twitter
    For Quick Alerts
    ALLOW NOTIFICATIONS  
    For Daily Alerts

    ಪ್ರಾಣಾಪಾಯದಲ್ಲಿದ್ದ 'ಪುಟ್ಟಗೌರಿ' ಜೀವನದಲ್ಲಿ ಪವಾಡ: ಗೌರಿ ಮತ್ತೆ ಸೇಫ್.!

    By Bharath Kumar
    |

    ಕಳೆದ ಕೆಲ ದಿನಗಳಿಂದ 'ಪುಟ್ಟಗೌರಿ' ಕಾಡಿನಲ್ಲಿ ಸಿಕ್ಕಾಕಿಕೊಂಡಿದ್ದು, ಅಲ್ಲೂ ಕೂಡ ಗೌರಿಗೆ ಕಷ್ಟಗಳ ಮೇಲೆ ಕಷ್ಟಗಳು ಬರ್ತಿದೆ. ಬೆಟ್ಟದಿಂದ ಬಿದ್ದ ನಂತರ ಹುಲಿ, ಹಾವಿನಿಂದ ತಪ್ಪಿಸಿಕೊಂಡು ಕಾಡುಮನುಷ್ಯರ ಕೈಗೆ ಸಿಕ್ಕಿಕೊಂಡಿದ್ದರು.

    ತದ ನಂತರ ಗೌರಿಯನ್ನ ಕಾಡು ಮನುಷ್ಯರು ನರಬಲಿ ಕೊಡುವುದಕ್ಕೆ ಎಲ್ಲ ತಯಾರಿ ನಡೆಸಿಕೊಂಡಿದ್ದರು. ಇನ್ನೇನೂ ಬಲಿ ಕೊಟ್ಟೇಬಿಟ್ಟರು ಎನ್ನುವಷ್ಟರಲ್ಲಿ ಮತ್ತೆ ಪವಾಡ ನಡೆದುಹೋಗಿದೆ. ಪುಟ್ಟಗೌರಿ ಮತ್ತೆ ಬದುಕಿ ಉಳಿದಿದ್ದಾಳೆ.

    ಅಷ್ಟಕ್ಕೂ, ಪುಟ್ಟಗೌರಿ ಜೀವನದಲ್ಲಿ ಆದ ಹೊಸ ಪವಾಡವೇನು? ಕಾಡು ಮನುಷ್ಯರಿಂದ ಗೌರಿಯನ್ನ ರಕ್ಷಿಸಿದ್ದು ಯಾರು? ಎಂದು ತಿಳಿಯಲು ಮುಂದೆ ಓದಿ.....

    ಬಲಿ ಕೊಡೋ ಸಮಯದಲ್ಲಿ ಪವಾಡ

    ಬಲಿ ಕೊಡೋ ಸಮಯದಲ್ಲಿ ಪವಾಡ

    ಪುಟ್ಟಗೌರಿಯನ್ನ ಬಲಿ ಕೊಡುವುದಕ್ಕೆ ಸಿದ್ದ ಮಾಡಿ, ಇನ್ನೆನೂ ಗೌರಿ ತಲೆಯನ್ನ ಕತ್ತರಿಸಬೇಕು ಎನ್ನುವಷ್ಟರಲ್ಲಿ ಗೌರಿ ಪಾಲಿನ ರಕ್ಷಕ ಆ ಕಾಡುಮನುಷ್ಯರ ಸ್ಥಳಕ್ಕೆ ಪ್ರವೇಶ ಮಾಡಿದ. ಅಲ್ಲಿಗೆ ಗೌರಿ ಪ್ರಾಣ ಉಳಿಯಿತು.

    'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.!'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.!

    ಗೌರಿ ಪಾಲಿನ ಆ 'ರಕ್ಷಕ' ಯಾರು?

    ಗೌರಿ ಪಾಲಿನ ಆ 'ರಕ್ಷಕ' ಯಾರು?

    ನಿಮಗೆ ಈ ಹಿಂದೆ ಗೌರಿ ಕಾಡಿನಲ್ಲಿ ಹುಲಿಯೊಂದನ್ನ ರಕ್ಷಿಸಿದ್ದು ನೆನಪಿರಬಹುದು. ಗೌರಿಯನ್ನ ತಿನ್ನಲು ಬಂದಿದ್ದ ಹುಲಿ ಆಕಸ್ಮಿಕವಾಗಿ ನೀರಿಲ್ಲದ ಹಳ್ಳದಲ್ಲಿ ಬಿದ್ದಿತ್ತು. ನಂತರ ಆ ಹುಲಿಯನ್ನ ಗೌರಿ ರಕ್ಷಿಸಿದ್ದಳು. ಅದೇ ಹುಲಿ ಈಗ ಗೌರಿಯ ಪಾಲಿಗೆ ರಕ್ಷಕನಾಗಿ ಬಂದಿದೆ.

    ಹುಲಿ, ಹಾವಿನಿಂದ ತಪ್ಪಿಸಿಕೊಂಡ 'ಗೌರಿ' ಪ್ರಾಣಕ್ಕೆ ಮತ್ತೆ ಅಪಾಯ.!ಹುಲಿ, ಹಾವಿನಿಂದ ತಪ್ಪಿಸಿಕೊಂಡ 'ಗೌರಿ' ಪ್ರಾಣಕ್ಕೆ ಮತ್ತೆ ಅಪಾಯ.!

