ಸರಿಗಮಪ ಲಿಟಲ್ ಚಾಂಪ್ಸ್ ಗೆ ಆಯ್ಕೆಯಾದ 19 ಸ್ಪರ್ಧಿಗಳ ಹೆಸರು ಬಹಿರಂಗ
Recommended Video

ಸಂಗೀತ ಸಾಧಕರಿಗೆ ವೇದಿಕೆಯಾಗಿ, ಸಂಗೀತ ಕಲಿಯುವವರಿಗೆ ಸ್ಫೂರ್ತಿಯಾಗಿರುವ ಕನ್ನಡಿಗರ ಪ್ರೀತಿಯ ನೆಚ್ಚಿನ ಸಂಗೀತ ಕಾರ್ಯಕ್ರಮ ಸರಿಗಮಪ, ರಿಯಾಲಿಟಿ ಶೋಗಳ ಇತಿಹಾಸದಲ್ಲಿ ತನ್ನದೇ ಛಾಪು ಮೂಡಿಸಿದೆ. ಸರಿಗಮಪ ಸೀಸನ್ 15 ಮುಗಿದು ಒಂದೇ ವಾರಕ್ಕೆ ಸೀಸನ್ 16ಕ್ಕೆ ಚಾಲನೆ ಸಿಕ್ಕಿತ್ತು. ಮೊದಲ ವಾರ ಮೆಗಾ ಆಡಿಷನ್ ಮಾಡಿದ ತೀರ್ಪುಗಾರರು ಈಗ 19 ಜನ ಸ್ಪರ್ಧಿಗಳನ್ನ ಅಂತಿಮ ಮಾಡಿದ್ದಾರೆ.
ಸರಿಗಮಪ ಲಿಟಲ್ ಚಾಂಪ್ಸ್ ತಂತ್ರಜ್ಞರು ಮೂರು ತಂಡಗಳಾಗಿ ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಬರೋಬ್ಬರಿ ಮೂವತ್ತು ಜಿಲ್ಲೆಗಳಲ್ಲಿ ಹಾಡಲು ಬಯಸುವ ಎಲ್ಲಾ ಮಕ್ಕಳ ಧ್ವನಿ ಕೇಳಿ, ಅಳೆದು ತೂಗಿ ಮೂವತ್ತು ಪುಟ್ಟ ಪುಟ್ಟರತ್ನಗಳನ್ನ ಸರಿಗಮಪ ಸೀಸನ್16ರ ಸಂಗೀತ ವೇದಿಕೆಗೆ ತಂದಿದ್ದರು.
ಎರಡು ವಾರಗಳ ಕಾಲ ನಡೆದ ಮೆಗಾ ಆಡಿಶನ್ ನಲ್ಲಿ ಒಬ್ಬರಿಗಿಂತ ಒಬ್ಬರು ಸೊಗಸಾಗಿ ಹಾಡಿ ಜಡ್ಜಸ್ ಗಳ ಮನಗೆದ್ದು ಹಿಂದೆಂದೂ ನೀಡದ ವಿಶೇಷ ಹಾಗೂ ಮಹತ್ತರ ತೀರ್ಪೊಂದನ್ನು ಈ ಬಾರಿಯ ಸೀಸನ್ ನಲ್ಲಿ ನೀಡುವ ಹಾಗೆ ಮಾಡಿದ್ದಾರೆ.

ಮೆಗಾ ಆಡಿಶನ್ ನಲ್ಲಿ ಪ್ರದರ್ಶನ ನೀಡಿದ 30 ಸ್ಪರ್ದಿಗಳಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ 19 ಪ್ರತಿಭೆಗಳು ಸ್ಪರ್ಧೆಯಲ್ಲಿ ಹಾಡುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಮುಂದೆ ತಮ್ಮ ವಿಶಿಷ್ಟ ಗಾಯನದ ಮೂಲಕ ನಿಮ್ಮನ್ನು ಮನರಂಜಿಸಲು ಬರುತ್ತಿರುವ 19 ಜನ ಪುಟಾಣಿ ಗಾಯಕರ ಹೆಸರುಗಳು ಹೀಗಿದೆ...
1. ಸಾಕ್ಷಿ
2. ಮೋನಮ್ಮ
3. ಶುಭದ
4. ಓಂಕಾರ್
5. ಕೀರ್ತಿ
6. ಮೀರಾ
7. ಜೋಷಿತ
8. ರುಬೀನಾ
9. ಪರ್ನಿಕ
10. ಭಾರ್ಗವ್
11. ರೋಹನ್
12. ಸಂಗೀತ
13. ಅಪ್ರಮೇಯ
14. ಗುರುಕಿರಣ್
15. ಜ್ಞಾನ
16. ನಯನ
17. ಸುನದ್
18. ಶ್ರೇಯಸ್
19. ಅಭಿಶ್ಯತ್
ಇನ್ನು ಹದಿನಾರನೇ ಸೀಸನ್ಗೆ ಹಾಡಲು ಬರುವ ಪುಟಾಣಿಗಳ ಸಂಗೀತ ಸಾಧನೆಗೆ ಮಾರ್ಗದರ್ಶನ ನೀಡಲು ಮಹಾಗುರುಗಳಾದ ನಾದಬ್ರಹ್ಮ ಹಂಸಲೇಖರವರ ಜೊತೆಗೆ ಪ್ರಖ್ಯಾತ ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಜೊತೆ ಇರ್ತಾರೆ.
ಇನ್ನು ಕನ್ನಡದ ರಾಕಿಂಗ್ ನಿರೂಪಕಿ ಅನುಶ್ರೀಯವರ ಸಾರಥ್ಯದಲ್ಲಿ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16 ಇದೇ ಮಾರ್ಚ್ 2 ರ ಶನಿವಾರದಿಂದ ರಾತ್ರಿ 8 ಗಂಟೆಗೆ ನಿಮ್ಮ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದು 19 ಪುಟಾಣಿ ಪ್ರತಿಭೆಗಳು ಅಖಾಡಕ್ಕೆ ಇಳಿದು ಪ್ರದರ್ಶಿಸಲಿದ್ದಾರೆ.


Click it and Unblock the Notifications











