ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ 'ಬಿಗ್' ಮನೆಗೆ ಬಂದಿದ್ದು ಒಬ್ಬರಲ್ಲ, ಮೂವರು.!

Recommended Video

Bigg Boss Kannada Season 6: ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ 'ಬಿಗ್' ಮನೆಗೆ ಬಂದಿದ್ದು ಒಬ್ಬರಲ್ಲ, ಮೂವರು.!

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಯಾರು ಬರಬಹುದು ಎಂಬ ಲೆಕ್ಕಾಚಾರ ನಡೆಯುತ್ತಿತ್ತು. ಈ ಮಧ್ಯೆ ಕಿರುತರೆ ನಟಿ ಮೇಘಶ್ರೀ ಬಿಗ್ ಮನೆಗೆ ಹೋಗುವುದು ಒಂದು ದಿನ ಮುಂಚೆಯೇ ಬಹಿರಂಗವಾಗಿತ್ತು.

ಸದ್ಯ, ಹನ್ನೊಂದು ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಇವರ ಜೊತೆ ಮೇಘಶ್ರೀ ಸೇರಿ ಹನ್ನೆರಡು ಆಗ್ತಾರೆ ಎಂಬ ನಿರೀಕ್ಷೆ ಇತ್ತು. ಆದ್ರೆ, ಈ ಎಲ್ಲ ಲೆಕ್ಕಾಚಾರವನ್ನ ಬಿಗ್ ಬಾಸ್ ಉಲ್ಟಾಪಲ್ಟಾ ಮಾಡಿದೆ.

ಯಾರ ನಿರೀಕ್ಷೆಗೂ ನಿಲುಕದ ಹಾಗೆ ಮೂವರನ್ನ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಮನೆಯೊಳಗೆ ಕಳುಹಿಸಿದ್ದಾರೆ. ಮೂರು ಜನರು ಹುಡುಗಿಯರೇ ಆಗಿರುವುದು ವಿಶೇಷ. ಇದರಲ್ಲಿ ಒಬ್ಬ ಸ್ಫರ್ಧಿ ಆಲ್ ರೆಡಿ ಬಿಗ್ ಬಾಸ್ ಹಿಂದಿನ ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದವರೇ. ಅಷ್ಟಕ್ಕೂ, ಯಾರು ಆ ಮೂವರು? ಮುಂದೆ ಓದಿ....

ಮೇಘಶ್ರೀ ಮೆಗಾ ಎಂಟ್ರಿ

ಮೇಘಶ್ರೀ ಮೆಗಾ ಎಂಟ್ರಿ

'ನಾಗಕನ್ನಿಕೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದ ಮೇಘಶ್ರೀ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದಾರೆ. ಕಿರುತೆರೆಯ ಜೊತೆ ಕನ್ನಡ ಹಾಗೂ ತೆಲುಗು ಸಿನಿಮಾರಂಗದಲ್ಲಿ ಮೇಘಶ್ರೀ ಗುರುತಿಸಿಕೊಂಡಿದ್ದಾರೆ.

ಮೇಘಶ್ರೀ ಅಭಿನಯದ ಚಿತ್ರಗಳು

ಮೇಘಶ್ರೀ ಅಭಿನಯದ ಚಿತ್ರಗಳು

ತೀರ್ಥಹಳ್ಳಿಯ ಹುಡುಗಿ ಮೇಘಶ್ರೀ ತೆಲುಗಿನಲ್ಲಿ 'ಪಂಚಮುಖಿ', 'ಖಾಕಿ', 'ಓ‌ ಮೈ ಗಾಡ್', 'ಅನಗನಗ ಒಕ ಚಿತ್ರಮು' ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 'ಪಂಡಿತ್ ಭಾಗ್ಯ ವಿಧಾತ', ಕೋಡ್ಲು ರಾಮಕೃಷ್ಣ ನಿರ್ದೇಶನದ 'ಮಾರ್ಚ್ 22' ಹಾಗೂ ಸಂಚಾರಿ ವಿಜಯ್ ಅಭಿನಯದ 'ಕೃಷ್ಣ ತುಳಸಿ' ಚಿತ್ರದಲ್ಲಿ ಮೇಘ ನಟಿಸಿದ್ದಾರೆ. ವಿಜಯ ಸೂರ್ಯ ಜೊತೆಗೆ ನಾಯಕಿಯಾಗಿ ನಟಿಸಿರುವ 'ಕದ್ದುಮುಚ್ಚಿ' ಹಾಗೂ ಚಿರಂಜೀವಿ ಸರ್ಜ ಜೊತೆಗಿನ 'ಮಾರ್ತಾಂಡ' ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅವರ ಮಗಳಾಗಿ 'ದಶರಥ' ಸಿನಿಮಾದಲ್ಲಿ ನಟಿಸಿರುವ ಮೇಘಶ್ರೀ ಪ್ರಸ್ತುತ ದ್ವಿಭಾಷಾ ಚಿತ್ರವಾಗಿ ಮೂಡಿ‌ ಬರುತ್ತಿರುವ 'ಅಮೃತವರ್ಷಿಣಿ'ಯ ಚಿತ್ರೀಕರಣದಲ್ಲಿದ್ದರು.

