ಬಿಗ್ ಬಾಸ್ ಮನೆಗೆ ಮಂಗಳಮುಖಿ ಪ್ರವೇಶ: ಎಂಟ್ರಿಯಲ್ಲೇ ಸ್ಪರ್ಧಿಗಳಿಗೆ ಗುನ್ನಾ.!

ಬಿಗ್ ಬಾಸ್ ಆರನೇ ಆವೃತ್ತಿಯಲ್ಲಿ ಮಂಗಳಮುಖಿ ಆಡಂ ಪಾಶಾ ಎಂಟ್ರಿ ಎಲ್ಲರಿಗೂ ಸರ್ಪ್ರೈಸ್ ಆಗಿತ್ತು. ಮಂಗಳಮುಖಿಯೊಬ್ಬರು ಬಿಗ್ ಮನೆ ಪ್ರವೇಶ ಮಾಡ್ತಾರೆ ಎಂಬುದನ್ನ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಇಂತಹ ಪ್ರಯತ್ನಕ್ಕೆ ಬಿಗ್ ಬಾಸ್ ಕನ್ನಡ ಸಾಕ್ಷಿಯಾಗಿತ್ತು.

ಇದೀಗ, ಕನ್ನಡ ಬಿಗ್ ಬಾಸ್ ನಂತೆ ತೆಲುಗು ಬಿಗ್ ಬಾಸ್ ಕೂಡ ಸವಾಲಿನ ನಿರ್ಧಾರ ತೆಗೆದುಕೊಂಡಿದೆ. ಮೂರನೇ ಆವೃತ್ತಿಯ ಮೊದಲ ವಾರ ಮುಗಿಯುತ್ತಿದ್ದಂತೆ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಮಂಗಳಮುಖಿ ತಮನ್ನಾ ಸಿಂಹಾದ್ರಿ ಎಂಬುವರನ್ನ ಮನೆಯೊಳಗೆ ಕಳುಹಿಸಿದ್ದಾರೆ.

ಬಿಗ್ ಬಾಸ್ ಮನೆಗೆ ಎಂಟ್ರಿಯಾದ ಆರಂಭದಲ್ಲೇ ಇತರೆ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ ತಮನ್ನಾ. 'ಖೇಲ್ ಅಭಿ ಬಾಕಿ ಹೈ' ಎನ್ನುವ ಮೂಲಕ ವಾರ್ನ್ ಮಾಡಿದ್ದಾರೆ. ಅಂದ್ಹಾಗೆ, ತಮನ್ನಾ ಸಿಂಹಾದ್ರಿಯ ಬಗ್ಗೆ ತಿಳಿದುಕೊಂಡರೆ ಅವರ ಹಿನ್ನಲೆ ನಿಜಕ್ಕೂ ಖುಷಿ ಕೊಡುತ್ತೆ. ಹಾಗಿದ್ರೆ, ಅವರ ಹಿನ್ನಲೆ ಏನು? ಮುಂದೆ ಓದಿ....

ಮಾಡೆಲ್, ರಾಜಕಾರಣಿ, ಹೋರಾಟಗಾರ್ತಿ

ಮಾಡೆಲ್, ರಾಜಕಾರಣಿ, ಹೋರಾಟಗಾರ್ತಿ

ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಪದವಿ ಪಡೆದಿರುವ ತಮನ್ನಾ ಸಿಂಹಾದ್ರಿ ಮಾಡೆಲ್ ಮತ್ತು ಹೋರಾಟಗಾರ್ತಿ. 2010ರಲ್ಲಿ ಮಿಸ್ ಟ್ರಾನ್ಸ್ ಜೆಂಡರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಇವರಿಗೆ 34 ವರ್ಷ ವಯಸ್ಸು. ಮಂಗಳಮುಖಿಯರ ಕಲ್ಯಾಣಕ್ಕಾಗಿ ಖಾಸಗಿಯಾಗಿ ಸಂಸ್ಥೆಯೊಂದನ್ನ ನಡೆಸುತ್ತಿದ್ದಾರೆ.

