Tripura Sundari: ಬಿಗ್ ಬಾಸ್ ಸೀಸನ್ 10 ಎಫೆಕ್ಟ್.. ಶೀಘ್ರದಲ್ಲೇ ತ್ರಿಪುರ ಸುಂದರಿ ಸ್ಥಗಿತ !
ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಮತ್ತೆ ವಾಪಸ್ ಆಗಲಿದೆ. ಹೌದು ಬಿಗ್ ಬಾಸ್ ಸೀಸನ್ 10 ಇನ್ನೇನು ಆರಂಭಗೊಳ್ಳಲಿದ್ದು ಬಿಗ್ ಬಾಸ್ ಬರಲು ಕನ್ನಡ ಕಲರ್ಸ್ ವಾಹಿನಿ ಒಂದಷ್ಟು ಧಾರವಾಹಿಗಳನ್ನು ಮುಗಿಸಲಿದೆ. ಬಿಗ್‌ಬಾಸ್‌ಗಾಗಿ ಪ್ರತಿದಿನ ಒಂದೂವರೆ ಗಂಟೆ ಕೊಡಲು ಈಗಾಗಲೇ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಲವು ಧಾರಾವಾಹಿಗಳನ್ನು ಮುಕ್ತಾಯಗೊಳಿಸುವುದು ಅನಿವಾರ್ಯವಾಗಿದೆ.
ಈಗ ಆ ಮುಕ್ತಾಯಗೊಳ್ಳುವ ಧಾರಾವಾಹಿ ಯಾವುದೆಂದು ವಿಚಾರ ಹೊರ ಬಂದಿದ್ದು, ಬಿಗ್ ಬಾಸ್ ಸೀಸನ್ ಎಂಟರ ಖ್ಯಾತಿಯ ದಿವ್ಯಾ ಸುರೇಶ್ ಮುಖ್ಯ ಭೂಮಿಗೆಯಲ್ಲಿ ನಟಿಸುತ್ತಿರುವ ಧಾರಾವಾಹಿ 'ತ್ರಿಪುರ ಸುಂದರಿ' ಕೂಡ ಒಂದು ಎನ್ನಲಾಗಿದೆ.

ಈ ಬಗ್ಗೆ ಸ್ವತಃ ನಟಿ ದಿವ್ಯಾ ಸುರೇಶ್ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಆಮ್ರಪಾಲಿಯಾಗಿ ಕೊನೆಯ ದಿನಗಳ ಶೂಟಿಂಗ್ ಎಂದು ಹೇಳಿಕೊಂಡಿದ್ದಾರೆ. ಅಂದ ಹಾಗೆ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಡಿಮೆ ಟಿಆರ್‌ಪಿ ತೆಗೆದುಕೊಳ್ಳುತ್ತಿರುವ ಧಾರಾವಾಹಿಗಳಲ್ಲಿ 'ತ್ರಿಪುರ ಸುಂದರಿ' ಧಾರಾವಾಹಿ ಒಂದಾಗಿದ್ದು ಇದನ್ನು ಮುಗಿಸುವುದು ಅನಿವಾರ್ಯವಾಗಿದೆ.
ಅಲ್ಲದೆ ಇದೀಗ ಬಿಗ್ ಬಾಸ್ ಸೀಸನ್ ಹತ್ತಿರ ಆರಂಭ ಪ್ರೇಕ್ಷಕರಿಗೆ ಬಹಳಷ್ಟು ಕುತೂಹಲವನ್ನು ಕೆರಳಿಸಿದ್ದು ಎಲ್ಲರ ಗಮನ ಅತ್ತ ಹೋಗುವ ಸಾಧ್ಯತೆ ಹೆಚ್ಚಿರುವುದರಿಂದ ಕಮಿಟಿ ಧಾರಾವಾಹಿಗಳನ್ನು ನಿಲ್ಲಿಸುವುದು ಹಾಗೂ ಸಮಯ ಬದಲಾಯಿಸುವುದು ನಡೆಯುತ್ತಿದೆ.

ಹಾಗಾಗಿ 'ತ್ರಿಪುರ ಸುಂದರಿ' ಧಾರಾವಾಹಿಯ ಕಥೆಯನ್ನು ಮುಕ್ತಾಯದ ಕಡೆಗೆ ತೆಗೆದುಕೊಂಡು ಹೋಗುತ್ತಿರುವ ಧಾರಾವಾಹಿ ತಂಡ ಇನ್ನೇನು ಕೆಲ ದಿನಗಳಲ್ಲಿ ಧಾರವಾಹಿಯನ್ನು ಮುಗಿಸುತ್ತಿದೆ. ನಂತರ ಬಿಗ್ ಬಾಸ್ ಸೀಸನ್ 10 ಪ್ರಸಾರಗೊಳ್ಳಲಿದೆ. ನಟಿ ದಿವ್ಯಾ ಸುರೇಶ್ ಅವರ ಮೊದಲ ಧಾರಾವಾಹಿ ಇದಾಗಿದ್ದು ಈ ರೀತಿ ಬೇಗ ಮುಗಿಯುತ್ತಿರುವುದು ಬೇಸರದ ವಿಚಾರ. ಹಾಗಾಗಿ ನಟಿಗೆ ಸೋಶಿಯಲ್ ಮೀಡಿಯಾದಲ್ಲಿ ಅವರ ಫಾಲೋವರ್ಸ್ ಹಾಗೂ ಅಭಿಮಾನಿಗಳು ಸಾಂತ್ವನ ಹೇಳಿದ್ದಾರೆ. 'ತ್ರಿಪುರ ಸುಂದರಿ' ಧಾರಾವಾಹಿಯ ವೀಕ್ಷಕರು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.
ಫ್ಯಾಂಟಸಿಯನ್ನು ಥೀಮ್ ಆಗಿಟ್ಟುಕೊಂಡು ನಡೆಯುತ್ತಿದ್ದ ಈ ಧಾರಾವಾಹಿ ಆಮ್ರಪಾಲಿಯ ಹುಟ್ಟು ಹಾಗೂ ಜೀವನದ ಕಥೆಯನ್ನು ಹೇಳುತ್ತಿತ್ತು. ಆದರೆ ಇದೀಗ ಈ ಧಾರಾವಾಹಿಗೆ ಟಾಟಾ ಬಾಯ್ ಬಾಯ್ ಹೇಳುವ ಸಮಯ ಬಂದಿರುವುದು ಬೇಸರದ ಸಂಗತಿ. ಮಾಡೆಲ್ ಹಾಗೂ ನಟಿ ದಿವ್ಯ ಸುರೇಶ್ ಅವರ ಅಭಿಮಾನಿಗಳು ಈ ಬಗ್ಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.


Click it and Unblock the Notifications











