ಕಿರುತೆರೆಗೆ ಬಂದ ತಿಥಿ ಖ್ಯಾತಿಯ ಗಡ್ಡಪ್ಪ, ಸೆಂಚುರಿ ಗೌಡ!

ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಮತ್ತು ಸೆಂಚುರಿಗೌಡ ಎಲ್ಲಪ್ಪ ಎಂದು ಹುಡುಕುತ್ತಾ ಇರೋರಿಗೆ ಈಗ ಉತ್ತರ ಸಿಕ್ಕಿದೆ. ತಿಥಿ ಸಿನಿಮಾದ ಮೂಲಕ ಮೋಡಿ ಮಾಡಿದ್ದ ಈ ಜೋಡಿ ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಅಭಿನಯಿಸಿ, ನಂತರ ಕಾಣೆ ಆಗಿದ್ದರು. ಯಾವುದೇ ಚಿತ್ರಗಳಲ್ಲೂ ಈ ಜೋಡಿ ಕಾಣಿಸಿಕೊಳ್ಳುತ್ತಾ ಇರಲಿಲ್ಲಿ.

ಈಗ ಗಡ್ಡಪ್ಪ, ಸೆಂಚುರಿ ಗೌಡ ಇಬ್ಬರೂ ಕೂಡ ಹೊಸ ಹುರುಪಿನೊಂದಿಗೆ ಮತ್ತೆ ಎಂಟ್ರಿ ಕೊಟ್ಟಿದ್ದಾರೆ. ಹಾಗಂತ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾ ಇಲ್ಲ. ಬದಲಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಲ್ಲಿ ಗಡ್ಡಪ್ಪ, ಸೆಂಚುರಿ ಗೌಡನ ಹವಾ ಶುರುವಾಗಿದೆ. ಇಬ್ಬರೂ ಕೂಡ ಒಟ್ಟಿಗೆ ಒಂದೇ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ನಾಗಿಣಿ 2' ಧಾರಾವಾಹಿಯ ಮೂಲಕ ಇಬ್ಬರೂ, ಕಿರುತೆರೆಗೆ ಬಂದಿದ್ದಾರೆ. ಈ ಧಾರಾವಾಹಿಯಲ್ಲಿ ಇಬ್ಬರು ವಿಶೇಷ ಪಾತ್ರ ಮಾಡುತ್ತಿದ್ದಾರೆ. ಮೊದಲನೇ ಎಪಿಸೋಡ್‌ನಲ್ಲಿ ಗಡ್ಡಪ್ಪ ಮತ್ತು ಸೆಂಚುರಿಗೌಡ ಇಬ್ಬರು ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ಆದರೆ ಇವರ ಪಾತ್ರಗಳು ಧಾರಾವಾಹಿಯಲ್ಲಿ ಮುಂದುವರೆಯುತ್ತವೆಯಾ? ಇಲ್ಲವಾ ಎನ್ನುವುದನ್ನು ನೋಡಬೇಕಿದೆ.

Tithi Movie Fame Gaddappa Is In Kannada Serial Naagini 2

ಧಾರಾವಾಹಿ ನಾಯಕಿಯ ನಾಟಕವನ್ನು ನೋಡಲು ಗಡ್ಡಪ್ಪ, ಸೆಂಚುರಿಗೌಡ ಹಾಜರಾಗುತ್ತಾರೆ. ಕೈಯಲ್ಲಿ ರೋಸ್ ಹಿಡಿದು ಇಬ್ಬರೂ ಆವಾಸ್ ಹಾಕುತ್ತಾ ಎಂಟ್ರಿ ಕೊಡ್ತಾರೆ. ನಾಯಕಿಯ ಡ್ಯಾಸ್, ನಾಟಕ ನೋಡಿತ್ತಾ ಎಂಜಾಯ್ ಮಾಡ್ತಾರೆ. ಇದು ಸದ್ಯ ಧಾರಾವಾಹಿಯಲ್ಲಿ ಬಂದಂತಹ ಅವರ ಪಾತ್ರ.

ನಾಗಿಣಿ 2 ಧಾರಾವಾಹಿ ಸದ್ಯ ರೋಚಕ ತಿರುವಿನೊಂದಿಗೆ ಸಾಗುತ್ತಿದೆ. ನಾಗಿಣಿಯ ಹತ್ಯೆ ಆಗಿದೆ. ಆದರೆ ನಾಗಿಣಿಯ ರೂಪದಲ್ಲಿ ಶೈಲು ಎನ್ನುವ ಸುಂದರಿ ಪ್ರತ್ಯಕ್ಷ ಆಗಿದ್ದಾಳೆ. ಶಿವಾನಿಯ ಗುಂಗಲ್ಲೇ ಇರುವ ನ ಟ ತ್ರಿಶೂಲ್‌ಗೆ, ಶಿವಾನಿಯಂತೆಯೇ ಇರುವ ಶೈಲು ಕಣ್ಣಿಗೆ ಬಿದ್ದಿದ್ದಾಳೆ. ಆದರೆ ಆಕೆ ಶೈಲು, ನಾಗಿಣಿ ಶಿವಾನಿ ಅಲ್ಲ. ಹಾಗಾಗಿ ಈಗ ತ್ರಿಶೂಲ್‌ಗೆ ಆಕೆ ಯಾರು ಎನ್ನುವ ಪ್ರಶ್ನೆ ಎದುರಾಗಿದೆ.

Tithi Movie Fame Gaddappa Is In Kannada Serial Naagini 2

ಶೈಲು ಮನ ಒಲಿಸಿ ಆಕೆಯೇ ಶಿವಾನಿ ಎನ್ನುವುದನ್ನು ಮನವರಿಕೆ ಮಾಡಿಕೊಡ್ತಾನಾ ತ್ರಿಶೂಲ್ ಎನ್ನುವ ಕುತೂಹಲದೊಂದಿಗೆ ಧಾರಾವಾಗಿ ಸಾಗುತ್ತಿದೆ. ನಾಗಿಣಿ ಹತ್ಯೆಯ ಬಳಿಕ ಇಡೀ ಧಾರಾವಾಹಿಯ ತಿರುವು ಬದಲಾಗಿದೆ. ಈಗ ನಾಗಿಣಿ ಶೈಲು ಅವತಾರದಲ್ಲಿ ಇದ್ದಾಳೆ. ಹಾಗಾಗಿ ಸದ್ಯ ಶೈಲು ಬಗ್ಗೆಯೇ, ಅವರ ಜೀವನ ಶೈಲಿ ಬಗ್ಗೆಯೆ ಕಥೆ ಹೇಳಲಾಗುತ್ತಿದೆ. ಹಾಗಾಗಿ ಸಾಕಷ್ಟು ಹೊಸ ಹೊಸ ಪಾತ್ರಗಳನ್ನು ಪರಿಚಯಿಸಲಾಗಿದೆ.

More from Filmibeat

English summary
Tithi Movie Fame Gaddappa Is In Small Screan Now Acting In Kannada Serial 'Naagini 2',
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X