Geetha serial: ಟೊಮ್ಯಾಟೊ ಎಗರಿಸಿದ ಗೀತಾ ಸೀರಿಯಲ್ ನಟಿ; ಜಾಸ್ತಿಯಾಯಿತು ಎಂದು ಹೀಗಾ ಮಾಡೋದು?

By Poorva

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಗಳಲ್ಲಿ ಗೀತಾ ಧಾರವಾಹಿ ಕೂಡಾ ತನ್ನದೇ ಆದ ಕುತೂಹಲವನ್ನು ಹುಟ್ಟು ಹಾಕಿ ಅಭಿಮಾನಿಗಳಿಗೆ ರಸದೂಟ ನೀಡುತ್ತಿದೆ. ಗೀತಾ ಧಾರಾವಾಹಿಯಲ್ಲಿ ಖಡಕ್ ವಿಲನ್ ರೋಲ್ ನಲ್ಲಿ ಮಿಂಚಿದವರು ಬೇರೆ ಯಾರೂ ಅಲ್ಲ ಅವರೇ ಭಾನುಮತಿ. ಭಾನುಮತಿ ಎಂದರೆ ಮೂಗು ಮುರಿಯುವವರೇ ಹೆಚ್ಚು .

ಆದರೆ ಆಕೆ ಸೀರಿಯಲ್ ನಲ್ಲಿ ತನ್ನ ಪಾತ್ರಕ್ಕೆ ತಕ್ಕ ಹಾಗೆ ನಡೆದುಕೊಳ್ಳುತ್ತಾರೆ. ಇದು ಅವರ ಅಭಿಮಾನಿಗಳಿಗೆ ಅಷ್ಟಾಗಿ ಇಷ್ಟ ಆಗುವುಎಇಲ್ಲ. ಇನರನು ಭಾನುಮತಿ ನಿಜವಾದ ಹೆಸರು ಶರ್ಮಿತ ಗೌಡ. ಶರ್ಮಿತ ಗೌಡ ಧಾರಾವಾಹಿಯಲ್ಲಿ ಮಾತ್ರ ಖಡಕ್ ವಿಲನ್, ಆದರೆ ನಿಜ ಜೀವನದಲ್ಲಿ ಮಾತ್ರ ಸಖತ್ ಸ್ವೀಟ್.

Tomato stolen by Geetha serial actress in her latest reel

ಹೌದು ಭಾನುಮತಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ. ಈ ನಟಿಯ ನಟನೆಗೆ ಮಾರು ಹೋಗದೆ ಇರುವವರೇ ಇಲ್ಲ. ಅಷ್ಟರ ಮಟ್ಟಿಗೆ ನೋಡುಗರಿಗೆ ಮೋಡಿ ಮಾಡುತ್ತಾ ಇರುತ್ತಾರೆ. ಇನ್ನೂ ಶರ್ಮೀತ ಗೌಡಗೆ ನಿಜ ಜೀವನದಲ್ಲಿ ಬಹಳಷ್ಟು ಜನ ಫಾಲೋವರ್ಸ್ ಇದ್ದಾರೆ. ಆಗಾಗ ರೀಲ್ಸ್ ಮಾಡಿ ಜನರಿಗೆ ಇನ್ನಷ್ಟು ಮನರಂಜನೆಯನ್ನು ನೀಡುತ್ತಾ ಇರುತ್ತಾರೆ.

ಇದೀಗ ಟೊಮ್ಯಾಟೊ ಹೆಣ್ಣಿಗೆ ಬಹಳ ಬೇಡಿಕೆ. 135...120 ರೆಂಜಲ್ಲಿ ಟೊಮೆಟೊ ಹಣ್ಣಿಗೆ ರೇಟ್ ಹೆಚ್ಚಾಗಿದೆ. ಟೊಮೆಟೊ ಅಡುಗೆ ಮಾಡುವಾಗ ದಿನ ನಿತ್ಯ ಬಳಸುವ ಹಣ್ಣು . ಈ ಹಣ್ಣನ್ನು ಅಂಗಡಿಯಿಂದ ತೆಗೆದುಕೊಳ್ಳಲು ಜನ ಸಾಮಾನ್ಯರು ಹಿಂದೆ ಮುಂದೆ ನೋಡುತ್ತಿದ್ದಾರೆ. ಇದೀಗ ಟೊಮೆಟೊ ಕದಿಯಲು ಮುಂದಾಗಿದ್ದಾರೆ ಶರ್ಮೀತ ಗೌಡ.

