ಬಿಗ್ ಬಾಸ್ ಗೆ ಹೋಗುವ ಬಗ್ಗೆ ಟಿಕ್ ಟಾಕ್ ಸ್ಟಾರ್ ಸೋನು ಗೌಡ ಹೇಳಿದ್ದೇನು?

By ಫಿಲ್ಮ್ ಡೆಸ್ಕ್

ಟಿಕ್ ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಯಾರಿಗೆ ಗೊತ್ತಿಲ್ಲ ಹೇಳಿ. ಅದರಲ್ಲೂ ಟಿಕ್ ಟಾಕ್ ಪ್ರೇಮಿಗಳಿಗೆ ಸೋನು ಗೌಡ ಚಿರಪರಿಚಿತ. ಅಂದಹಾಗೆ ಸೋನು ಗೌಡ ಟಿಕ್ ಟಾಕ್ ಮಾಡಿ ಖ್ಯಾತಿಗಳಿಸಿದ್ದಕ್ಕಿಂತ ಬೇಡದ ವಿಚಾರಗಳ ಮೂಲಕ ಸದ್ದು ಮಾಡಿದ್ದೇ ಹೆಚ್ಚು.

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಯಲ್ಲಿದ್ದ ಸೋನು ಗೌಡ ಈ ಬಾರಿಯ ಬಿಗ್ ಬಾಸ್ ಮನೆ ಪ್ರವೇಶ ಮಾಡುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ವಿಭಿನ್ನ, ವಿಚಿತ್ರ ನಡವಳಿಕೆ ಮೂಲಕವೇ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಹೊಂದಿರುವ ಸೋನು ಗೌಡ ಇದೀಗ ಬಿಗ್ ಮನೆ ಪ್ರವೇಶ ಮಾಡುತ್ತಾರೆ ಎನ್ನುವ ಚರ್ಚೆ ನಡೆಯುತ್ತಿದೆ. ಆದರೀಗ ಬಗ್ಗೆ ಸ್ವತಃ ಸೋನು ಗೌಡನೇ ಮಾತನಾಡಿದ್ದಾರೆ. ಮುಂದೆ ಓದಿ..

ವಿವಾದದ ಮೂಲಕ ಹೆಚ್ಚು ಸದ್ದು ಮಾಡಿರುವ ಸೋನು ಗೌಡ

ವಿವಾದದ ಮೂಲಕ ಹೆಚ್ಚು ಸದ್ದು ಮಾಡಿರುವ ಸೋನು ಗೌಡ

ಇತ್ತೀಚಿಗೆ ಕನ್ನಡದ ಬಗ್ಗೆ ಮಾತನಾಡಿ ಸೋನು ಗೌಡ ಹೆಚ್ಚು ಸುದ್ದಿಯಾಗಿದ್ದರು. ಬಳಿಕ ಸಂದರ್ಶನವೊಂದರಲ್ಲಿ ತೆಲುಗು ಸಿನಿಮಾವನ್ನು ಹೊಗಳಿ, ಕನ್ನಡಿಗರು ಸರಿ ಇಲ್ಲ ಎಂದು ಹೇಳಿ ಮತ್ತೊಂದು ವಿವಾದ ಮಾಡಿಕೊಂಡಿದ್ದರು. ಹೀಗೆ ಒಂದಲ್ಲೊಂದು ವಿಚಾರಕ್ಕೆ ಸದ್ದು, ಸುದ್ದಿಯಲ್ಲಿರುವ ಸೋನು ಗೌಡ ಇದೀಗ ಬಿಗ್ ಬಾಸ್ ಹೋಗ್ತಾರೆ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.

ಬಿಗ್ ಬಾಸ್ ಗೆ ಹೋಗುವ ಬಗ್ಗೆ ಸೋನು ಗೌಡ ಹೇಳಿದ್ದೇನು?

ಬಿಗ್ ಬಾಸ್ ಗೆ ಹೋಗುವ ಬಗ್ಗೆ ಸೋನು ಗೌಡ ಹೇಳಿದ್ದೇನು?

