Tripura Sundari serial: ಬೆಂಗಾಲಿ ಭಾಷೆಗೆ ಡಬ್ ಆಗಲಿದೆ ಕನ್ನಡ ಧಾರಾವಾಹಿ.. 'ತ್ರಿಪುರ ಸುಂದರಿ' ಖದರೇ ಬೇರೆ!

By ಅನಿತಾ ಬನಾರಿ

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಅನೇಕ ಧಾರಾವಾಹಿಗಳು ಪರಭಾಷೆಗೆ ಡಬ್ ಆಗಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ಹೌದು, ಕನ್ನಡದ ಧಾರಾವಾಹಿಗಳಾಗಿರುವ 'ಲಕ್ಷ್ಮೀ ಬಾರಮ್ಮ', 'ಭಾಗ್ಯಲಕ್ಷ್ಮೀ', 'ಲಕ್ಷಣ', 'ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ' ಪರಭಾಷೆಗೆ ಡಬ್ ಆಗಿ ಪ್ರಸಾರ ಕಾಣುತ್ತಿದೆ. ಇದೀಗ 'ತ್ರಿಪುರ ಸುಂದರಿ'ಯ ಸರದಿ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ತ್ರಿಪುರ ಸುಂದರಿ' ಧಾರಾವಾಹಿಯು ಬೆಂಗಾಲಿ ಭಾಷೆಗೆ ಡಬ್ ಆಗಲಿದೆ.'ತ್ರಿಪುರ ಸುಂದರಿ' ಧಾರಾವಾಹಿಯ ಬೆಂಗಾಲಿ ಡಬ್ಡ್ ವರ್ಷನ್‌ನ ಪ್ರೋಮೋಗಳು ಕೂಡಾ ಬಿಡುಗಡೆಯಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇದೇ ಆಗಸ್ಟ್ 21ರಿಂದ ಬೆಂಗಾಲಿ ವಾಹಿನಿಯಲ್ಲಿ 'ತ್ರಿಪುರ ಸುಂದರಿ' ಧಾರಾವಾಹಿ ಪ್ರಸಾರವಾಗಲಿದೆ.

tripura-sundari-serial-dubbed-in-bengali

ಈಗಾಗಲೇ 'ತ್ರಿಪುರ ಸುಂದರಿ' ಧಾರಾವಾಹಿಯ ಬೆಂಗಾಲಿ ಡಬ್ಡ್ ವರ್ಷನ್ ಪ್ರೋಮೋಗಳು ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿದೆ. ಕನ್ನಡ 'ತ್ರಿಪುರ ಸುಂದರಿ' ಧಾರಾವಾಹಿ ಬೆಂಗಾಲಿ ಭಾಷೆಯಲ್ಲಿ ಪ್ರಸಾರವಾಗುತ್ತಿರುವುದು ಕನ್ನಡಿಗರಿಗೂ ಖುಷಿ ತಂದಿದೆ.

ಗಂಧರ್ವ ಲೋಕದ ಕನ್ಯೆಯಾಗಿರುವ ಆಮ್ರಪಾಲಿಯು ಕಳೆದುಹೋಗಿರುವ ಗಂಧರ್ವ ಲೋಕದ ರಾಜಕುಮಾರನನ್ನು ಹುಡುಕುವ ಸಲುವಾಗಿ ಭೂಲೋಕಕ್ಕೆ ಬರುತ್ತಾಳೆ. ಗಂಧರ್ವಲೋಕವನ್ನು ದುಷ್ಟ ಶಕ್ತಿಯಿಂದ ಕಾಪಾಡಲು ರಾಜಕುಮಾರನಿಗೆ ಮಾತ್ರ ಸಾಧ್ಯ. ರಾಜಕುಮಾರನ ಹುಡುಕಾಟದಲ್ಲಿರುವ ಆಮ್ರಪಾಲಿ ಬಳಿ ರಾಜಕುಮಾರನ ಕಂಡುಹಿಡಿಯಲು ಇದ್ದ ಸೂರ್ಯನ ಪದಕ ಭೂಲೋಕದಲ್ಲಿ ಕಾಣೆಯಾಗಿರುತ್ತದೆ.

