Tripura sundari: ಅಪ್ಪನ ಪ್ರೀತಿ ಗಳಿಸಲು ಪ್ರದ್ಯುಮ್ನ ನಿರ್ಧಾರ.. ಕಾಡಿಗೆ ಹೋದ ರಾಜಕುಮಾರ ಮತ್ತೆ ವಾಪಾಸು ಬರಲ್ವಾ?

By ಎಸ್ ಸುಮಂತ್

ಪ್ರದ್ಯುಮ್ನನಿಗೆ ಯಾವಾಗಲೂ ಕಾಡುವಂತ ನೋವು, ಬೇಸರ ಅಂದ್ರೆ ಅದುವೇ ಅಪ್ಪನಿಂದ ಸಿಗುವ ತಿರಸ್ಕಾರ ಭಾವ. ಪ್ರದ್ಯುಮ್ನನ ಜೊತೆಗೆ ಇನ್ನಿಬ್ಬರು ಹೆಣ್ಣು ಮಕ್ಕಳಿದ್ದಾರೆ ಸತ್ಯನಿಗೆ. ಆದರೆ ಯಾವತ್ತೂ ಕೂಡ ಆ ಇಬ್ಬರ ಮೇಲೆ ತನ್ನ ಕೋಪವನ್ನು ತೋರಿಸಿಯೇ ಇಲ್ಲ. ತಂದೆಯ ಪ್ರೀತಿ ಎಂತದ್ದು ಎಂಬುದನ್ನು ಇಬ್ಬರು ಹೆಣ್ಣು ಮಕ್ಕಳಿಗೆ ತೋರಿಸುವ ಮೂಲಕ ಪ್ರೂವ್ ಮಾಡಿದ್ದಾರೆ ಸತ್ಯಜಿತ್. ಪ್ರದ್ಯುಮ್ನ ಅದೆಷ್ಟೇ ಒಳ್ಳೆಯ ಕೆಲಸ ಮಾಡಿದರೂ, ಅದೆಷ್ಟೇ ವಿನಯದಿಂದ ನಡೆದುಕೊಂಡರೂ ಅಷ್ಟೇ.

ಯಾಕಂದ್ರೆ ಸತ್ಯಜಿತ್ ಗೆ ಗೊತ್ತು ಪ್ರದ್ಯುಮ್ನ ನನ್ನ ಸ್ವಂತ ಮಗನಲ್ಲವೆಂದು. ದೇವಯಾನಿಯ ಮೇಲಿನ ಪ್ರೀತಿ, ಸಂಬಂಧಕ್ಕಾಗಿ ಕೋಪ ಹೊರ ಹಾಕುತ್ತಾ, ಸತ್ಯ ಮುಚ್ಚಿಟ್ಟುಕೊಂಡೆ ಬದುಕುತ್ತಿದ್ದಾನೆ. ಮನೆಯವರಿಗೆಲ್ಲ ಪ್ರದ್ಯುಮ್ನ, ಸತ್ಯ ಮತ್ತು ದೇವಯಾನಿ‌ ಮಗ ಎಂಬುದಷ್ಟೇ ಗೊತ್ತು. ಮುಚ್ಚಿಟ್ಟ ಸತ್ಯದ ಬಗ್ಗೆ ಅರಿವಿಲ್ಲ.

Tripura Sundari serial Written Update on April 11th episode

ಕಾಡಿಗೆ ಹೊರಟು ನಿಂತ ಪ್ರದ್ಯುಮ್ನ

ಪ್ರದ್ಯುಮ್ನ ತಂದೆಗಾಗಿ ಏನು ಬೇಕಾದರೂ ಮಾಡುತ್ತಾನೆ. ಸತ್ಯಜಿತ್ ಮಗ ಎಂಬುದನ್ನು ನೋಡದೆ ಯಾವಾಗಲೂ ನೋವು ಕೊಡುತ್ತಾನೆ. ಸತ್ಯ ತಂದೆ ತಾಯಿ ಎನಿಸಿಕೊಂಡಿಬ್ಬರಿಗೆ ಮಾತ್ರ ಗೊತ್ತು. ಆದರೆ ಸತ್ಯ ತಿಳಿಯದ ಪ್ರದ್ಯುಮ್ನ ಯಾವಾಗಲೂ ಗೊಂದಲದಲ್ಲಿಯೇ ಇರುತ್ತಾನೆ. ಈಗ ಅದೇ ತಂದೆಯ ಪ್ರೀತಿಗಾಗಿ ಅರಣ್ಯ ಪ್ರವೇಶ ಮಾಡಲು ಹೊರಟಿದ್ದಾನೆ. ತಲತಲಾಂತದಿಂದ ಬಂದ ಸಂಪ್ರದಾಯವನ್ನು ಅನುಸರಿಸಲು ಹೊರಟಿದ್ದಾನೆ.

