬಾಸ್ ಕಡೆ ಗಮನ ಹರಿಸುತ್ತಾರೆ. ಬಿಗ್ ಮನೆಯಿಂದ ಯಾರು ಹೊರಬಂದರು ಎಂದು ಕೇಳುತ್ತಾರೆ.
ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬರುವ ಸ್ಪರ್ಧಿಯಾರು ಎನ್ನುವ ಕುತೂಹಲ ವೀಕ್ಷಕರಲ್ಲಿದೆ. ನಾಮಿನೇಟ್ ಆಗಿರುವ ಐದು ಜನರಲ್ಲಿ ಈಗಾಗಲೆ ಇಬ್ಬರು ಸೇಫ್ ಆಗಿದ್ದಾರೆ. ವಾಸುಕಿ ವೈಭವ್ ಮತ್ತು ಪ್ರಿಯಾಂಕಾ ಎಲಿಮಿನೇಷನ್ ಯಿಂದ ಬಚಾವ್ ಆಗಿದ್ದಾರೆ. ಇನ್ನು ಉಳಿದಂತೆ ರಾಜು ತಾಳಿಕೋಟೆ, ಚಂದನ್ ಆಚಾರ್ ಮತ್ತು ರಶ್ಮಿ ಈ ಮೂವರಲ್ಲಿ ಔಟ್ ಆಗುತ್ತಾರೆ ಎನ್ನುವ ಚರ್ಚೆ ಈಗಾಗಲೆ ಶುರುವಾಗಿದೆ. ಇದರ ಜೊತೆಗೆ ಬಿಗ್ ಬಾಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಎಲಿಮಿನೇಷನ್ ನಲ್ಲಿ ಬಿಗ್ ಟ್ವಿಸ್ಟ್
ಈ ವಾರದ ಎಲಿಮೆನೇಷನ್ ನಲ್ಲಿ ಬಿಗ್ ಟ್ವಿಸ್ಟ್ ಇದೆ ಕಿಚ್ಚ ಸುದೀಪ್ ನಿನ್ನೆ ಹೇಳಿದ್ದರು. ವಾರದ ಕತೆ ಕಿಚ್ಚನ ಜೊತೆ ಮುಗಿಸಿ ಕೊನೆಯಲ್ಲಿ ಈ ಬಾರಿಯ ಎಲಿಮಿನೇಷನ್ ನಲ್ಲಿ ಬಿಗ್ ಟ್ವಿಸ್ಟ್ ಇದೆ ಎಂದು ಹೇಳುವ ಮೂಲಕ ವೀಕ್ಷಕರಲ್ಲಿ ಕತೂಹಲ ಹೆಚ್ಚಿಸಿದ್ದಾರೆ. ಮನೆಯಿಂದ ಹೊರ ಬರುವ ಸ್ಪರ್ಧಿ ಯಾರು ಎನ್ನುವ ಕುತೂಹಲದ ಜೊತೆಗೆ ಟ್ವಿಸ್ಟ್ ಬಗ್ಗೆಯು ತಲೆಕೆಸಿಕೊಂಡಿದ್ದಾರೆ ಪ್ರೇಕ್ಷಕರು.

