For Quick Alerts
  ALLOW NOTIFICATIONS  
  For Daily Alerts

  ಮದುವೆಯಾಗಲು ಗಂಡು ಸಿಗದೆ ತನ್ನನ್ನು ತಾನೇ ಮದುವೆಯಾದ ನಟಿ!

  |

  ಸೋಲೊಗಾಮಿ ಅಥವಾ ತನ್ನನ್ನು ತಾನೇ ಮದುವೆಯಾಗುವ ಟ್ರೆಂಡ್ ಇತ್ತೀಚೆಗೆ ಭಾರತದಲ್ಲಿ ಕಾಣಿಸಿಕೊಳ್ಳುತ್ತಿದೆ. ಗುಜರಾತಿನ ಯುವತಿ ಕ್ಷಮಾ ಬಿಂದು ಕೆಲ ತಿಂಗಳುಗಳ ಹಿಂದೆ ತನ್ನನ್ನು ತಾನೇ ಮದುವೆಯಾಗಿದ್ದರು, ಇದೀಗ ನಟಿಯೊಬ್ಬರು ತಮ್ಮನ್ನು ತಾವೇ ಮದುವೆಯಾಗಿದ್ದಾರೆ.

  ಹಿಂದಿಯ ಕೆಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಕನಿಷ್ಕಾ ಸೋನಿ ಇದೀಗ ತನ್ನನ್ನು ತಾನೇ ಮದುವೆಯಾಗಿದ್ದಾರೆ. ಕ್ಷಮಾ ಬಿಂದು ಬಳಿಕ ತನ್ನನ್ನು ತಾನೇ ವಿವಾಹವಾಗುತ್ತಿರುವ ಭಾರತದ ಎರಡನೇ ಚೆಲುವೆ ಆಗಿದ್ದಾರೆ ಕನಿಷ್ಕಾ ಸೋನಿ.

  #BoycottLigerInKarnataka : ಕರ್ನಾಟಕದಲ್ಲಿ 'ಲೈಗರ್' ಬಾಯ್‌ಕಾಟ್ ಟ್ರೆಂಡ್!#BoycottLigerInKarnataka : ಕರ್ನಾಟಕದಲ್ಲಿ 'ಲೈಗರ್' ಬಾಯ್‌ಕಾಟ್ ಟ್ರೆಂಡ್!

  ಕೆಲವು ದಿನಗಳ ಹಿಂದಷ್ಟೆ ವಧುವಿನಂತೆ ಸಿಂಗರಿಸಿಕೊಂಡಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ನಟಿ ಕನಿಷ್ಕಾ ಸೋನಿ, ''ನನ್ನನ್ನು ನಾನೇ ಮದುವೆಯಾದೆ. ನನ್ನ ಎಲ್ಲ ಕನಸುಗಳನ್ನು ನಾನೇ ಈಡೇರಿಸಿಕೊಂಡಿದ್ದೇನೆ. ನಾನು ಪ್ರೀತಿಸುವ ಏಕೈಕ ವ್ಯಕ್ತಿಯೆಂದರೆ ಅದು ನಾನೇ. ನನ್ನಲ್ಲಿ ಉದ್ಭವಿಸುವ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುವುದು ಸಹ ನಾನೇ. ಪುರುಷನ ಅವಶ್ಯಕತೆ ನನಗೆ ಎಂದಿಗೂ ಬಿದ್ದಿಲ್ಲ. ಒಬ್ಬಂಟಿಯಾಗಿ ನಾನು ಈವರೆಗೆ ಖುಷಿಯಾಗಿಯೇ ಇದ್ದೀನಿ. ನಾನು ದೇವತೆ, ಗಟ್ಟಿ ಹಾಗೂ ಶಕ್ತಿಶಾಲಿ ಯುವತಿ ನಾನು. ಶಿವ ಮತ್ತು ಶಕ್ತಿ ಎರಡೂ ನನ್ನಲ್ಲಿದ್ದಾರೆ'' ಎಂದು ಬರೆದುಕೊಂಡಿದ್ದರು.

