twitter
    For Quick Alerts
    ALLOW NOTIFICATIONS  
    For Daily Alerts

    ಜೀ ಕನ್ನಡಕ್ಕೆ ಹೊರಳಿದ ಗೌರಿಬಿದನೂರು ಸೀತಾರಾಂ

    By Rajendra
    |

    TN Seetharam
    ಕನ್ನಡ ಕಿರುತೆರೆ ಮನರಂಜನಾ ವಾಹಿನಿಗಳ ನಡುವೆ ಮಹತ್ತರ ಬದಲಾವಣೆ ಪರ್ವ ಆರಂಭವಾಗಿದೆ. ಇದೊಂದು ತರಹ ಆರೋಗ್ಯಕರವಾದ ಬೆಳವಣಿಗೆ ಆಗಿದ್ದು, ವಿಭಿನ್ನ, ವಿಶಿಷ್ಟ, ವೈವಿಧ್ಯಭರಿತ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ನೀಡಬೇಕೆಂಬ ತುಡಿತ ಶುರುವಾಗಿದೆ.

    ಇಷ್ಟು ದಿನ ಜೀ ಕನ್ನಡ ವಾಹಿನಿಯ ಕ್ರಿಯಾಶೀಲ ತಂಡದಲ್ಲಿದ್ದ ಪ್ರತಿಭಾವಂತರ ತಂಡ ಈಟಿವಿ ಕನ್ನಡ ಬಳಗ ಸೇರಿದ್ದಾಯಿತು. ಈಗ ಜೀ ಕನ್ನಡ ವಾಹಿನಿಯಲ್ಲೂ ಇದೇ ರೀತಿಯ ಬದಲಾವಣೆಯ ಪರ್ವ ಶುರುವಾಗಿದೆ.

    ಈಟಿವಿ ಕನ್ನಡ ವಾಹಿನಿಯಲ್ಲಿ ಹೊಸ ಮೈನವಿರೇಳಿಸುವ ರಿಯಾಲಿಟಿ ಶೋಗಳಿಗೆ ಹಾಗೂ ಮನೆಮಂದಿಯನ್ನು ಸೆಳೆಯುವಂತಹ ದೈನಿಕ ಧಾರಾವಾಹಿಗಳಿಗೆ ವೇದಿಕೆ ಸಿದ್ಧವಾಗುತ್ತಿದೆ. ಅತ್ತ ಜೀ ಕನ್ನಡ ವಾಹಿನಿಯಲ್ಲೂ ಹೊಸ ಹೊಸ ಕಾರ್ಯಕ್ರಮಗಳಿಗೆ ಶ್ರೀಕಾರ ಹಾಕಲಾಗಿದೆ.

    ಇಷ್ಟು ದಿನಗಳ ಕಾಲ ಮುಕ್ತ, ಮುಕ್ತಮುಕ್ತ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ಟಿ.ಎನ್. ಸೀತಾರಾಂ (ಗೌರಿಬಿದನೂರು ಸೀತಾರಾಂ) ಜೀ ಕನ್ನಡ ವಾಹಿನಿಗೆ ಹೊರಳಿದ್ದಾರೆ. ಇನ್ನು ಮುಂದೆ ಅವರ ಹೊಸ ಧಾರಾವಾಹಿಗಳಿಗೆ ಜೀ ಕನ್ನಡ ವಾಹಿನಿ ವೇದಿಕೆಯಾಗಲಿದೆ.

    ಇದಿಷ್ಟೇ ಅಲ್ಲದೆ ತಮ್ಮದೇ ಶೈಲಿಯ ಧಾರಾವಾಹಿಗಳಿಗೆ ಹೆಸರಾಗಿದ್ದ ಎಸ್.ಎನ್. ಸೇತುರಾಂ ಅವರೂ ಜೀ ಕನ್ನಡದ ಸೀರಿಯಲ್ ಗಳನ್ನು ನಿರ್ದೇಶಿಸುವ ಸಾಧ್ಯತೆಗಳಿವೆ ಎನ್ನುತ್ತವೆ ಜೀ ಕನ್ನಡ ವಾಹಿನಿ ಮೂಲಗಳು. ಮಂಥನ' ದ ಮೂಲಕ ಕಿರುತೆರೆಯ ಧಾರಾವಾಹಿ ಲೋಕದಲ್ಲಿ ಒಂದು ಹೊಸ ಟ್ರೆಂಡ್ ಹುಟ್ಟುಹಾಕಿದವರು ಸೇತುರಾಂ.

    ಅವರ ಹರಿತವಾದ ಸಂಭಾಷಣೆಗೆ ಬೆರಗಾಗದವರಿರಲಿಲ್ಲ; ಪಾತ್ರಚಿತ್ರಣ, ನಿರೂಪಣೆಯಲ್ಲಿಯೂ ಆಗಲೇ ಪ್ರಸಾರವಾಗುತ್ತಿದ್ದ ಧಾರಾವಾಹಿಗಳಿಗಿಂತ ಭಿನ್ನವಾಗಿದ್ದು, ತನ್ನದೇ ಆದ ಒಂದು ದೊಡ್ಡ ವೀಕ್ಷಕ ವರ್ಗವನ್ನೇ ಸೃಷ್ಟಿಸಿಕೊಂಡಿದ್ದ ಧಾರಾವಾಹಿ ಮಂಥನ. ಈಗವರ ಚಿಂತನೆ ಜೀ ಕನ್ನಡದ ಕಡೆ ಹೊರಳಿದೆ.

    ಗೌರಿಬಿದನೂರು ಸೀತಾರಾಂ ಅವರು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಈಟಿವಿ ಕನ್ನಡ ವಾಹಿನಿಯಲ್ಲಿ ಗುರುತಿಸಿಕೊಂಡವರು. ಅವರ ಬಹುತೇಕ ಸೀರಿಯಲ್ ಗಳು ಈಟಿವಿಯಲ್ಲಿ ಪ್ರಸಾರವಾಗಿವೆ. ಮಾಯಾಮೃಗ (ಚಂದನ ವಾಹಿನಿಯಲ್ಲಿ ಪ್ರಸಾರವಾದ ಧಾರಾವಾಹಿ), ಮನ್ವಂತರ, ಮಿಂಚು, ಮಳೆಬಿಲ್ಲು ಧಾರಾವಾಹಿಗಳನ್ನು ಪ್ರಮುಖವಾಗಿ ಹೆಸರಿಸಬಹುದು. (ಒನ್ಇಂಡಿಯಾ ಕನ್ನಡ)

    English summary
    After more than a decade association with Etv Kannada now T N Seetharam (Gouribidanur Seetharam), a prominent Kannada film and TV serial director, actor and writer moves to Zee Kannada. Due to Mr. Seetharam's association with ETV, all his serials are telecast on ETV Kannada.
    Friday, December 14, 2012, 15:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X