Tripura sundari: ಮಾಯಿಯ ಮನಸ್ಸು ಗೆದ್ದ ಆಮ್ರಪಾಲಿ : ರಾಜಕುಮಾರನನ್ನು ಬಿಟ್ಟು ಹೋಗುತ್ತಾಳಾ..?

By ಎಸ್ ಸುಮಂತ್

ಆಮ್ರಪಾಲಿ, ಗಂಧರ್ವ ಲೋಕದ ಕನ್ಯೆ. ತನ್ನ ರಾಜಕುಮಾರನನ್ನು ಹುಡುಕಿಕೊಂಡು ಭೂಮಿಗೆ ಬಂದಿದ್ದಾಳೆ. ತನ್ನ ರಾಜಕುಮಾರನನ್ನು ಹುಡುಕಲು ಆಮ್ರಪಾಲಿಯ ಬಳಿ ಇದ್ದದ್ದು ಒಂದೇ ಆಧಾರ. ಅದುವೇ ಪದಕ. ಆದರೆ ಆ ಪದಕವನ್ನು ಕಳೆದುಕೊಂಡು, ರಾಜಕುಮಾರನನ್ನು ಕಾಣದೆ ಕಂಗಲಾಗಿದ್ದಾಳೆ. ದೇವರ ಆಶೀರ್ವಾದ ಆಮ್ರಪಾಲಿಯ ಪರವಾಗಿಯೇ ಇದೆ. ಅದನ್ನು ಗುರುತಿಸುವಲ್ಲಿ ಆಮ್ರಪಾಲಿ ವಿಫಲವಾಗಿದ್ದಾಳೆ. ತನ್ನ ರಾಆಜಕುಮಾರ ಪಕ್ಕದಲ್ಲಿಯೇ ಇರುವುದು ಗೊತ್ತೆ ಆಗುತ್ತಿಲ್ಲ.

ಆಮ್ರಪಾಲಿ ಬಂದಾಗಿನಿಂದ ಎಲ್ಲವೂ ಒಳ್ಳೆಯದ್ದೇ ಆಗಿದೆ. ಪುಟಾಣಿ ಕಿಡ್ನ್ಯಾಪ್ ಆದಾಗಲು ಇದೇ ಆಮ್ರಪಾಲಿ ಕಾಪಾಡಿರುವುದು, ಛಾಯಾ ನೀರಿಗೆ ಬಿದ್ದಾಗಲೂ ಆಮ್ರಪಾಲಿಯ ಸಹಾಯವೇ ಬೇಕಾಯಿತು. ಈಗ ಯುಕ್ತಿಯನ್ನು ಬೆಂಕಿಯಿಂದ ಕಾಪಾಡಿದ್ದು ಇದೇ ಆಮ್ರಪಾಲಿ. ಅಷ್ಟೇ ಅಲ್ಲ ಮಾಯಿಯ ಮನಸ್ಸನ್ನೇ ಗೆಲ್ಲುವ ಕೆಲಸ ಮಾಡಿದ್ದಾಳೆ.

Tripura Sundari serial Written Update on April 4th episode

ಮಾಯಿಯ ಗೋಲಿ ಸರಿ ಮಾಡಿದ ಆಮ್ರಪಾಲಿ

ಮನೆಯಲ್ಲಿ ಮಾಯಿಗೆ ಕೆಲವೊಂದು ವಸ್ತುಗಳ ಮೇಲೆ ಮೋಹ ಜಾಸ್ತಿ. ಅದರಂತೆ ಗೋಲಿಯ ವಿಚಾರದಲ್ಲೂ ಅಷ್ಟೇ. ಗೋಲಿ ಎಂದರೆ ಅಪಾರ ಗೌರವ. ಆದರೆ ಅದೂ ಹೇಗೋ ಒಡೆದು ಹೋಗಿತ್ತು. ಮಾಯಿಯ ಬೇಸರ ಕಂಡು ಪ್ರದ್ಯುಮ್ನ ಅದನ್ನು ಸರಿ ಮಾಡುವುದಕ್ಕೆ ನೋಡಿದ್ದ, ಆದರೆ ಅದು ಸಾಧ್ಯವಾಗಿರಲಿಲ್ಲ. ಈಗ ಆಮ್ರಪಾಲಿ ಮ್ಯಾಜಿಕ್ ಮಾಡಿ ಸರಿ ಮಾಡಿದ್ದಾಳೆ. ಇದರಿಂದ ಮಾಯಿಗೆ ಆಮ್ರಪಾಲಿಯ ಮೇಲೆ ಆತ್ಮೀಯತೆ ಹೆಚ್ಚಾಗಿದೆ. ಖುಷಿ ವ್ಯಕ್ತಪಡಿಸಿದ್ದಾಳೆ. ಪ್ರದ್ಯುಮ್ನನಿಗೂ ಧನ್ಯವಾದ ತಿಳಿಸಿದ್ದಾಳೆ.

