ಕಿರುತೆರೆಯಲ್ಲಿ ಸದ್ದು ಮಾಡುತ್ತಿರುವ ಟಾಪ್‌ ಧಾರಾವಾಹಿಗಳ ಲಿಸ್ಟ್ ಇವೇನೆ? ಇವುಗಳಲ್ಲಿ ನಿಮಗೆ ಯಾವುದಿಷ್ಟ?

By ಅನಿತಾ ಬನಾರಿ

ಕನ್ನಡ ಕಿರುತೆರೆಯಲ್ಲಿ ಉತ್ತಮ ಮನೋರಂಜನೆಯನ್ನು ನೀಡುತ್ತಿರುವ ಧಾರಾವಾಹಿಗಳೇನೂ ಕಡಿಮೆಯಿಲ್ಲ. ಸಾಕಷ್ಟು ಧಾರಾವಾಹಿಗಳು ಪ್ರೇಕ್ಷಕರಿಂದ ಪ್ರಶಂಸೆಯನ್ನು ಪಡೆದುಕೊಂಡು ಸುಂದರವಾಗಿ ಮೂಡಿ ಬರುತ್ತಿವೆ. ಎಲ್ಲಾ ಧಾರಾವಾಹಿಗಳನ್ನು ಒಂದೇ ಸಾಲಿನಲ್ಲಿ ನೋಡುವಾಗ ವಾರದಲ್ಲಿ ಯಾವುದಾದರೂ ಒಂದು ಸೀರಿಯಲ್ ಟಿ ಆರ್ ಪಿ ಯಲ್ಲಿ ಮುಂದಿರುತ್ತದೆ. ಉಳಿದವುಗಳು ಆ ವಾರದ ಕಥಾ ಹಂದರಕ್ಕೆ ಅನುಗುಣವಾಗಿ ನಂತರದ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಹಾಗಾದರೆ ಈ ವಾರದ ಟಿಆರ್‌ಪಿಯಲ್ಲಿ ನಂ 1 ಸ್ಥಾನ ಪಡೆದ ಸೀರಿಯಲ್ ಯಾವುದು?

ಹೌದು, ಈ ವಾರದ ಕನ್ನಡ ಧಾರಾವಾಹಿಗಳ ಟಿಆರ್‌ಪಿ ಈಗಾಗಲೇ ರಿಲೀಸ್ ಆಗಿದೆ. ಸೀರಿಯಲ್‌ಗಳ ಟಿಆರ್‌ಪಿ ನೋಡಿದರೆ ಸಿಕ್ಕಾಪಟ್ಟೆ ಪೈಪೋಟಿ ಇರೋದಂತೂ ಎದ್ದು ಕಾಣುತ್ತದೆ. ಆದರೆ ಇಲ್ಲೊಂದು ವಿಶೇಷತೆ ಏನೆಂದರೆ ಇಷ್ಟು ದಿನ ಸ್ಪರ್ಧೆಯಲ್ಲೇ ಇರದ ಧಾರಾವಾಹಿಯೊಂದು ಈ ವಾರ ಉಳಿದೆಲ್ಲವುಗಳನ್ನು ಬೀಟ್ ಮಾಡಿ ಟಾಪ್ ಅಲ್ಲಿ ಬಂದು ಕೂತಿದೆ.

Top Kannada serials Shravani Subramanya Lakshmi Nivasa Annayya Amruthadhaare

ಇಷ್ಟು ವಾರ ಟಾಪ್‌ ಐದು ಧಾರಾವಾಹಿಗಳಿಂದ ಹೊರಗಡೆ ಇದ್ದ ಧಾರಾವಾಹಿಯೊಂದು ನಂ 1 ಆಗಿದೆ ಎಂದರೆ ನೀವು ನಂಬಲೇಬೇಕು. ಇದರೊಂದಿಗೆ ಒಂದು ಧಾರಾವಾಹಿಯಿಂದ ಇನ್ನೊಂದು ಧಾರಾವಾಹಿಗೆ ಟಿಆರ್‌ಪಿಯಲ್ಲಿ ಬಹಳಷ್ಟು ವ್ಯತ್ಯಾಸವೇನು ಇಲ್ಲ. ಹಾಗಾದರೆ ಯಾವ ಧಾರಾವಾಹಿಗೆ ಎಷ್ಟು ಟಿಆರ್‌ಪಿ ಸಿಕ್ಕಿದೆ? ಯಾವ ಧಾರಾವಾಹಿ ಯಾವ ಸ್ಥಾನದಲ್ಲಿದೆ ನೋಡೋಣ ಬನ್ನಿ.

