Sonu Gowda: ಮಾಲ್ಡೀವ್ಸ್‌ಗೆ ಹಾರಿದ ಸೋನು; ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್
ಸೋನು ಗೌಡ ಎಂದರೆ ಎಲ್ಲರಿಗೂ ತಿಳಿಯುತ್ತದೆ ಆಕೆ ಟಿಕ್ ಟಾಕ್ ಸ್ಟಾರ್ ಎಂದು. ಬಿಗ್ ಬಾಸ್ ಓಟಿಟಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸೋನು ಗೌಡ ಅವರ ಆಟ ನೋಡುಗರ ಗಮನ ಸೆಳೆದಿತ್ತು. ಇತ್ತೀಚಿನ ದಿನಗಳಲ್ಲಿ ಸೋನು ಗೌಡ ಲೈವ್‌ಗೆ ಬಂದು ತನ್ನ ಜೀವನದಲ್ಲಿ ನಡೆದ ಘಟನೆ ಹಾಗೆಯೇ ಟ್ರೋಲ್‌ಗಳ ಬಗ್ಗೆ ಬಹಳ ಬೇಸರ ಮಾಡಿಕೊಂಡಿದ್ದರು.
ಓ ವೇಳೆ ಕಣ್ಣೀರು ಕೂಡ ಹಾಕಿದ್ದರು. ಇದರಿಂದ ಹಲವಾರು ಜನ ಅರೆರೆ ಸೋನು ಗೌಡಗೆ ಏನಾಯಿತಪ್ಪಾ ಎಂದು ಯೋಚನೆ ಮಾಡುತ್ತಾ ಇದ್ದಾರೆ.. ಇನ್ನೂ ಸೋನು ಗೌಡ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯವಾಗಿ ಇರುತ್ತಾರೆ.. ಆಕೆ ಬಹಳ ಫೋಟೋಗಳು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇದರಿಂದ ಅವರ ಅಭಿಮಾನಿಗಳು ಫೋಟೋಗಳನ್ನು ನೋಡಿ ಬಹಳ ಖುಷಿ ಪಡುತ್ತಾರೆ.

ಹಾಗೆಯೇ ಲೈಕ್ ಕಾಮೆಂಟ್‌ಗಳನ್ನ ಮಾಡಿ ಖುಷಿ ಪಡುತ್ತಾರೆ. ಇದೀಗ ಸೋನು ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಕೈಯಲ್ಲಿ ಗ್ಲಾಸ್ ಹಿಡಿದು ನಿಂತಿರುವ ಫೋಟೋ ಇದೀಗ ವೈರಲ್ ಆಗಿದೆ.. ಅರೆರೆ ಮೊನ್ನೆ ಮೊನ್ನೆ ತಾನೆ ಲೈವ್‌ಗೆ ಬಂದು ಆಳುತ್ತಿದ್ದರು. ಇದೀಗ ಸಡನ್ ಆಗಿ ಮಾಲ್ಡೀವ್ಸ್‌ಗೆ ಹಾರಿದ್ದಾರೆ ಎಂದು ಆಶ್ಚರ್ಯ ಪಡುತ್ತಿದ್ದಾರೆ.
ಕೈಯಲ್ಲಿ ಗ್ಲಾಸ್ ಹಿಡಿದು ಫೋಟೋಗೆ ಫೋಸ್ ಕೊಟ್ಟ ಸೋನು
ಕೈಯಲ್ಲಿ ಗ್ಲಾಸ್ ಹಿಡಿದು ನಿಂತ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೀಗ ಮಾಲ್ಡೀವ್ಸ್‌ಗೆ ಹೋಗಿರುವ ಸೋನು ಗೌಡ ಬಹಳ ಏಂಜಾಯ್ ಮಾಡುತ್ತಿದ್ದಾರೆ ಎಂದರೆ ತಪ್ಪಾಗದು. ಇನ್ನೂ ಸೋನು ಗೌಡ ಫೋಟೋ ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುತ್ತಾ ಸೋನು ಕಾಲು ಎಳೆಯುತ್ತಿದ್ದಾರೆ.

ಫೋಟೋ ನೋಡಿ ಖುಷಿ ಪಟ್ಟ ಅಭಿಮಾನಿಗಳು
ಹೇಗಿದ್ದಿಯಮ್ಮ ಎಣ್ಣೆ ಕಿಕ್ಕು ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ .. ಮಾಲ್ಡೀವ್ಸ್ ಟ್ರಿಪ್ ಫೋಟೋ ಹಂಚಿಕೊಂಡ ಸೋನು ಗೌಡ, Note: coca-Cola ಎಂದು ಬರೆದುಕೊಂಡಿದ್ದಾರೆ. ಟ್ರೋಲಿಗರ ಬಾಯಿಗೆ ಸಿಗಬಾರದು ಎಂದು ಹೇಳಿ ಈ ರೀತಿ ಬರೆದುಕೊಂಡಿದ್ದಾರೆ ಎಂಬುವುದು ಸ್ಪಷ್ಟವಾಗಿ ತಿಳಿಯುತ್ತದೆ. ತಾನು ಕುಡಿಯುತ್ತಾ ಇರುವುದು ಕೋಕಾ ಕೋಲ ಎಂಬುದು ಜನರಿಗೆ ತಿಳಿಯಲು ಎಂದು ಬರೆದುಕೊಂಡಿದ್ದಾರೆ.
ಟ್ರೋಲಿಗರಿಗೆ ಸ್ಪಷ್ಟನೆ ನೀಡಿದ ಸೋನು
ಇನ್ನೂ ಬಿಗ್ ಬಾಸ್‌ನಿಂದಾ ಸೋನು ಗೌಡ ಎಲ್ಲರ ಮನ ಗೆದ್ದಿದ್ದರು. ಆದರೆ ಕೆಲವರು ಇವರನ್ನು ದೂರುತ್ತಾ ಇದ್ದರೂ ಕೆಲವರಿಗೆ ಸೋನು ಮೇಲೆ ಒಳ್ಳೆಯ ಅಭಿಪ್ರಾಯವಿದೆ.. ಇನ್ನೂ ಸೋನು ಬಿಗ್ ಬಾಸ್‌ನಲ್ಲಿ ತನ್ನ ಜೀವನದಲ್ಲಿ ಆದ ಕಹಿ ಘಟನೆಗಳನ್ನು ಹೇಳುತ್ತಾ, ಬಾಯ್ ಫ್ರೆಂಡ್‌ನಿಂದಾ ಆದ ಮೋಸ, ಆತನಿಂದ ಆದ ಕಿರುಕುಳದ ಬಗ್ಗೆ ಬಿಗ್ ಬಾಸ್‌ನಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ. ಆದರೆ ಕೆಲವರಂತೂ ಸೋನು ಬಗ್ಗೆ ಬಹಳ ಕೆಟ್ಟದಾಗಿ ಮಾತನಾಡಿದರೆ ಇನ್ನೂ ಕೆಲವರಿಗೆ ಸೋನು ಬಗ್ಗೆ ಬಹಳ ಪಾಸಿಟಿವ್ ಆಗಿ ಮಾತನಾಡುತ್ತಾ ಇರುತ್ತಾರೆ.


Click it and Unblock the Notifications