ಪ್ರದ್ಯುಮ್ನನಿಗೆ ಆಮ್ರಪಾಲಿಯ ಮೇಲೆ ಆಕರ್ಷಣೆಯಾಗಿದೆ. ಆದರೆ ಆಮ್ರಪಾಲಿ ಕೆಲವೊಂದು ಸಲ ನಡೆದುಕೊಳ್ಳುವ ರೀತಿಗೂ ಆಶ್ಚರ್ಯಪಡುತ್ತಾನೆ. ಈಗಲೂ ಅಂಥದ್ದೇ ಆಗಿದೆ. ಪ್ರದ್ಯುಮ್ನ ಎಷ್ಟೇ ಪ್ರಯತ್ನಪಟ್ಟರು ಸರಿಯಾಗದ ಗೋಲಿಯನ್ನು ಕ್ಷಣ ಮಾತ್ರದಲ್ಲಿ ಸರಿ ಮಾಡಿದ್ದಾಳೆ. ಇದು ಪ್ರದ್ಯುಮ್ನನಿಗೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಹಾಗಂತ ಅದೇನು ಅನುಮಾನವಲ್ಲ. ಬದಲಿಗೆ ಕುತೂಹಲ. ಆ ಕುತೂಹಲವನ್ನು ತಿಳಿಯುವ ಕೆಲಸ ಮಾಡಿದ್ದಾನೆ. ಆದರೆ ಆ ಸತ್ಯವನ್ನು ತಿಳಿಯಲು ಸಾಧ್ಯವಾಗಿಲ್ಲ.

Tripura Sundari serial Written Update on April 4th episode

ಆಮ್ರಪಾಲಿಯನ್ನು ಕಾಪಾಡಿದ ಪುಟಾಣಿ

ಆಮ್ರಪಾಳಿಗೆ ಮ್ಯಾಜಿಕ್ ಬರುತ್ತೆ ಅನ್ನೋದು ಮನೆಯಲ್ಲಿ ಪುಟಾಣಿಗೆ ಮಾತ್ರ ಗೊತ್ತು. ಆಮ್ರಪಾಲಿ ಅತ್ತಾಗ ಮಳೆ ಬರುತ್ತೆ. ನಕ್ಕಾಗ ಹೂವೆಲ್ಲಾ ಅರಳಿಬಿಡುತ್ತೆ ಎಂಬುದು ಪುಟಾಣಿಗೆ ಗೊತ್ತಾಗಿದೆ. ಮನೆಯವರಿಗೆ ಇದೆಲ್ಲಾ ಗೊತ್ತಾದರೆ ಆಮ್ರಪಾಲಿಯನ್ನು ಮನೆಯಲ್ಲಿ ಇರಿಸಿಕೊಳ್ಳುವುದು ಅಸಾಧ್ಯವೇ. ಹೀಗಾಗಿ ಪುಟಾಣಿಯೇ ಮ್ಯಾಜಿಕ್ ಎಲ್ಲಾ ಮಾಡಬೇಡ ಎಂದು ಬುದ್ಧಿ ಹೇಳಿದ್ದಾಳೆ. ಈಗ ಪ್ರದ್ಯುಮ್ನನ ಬಳಿ ಸಿಕ್ಕಿದ್ದಾಳೆ. ಪುಟಾಣಿ ಮಧ್ಯೆ ಪ್ರವೇಶಿಸಿ, ಆ ಗೋಲ ಸರಿ ಮಾಡುವುದಕ್ಕೆ ನಾನೇ ಇಂಟರ್ ನೆಟ್ ನಲ್ಲಿ ಹುಡುಕಿಕೊಟ್ಟೆ ಎಂದಿದ್ದಾಳೆ. ಆದರೆ ಅಣ್ಣನಿಗೆ ಪುಟಾಣಿ ಮೇಲೆ ನಂಬಿಕೆಯೇ ಇಲ್ಲ.

ಯುಕ್ತಿಯನ್ನು ಸಾಯಿಸುವುದಕ್ಕೆ ಛಾಯಾ ಮಾಸ್ಟರ್ ಪ್ಲಾನ್ ಮಾಡಿದ್ದಳು. ಅವಳಿದ್ದ ರೂಮಿಗೆ ಬೆಂಕಿ ಹಚ್ಚಿದ್ದಳು. ಆದರೆ ಇದನ್ನು ಕಂಡ ಆಮ್ರಪಾಲಿ ಬೆಂಕಿಯನ್ನು ತನ್ನ ಮಂತ್ರ ಶಕ್ತಿಯಿಂದ ಆರಿಸಿದ್ದಳು. ಛಾಯಾಳಿಗೆ ಅವ ಓಲೆ ಬೇರೆ ಸಿಕ್ಕಿದೆ. ಬೆಂಕಿಯನ್ನು ಆರಿಸಿದವರು ಯಾರು ಎಂಬ ಪ್ರಶ್ನೆ ಶುರುವಾಗಿದೆ. ಹೀಗಾಗಿ ಈ ಹಿಂದೆ ನಡೆದಿದ್ದೆಲ್ಲವನ್ನು ಮೆಲುಕು ಹಾಕಿಕೊಂಡು ಆಮ್ರಪಾಲಿಯ ಮೇಲೆ ಅನುಮಾನ ಶುರು ಮಾಡಿದ್ದಾಳೆ. ಅದಕ್ಕೆ ತಕ್ಕಂತೆ ಆಮ್ರಪಾಲಿ ಬೇರೆ ಪಟಪಟ ಅಂತ ಉತ್ತರ ಕೊಡದೆ ಹಿಂದೆ ಮುಂದೆ ಯೋಚಿಸುತ್ತಿದ್ದಾಳೆ.

More from Filmibeat

English summary
Colors Kannada Tripura Sundari serial Written Update on April 4th episode. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X