    ದೇವತೆ ಎಂದು ಭಯಗೊಂಡ ಕಾಡು ಮನುಷ್ಯರು

    ದೇವತೆ ಎಂದು ಭಯಗೊಂಡ ಕಾಡು ಮನುಷ್ಯರು

    ಆ ಹುಲಿ ನೇರವಾಗಿ ಬಂದು ಪುಟ್ಟಗೌರಿಯ ಪಕ್ಕದಲ್ಲಿ ನಿಲ್ಲುತ್ತೆ. ಗೌರಿ ಪಾಲಿಗೆ ನಾನು ಇದ್ದೀನಿ ಎಂಬ ಸೂಚನೆ ನೀಡುತ್ತೆ. ಅಲ್ಲಿಗೆ ಕಾಡು ಮನುಷ್ಯರು ಈಕೆ ದೇವತೆ ಇರಬಹುದು ಎಂದು ಮನಸ್ಸು ಪರಿವರ್ತನೆ ಮಾಡಿಕೊಂಡರು.

    ವಿಶ್ವದ 'ಎಂಟನೇ ಅದ್ಭುತ' ಗೌರಿ ಸಾಯಲ್ಲ, 'ಪುಟ್ಟಗೌರಿ ಮದುವೆ' ಮುಗಿಯಲ್ಲ.!ವಿಶ್ವದ 'ಎಂಟನೇ ಅದ್ಭುತ' ಗೌರಿ ಸಾಯಲ್ಲ, 'ಪುಟ್ಟಗೌರಿ ಮದುವೆ' ಮುಗಿಯಲ್ಲ.!

    ಗೌರಿಗೆ ಪೂಜೆ ಮಾಡಿದ ಜನರು

    ಗೌರಿಗೆ ಪೂಜೆ ಮಾಡಿದ ಜನರು

    ಬಲಿ ಕೊಡುವುದಕ್ಕೆ ಗೌರಿಗೆ ಪೂಜೆ ಮಾಡಿದ ಬುಡಕಟ್ಟು ಜನಾಂಗ, ಈಕ ದೇವತೆ ಇರಬಹುದು ಎಂದು ಮತ್ತೊಮ್ಮೆ ದೇವಿಯ ಸ್ಥಾನದಲ್ಲಿ ಕೂರಿಸಿ ಪೂಜೆ ಮಾಡಿದರು.

    ಇದು ಪುಣ್ಯಕೋಟಿ ಕಥೆ

    ಇದು ಪುಣ್ಯಕೋಟಿ ಕಥೆ

    ಹುಲಿ ಕಷ್ಟದಲ್ಲಿದ್ದಾಗ ಪುಟ್ಟಗೌರಿ ತನ್ನ ಪ್ರಾಣವನ್ನ ಲೆಕ್ಕಿಸಿದೆ ಹುಲಿಯನ್ನ ರಕ್ಷಿಸಿದ್ದಳು. ಅದೇ ಹುಲಿ ಸಂಕಷ್ಟದಲ್ಲಿದ್ದ ಗೌರಿಯನ್ನ ರಕ್ಷಿಸಿ ಕೃತಜ್ಞತೆ ಮರೆದಿದೆ. ಇದೊಂಥರ ಪುಣ್ಯಕೋಟಿ ಕಥೆಯನ್ನ ನೆನಪಿಸುತ್ತಿದೆ.

    'ಪುಟ್ಟಗೌರಿ' ಹೆಸರಿನಲ್ಲಿ ಇರುವ ದಾಖಲೆಗಳು ಒಂದಾ ಎರಡಾ.?'ಪುಟ್ಟಗೌರಿ' ಹೆಸರಿನಲ್ಲಿ ಇರುವ ದಾಖಲೆಗಳು ಒಂದಾ ಎರಡಾ.?

    ಗೌರಿ ಮತ್ತೆ ಸೇಫ್

    ಗೌರಿ ಮತ್ತೆ ಸೇಫ್

    ಕಾಡಿನಲ್ಲಿ ಎದುರಾದ ಹೊಸ ಸಂಕಷ್ಟದಿಂದ ಗೌರಿ ಬಚಾವ್ ಆಗಿದ್ದು, ಮತ್ತೆ ಸೇಫ್ ಆಗಿದ್ದಾಳೆ. ಅಲ್ಲಿಗೆ ಪುಟ್ಟಗೌರಿ ಆರಾಧಕರು ಫುಲ್ ಖುಷಿ ಆಗಿದ್ದಾರೆ. ಇದೆಲ್ಲರ ಮಧ್ಯೆ ಗೌರಿ ಕಾಡಿನಿಂದ ನಾಡಿಗೆ ಯಾವಾಗ ಬರ್ತಾರೆ ಎಂಬ ಕುತೂಹಲ ಕಾಡುತ್ತಿದೆ. ಈ ಬಗ್ಗೆ ಪುಟ್ಟಗೌರಿ ಮದುವೆ ಧಾರಾವಾಹಿಯ ನಿರ್ದೇಶಕ ಮಾಹಿತಿ ಕೊಟ್ಟಿದ್ದು, ವರದಿ ಶೀಘ್ರದಲ್ಲಿ ಪ್ರಕಟವಾಗಲಿದೆ. ನಿರೀಕ್ಷಿಸಿ.

    English summary
    Puttagowri Maduve serial jungle Episode is getting viral in social media.
    Wednesday, October 18, 2017, 13:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X