ಶ್ರಾವಣಿ ಸುಬ್ರಹ್ಮಣ್ಯ

ಈ ವಾರ ಸೀರಿಯಲ್ ಸಾಲಿನಲ್ಲಿ ಭರ್ಜರಿ ಟಿ ಆರ್ ಪಿಯೊಂದಿಗೆ ಪ್ರಥಮ ಸ್ಥಾನದಲ್ಲಿರುವುದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ. ಬರೋಬ್ಬರಿ 9.52 ಟಿಆರ್‌ಪಿಯನ್ನು ಪಡೆದುಕೊಂಡಿದ್ದು ಧಾರಾವಾಹಿ ತಂಡಕ್ಕೆ ಸಂತಸವನ್ನುಂಟು ಮಾಡಿದೆ.

ಇದಕ್ಕೆ ಮುಖ್ಯ ಕಾರಣ ಸುಬ್ಬು ಹಾಗೂ ಶ್ರಾವಣಿಯದ ಮದುವೆ. ಕಳೆದ ಕೆಲ ದಿನಗಳಿಂದ ಇದರಲ್ಲಿ ಮದುವೆ ಸೀನ್ ಗಳು ನಡೆಯುತ್ತಿವೆ. ಇಂತಹ ಎಪಿಸೋಡ್ ಗಳಿಂದಲೇ ಈ ಸೀರಿಯಲ್‌ ಟಿ ಆರ್‌ ಪಿ ಯೂ ಹೆಚ್ಚಾಗಿದೆ. ಆಸಿಯಾ ಫಿರ್ದೋಸ್‌ ಹಾಗೂ ಅಮೋಘ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

Top Kannada serials Shravani Subramanya Lakshmi Nivasa Annayya Amruthadhaare

ಲಕ್ಷ್ಮೀ ನಿವಾಸ

8.3 ಟಿಆರ್‌ಪಿಯನ್ನು ಪಡೆಯುವುದರೊಂದಿಗೆ 'ಲಕ್ಷ್ಮಿ ನಿವಾಸ' ಧಾರಾವಾಹಿ ಎರಡನೇ ಸ್ಥಾನದಲ್ಲಿದೆ. ಕೆಲ ವಾರಗಳಿಂದ ಈ ಸೀರಿಯಲ್‌ ಉತ್ತಮ ಕಥಾ ಹಂದರದೊಂದಿಗೆ ಟಿಆರ್‌ಪಿಯಲ್ಲಿ ಟಾಪ್‌ ಸ್ಥಾನಗಳಲ್ಲಿಯೇ ಗುರುತಿಸಿಕೊಳ್ಳುತ್ತಿದೆ. ಈ ಧಾರಾವಾಹಿಯಲ್ಲಿ ದೊಡ್ಡ ತಾರಾಬಳಗವೇ ಇದೆ. ಅಲ್ಲದೆ ಈ ಸೀರಿಯಲ್‌ ವಾರದಲ್ಲಿ ಐದು ದಿನಗಳ ಕಾಲ, ನಿತ್ಯವೂ ಒಂದು ಗಂಟೆಗಳ ಕಾಲ ಪ್ರಸಾರ ಆಗಲಿದೆ ಎನ್ನುವುದು ಈ ಧಾರಾವಾಹಿ ಪ್ರೇಕ್ಷಕರಿಗೆ ಸಂತೋಷದ ವಿಷಯ.