ಶರ್ಮಿತಗೌಡ ಆಗಾಗ ಹೊಸ ಹೊಸ ರೀಲ್ ಮಾಡಿ ಸುದ್ದಿಯಲ್ಲಿ ಇರುತ್ತಾರೆ. ಹಾಗೆಯೇ ಇದೀಗ ಟೊಮೆಟೊ ಹಣ್ಣನ್ನು ಕದಿಯುವ ರೀಲ್ ಮಾಡಿದ್ದಾರೆ. ಟೊಮೆಟೊ ಹಣ್ಣನ್ನು ಕದಿಯುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಹಾಗೆಯೇ ಅದನ್ನು ಬೆಳೆಯುವ ಬೆಳೆಗಾರರು ಸಿಸಿ ಕ್ಯಾಮರಾವನ್ನು ಇಟ್ಟು ಕಾಯುವಂತಹ ಪರಿಸ್ಥಿತಿ ಬಂದು ಒದಗಿದೆ. ಇನ್ನು ಭಾನುಮತಿ ಅವರಿಗೆ ಗಿರಿ ಶಂಕರ್ ಸಾಥ್ ನೀಡಿದ್ದು ರೀಲ್ಸ್ ಮಾತ್ರ ಸಖತ್ ಆಗಿ ಮೂಡಿ ಬಂದಿದೆ.

ಗಿರೀಶ್ ಶಂಕರ್ ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಟೊಮೆಟೊ ಕಾವಲಯ್ಯ ಎಂದು ಬರೆದುಕೊಂಡಿದ್ದಾರೆ. ನಟ ಗಿರೀಶ್ ಶಂಕರ್ ತನ್ನ ಕೈಯಲ್ಲಿ ಎರಡು ಟೊಮ್ಯಾಟೋ ಹಿಡಿದಿದ್ದಾರೆ. ಹಿನ್ನೆಲೆಯಲ್ಲಿ ಕಾವಾಲಯ್ಯ ಹಾಡು ಪ್ಲೇ ಆಗುತ್ತಿದೆ. ಆಗ ಶರ್ಮಿತಾ ಅದಕ್ಕೆ ಸ್ಟೆಪ್​ ಹಾಕುತ್ತಲೇ ಟೊಮ್ಯಾಟೋ ಎಗರಿಸಿದ್ದು, ಇದರ ವಿಡಿಯೋ ಸಕತ್​ ವೈರಲ್​ ಆಗುತ್ತಿದೆ.

ಈ ವಿಡಿಯೋವನ್ನು ನೋಡಿದ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ದಾರೆ. ಹಾಗೆಯೇ ಲೈಕ್ಸ್ ಹಾಗೆಯೇ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಶರ್ಮಿತ ಗೌಡ ಸೀರಿಯಲ್ ನಲ್ಲಿ ಎಷ್ಟೇ ಖಡಕ್ ರೋಲ್ ಮಾಡಿದರೂ ನಿಜ ಜೀವನದಲ್ಲಿ ಮಾತ್ರ ಸಖತ್ ಸ್ವೀಟ್ ಆಗಿದ್ದಾರೆ. ಇವರ ಡಾನ್ಸ್ ನೋಡಿ ಅಭಿಮಾನಿಗಳು ಮಾತ್ರ ಫಿದಾ ಆಗಿದ್ದಾರೆ.

More from Filmibeat

English summary
Tomato stolen by Geetha aerial actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X