ಮಾನಸಿಕ ಕಿರುಕುಳ, ಬೆದರಿಕೆ ; ಕುಂಕುಮ್ ಭಾಗ್ಯ ಸಂಚಿತಾ ದುರಂತ ಅಂತ್ಯಕ್ಕೆ ಈ ನಟನೇ ಕಾರಣ ? ಬೆಚ್ಚಿಬೀಳಿಸುವ ಚಾಟ್ ಲೀಕ್

ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಈ ಪ್ರೀತಿ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಈ ಬ್ರೇಕ್ ಅಪ್‌ನ ನೋವು ಸಹಿಸಲಾಗದೇ ಹಲವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಪ್ರೀತಿ ಮರೆಯಲಾಗದೆ ಅನೇಕರು ಆತ್ಮ*ಹತ್ಯೆಯನ್ನು ಕೂಡ ಮಾಡಿಕೊಂಡಿದ್ದಾರೆ.

ಮೊನ್ನೆ ''ಕುಂಕುಮ್ ಭಾಗ್ಯ'' ಖ್ಯಾತಿಯ ಸಂಚಿತಾ ಉಗಾಲೆ ಆತ್ಮ*ಹತ್ಯೆ ಮಾಡಿಕೊಳ್ಳಲು ಈ ಲವ್ ಮತ್ತು ಬ್ರೇಕಪ್ ಪ್ರಮುಖ ಕಾರಣ ಎನ್ನುವ ವಾದವನ್ನು ಉಜ್ವಲ್ ಶರ್ಮಾ ಸದ್ಯ ಮಾಡಿದ್ದಾರೆ.

threatened-to-hit-her-shocking-chat-leaks-implicate-ujjwal-sharma-in-the-sanchita-ugale-tragedy

ಹೌದು, ಉಜ್ವಲ್ ಶರ್ಮಾ.. ''ಸಾಜನ್ ಘರ್'' ಧಾರಾವಾಹಿಯಲ್ಲಿ ಸಂಚಿತಾ ಅವರ ಜೊತೆ ತೆರೆ ಹಂಚಿಕೊಂಡಿದ್ದ ಚೆಲುವ. ಈ ಧಾರಾವಾಹಿ ಸಮಯದಲ್ಲಿಯೇ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು ಎನ್ನುವ ಮಾತು ಇದೆ. ಸಂಚಿತಾ ಅವರ ಆತ್ಮ*ಹತ್ಯೆಗೆ ಉಜ್ವಲ್ ಶರ್ಮಾನೇ ಕಾರಣ ಎಂದು ಕೂಡ ಹೇಳಲಾಗುತ್ತಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ''ಟೆಲಿ ಚಕ್ಕರ್''ಗೆ ನೀಡಿದ ಸಂದರ್ಶನದಲ್ಲಿ ಉಜ್ವಲ್ ಶರ್ಮಾ ಪ್ರತಿಕ್ರಿಯೆ ನೀಡಿದ್ಧಾರೆ. ನಾವಿಬ್ಬರು ಪ್ರೀತಿಯಲ್ಲಿದ್ದೆವು ಎನ್ನುವುದೆಲ್ಲಾ ಸುಳ್ಳು ಎಂದಿದ್ಧಾರೆ.

ಸಂಚಿತಾ ನನ್ನನ್ನೂ ಪ್ರೀತಿಸುತ್ತಿರಲಿಲ್ಲ. ಬದಲಿಗೆ ಬೇರೊಬ್ಬ ವ್ಯಕ್ತಿಯ ಜೊತೆ ಆಕೆಗೆ ಸಂಬಂಧ ಇತ್ತು ಎಂದು ಹೇಳಿರುವ ಉಜ್ವಲ್, ಆ ವ್ಯಕ್ತಿಯ ಜೊತೆ ಸಂಚಿತಾ ಲಿವ್ ಇನ್ ಸಂಬಂಧದಲ್ಲಿ ಕೂಡ ಇದ್ದರು ಎಂದಿದ್ಧಾರೆ.