ಬಿಗ್ ಮನೆಗೆ ಎಂಟ್ರಿ ಕೊಡಲಿದ್ದಾರೆ ವಿಶೇಷ ಅತಿಥಿ
ಈ ವಾರ ಬಿಗ್ ಬಾಸ್ ಮನೆಗೆ ವಿಶೇಷ ಅತಿಥಿಯೊಬ್ಬರು ಎಂಟ್ರಿ ಕೊಡುತ್ತಿದ್ದಾರೆ. ಯಾರು ಆ ಗೆಸ್ಟ್ ಎನ್ನುವುದು ರಿವೀಲ್ ಆಗಿಲ್ಲ. ಆದರೆ ಬಿಗ್ ಮನೆಗೆ ಎಂಟ್ರಿ ಕೊಡುವ ಗೆಸ್ಟ್ ಅನೇಕ ದಿನಗಳಿಂದ ಬಿಗ್ ಬಾಸ್ ಮನೆಗೆ ಹೋಗಬೇಕು ಎನ್ನುವ ಆಸೆ ಹೊಂದಿದ್ದರಂತೆ. ಈ ವಾರ ಮನೆಯೊಳಗೆ ಪಾದಾರ್ಪಣೆ ಮಾಡುವ ಮೂಲಕ ಆಸೆ ಈಡೇಸಿರಿಕೊಳ್ಳುತ್ತಿದ್ದಾರೆ. ಆದ್ರೆ ಗೆಸ್ಟ್ ಯಾರು ಎನ್ನುವುದು ಮಾತ್ರ ಬಹಿರಂಗವಾಗಿಲ್ಲ. ವೈಲ್ಡ್ ಕಾರ್ಡ್ ಎಂಟ್ರಿನಾ ಅಥವಾ ಈ ಒಂದು ದಿನದ ಅತಿಥಿನ ಎನ್ನುವುದು ಪ್ರೇಕ್ಷಕರ ಕುತೂಹಲ.

ವಿಶೇಷ ಅತಿಥಿಯಿಂದ ಹೊರಬರುವ ಸ್ಪರ್ಧಿಯ ಹೆಸರು ಅನೌನ್ಸ್
ಈ ವಾರ ಮನೆಯಿಂದ ಹೊರಬರುವ ಸ್ಪರ್ಧಿ ಯಾರು ಎನ್ನುವುದನ್ನು ಕಿಚ್ಚ ಸುದೀಪ್ ಹೇಳುವುದುಲ್ಲ. ಪ್ರತಿವಾರ ಮನೆಯಿಂದ ಹೊರಬರುವ ಸ್ಪರ್ಧಿಯ ಹೆಸರನ್ನು ಸುದೀಪ್ ಅನೌನ್ಸ್ ಮಾಡುತ್ತಿದ್ದರು. ಆದರೆ ಈ ವಾರ ಬಿಗ್ ಬಾಸ್ ಮನೆಗೆ ಗೆಸ್ಟ್ ಆಗಿ ಎಂಟ್ರಿ ಕೊಡುತ್ತಿರುವ ವಿಶೇಷ ವ್ಯಕ್ತಿ ಮನೆಯಿಂದ ಹೊರಬರುವ ಸ್ಪರ್ಧಿಯ ಹೆಸರನ್ನು ಹೇಳುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಗೆಸ್ಟ್ ಎಲಿಮಿನೇಟ್ ಆದ ಸ್ಪರ್ಧಿಗಳಲ್ಲಿ ಒಬ್ಬರನ್ನು ಹೊರಕಳುಹಿಸುತ್ತಿದ್ದಾರೆ.

ರಶ್ಮಿ ಔಟ್?
ಈ ವಾರ ಬಿಗ್ ಬಾಸ್ ಮನೆಯಿಂದ ದುನಿಯಾ ರಶ್ಮಿ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜು ತಾಳಿಕೋಟೆ, ಚಂದನ್ ಆಚಾರ್ಯ ಮತ್ತು ರಶ್ಮಿ ಅವರಲ್ಲಿ ಈ ಬಾರಿ ಮನೆಯಿಂದ ರಶ್ಮಿ ಹೊರಬಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅಂದ್ಮೇಲೆ ಈ ವಾರ ಮನೆಯೊಳಗೆ ಎಂಟ್ರಿ ಕೊಡುವ ವಿಶೇಷ ಅತಿಥಿ ರಶ್ಮಿ ಹೆಸರನ್ನು ಹೇಳಿ, ಮನೆಯಿಂದ ಹೊರಕಳುಹಿಸಲಿದ್ದಾರೆ.


Click it and Unblock the Notifications











