Amruthadhaare ; ಮನೆ ಮಾನ ಮರ್ಯಾದೆ ತೆಗೆದ ಶಕುಂತಲಾ ಗೆಳತಿ ಜಾನಕಿ
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಬರ್ತಡೇನ ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಬೇಕು ಎಂದುಕೊಂಡ ಭೂಮಿಕಾ ಎಲ್ಲಾ ಅರೇಂಜ್ ಮೆಂಟ್ ಮಾಡಿದ್ದಾಳೆ.ಗೌತಮ್ ಗೆ ಇಷ್ಟವಾಗುವ ಕೇಕ್ ಅನ್ನು ಕೂಡ ಭೂಮಿಕಾಳೇ ತಯಾರಿಸಿದ್ದಾಳೆ. ಇನ್ನು ಭೂಮಿಕಾ ಕೊಟ್ಟ ಉಡುಗೊರೆಯನ್ನು ಗೌತಮ್ ಬಹಳ ಇಷ್ಟಪಟ್ಟಿದ್ದಾನೆ.ಗೊಂಬೆಯನ್ನು ನೋಡಿ ದಿ ಬೆಸ್ಟ್ ಗಿಫ್ಟ್ ಎಂದು ಸಂತಸ ಪಟ್ಟಿದ್ದಾನೆ. ತನ್ನ ಉಡುಗೊರೆಯನ್ನು ಗೌತಮ್ ಇಷ್ಟ ಪಟ್ಟಿದ್ದಕ್ಕೆ ಭೂಮಿಕಾಳಿಗೂ ಖುಷಿಯಾಗಿದೆ.
ಪಾರ್ಟಿಯಲ್ಲಿ ಅವಾಂತರ ಸೃಷ್ಟಿಸಿದ ಗೆಸ್ಟ್
ಕೇಕ್ ಕಟ್ ಮಾಡಿದ ಬಳಿಕ ಪಾರ್ಟಿ ಮುಂದುವರೆದಿದ್ದು, ಶಕುಂತಲಾ ಸ್ನೇಹಿತೆ ಜಾನಕಿ ಬೇಕಂತಲೇ ಮಂದಾಕಿನಿ ಕೊಟ್ಟ ಸರದ ಮೇಲೆ ಕಣ್ಣು ಹಾಕಿದ್ದಾಳೆ. ಅದು ರೋಲ್ಡ್ ಗೋಲ್ಡ್ ಎಂದು ಸಾಧಿಸಿದ್ದಾಳೆ. ಮಂದಾಕಿನಿ ರೋಲ್ಡ್ ಗೋಲ್ಡ್ ಕೊಟ್ಟು, ಮಗಳ ಬಳಿ ವಿಚಾರವನ್ನು ಹೇಳಿ ಕ್ಷಮೆ ಕೇಳಿದ್ದಾಳೆ. ಅಷ್ಟರಲ್ಲಿ ಜಾನಕಿ ಬೇಕಂತಲೇ ಅದರ ಫೋಟೋ ತೆಗೆದುಕೊಂಡು ಮಂದಾಕಿನಿ ಹೇಳಿದ ಜ್ಯುವೆಲರಿ ಶಾಪ್ ನಲ್ಲಿ ಕೇಳಿ, ರೋಲ್ಡ್ ಗೋಲ್ಡ್ ಕೊಟ್ಟಿದ್ದಾರೆ ಎಂದು ಹೇಳುತ್ತಾಳೆ. ಇದರಿಂದ ಮಂದಾಕಿನಿಗೆ ಬಹಳ ಮುಜುಗರವಾಗುತ್ತದೆ. ಅಳಲು ಶುರು ಮಾಡುತ್ತಾಳೆ.

ಜಾನಕಿ ಮಾತಿಗೆ ಮಹಿಮಾ ಪ್ರತ್ಯುತ್ತರ
ಜಾನಕಿ ಮಾತನ್ನು ಕೇಳಿದ ಮಹಿಮಾ ತನ್ನ ಅತ್ತೆಯನ್ನು ವಹಿಸಿಕೊಂಡು ಮಾತನಾಡುತ್ತಾಳೆ. ನಾನೇ ರೋಲ್ಡ್ ಗೋಲ್ಡ್ ತಂದು ಕೊಟ್ಟಿದ್ದು. ನನ್ನ ಅತ್ತೆ ಗಿಫ್ಟ್ ತರೋದಕ್ಕೆ ಹೇಳಿದ್ರು. ನನ್ನ ಅಣ್ಣನಿಗೆ ಅದರ ಮೇಲೆಲ್ಲಾ ಇಂಟರೆಸ್ಟ್ ಇಲ್ಲ. ಅದಕ್ಕೆ ನಾನೇ ರೋಲ್ಡ್ ಗೋಲ್ಡ್ ಚೈನ್ ತಂದು ಕೊಟ್ಟೆ. ಅದಮನ್ನೇ ನಮ್ಮ ಅತ್ತೆ ಹಾಕಿದ್ದು. ನಮಗೆ ಇಲ್ಲದಿರುವ ಸಮಸ್ಯೆ ನಿಮಗ್ಯಾಕೆ ಎಂದು ಪ್ರಶ್ನಿಸುತ್ತಾಳೆ. ಜಾನಕಿ ಬೇಕಂತಲೇ ಚೀಪ್ ಜನ ಎಂದೆಲ್ಲಾ ಮಾತನಾಡುತ್ತಾರೆ. ಆಗ ಮಹಿಮಾಳ ಬಾಯಿ ಮುಚ್ಚಲು ಶಕುಂತಲಾ ಯತ್ನಿಸಿದರೂ ಸಾಧ್ಯವಾವಗುವುದಿಲ್ಲ. ಅಷ್ಟರಲ್ಲಿ ಅಲ್ಲಿಗೆ ಗೌತಮ್ ಬರುತ್ತಾನೆ. ಗೌತಮ್ ಎಲ್ಲರಿಗೂ ಬೈಯುತ್ತಾನೆ. ನನಗೆ ಯಾರೂ ಗಿಫ್ಟ್ ಕೊಡುವ ಅಗತ್ಯವಿಲ್ಲ. ನನಗೆ ಇಲ್ಲದಿರುವ ಸಮಸ್ಯೆ ನಿಮಗ್ಯಾಕೆ. ನೀವು ಪಾರ್ಟಿ ಗೆ ಎಂದು ಬಂದಿದ್ದೀರಾ. ಪಾರ್ಟಿಯನ್ನು ಮುಗಿಸಿಕೊಂಡು ಖುಷಿ ಖುಷಿಯಾಗಿ ಹೋಗಿ ಎಂದು ಹೇಳುತ್ತಾನೆ. ಆಗ ಎಲ್ಲರೂ ಸುಮ್ಮನಾಗುತ್ತಾರೆ.