ಆಂಧ್ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತಮನ್ನಾ

ಆಂಧ್ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತಮನ್ನಾ

ಆಂಧ್ರದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಂಗಳಮುಖಿ ತಮನ್ನಾ ಸ್ಪರ್ಧೆ ಮಾಡಿದ್ದರು. ಮಂಗಳಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ವೈಎಸ್ಆರ್ ಕಾಂಗ್ರೆಸ್ ಮತ್ತು ಟಿಡಿಪಿ ಪಕ್ಷದ ವಿರುದ್ಧ 41 ಮತ ಪಡೆದು ಸೋಲು ಕಂಡಿದ್ದರು.

ದೇವರು ಕನ್ ಫ್ಯೂಸ್ ಆಗಿದ್ದಕ್ಕೆ ನಾನು ಹುಟ್ಟಿದೆ

ದೇವರು ಕನ್ ಫ್ಯೂಸ್ ಆಗಿದ್ದಕ್ಕೆ ನಾನು ಹುಟ್ಟಿದೆ

''ನನ್ನ ಮೂಲ ಹೆಸರು ಸಿಂಹಾದ್ರಿ ಮಸ್ತಾನ್. ಮನೆತನದ ಹೆಸರು ಸಿಂಹಾದ್ರಿ. ತಂದೆ-ತಾಯಿ ಇಟ್ಟಿದ ಹೆಸರು ಮಸ್ತಾನ್. ಹಿಂದೂ ಕುಟುಂಬದಲ್ಲಿ ಜನಿಸಿದ ಸಿಂಹಾದ್ರಿ ಅವರ ತಂದೆಗೆ ಗಂಡು ಮಗು ಆಗಬೇಕು ಎಂಬ ಆಸೆ, ತಾಯಿಗೆ ಹೆಣ್ಣು ಮಗು ಬೇಕು ಎಂಬ ಆಸೆ. ಆದ್ರೆ, ದೇವರ ಕನ್ ಫ್ಯೂಸ್ ಆಗಿ ನಾನು ಹುಟ್ಟಿದ'' ಎಂದು ಹೇಳಿಕೊಂಡಿದ್ದಾರೆ.

ಹೀರೋಯಿನ್ ಹೆಸರು ನೋಡಿ ನಾನು ಹೆಸರಿಟ್ಟಿಲ್ಲ

ಹೀರೋಯಿನ್ ಹೆಸರು ನೋಡಿ ನಾನು ಹೆಸರಿಟ್ಟಿಲ್ಲ

ಅಂದ್ಹಾಗೆ, ತಮನ್ನಾ ಅಂದಾಕ್ಷಣ ಹೀರೋಯಿನ್ ತಮನ್ನಾ ಹೆಸರು ನೋಡಿ ಇವರು ಹೆಸರು ಇಟ್ಟಿರಬಹುದು ಎಂಬ ಕುತೂಹಲ ಮೂಡುತ್ತೆ. ಹಾಗೊಂದುಕೊಂಡಿದ್ದರೆ ಅದು ಸುಳ್ಳು. ಮುಂಬೈಗೆ ಹೋಗಿ ಲಿಂಗ ಪರಿವರ್ತನೆ ಮಾಡಿಕೊಂಡ ಮಸ್ತಾನ್, ನಂತರ ತಮನ್ನಾ ಎಂದು ಹೆಸರು ಬದಲಿಸಿಕೊಂಡರಂತೆ. ಆಗ ತಮನ್ನಾ ಹೀರೋಯಿನ್ ಕೂಡ ಆಗಿರಲಿಲ್ಲವಂತೆ.

More from Filmibeat

English summary
Transgender Tamanna Simhadri got wild card Entry for Bigg Boss telugu session 3
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X