ಮತ್ತೆ ಬಂದ ನಿವೇದಿತಾ ಗೌಡ

ಮತ್ತೆ ಬಂದ ನಿವೇದಿತಾ ಗೌಡ

ಬಿಗ್ ಬಾಸ್ ಕನ್ನಡ 5ನೇ ಆವೃತ್ತಿ ಸ್ಪರ್ಧಿಯಾಗಿದ್ದ ಗೊಂಬೆ ಖ್ಯಾತಿಯ ನಿವೇದಿತಾ ಗೌಡ ಆರನೇ ಆವೃತ್ತಿಯಲ್ಲಿ ಮತ್ತೆ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಸರ್ಪ್ರೈಸ್ ಎಂಬಂತೆ ಮೇಘಶ್ರೀ ಜೊತೆ ನಿವೇದಿತಾನೂ ಗೃಹಪ್ರವೇಶ ಮಾಡಿದ್ದಾರೆ.

ಬಿಂದಾಸ್ ಜೀವಿತಾ

ಬಿಂದಾಸ್ ಜೀವಿತಾ

ಮೇಘಶ್ರೀ ಮತ್ತು ನಿವೇದಿತಾ ಗೌಡ ಜೊತೆ ಜೀವಿತಾ ಎಂಬ ಮತ್ತೋರ್ವ ಸ್ಪರ್ಧಿಯೂ ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದಾರೆ. ವೃತ್ತಿಯಲ್ಲಿ ಮಾಡೆಲ್ ಮತ್ತು ಡ್ಯಾನ್ಸರ್ ಆಗಿರುವ ಜೀವಿತಾ ಕೆಲವು ಧಾರಾವಾಹಿಯಲ್ಲೂ ನಟಿಸಿದ್ದಾರಂತೆ.

ಸದಸ್ಯರ ಸಂಖ್ಯೆ ಹೆಚ್ಚಾಯಿತು

ಸದಸ್ಯರ ಸಂಖ್ಯೆ ಹೆಚ್ಚಾಯಿತು

ಸದ್ಯ, ಹನ್ನೊಂದು ಜನ ಇದ್ದ ಬಿಗ್ ಮನೆಯಲ್ಲಿ ಈಗ ಮೂರು ಜನ ಹೊಸ ಸದಸ್ಯರು ಸೇರ್ಪಡೆಯಾಗಿದ್ದು, ಹದಿನಾಲ್ಕು ಜನ ಆಗಿದ್ದಾರೆ. ಇದರಿಂದ ಈಗಾಗಲೇ ಮನೆಯಲ್ಲಿದ್ದ ಸದಸ್ಯರಿಗೆ ಮೇಲ್ನೋಟಕ್ಕೆ ಖುಷಿ ಎನಿಸಿದರೂ, ಹೊಸದಾಗಿ ಬಂದಿರುವ ಮೂರು ಜನರು ತಮಗೆ ಪೈಪೋಟಿ ಆಗಲಿದ್ದಾರೆ ಎಂಬ ಆತಂಕದಲ್ಲಿದ್ದಾರೆ.

More from Filmibeat

English summary
Bigg Boss Kannada 6 is welcomes three new wild-card contestants. TV actress Jeevitha, meghashree and bigg boss last season contestant niveditha gowda entered home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X