Tripura sundari: ಒಬ್ಬಳೆ ಹೋರಾಡಿ ಸಾಕಾಗಿದೆ ಎಂದ ಆಮ್ರಪಾಲಿಗೆ ಬೆಂಬಲ ಕೊಡ್ತಾನಾ ಪ್ರದ್ಯುಮ್ನ..?

By ಎಸ್ ಸುಮಂತ್

ಆಮ್ರಪಾಲಿಗೆ ರಾಜಕುಮಾರ ಹತ್ತಿರದಲ್ಲಿಯೇ ಇದ್ದರು ಕಾಣಿಸುತ್ತಿಲ್ಲ. ರಾಜಕುನಾರನ ಮನೆಯಲ್ಲಿಯೇ ಇದ್ದರು ಗೊತ್ತಾಗುತ್ತಿಲ್ಲ. ರಾಜಕುಮಾರನಿಗಾಗಿಯೇ ಅರಸಿ ಭೂಲೋಕಕ್ಕೆ ಬಂದಿದ್ದಾಳೆ. ಪ್ರದ್ಯುಮ್ನನ ಬಗ್ಗೆ ಆಗಾಗ ಹೊಸ ಭಾವನೆ ಉಕ್ಕುತ್ತದೆ. ಆದರೆ, ಅದನ್ನು ಪ್ರೀತಿ ಎಂದು ತಿಳಿಯುವುದೇ ಕಷ್ಟವಾಗುತ್ತಿದೆ.

ಆ ಕಡೆ ಪ್ರದ್ಯಮ್ನನಿಗೂ ಅಷ್ಟೇ ಯುಕ್ತಿಯ ಜೊತೆಗೆ ಮದುವೆಯ ಮಾತುಕತೆ ನಡೆದಿದೆ. ಆದರೆ, ಪ್ರದ್ಯುಮ್ನನ ಮನಸ್ಸು ಮಾತ್ರ ಆಮ್ರಪಾಲಿಯ ಕಡೆಗೆ ವಾಲುತ್ತಿದೆ. ಆಮ್ರಪಾಲಿ ಏನಾದರೂ ಕಷ್ಟದಲ್ಲಿ ಸಿಲುಕಿದ್ದಾಳೆ ಎಂದರೆ ಮೊದಲು ಗೊತ್ತಾಗುವುದು ಇದೇ ಪ್ರದ್ಯುಮ್ನನಿಗೆ. ಈಗ ಆಮ್ರಪಾಲಿ ಅದೆಷ್ಟು ನೊಂದಿದ್ದಾಳೆ. ಅಂದ್ರೆ ಪ್ರದ್ಯುಮ್ನನ ಮಾರ್ಗದರ್ಶನದ ಅವಶ್ಯಕತೆ ಬಹಳ ಇದೆ.

