Tripura sundari: ಛಾಯಾ ಬಣ್ಣ ಬಯಲು ಮಾಡಿದ ಆಮ್ರಪಾಲಿ.. ಈಗಲಾದರೂ ನಾಟಕ ಖತಂ ಮಾಡ್ತಾಳಾ?
ಆಸ್ತಿಯ ಆಸೆಗಾಗಿ, ಅಧಿಕಾರ ಪಡೆಯಲೇ ಬೇಕೆಂಬ ಹಠದಿಂದಾಗಿ ಛಾಯಾ ಮನೆಯಲ್ಲಿಯೇ ನಾಟಕವಾಡುವುದಕ್ಕೆ ಶುರು ಮಾಡಿದ್ದಾಳೆ. ಆದರೆ ಆ ನಾಟಕ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಗೊತ್ತಿರುವ ಯುಕ್ತಿ ಬಾಯಿ ಬಿಡಲು ಆಗುತ್ತಿಲ್ಲ. ಆದರೆ ಈಗ ಯುಕ್ತಿ ಮಾಡುವ ಪ್ಲ್ಯಾನ್‌ನಿಂದಾಗಿಯೇ ಆಮ್ರಾಪಾಲಿಯಿಂದ ಸತ್ಯ ಬಯಲಾಗಿದೆ.
ಯುಕ್ತಿ ತನ್ನ ಸ್ವಾರ್ಥಕ್ಕಾಗಿ ಛಾಯಾಳ ನಾಟಕವನ್ನು ಬಳಸಿಕೊಳ್ಳುತ್ತಿದ್ದಳು. ಯುಕ್ತಿಗೆ ವಿಚಾರ ಗೊತ್ತಾಗಿ ಬಿಟ್ಟಿದೆಯಲ್ಲ ಎಂಬ ಕಾರಣಕ್ಕೆ ಛಾಯಾಳೇನು ಭಯ ಪಡುವವಳಲ್ಲ. ಬದಲಿಗೆ ಅವಳನ್ನೇ ಸಿಕ್ಕಿ ಹಾಕಿದ್ದಾಳೆ. ಎರಡ್ಮೂರು ಘಟನೆಯಲ್ಲಿ ಛಾಯಾಳಿಂದ ನೋವು ಅನುಭವಿಸಿದವರಿದ್ದಾರೆ.

ಛಾಯಾಳಿಗೆ ಕಾಲು ಬರುತ್ತೆ ಅಂತ ಮನೆಯವರಿಗೆ ಗೊತ್ತಾಯ್ತು
ಛಾಯಾ ಇಷ್ಟು ದಿನ ನಾಟಕ ಮಾಡುತ್ತಿದ್ದಾಳೆ. ಆದರೆ ಮನೆಯವರಿಗೆ ಅದ್ಯಾವುದು ತಿಳಿಯುತ್ತಿಲ್ಲ. ಈಗ ಆಮ್ರಪಾಲಿ ಒಂದೇ ಹಠ ಮಾಡುತ್ತಿದ್ದಾಳೆ. ಛಾಯಾಳಿಗೆ ಕಾಲು ಬರುತ್ತದೆ ಎಂದು ಹೇಳುತ್ತಿದ್ದಾಳೆ. ಮೊದಲಿಗೆ ಸತ್ಯಜಿತ್ ಇದನ್ನು ನಂಬದೇ ಆಮ್ರಪಾಲಿಯ ಮೇಲೆಯೇ ಹೆಗರಾಡಿದ್ದ. ಆದರೆ ನಂತರ ಆಮ್ರಪಾಲಿಯ ಮಾತುಗಳು ಮನೆಯವರಿಗೆಲ್ಲಾ ಒಂದು ಗಾಢವಾದ ನಂಬಿಕೆ ತರಿಸಿದೆ.
ಎಲ್ಲಾ ಸತ್ಯ ಗೊತ್ತಿರುವ ಯುಕ್ತಿಗೆ, ಛಾಯಾ ಸಹಾಯ ಮಾಡುತ್ತಿಲ್ಲ. ಇದು ಯುಕ್ತಿಯ ಕೋಪಕ್ಕೆ ಕಾರಣವಾಗಿದೆ. ಅದೇ ಕಾರಣಕ್ಕಾಗಿಯೇ ಏನನ್ನೋ ಮಾತನಾಡುತ್ತಾ ಛಾಯಾಳನ್ನು ಸ್ವಿಮ್ಮಿಂಗ್ ಪೂಲ್‌ಗೆ ತಳ್ಳಿದ್ದಳು. ಆಮ್ರಪಾಲಿ ಅದೇ ಸಮಯಕ್ಕೆ ಬಂದು ಕಾಪಾಡಿದಳು. ಹಾಗಂತ ಛಾಯಾಳಿಗೆ ಸ್ವಿಮ್ಮಿಂಗ್ ಬರಲ್ಲ ಅಂತ ಏನಿರಲಿಲ್ಲ. ನಾಟಕದ ಮುಂದುವರೆದ ಭಾಗವಾಗಿತ್ತು. ಪ್ರಾಣವನ್ನು ಪಣಕ್ಕಿಟ್ಟಿದ್ದಳು. ಈಜು ಬರುತ್ತದೆ ಎಂದು ಮೇಲೆದ್ದು ಬಂದರೆ, ಇಷ್ಟು ದಿನ ಕಾಪಾಡಿದ ಸುಳ್ಳು ಕೂಡ ಎಲ್ಲರ ಎದುರು ಪ್ರಚಾರಕ್ಕೆ ಬಂದು ಬಿಡುತ್ತದೆ. ಅದೇ ಕಾರಣಕ್ಕಾಗಿ ನಾನು ಸತ್ತರು ಸರಿ ಈ ನಾಟಕ ಮುಂದುವರೆಸುತ್ತೇನೆ ಎಂದು ನೀರಿನಲ್ಲಿ ಒದ್ದಾಡುತ್ತಿದ್ದಳು.