ಅಣ್ಣಯ್ಯ

'ಅಣ್ಣಯ್ಯ' ಧಾರಾವಾಹಿಗೆ 8.21 ಟಿಆರ್‌ಪಿ ಸಿಕ್ಕಿದೆ. ಈ ಧಾರಾವಾಹಿಯು ರೋಚಕವಾದ ಎಪಿಸೋಡ್‌ಗಳಿಂದ ಕೂಡಿದ್ದು ವೀಕ್ಷಕರು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಗೆ ಕಟ್ಟುಬಿದ್ದು ಮದುವೆಯಾಗುವ ಶಿವು ಹಾಗೂ ಪಾರು ಜೋಡಿಯ ಮುಂದಿನ ಕಥೆಯ ಬಗ್ಗೆ ಪ್ರೇಕ್ಷಕರಿಗೆ ಕುತೂಹಲವಿದೆ. ಮದುವೆ ಆಗುತ್ತಾರೆ. ಜೊತೆಗೆ ತನ್ನ ದುಷ್ಟ ತಂದೆಯ ವಿರುದ್ಧ ಪಾರು ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತಾಳೆ ಎಂದು ನೋಡಬೇಕಿದೆ. ನಿಶಾ ರವಿಕೃಷ್ಣನ್‌, ವಿಕಾಶ್‌ ಉತ್ತಯ್ಯ ಅವರು ಈ ಧಾರಾವಾಹಿಯ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಅಮೃತಧಾರೆ

'ಅಮೃತಧಾರೆ' ಧಾರಾವಾಹಿಗೆ ಒಟ್ಟು 8 ಟಿಆರ್‌ಪಿ ದೊರಕಿದೆ. ಹಿಂದಿನ ಕೆಲ ವಾರಗಳಲ್ಲಿ ಈ ಧಾರಾವಾಹಿ ನಂಬರ್ ವನ್ ಸ್ಥಾನದಲ್ಲಿತ್ತು. ಆದರೆ ಈ ವಾರದ ಟಿ ಆರ್ ಪಿ ಯನ್ನು ಗಮನಿಸುವುದಾದರೆ ಹಿಂದಿಗಿಂತ ಕಡಿಮೆ ವೀಕ್ಷಣೆಯಾಗಿದೆ. ವಯಸ್ಸಾದ ನಂತರ ಮದುವೆಯಾಗುವ ಭೂಮಿಕಾ ಹಾಗೂ ಗೌತಮ್ ಜೋಡಿಯ ಸುತ್ತ ಧಾರಾವಾಹಿಯ ಕಥೆ ಇದೆ. ರಾಜೇಶ್‌ ನಟರಂಗ, ಛಾಯಾ ಸಿಂಗ್‌, ವನಿತಾ ವಾಸು, ಚಿತ್ಕಳಾ ಬಿರ್ದಾರ್‌, ಕೃಷ್ಣಮೂರ್ತಿ ಕವತ್ತಾರ್‌ ಸೇರಿದಂತೆ ಪ್ರತಿಭಾವಂತ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಇವುಗಳೊಂದಿಗೆ 'ನಾ ನಿನ್ನ ಬಿಡಲಾರೆ' ಧಾರಾವಾಹಿ ಪ್ರಸಾರವಾದ ಮೊದಲ ವಾರಕ್ಕೇ 7.8 ಟಿಆರ್‌ಪಿಯನ್ನು ಪಡೆದುಕೊಂಡು ಉತ್ತಮ ಆರಂಭವನ್ನು ನೀಡಿದೆ. ಉಳಿದಂತೆ ರಿತ್ವಿಕ್‌ ಮಾತಾಡ್‌ ನಟನೆಯ 'ನಿನಗಾಗಿ' ಧಾರಾವಾಹಿಗೆ 5.3 ಟಿಆರ್‌ಪಿ, 'ಲಕ್ಷ್ಮೀ ಬಾರಮ್ಮ' ಧಾರಾವಾಹಿಗೆ 5.2 ಹಾಗೂ 'ಭಾಗ್ಯಲಕ್ಷ್ಮೀ' ಧಾರಾವಾಹಿಗೆ 5.1 ಟಿಆರ್‌ಪಿ ಸಿಕ್ಕಿದೆ. ಈ ಹಿಂದೆ ಹೆಚ್ಟಿನ ಟಿಆರ್‌ಪಿ ಪಡೆದಿದ್ದ ಈ ಧಾರಾವಾಹಿಗಳು ಈ ವಾರ ಕಡಿಮೆ ಟಿಆರ್‌ಪಿ ಪಡೆದಿದೆ. ಕಥೆ ಬದಲಾದಂತೆ ಮುಂದಿನ ದಿನಗಳಲ್ಲಿ ಟಿ ಆರ್ ಪಿ ಸ್ಥಾನವೂ ಬದಲಾಗುವುದಂತೂ ಸತ್ಯ.

More from Filmibeat

English summary
Top Kannada serials Shravani Subramanya, Lakshmi Nivasa, Annayya, Amruthadhaare
Read more about: serials filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X