ಅಲ್ಲದೆ, ಸಂಚಿತಾ ತಮ್ಮ ಮಾಜಿ ಪ್ರಿಯಕರನೊಂದಿಗಿನ ಬ್ರೇಕಪ್‌ನಿಂದಾಗಿ ತೀವ್ರ ಮಾನಸಿಕ ನೋವಿನಲ್ಲಿದ್ದರು. ನಾನು ಕಳೆದ ಕೆಲವು ತಿಂಗಳುಗಳಿಂದ ಅವರ ಸಂಪರ್ಕದಲ್ಲಿ ಇರಲಿಲ್ಲ ಎಂದು ಕೂಡ ಉಜ್ವಲ್ ಹೇಳಿದ್ದಾರೆ.

ಆದರೆ, ಹಿಂದಿ ಕಿರುತೆರೆ ಮಾತನಾಡುತ್ತಿರುವುದೇ ಬೇರೆ. ಆ ಪ್ರಕಾರ ಸಂಚಿತಾ ಆತುರದ ನಿರ್ಧಾರಕ್ಕೆ ಪ್ರತ್ಯಕ್ಷ ಮತ್ತು ಪರೋಕ್ಷ ಕಾರಣ ಬೇರೆ ಯಾರು ಅಲ್ಲ. ಬದಲಿಗೆ ಇದೇ ಉಜ್ವಲ್ ಶರ್ಮಾ ಎಂದು ಹಲವರು ಹೇಳುತ್ತಿದ್ಧಾರೆ. ಉಜ್ವಲ್ ಶರ್ಮಾ ನೀಡಿದ ಮಾನಸಿಕ ಕಿರುಕುಳದಿಂದಲೇ ಸಂಚಿತಾ ಆತ್ಮ*ಹತ್ಯೆಗೆ ಶರಣಾಗಿದ್ದು ಎನ್ನುತ್ತಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಂಚಿತಾ ಅವರ ಆಪ್ತ ಸ್ನೇಹಿತೆ ಮತ್ತು ನಟಿ ಇಂದ್ರಾಕ್ಷಿ ಕಾಂಜಿಲಾಲ್, ಉಜ್ವಲ್ ಶರ್ಮಾ ಅವರ ಹೇಳಿಕೆಯ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ಉಜ್ವಲ್ ಅವರೇ ಸಂಚಿತಾ ಸಾವಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣ ಎಂದು ಹೇಳಿರುವ ಇಂದ್ರಾಕ್ಷಿ, ಸಂಚಿತಾಗೆ ಉಜ್ವಲ್ ತೀವ್ರ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಸಂಚಿತಾ ಸತ್ತ ನಂತರ ಆಕೆಯ ವೈಯಕ್ತಿಕ ಜೀವನದ ಕುರಿತು ಉಜ್ವಲ್ ಇಷ್ಟೊಂದು ಕೀಳು ಮಟ್ಟದಲ್ಲಿ ಮಾತನಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿರುವ ಇಂದ್ರಾಕ್ಷಿ, ಉಜ್ವಲ್ ಮಾತುಗಳನ್ನು ಕೇಳಿ ನನಗೆ ಆಶ್ಚರ್ಯದ ಜೊತೆ ವಿಷಾದವೂ ಆಯ್ತು ಎಂದಿದ್ಧಾರೆ.

threatened-to-hit-her-shocking-chat-leaks-implicate-ujjwal-sharma-in-the-sanchita-ugale-tragedy

''ಸಾಜನ್ ಘರ್'' ಧಾರಾವಾಹಿಯಿಂದ ಸಂಚಿತಾ ಹೊರ ಬರಲು, ಉಜ್ವಲ್ ನೀಡಿದ ಕಿರುಕುಳವೇ ಮೂಲ ಕಾರಣ ಎಂದು ಹೇಳಿರುವ ಇಂದ್ರಾಕ್ಷಿ, ಸಂಚಿತಾ ಅವರಿಂದ ಉಜ್ವಲ್ ತಮ್ಮಿಂದ ಸಾಲದ ರೂಪದಲ್ಲಿ ಹಣ ಪಡೆದಿದ್ದರು. ಆದರೆ ಮರಳಿ ಆ ಹಣವನ್ನು ಸಂಚಿತಾ ಕೇಳಿದಾಗ ಉಜ್ವಲ್ ತೀರಾ ಕೆಟ್ಟದಾಗಿ ವರ್ತಿಸಿದ್ದಲ್ಲದೆ, ಕೆಟ್ಟ ಪದಗಳಿಂದ ನಿಂದಿಸಿ, ಹೊಡೆಯುವ ಬೆದರಿಕೆಯನ್ನು ಕೂಡ ಹಾಕಿದ್ದರು ಎಂದು ಹೇಳಿದ್ದಾರೆ. ತಮ್ಮ ಮಾತುಗಳಿಗೆ ಪೂರಕವಾಗಿ ಹಲವು ವಾಟ್ಸಾಪ್ ಸಂಭಾಷಣೆಗಳ ಸ್ಕ್ರೀನ್‌ಶಾಟ್‌ಗಳನ್ನು ಕೂಡ ಬಹಿರಂಗಗೊಳಿಸಿದ್ಧಾರೆ.