  1200-1300 ಹುಡುಗರನ್ನು ರಿಜೆಕ್ಟ್ ಮಾಡಿದ್ದೇನೆ

  1200-1300 ಹುಡುಗರನ್ನು ರಿಜೆಕ್ಟ್ ಮಾಡಿದ್ದೇನೆ

  ತನ್ನೊಂದಿಗೆ ತಾನೇ ಮದುವೆಯಾದ ಬಳಿಕ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಟಿ ಕನಿಷ್ಕಾ ಸೋನಿ, ನಾನು ಮುಂಬೈಗೆ ಬಂದಾಗಿನಿಂದಲೂ ಹಲವಾರು ಹುಡುಗರು ಪ್ರೊಪೋಸ್ ಮಾಡಿದ್ದಾರೆ. ಸುಮಾರು 1200-1300 ಹುಡುಗರನ್ನು ನಾನು ಈವರೆಗೆ ರಿಜೆಕ್ಟ್ ಮಾಡಿದ್ದೇನೆ. ಈ ಹಿಂದೆ ಕೆಲವು ರಿಲೇಶನ್‌ಷಿಪ್‌ಗಳಲ್ಲಿ ಇದ್ದೆ. ಆದರೆ ಅವ್ಯಾವುವೂ ನನಗೆ ಹಿಡಿಸಲಿಲ್ಲ. ಬಹಳ ಹಿಂಸಾತ್ಮಕವಾದ, ನಿಂದನಾತ್ಮಕವಾದ ಸಂಬಂಧಗಳು ನನ್ನದಾಗಿದ್ದವು'' ಎಂದಿದ್ದಾರೆ.

  ಸ್ಟಾರ್ ನಟನೊಬ್ಬ ವಿವಾಹವಾಗುವಂತೆ ಕೇಳಿದ್ದ: ಕನಿಷ್ಕಾ

  ಸ್ಟಾರ್ ನಟನೊಬ್ಬ ವಿವಾಹವಾಗುವಂತೆ ಕೇಳಿದ್ದ: ಕನಿಷ್ಕಾ

  ''ಒಮ್ಮೆಯಂತೂ ಒಬ್ಬ ಸ್ಟಾರ್ ನಟ ನನ್ನನ್ನು ವಿವಾಹವಾಗುವಂತೆ ಕೇಳಿದ್ದ ಆದರೆ ಎರಡೇ ತಿಂಗಳಲ್ಲಿ ಆತನ ನಿಜ ಬಣ್ಣ ಬಯಲಾಯ್ತು. ಆತ ಬಹಳ ಹಿಂಸಾತ್ಮಕ ಪ್ರವೃತ್ತಿಯವನಾಗಿದ್ದ. ಪ್ರತಿ ಹದಿನೈದು ನಿಮಿಷಕ್ಕೆ ಆತ ಯಾವುದಾದರೂ ಒಂದು ಕಾರಣಕ್ಕೆ ಸಿಟ್ಟಾಗುತ್ತಿದ್ದ. ಒಂದುವರೆ ವರ್ಷದಲ್ಲಿ ನಾನು ಆ ಸಂಬಂಧದಿಂದ ಹೊರಗೆ ಬಂದೆ ಆದರೆ ಆ ಕೆಟ್ಟ ನೆನಪು ಮಾಸಲು ಐದು ವರ್ಷ ಬೇಕಾಯಿತು'' ಎಂದಿದ್ದಾರೆ ಕನಿಷ್ಕಾ.

