Tripura Sundari: ಆಮ್ರಪಾಲಿಗೆ ಹೋದ ಪ್ರಾಣ ವಾಪಸ್ ಬಂತು.. ರಾಜಕುಮಾರನಾಗಿ ಬದಲಾಗುತ್ತಾನಾ ಪ್ರದ್ಯುಮ್ನ?
ಆಮ್ರಪಾಲಿಗೆ ತನ್ನ ರಾಜಕುಮಾರನನ್ನು ಹುಡುಕುವುದೇ ದೊಡ್ಡ ಸವಾಲಿನ ಕೆಲಸವಾಗಿದೆ. ರಾಜಕುಮಾರನನ್ನು ಕಂಡು ಹಿಡಿಯಲು ಇದ್ದ ಒಂದೇ ಒಂದು ಪದಕವನ್ನು ಆಮ್ರಪಾಲಿ ಕಳೆದುಕೊಂಡಿದ್ದಾಳೆ. ಪದಕ ಇಲ್ಲದೆ ಇದ್ದರೂ, ರಾಜಕುಮಾರ ಅಷ್ಟು ಹತ್ತಿರದಲ್ಲಿದ್ದರೂ ಆಮ್ರಪಾಲಿಗೆ ಮಾತ್ರ ಅದು ತಿಳಿಯುತ್ತಲೇ ಇಲ್ಲ. ಪ್ರದ್ಯುಮ್ನ ಮನೆಯಲ್ಲಿ ಎಲ್ಲರ ಬಳಿಯೂ ಆ ಪದಕ ಓಡಾಡಿದಾಗಲೂ ಆಮ್ರಪಾಲಿಗೆ ಅದರ ಸುಳಿವು ಸಿಗಲೇ ಇಲ್ಲ.
ಸದ್ಯ ಆಮ್ರಪಾಲಿ ಛಾಯಾ ಮತ್ತು ಯುಕ್ತಿಯ ಕಿತಾಪತಿಯಿಂದ ಮನೆ ಬಿಟ್ಟು ಬಂದಿದ್ದಾಳೆ. ಈಗ ಅವಳ ಮುಂದಿರುವ ಸವಾಲು ಎಂದರೆ ಆ ಪದಕವನ್ನು ಮೊದಲು ಹುಡುಕಬೇಕು. ತಂದೆಯವರನ್ನು ಭೇಟಿ ಮಾಡಬೇಕು. ಅದೆಲ್ಲವೂ ಅಷ್ಟು ಸುಲಭವಲ್ಲ. ಆದರೆ ಸೂರ್ಯ ದೇವ ಆಮ್ರಪಾಲಿಯ ಕೈಬಿಟ್ಟಿಲ್ಲ. ಹೋದ ಜೀವ ಮತ್ತೆ ಬಂದಿದೆ.

ಪ್ರಾಣ ಕಳೆದುಕೊಂಡಿದ್ದ ಆಮ್ರಪಾಲಿ
ಆ ಕಡೆ ತಂದೆಯ ಭೇಟಿ ಸಾಧ್ಯವಾಗದಂತೆ ಮಾಡಿದ್ದಾರೆ ಶತ್ರುಗಳು. ಈ ಕಡೆ ಭೂಮಿ ಮೇಲೆ ತನ್ನ ಶಕ್ತಿ ಕುಂದುತ್ತಾ ಇದೆ. ಮತ್ತೊಂದು ಕಡೆ ಆಪತ್ಬಾಂಧವ ಎಂದು ನಂಬಿದ್ದ ಪ್ರದ್ಯುಮ್ನನ ಮನೆಯವರು ಹೊರಗೆ ಕಳುಹಿಸಿದ್ದಾರೆ. ಈ ಎಲ್ಲಾ ಯೋಚನೆಯಲ್ಲಿ ಬರುತ್ತಿದ್ದಾಗ ಸಿಕ್ಕವನೇ ನಾಗರಾಜ ವಂಶದವನು. ಯಾವತ್ತೋ ಒಂದು ದಿನ ಸಹಾಯ ಮಾಡಿದ್ದ ಋಣ ಇಟ್ಟುಕೊಂಡು ಈಗ ಸಹಾಯಕ್ಕೆ ನಿಂತಿದ್ದ. ಆಮ್ರಪಾಲಿ ಕೇಳಿದ ಸಹಾಯ ನಾಗರಾಜನಿಂದ ಅಸಾಧ್ಯವಾಗಿತ್ತು. ಆಮ್ರಪಾಲಿ ಪ್ರಾಣ ಕಳೆದುಕೊಂಡರೆ ಮಾತ್ರ ತಂದೆಯ ಭೇಟಿ ಮಾಡಬಹುದಾಗಿತ್ತು. ಅದಕ್ಕೆ ಆಮ್ರಪಾಲಿಯೂ ಒಪ್ಪಿದ್ದಳು.