Tripura Sundari serial Written Update on June 14th episode

ಯುಕ್ತಿಯಿಂದ ಆಮ್ರಪಾಲಿಗೆ ಅಪಾಯ

ಯುಕ್ತಿಗೆ ಮೊದಲಿನಿಂದಾನೂ ಆಮ್ರಪಾಲಿಯನ್ನು ಕಂಡರೆ ಆಗುವುದಿಲ್ಲ. ಸಾಕಷ್ಟು ತೊಂದರೆಯನ್ನು ಕೊಟ್ಟಿದ್ದಾಳೆ. ಈಗ ಎಲ್ಲರ ಮುಂದೆಯೇ ಆಮ್ರಪಾಲಿಯ ಕೈಯ್ಯನ್ನು ಕುಯ್ದಿದ್ದಾಳೆ. ಯಾಕಂದ್ರೆ, ಆಮ್ರಪಾಲಿ ಸಾಮಾನ್ಯ ಮನುಷ್ಯಳಲ್ಲ ಎಂಬುದು ಯುಕ್ತಿಗೆ ಅದಾಗಲೇ ಗೊತ್ತಾಗಿತ್ತು. ಹೀಗಾಗಿ ಎಲ್ಲರೆದುರು ಅವಳನ್ನು ಸಿಕ್ಕಿ ಬೀಳಿಸಬೇಕೆಂಬ ಪ್ಲ್ಯಾನ್ ಮಾಡಿದ್ದಳು. ಆದರೆ, ಯುಕ್ತಿ ಅಂದುಕೊಂಡಂತೆ ನಡೆಯಲು ದೇವರು ಬಿಡಲಿಲ್ಲ. ಆಮ್ರಪಾಲಿ ಎಲ್ಲರೆದುರು ಸಿಕ್ಕಿಬೀಳಲಿಲ್ಲ. ಆ ಗಾಯವನ್ನು ಕಂಡು ಪ್ರದ್ಯುಮ್ನನಿಗೆ ತುಂಬಾ ನೋವಾಯ್ತು. ಎಲ್ಲರೂ ಯುಕ್ತಿಯನ್ನೇ ಬೈದು, ಆಮ್ರಪಾಲಿವೆ ಕಾಳಜಿ ತೋರಿಸಲು ಶುರು ಮಾಡಿದರು. ಗಾಯಕ್ಕೆ ಪ್ರದ್ಯುಮ್ನ ಬ್ಯಾಂಡೇಜ್ ಸುತ್ತಿದೆ.

ದುಃಖದಲ್ಲಿದ್ದಾಳೆ ಆಮ್ರಪಾಲಿ

ಆಮ್ರಪಾಲಿ ಭೂಮಿಗೆ ಬಂದಾಗಿನಿಂದ ಬಂದ ಕಷ್ಟಗಳು ಅಷ್ಟಿಷ್ಟಲ್ಲ. ರಾಜಕುಮಾರನನ್ನು ಹುಡುಕಲು ಇದ್ದದ್ದು ಒಂದೇ ದಾರಿ ಅದುವೇ ಪದಕ. ರಾಜಕುಮಾರ ಹತ್ತಿರ ಇದ್ದಾಗ ಆ ಪದಕ ಹೊಳೆಯುತ್ತಿತ್ತು. ಆದರೀಗ ಅಂತ ಅವಕಾಶವೂ ಇಲ್ಲದಂತೆ ಆಗಿದೆ. ರಾಜಕುಮಾರ ಹತ್ತಿರದಲ್ಲಿದ್ದರು ಕಂಡು ಹಿಡಿಯುವುದಕ್ಕೆ ಆಗುತ್ತಿಲ್ಲ. ರಾಜಕುಮಾರನನ್ನು ಪಡೆಯುವುದಕ್ಕೆ ಆಮ್ರಪಾಲಿ ಯಾವುದ್ ಯಾವುದೋ ದಾರಿಯನ್ನು ಕಷ್ಟದ ಹಾದಿಯಲ್ಲಿ ನಡೆದಳು ಆದರೂ, ಯಾವ ದಾರಿಯೂ ಯಶಸ್ಸು ಕಾಣಲಿಲ್ಲ. ಈಗ ಈ ಎಲ್ಲಾ ಪ್ರಯತ್ನಗಳು ಸೋತಿರುವುದಕ್ಕೆ ದುಃಖ ಹೆಚ್ಚಾಗಿದೆ. ಒಂಟಿತನ ಫೀಲ್ ಆಗಿದೆ.