  ಕೆಟ್ಟ ಅನುಭವಗಳ ಬಗ್ಗೆ ಕನಿಷ್ಕಾ ಮಾತು

  ಕೆಟ್ಟ ಅನುಭವಗಳ ಬಗ್ಗೆ ಕನಿಷ್ಕಾ ಮಾತು

  ಅಲ್ಲದೆ ಚಿತ್ರೀಕರಣ ಸೆಟ್‌ನಲ್ಲಿ ತಮಗಾದ ಕೆಲವು ಅನುಭವಗಳ ಬಗ್ಗೆ ಮಾತನಾಡಿರುವ ನಟಿ, ''ಒಮ್ಮೆ ಒಂದು ಧಾರಾವಾಹಿಯಿಂದ ನನ್ನನ್ನು ಹೊರಗೆ ಕಳಿಸಿಬಿಟ್ಟಿದ್ದರು. ಶೂಟಿಂಗ್ ಸಮಯದಲ್ಲಿ ನಾನು ನಿರ್ಮಾಪಕನ ರೂಮಿಗೆ ಹೋಗಲು ನಿರಾಕರಿಸಿದ್ದರಿಂದ ನನ್ನನ್ನು ಶೂಟಿಂಗ್‌ನಿಂದ ಹೊರಗೆ ಕಳಿಸಲಾಯ್ತು. ಇನ್ನೊಮ್ಮೆ 2008 ರಲ್ಲಿ ನಿರ್ಮಾಪಕನೊಬ್ಬ ಕರೆ ಮಾಡಿ ಮನೆಗೆ ಬಾ ನಾನು ನಿನ್ನ ಸೊಂಟ ನೋಡಬೇಕು ಎಂದಿದ್ದ. ನಾನು, ಸಿನಿಮಾದಲ್ಲಿ ಬೇಕಾದರೆ ನನ್ನ ಸೊಂಟದ ಪ್ರದರ್ಶನ ಮಾಡುತ್ತೇನೆ ಎಂದೆ. ಆದರೆ ಆತ ಒಪ್ಪಲಿಲ್ಲ, ಮನೆಗೆ ಬಂದು ತೋರಿಸು ಎಂದ ನಾನು ಆ ಸಿನಿಮಾದಿಂದಲೇ ಹೊರಗೆ ಬಂದೆ. ಆ ನಂತರ ನನಗೆ ಅಕ್ಷಯ್ ಕುಮಾರ್ ಸಿನಿಮಾದಲ್ಲಿ ಐಟಂ ಹಾಡಿನ ಅವಕಾಶ ಬಂತು ಆದರೆ ಅದು ತಪ್ಪಿಹೋಯಿತು. ಬಳಿಕ ತಮಿಳಿನ ಸಿನಿಮಾ ಒಂದರಲ್ಲಿ ಐಟಂ ಡ್ಯಾನ್ಸ್ ಮಾಡಿದೆ'' ಎಂದಿದ್ದಾರೆ.

  ಇಷ್ಟಪಟ್ಟೆ ನನ್ನನ್ನು ನಾನು ಮದುವೆಯಾಗಿದ್ದೇನೆ: ಕನಿಷ್ಕಾ

  ಇಷ್ಟಪಟ್ಟೆ ನನ್ನನ್ನು ನಾನು ಮದುವೆಯಾಗಿದ್ದೇನೆ: ಕನಿಷ್ಕಾ

  ತಮ್ಮ ಮದುವೆಯ ಪೋಸ್ಟ್‌ಗೆ ಬಂದ ಟೀಕೆಗಳಿಗೆ ಸ್ಪಷ್ಟನೆ ನೀಡಿ ವಿಡಿಯೋ ಒಂದನ್ನು ಸಹ ಹಂಚಿಕೊಂಡಿರುವ ನಟಿ ಕನಿಷ್ಕಾ, ''ನಾನು ಎಲ್ಲ ರೀತಿಯಲ್ಲಿ ಯೋಚಿಸಿಯೇ ನಿರ್ಧಾರ ತೆಗೆದುಕೊಂಡಿದ್ದೇನೆ. ವಿಜ್ಞಾನ ಬಹಳ ಮುಂದೆ ಹೋಗಿದೆ. ಲೈಂಗಿಕತೆಗೆ ಸಹ ನನಗೆ ಪುರುಷರ ಅಗತ್ಯ ಈಗಿಲ್ಲ. ನಾನು ನನ್ನ ಜೀವನದಲ್ಲಿ ಸಾಕಷ್ಟು ಪುರುಷರನ್ನು ನೋಡಿದ್ದೇನೆ. ಯಾರೂ ಸಹ ನಿಯತ್ತಿನಿಂದ ನನ್ನೊಂದಿಗೆ ಇಲ್ಲ ಅದಕ್ಕೆ ಈ ನಿರ್ಣಯವನ್ನು ನಾನು ಮಾಡಿದ್ದೇನೆ'' ಎಂದಿದ್ದಾರೆ. ಅಲ್ಲದೆ ತಾವು ಅಮೆರಿಕದಲ್ಲಿದ್ದು, ಇಲ್ಲಿಂದಲೇ ಹಾಲಿವುಡ್‌ನಲ್ಲಿ ವೃತ್ತಿ ಜೀವನ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದೇನೆ ಎಂದಿದ್ದಾರೆ.

  Recommended Video

  Luckyman | ಒಂದೇ ವೇದಿಕೆಯಲ್ಲಿ ಸುದೀಪ್ ರಾಕ್ ಲೈನ್ Rockline Venkatesh | Sudeep | Filmibeat Kannada
  English summary
  Trend of Sologamy: Hindi serial actress Kanishka Soni married to herself. She said she loved herself more than anyone in universe
  Wednesday, August 24, 2022, 15:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X