ಯುಕ್ತಿಯ ಸಮರ್ಥನೆಗೆ ಸಾಥ್ ನೀಡಿದ ಆಮ್ರಪಾಲಿ
ಆಮ್ರಪಾಲಿ, ಛಾಯಾಳನ್ನು ಕಾಪಾಡಿದಳು. ಅಲ್ಲಿಗೆ ಬಂದ ಯುಕ್ತಿ ಹಾಗೂ ಈಶ್ವರಿ ಘಟನೆಯ ಸತ್ಯಾಸತ್ಯತೆಯನ್ನು ವಿವರಿಸಿದರು. ಯುಕ್ತಿಯೇ ಈ ಕೆಲಸ ಮಾಡಿದ್ದು ಎಂದ ಕೂಡಲೇ ಮನೆಯವರೆಲ್ಲರು ಗಾಬರಿಯಾದರು. ಆಗ ಈಶ್ವರಿ, ಮಗಳನ್ನು ಸಮರ್ಥಿಸಿಕೊಂಡಳು. ಛಾಯಾಳಿಗೆ ಕಾಲು ಬರಲಿ ಎಂದೇ ಈ ರೀತಿ ಮಾಡಿದ್ದು ಎಂದಳು. ಆಗ ಮಾತು ಜೋಡಿಸಿದ ಆಮ್ರಪಾಲಿ, "ಹೌದು ನಾನು ನೋಡಿದ್ದೇನೆ. ಛಾಯಾ ನೀರಿನಲ್ಲಿದ್ದಾಗ ತನ್ನ ಕಾಲುಗಳ ಸಹಾಯದಿಂದ ನಡೆದಳು. ಅವಳ ಕಾಲಿಗೆ ಶಕ್ತಿ ಇದೆ. ಅವಳಿಗೆ ನಡೆಯಲು ಸಾಧ್ಯ" ಎಂದಳು. ಇದನ್ನು ಕೇಳಿ ಮನೆಯವರೆಲ್ಲಾ ಆಮ್ರಪಾಲಿಗೆ ಧನ್ಯವಾದ ತಿಳಿಸಿದರು.
ಛಾಯಾ ಸರಿಯಾಗುತ್ತಾಳೆ ಎಂದರೆ ಮೊದಲು ಖುಷಿ ಪಡುವುದು ಪ್ರದ್ಯುಮ್ನನೆ. ಹೀಗಾಗಿ ಆಮ್ರಪಾಲಿ ನೀಡಿದ ಖುಷಿಯ ವಿಚಾರಕ್ಕೆ ಆಮ್ರಪಾಲಿಯನ್ನು ತಬ್ಬಿಕೊಂಡು ಧನ್ಯವಾದ ತಿಳಿಸಿದ. ಯಾಕಂದ್ರೆ, ತನ್ನಿಂದಾನೇ ಅಕ್ಕನ ಕಾಲು ಕಳೆದುಕೊಳ್ಳಬೇಕಾಯಿತು ಎಂಬ ಗಿಲ್ಟ್‌ನಲ್ಲಿದ್ದಾನೆ. ಆದರೆ ಛಾಯಾಳ ನಾಟಕ ಮಾತ್ರ ಅವನಿಗೆ ತಿಳಿಯುತ್ತಿಲ್ಲ. ಛಾಯಾಳ ಬಗ್ಗೆ ಯಾರೇ ತಪ್ಪಾಗಿ ಮಾತನಾಡಿದರು ಅದನ್ನು ಪ್ರದ್ಯುಮ್ನ ಸಹಿಸುವುದಿಲ್ಲ. ಅಲ್ಲೆ ಡ್ರಾ, ಅಲ್ಲೆ ಬಹುಮಾನ ಎಂಬಂತೆ ಕೊಡುತ್ತಾನೆ. ಅದಕ್ಕಾಗಿಯೇ ಯುಕ್ತಿ, ಛಾಯಾಳ ಬಗ್ಗೆ ಮಾತನಾಡುವುದಕ್ಕೆ ಹಿಂದೆ ಮುಂದೆ ನೋಡ್ತಾಳೆ. ಎಲ್ಲಾ ಸತ್ಯ ಗೊತ್ತಿದ್ದರು ಹೇಳುವುದಕ್ಕೆ ಹೆದರುತ್ತಾಳೆ.


Click it and Unblock the Notifications