Tripura Sundari serial Written Update on June 14th episode

ಪದಕ ಕಂಡು ಗಾಬರಿಯಾದ ದೇವಯಾನಿ

ಆಮ್ರಪಾಲಿ ಕಳೆದುಕೊಂಡ ಪದಕ ಮತ್ತೆ ದೇವಯಾನಿ ಕೈಗೆ ಸಿಕ್ಕಿದೆ. ದೇವಯಾನಿ ಅದನ್ನು ಜೋಪಾನವಾಗಿ ಕಾಪಾಡುತ್ತಿದ್ದಾಳೆ. ಜ್ಯೋತಿಷಿ ಬೇರೆ ಪ್ರದ್ಯುಮ್ನ ಇನ್ನು ಕೆಲವೇ ದಿನಗಳಲ್ಲಿ ಕೈ ಮೀರಿ ಹೋಗುತ್ತಾನೆ ಎಂಬುದನ್ನು ಹೇಳಿ ಕಳುಹಿಸಿದ್ದಾರೆ. ಇದರ ಯೋಚನೆಯಲ್ಲಿಯೇ ರೂಮಿಗೆ ಬಂದ ದೇವಯಾನಿಗೆ, ಪದಕ ಕಂಡು ಶಾಕ್ ಆಗಿದೆ. ಅಲ್ಲಿ ಪ್ರದ್ಯುಮ್ನ ಮತ್ತು ಆಮ್ರಪಾಲಿ ಹತ್ತಿರತ್ತಿರ ಇದ್ದ ಕಾರಣಕ್ಕೆ ಆ ಪದಕ್ಕೆ ಹೊಳೆಯುತ್ತಿತ್ತು. ಇದು ದೇವಯಾನಿಯ ಆತಂಕಕ್ಕೆ ಕಾರಣವಾಗಿದೆ. ಪ್ರದ್ಯುಮ್ನನ ಜೀವನದ ಪ್ರಶ್ನೆ ಬಂದಿದೆ. ಅಲ್ಲಿಗೆ ಬಂದ ಸತ್ಯ, ಹೆಂಡತಿಯ ಸ್ಥಿತಿ ಕಂಡು ಮತ್ತೆ ಪದಕದ ಬಗ್ಗೆ ಪ್ರಶ್ನೆ ಮಾಡಿದ್ದಾನೆ.

ಆಮ್ರಪಾಲಿಗೆ ಧೈರ್ಯ ತುಂಬ್ತಾನಾ ಪ್ರದ್ಯುಮ್ನ?

ಆಮ್ರಪಾಲಿಗೆ ಪ್ರಯತ್ನಗಳೆಲ್ಲಾ ಸೋತಿದ್ದು ದುಃಖವನ್ನು ಹೆಚ್ಚು ಮಾಡಿದೆ. ಯಾರಾದರೂ ಬೆಂಬಲಕ್ಕೆ ಬೇಕು ಎನಿಸಿದೆ. ಆಮ್ರಪಾಲಿ ಡಲ್ ಆಗಿದ್ದನ್ನು ಕಂಡು ಅವಳ ಬಳಿ ಬಂದ ಪ್ರದ್ಯುಮ್ನ, "ಮನಸ್ಸಲ್ಲಿರುವ ನೋವನ್ನು ಹೇಳಿಕೊಳ್ಳಿ ಆಮ್ರಪಾಲಿ" ಎಂದಾಗ, ಆಮ್ರಪಾಲಿ ನೋವನ್ನು ಹೊರ ಹಾಕಿದ್ದಾಳೆ. "ತುಂಬಾ ದುಃಖವಾಗ್ತಾ ಇದೆ ಆಪತ್ಬಾಂಧವ. ಒಂಟಿ ಎಂದು ಫೀಲ್ ಆಗ್ತಾ ಇದೆ. ಹೋರಾಟ ಮಾಡಿ ಮಾಡಿ ಧಣಿವಾಗಿದೆ. ತುಂಬಾ ಸುಸ್ತಾಗಿ ಬಿಟ್ಟಿದ್ದೀನೆ" ಎಂದಿದ್ದಾಳೆ. ಆಮ್ರಪಾಲಿಗೆ ಧೈರ್ಯ ನೀಡುವ ಹೆಗಲು ಬೇಕಾಗಿದೆ. ಅದು ಪ್ರದ್ಯುಮ್ನನೇ ಆಗಬೇಕು. ಆ ಕಡೆ ಪ್ರದ್ಯುಮ್ನನಿಗೂ ಸಮಾಧಾನ ಮಾಡಬೇಕು ಎನಿಸಿದರೂ ಯೋಚನೆ ಮಾಡುತ್ತಿದ್ದಾನೆ.

More from Filmibeat

English summary
Colors Kannada Tripura sundari serial Written Update on June 14th episode. Here is the details about Amrapali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X