ಪ್ರದ್ಯುಮ್ನನ ಕುಟುಂಬದಲ್ಲಿ ಇದೊಂದು ಸಂಪ್ರದಾಯವಿತ್ತು. ಆಗ ವಜ್ರವನ್ನು ಮಾರುತ್ತಿದ್ದವರು ಈ ವಂಶಸ್ಥರು. ಆ ವಜ್ರಗಳನ್ನೆಲ್ಲಾ ಯಾರು ಆರ್ಡರ್ ಕೊಟ್ಟಿದ್ದರೋ ಅವರಿಗೆ ಜೋಪಾನವಾಗಿ ತಲುಪಿಸಬೇಕಿತ್ತು. ಅದಕ್ಕಾಗಿ ಕಾಡಿನ ಮಾರ್ಗದಲ್ಲಿ ಹೋಗುತ್ತಿದ್ದರು. ಹೋಗುವಾಗ ದೇವರು ಕಾಪಾಡಲಿ ಎಂದು ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಹೋಗುತ್ತಿದ್ದರು. ಈಗ ಆ ಸಂಪ್ರದಾಯ ಅನುಸರಿಸಲು ಪ್ರದ್ಯುಮ್ನ ಹೊರಡಿದ್ದಾನೆ. ಕಾಡಿನ ಪ್ರಾಣಿಗಳ ಭಯವೂ ಈಗ ಹೆಚ್ಚಾಗಿದೆ. ಹೀಗಾಗಿ ಮಾಯಿಗೆ ಆ ಆಚರಣೆಯನ್ನು ಪ್ರದ್ಯುಮ್ನ ಮಾಡುವುದು ಇಷ್ಟವಿಲ್ಲ. ಆದರೂ ಪ್ರದ್ಯುಮ್ನ ಹಠ ಮಾತ್ರ ಬಿಡುತ್ತಿಲ್ಲ.

ಪ್ರದ್ಯುಮ್ನನ ಸ್ಥಿತಿ ಕಂಡು ಸತ್ಯಜಿತ್ ಫುಲ್ ಖುಷಿ

ಸತ್ಯಜಿತ್ ಗೆ ಪ್ರದ್ಯುಮ್ನ ಮನೆಯಲ್ಲಿರುವುದು ಕೊಂಚವೂ ಇಷ್ಟವಿಲ್ಲ. ಹೀಗಾಗಿ ಏನಾದರೂ ಮಾಡಿ ಅವನನ್ನು ಹೊರಗೆ ಕಳುಹಿಸಬೇಕೆಂದೆ ಅರಣ್ಯ ಪ್ರವೇಶದ ಪ್ಲ್ಯಾನ್ ಮಾಡಿದ್ದ. ಪ್ರದ್ಯುಮ್ನ ಈ ಮೂಲಕ ಆದ್ರೂ ಅಪ್ಪನ ಪ್ರೀತಿ ಗಳಿಸಬಹುದು ಎಂಬ ಭ್ರಮೆಯಲ್ಲಿ ಒಪ್ಪಿಕೊಂಡಿದ್ದಾನೆ. ಅರಣ್ಯಕ್ಕೆ ಹೋದರೆ ಪ್ರದ್ಯುಮ್ನ ವಾಪಾಸ್ ಬರುವುದಿಲ್ಲ ಎಂಬ ಖುಷಿಯಲ್ಲಿದ್ದಾನೆ ಸತ್ಯಜಿತ್.

Tripura Sundari serial Written Update on April 11th episode

ಈ ಕಡೆ ಶತ್ರುಗಳು ಕೂಡ ಭೂಲೋಕ ಪ್ರವೇಶಿಸಿದ್ದಾರೆ. ಆಮ್ರಪಾಲಿ ತನ್ನ ಪದಕ ಕಳೆದುಕೊಂಡು ರಾಜಕುಮಾರ ಜೊತೆಗೆ ಇದ್ದರೂ ಕಾಣದಾಗಿದ್ದಾಳೆ. ತಂದೆಯವರ ದರ್ಶನವೂ ಸಾಧ್ಯವೇ ಆಗಿರಲಿಲ್ಲ. ಈಗ ಯಾವುದೋ ರೂಪದಲ್ಲಿ ತಂದೆಯ ದರ್ಶನವಾಗಿದೆ. ಹಿರಣ್ಯನ ದೇವಸ್ಥಾನಕ್ಕೆ ಬರಲು ಸೂಚಿಸಿದ್ದಾರೆ. ಅದು ಇರುವುದು ಅರಣ್ಯದಲ್ಲಿಯೇ. ಈಗ ರಾಜಕುಮಾರನನ್ನು ಹುಡುಕಲು ಹೊರಟ ಆಮ್ರಪಾಲಿಗೆ ಇದೇ ಸಮಯ ಸರಿಯಾದ ಸಮಯ ಇದಾಗಿದೆ. ಗಂಧರ್ವಲೋಕಕ್ಕೆ ಹೋಗಲು ರಾಜಕುಮಾರನಿಗೆ ಇದು ಸರಿಯಾದ ಸಮಯವಾಗಿದೆ. ಕಡೆಗೂ ಸತ್ಯನ ಆಸೆ ನಿಜವಾಗುತ್ತಿದೆ. ರಾಜಕುಮಾರ ಹಾಗೂ ರಾಜಕುಮಾರಿ ಒಂದಾಗುವ ಸಮಯ ಬಂದಾಗಿದೆ.

More from Filmibeat

English summary
Colors Kannada Tripura Sundari serial Written Update on April 11th episode. Here is the details about Satyajith Happy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X