ಉಜ್ವಲ್ ಶರ್ಮಾ ನೀಡಿದ ಈ ಕಿರುಕುಳದಿಂದಾಗಿಯೇ ಸಂಚಿತಾ ಆರೋಗ್ಯ ಹಾಳಾಗಿತ್ತು ಎಂದು ಹೇಳಿರುವ ಇಂದ್ರಾಕ್ಷಿ, ಸಂಚಿತಾ ಸಾವಿಗೆ ಮಾನಸಿಕ ಖಿನ್ನತೆ ಕಾರಣ ಎನ್ನುವ ವಾದವನ್ನು ಅಲ್ಲಗೆಳೆದಿದ್ಧಾರೆ.

''ಸಾಜನ್ ಘರ್'' ಚಿತ್ರೀಕರಣದ ಸೆಟ್‌ನಲ್ಲಿ ನಡೆಯುತ್ತಿದ್ದ ಕಿರುಕುಳದ ಬಗ್ಗೆ ಸಂಚಿತಾ, ಪ್ರೊಡಕ್ಷನ್ ಹೌಸ್‌ನವರಗಮನಕ್ಕೆ ತಂದಿದ್ದರು. ಆದರೆ ಅಲ್ಲಿ ಯಾವುದೂ ಬದಲಾಗಲಿಲ್ಲ ಎಂದು ಹೇಳಿರುವ ಇಂದ್ರಾಕ್ಷಿ, ತನಗೆ ನ್ಯಾಯ ಸಿಗುವುದಿಲ್ಲ ಎಂದು ಗೊತ್ತಾದಾಗ ಸಂಚಿತಾ ಅಸಹಾಯಕಳಾಗಿದ್ದಳು ಎಂದು ಹೇಳಿದ್ಧಾರೆ. ಪೊಲೀಸರು ಈ ಆಯಾಮದಲ್ಲಿಯೂ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಕೇವಲ ಇಂದ್ರಾಕ್ಷಿ ಮಾತ್ರವಲ್ಲ ಮತ್ತೊಬ್ಬ ನಟಿ ಕೌಶಿಕಿ ರಾಥೋಡ್ ಕೂಡ ಇಂದ್ರಾಕ್ಷಿ ಅವರ ಮಾತುಗಳನ್ನೇ ಪುನರುಚ್ಚಿಸಿದ್ದು, ಉಜ್ವಲ್ ಶರ್ಮಾ ವರ್ತನೆಯಿಂದಾಗಿ ಸಂಚಿತಾ ಸೆಟ್‌ನಲ್ಲಿ ತೀವ್ರ ಅಸಹಾಯಕತೆ ಮತ್ತು ಒಂಟಿತನವನ್ನು ಅನುಭವಿಸುತ್ತಿದ್ದರು ಎಂದು ಹೇಳಿದ್ದಾರೆ. ಉದ್ಯಮದಲ್ಲಿ ನಡೆಯುವ ಇಂತಹ ವಿಷಕಾರಿ ವರ್ತನೆಗಳ ವಿರುದ್ಧ ಧ್ವನಿ ಎತ್ತಬೇಕಾದ ಸಮಯ ಬಂದಿದೆ ಎಂದು ಸಹ-ಕಲಾವಿದರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

English summary
Inside the Sanchita Ugale tragedy: Co-stars come forward with proof alleging Ujjwal Sharma threatened to hit her. Get the full story on the shocking claims.
Read more about: suicide death ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X