ಪ್ರೀತಿಗೆ ಮಸಿ ಬಳಿಯಲು ಮುಂದಾದ ಲಕ್ಷ್ಮೀಕಾಂತ
ಮಂದಾಕಿನಿ ಮಜುಗರಗೊಂಡು ಗೌತಮ್ ಬಳಿ ಸಪರೇಟ್ ಆಗಿ ಹೋಗಿ ಕ್ಷಮೆ ಕೇಳುತ್ತಾಳೆ. ಆಗ ಗೌತಮ್ ಅತ್ತೆಗೆ ಸಮಾಧಾನ ಮಾಡಿ, ಅವರೇಕಾಳು ಉಪ್ಪಿಟು ಬೇಕು ಎಂದು ಕೇಳುತ್ತಾನೆ. ಇನ್ನು ಇತ್ತ ಪಾರ್ಥ ಮತ್ತು ಅಪೇಕ್ಷಾ ರೂಮಿನಲ್ಲಿ ಸರಸದಲ್ಲಿ ಮುಳುಗಿ ಹೋಗಿರುತ್ತಾರೆ. ಇಬ್ಬರೂ ತಮ್ಮದೇ ಲೋಕದಲ್ಲಿ ತೇಲಾಡುತ್ತಿರುತ್ತಾರೆ. ಇದನ್ನು ಗಮನಿಸಿದ ಲಕ್ಷ್ಮೀಕಾಂತ ಇದೇ ಸರಿಯಾದ ಸಮಯ ಇಬ್ಬರನ್ನು ಸಿಕ್ಕಿ ಬೀಳುವಂತೆ ಮಾಡಬೇಕು. ಗೌತಮ್ ಗೆ ಇವರಿಬ್ಬರ ಅವತಾರವನ್ನು ತೋರಿಸಬೇಕು ಎಂದು ಆಲೋಚಿಸುತ್ತಾನೆ.

ಸಿಕ್ಕಿ ಬೀಳುತ್ತಾರಾ ಪಾರ್ಥ-ಅಪೇಕ್ಷಾ
ಅದಕ್ಕಾಗಿ ಗೌತಮ್ ಬಳಿ ಹೋಗಿ ರೂಮಿನಲ್ಲಿ ಪಾರ್ಥ ನಿಮ್ಮನ್ನು ಕೇಳುತ್ತಿದ್ದ ಎಂದು ಗೌತಮ್ ಗೆ ಹೇಳುತ್ತಾನೆ. ಗೌತಮ್ ಲಕ್ಷ್ಮೀಕಾಂತನ ಮಾತನ್ನು ನಂಬಿಕೊಂಡು ಮೇಲೆ ಬರುತ್ತಾನೆ. ಅಷ್ಟರಲ್ಲಿ ಪಾರ್ಥ ಮತ್ತು ಅಪೇಕ್ಷಾ ರೊಮ್ಯಾನ್ಸ್ ಮಾಡುತ್ತಿರುವುದನ್ನು ಭೂಮಿಕಾ ನೋಡಿ ಬಿಡುತ್ತಾಳೆ. ಈಗ ಇವರಿಬ್ಬರೂ ಗೌತಮ್ ಎದುರು ಸಿಕ್ಕಿ ಬೀಳುತ್ತಾರಾ ಇಲ್ಲ ಭೂಮಿಕಾ ಕಾಪಾಡುತ್ತಾಳಾ ಎಂಬ ಕುತೂಹಲ ಮೂಡಿದೆ.ಹಾಗೊಂದುವೇಳೆ ಇಬ್ಬರನ್ನು ಗೌತಮ್ ನೋಡಿದರೆ, ಇವರ ಪ್ರೀತಿಗೆ ಅಡ್ಡವಾಗುತ್ತಾನಾ ಇಲ್ಲ ಮುಂದೆ ನಿಂತು ಮದುವೆ ಮಾಡಿಸುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