ಈ ಬಗ್ಗೆ ಸ್ವತಃ ಸೋನು ಗೌಡ ಅವರೇ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚಿಗೆ ಫೇಸ್ ಬುಕ್ ಲೈವ್ ಸೋನು ಗೌಡ ಬಿಗ್ ಬಾಸ್ ಎಂಟ್ರಿಯ ಬಗ್ಗೆ ಮಾತನಾಡಿದ್ದಾರೆ. ಈ ಬಾರಿಯ ಬಿಗ್ ಬಾಸ್ ಗೆ ಹೋಗ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸೋನು, 'ಯಾರೋ ಸುಮ್ನೆ ಪಬ್ಲಿಸಿಟಿ ಮಾಡಿದ್ದಾರೆ ಅಷ್ಟೆ, ನಾನು ಬಿಗ್ ಬಾಸ್ ಗೆ ಹೋಗ್ತಿಲ್ಲ. ಆ ತರ ಏನಾದ್ರು ಇದ್ರೆ ನಾನು ಹೇಳ್ತೀನಿ' ಎಂದು ಹೇಳುವ ಮೂಲಕ ಬಿಗ್ ಬಾಸ್ ಗೆ ಹೋಗ್ತಾರೆ ಎನ್ನುವ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.

ಯಾರೆಲ್ಲ ಹೋಗ್ತಾರೆ ಈ ಬಾರಿ ಬಿಗ್ ಬಾಸ್ ಗೆ

ಯಾರೆಲ್ಲ ಹೋಗ್ತಾರೆ ಈ ಬಾರಿ ಬಿಗ್ ಬಾಸ್ ಗೆ

ಈಗಾಗಲೇ ಕನ್ನಡ ಬಿಗ್ ಬಾಸ್-8ರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಸದ್ಯ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಸಹ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಬಿಗ್ ಮನೆಗೆ ಯಾರೆಲ್ಲ ಎಂಟ್ರಿ ಕೊಡ್ತಾರೆ ಎನ್ನುವ ಸಂಭಾವ್ಯ ಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಈ ಪಟ್ಟಿಯಲ್ಲಿ, ಕಿಟ್ ಟಾಕ್ ಸ್ಟಾರ್ಸ್, ಕಿರುತೆರೆ ಸ್ಟಾರ್ಸ್, ಸುದ್ದಿ ವಾಹಿನಿ ಆಂಕರ್ ಮತ್ತು ಸಿನಿಮಾ ಮಂದಿಯ ಹೆಸರುಗಳು ಇದೆ.

Recommended Video

ತನ್ನ ಪ್ರೇಯಸಿಯನ್ನು ಪರಿಚಯ ಮಾಡಿಸಿದ Danish Sait | Filmibeat Kannada
ಸಂಕ್ರಾಂತಿ ಬಳಿಕ ಬಿಗ್ ಬಾಸ್ ಪ್ರಾರಂಭ

ಸಂಕ್ರಾಂತಿ ಬಳಿಕ ಬಿಗ್ ಬಾಸ್ ಪ್ರಾರಂಭ

ಬಿಗ್ ಬಾಸ್ ಸೀಸನ್-8 ಮುಂದಿನ ವರ್ಷದ ಪ್ರಾರಂಭದಲ್ಲಿ ಪ್ರಾರಂಭವಾಗುತ್ತಿದೆ. ಈಗಾಗಲೇ ಎಲ್ಲಾ ತಯಾರಿ ನಡೆಯುತ್ತಿದೆ. ಮೂಲಗಳ ಪ್ರಕಾರ ಬಿಗ್ ಬಾಸ್ ಕನ್ನಡ ಸೀಸನ್-8 ಸಂಕ್ರಾಂತಿ ಬಳಿಕ ಶುರುವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಾರಿ ಬಿಗ್ ಬಾಸ್ ನಲ್ಲಿ ಯಾರೆಲ್ಲ ಇರಲಿದ್ದಾರೆ, ಕಾಮನ್ ಮ್ಯಾನ್ ಸಹ ಇರ್ತಾರಾ ಎನ್ನುವ ಕುತೂಹಲ ಮೂಡಿಸಿದೆ.

More from Filmibeat

English summary
Tiktok Star Sonu Srinivas Gowda Reaction to Rumours of Entering to Bigg Boss Kannada Season 8.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X