tripura-sundari-serial-dubbed-in-bengali

ಗಂಧರ್ವ ಲೋಕದ ದುಷ್ಟರಿಂದ ರಾಜಕುಮಾರನನ್ನು ಕಾಪಾಡುವ ಸಲುವಾಗಿ ಮಹಾರಾಣಿ ಆತನನ್ನು ಭೂಲೋಕಕ್ಕೆ ಕರೆದುಕೊಂಡು ಹೋಗಿ ಬಿಟ್ಟಿರುತ್ತಾಳೆ. ಪ್ರದ್ಯಮ್ನ ಗಂಧರ್ವ ಲೋಕದ ರಾಜಕುಮಾರ ಎಂಬ ಅರಿವು ಇಲ್ಲದ ದೇವಯಾನಿ ಆಕೆಯನ್ನು ಸ್ವಂತ ಮಗನಿಗಿಂತಲೂ ಜಾಸ್ತಿ ಪ್ರೀತಿಯಿಂದ ಸಾಕಿ ಸಲಹುತ್ತಾಳೆ. ಇಷ್ಟು ವರ್ಷಗಳ ಕಾಲ ಪ್ರೀತಿಯಿಂದ ಸಾಕಿರುವ ಮಗ ದೂರವಾಗುತ್ತಾನೇನೋ ಎಂಬ ಆತಂಕ ದೇವಯಾನಿಗೆ ಆಗಾಗ ಕಾಡುತ್ತದೆ.

ಇನ್ನು ನಾಯಕಿ ಆಮ್ರಪಾಲಿ, ನಾಯಕ ಪ್ರದ್ಯುಮ್ನನ ಮನೆಯಲ್ಲಿದ್ದರೂ, ಆತನ ಸ್ನೇಹ ಸಂಪಾದಿಸಿದ್ದರೂ ಆತನೇ ತಾನು ಹುಡುಕುತ್ತಿರುವ ರಾಜಕುಮಾರ ಎಂಬುದು ಆಕೆಗೂ ಗೊತ್ತಿರುವುದಿಲ್ಲ. ಮುಂದೆ ತಾನು ಹುಡುಕುತ್ತಿರುವ ರಾಜಕುಮಾರ ಇತನೇ ಎಂದು ಅದ್ಯಾವಾಗ ಆಮ್ರಪಾಲಿಗೆ ತಿಳಿಯುತ್ತದೆ. ಆ ಕ್ಷಣ ದೇವಯಾನಿ ಮಗನನ್ನು ಗಂಧರ್ವ ಲೋಕಕ್ಕೆ ಹೋಗಲು ಬಿಡುತ್ತಾಳಾ? ಸತ್ಯ ತಿಳಿದಾಗ ಪ್ರದ್ಯುಮ್ನ ಏನು ಮಾಡುತ್ತಾನೆ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.

'ತ್ರಿಪುರ ಸುಂದರಿ'ಯಲ್ಲಿ ನಾಯಕಿ ಆಮ್ರಪಾಲಿಯಾಗಿ ದಿವ್ಯಾ ಸುರೇಶ್ ಅಭಿನಯಿಸಿದ್ದರೆ, ನಾಯಕ ಪ್ರದ್ಯುಮ್ನನಾಗಿ ಅಭಿನವ್ ವಿಶ್ವನಾಥನ್ ಬಣ್ಣ ಹಚ್ಚಿದ್ದಾರೆ. ಇನ್ನು ಇದರ ಹೊರತಾಗಿ ರೋಹಿತ್ ಶ್ರೀನಾಥ್, ಅನನ್ಯಾ ಕಾಸರವಳ್ಳಿ, ಸ್ಪರ್ಶ ರೇಖಾ, ಹರ್ಷಿತಾ, ಶೈನಿ ಪೆರೀರಾ ಮುಂತಾದವರು ತಾರಾಗಣದಲ್ಲಿದ್ದಾರೆ.

More from Filmibeat

English summary
Tripura Sundari serial will be dubbed in Bengali language
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X