ಪ್ರದ್ಯುಮ್ನನ ಕೈಗೆ ಅಜೀವವಾಗಿ ಸಿಕ್ಕ ಆಮ್ರಪಾಲಿ
ತಂದೆಯ ಭೇಟಿಗೆ ತನ್ನ ಪ್ರಾಣವನ್ನೇ ಅರ್ಪಿಸಿದ್ದ ಆಮ್ರಪಾಲಿಯ ದೇಹ ದೇವಸ್ಥಾನದ ನದಿಯ ದಡದಲ್ಲಿ ಬಿದ್ದಿತ್ತು. ಆಮ್ರಪಾಲಿಗೆ ಏನೇ ಸಂಕಷ್ಟ ಎದುರಾದರೂ ಅದು ಪ್ರದ್ಯುಮ್ನನ ಅರಿವಿಗೆ ಬರುತ್ತದೆ. ಅದರಂತೆ ಈ ಬಾರಿಯೂ ಫೀಲ್ ಆಗಿ ಹುಡುಕಿಕೊಂಡು ಬಂದವನಿಗೆ ಕಂಡಿದ್ದು, ಪ್ರಾಣವಿಲ್ಲದ ಆಮ್ರಪಾಲಿಯ ದೇಹ. ಒಂದು ಕ್ಷಣ ಶಾಕ್ ಆಗಿದ್ದಾನೆ. ಆಕೆಯನ್ನು ಕಂಡು ಕಣ್ಣೀರು ಹಾಕಿದ್ದಾನೆ.
ಪ್ರದ್ಯುಮ್ನನಿಂದಾನೇ ಬಂತು ಪ್ರಾಣ
ಪ್ರದ್ಯುಮ್ನ, ಆಮ್ರಪಾಲಿಗೆ ಹತ್ತಿರವಿದ್ದಷ್ಟು ಅವಳಲ್ಲಿ ಹೊಸ ಚೈತನ್ಯ ಬರುತ್ತೆ. ಹೆಚ್ಚು ಶಕ್ತಿ ಉತ್ಪತ್ತಿಯಾಗುತ್ತೆ. ತಂದೆಯ ಭೇಟಿಗೆಂದು ಪ್ರಾಣ ತ್ಯಾಗ ಮಾಡಿದ್ದ ಆಮ್ರಪಾಲಿಗೆ, ಪ್ರದ್ಯುಮ್ನ ಸನಿಹವಾಗಿದ್ದೆ, ಒಳ್ಳೆಯದ್ದಾಗಿದೆ. ಅದರಲ್ಲೂ ಆಮ್ರಪಾಲಿ ಸ್ಥಿತಿ ಕಂಡು ಪ್ರದ್ಯುಮ್ನ ಹಾಕಿದ ಕಣ್ಣೀರಿನಿಂದ ಅವಳ ಜೀವ ಮರುಕಳುಹಿಸಿದೆ. ಬಿದ್ದ ಪ್ರದ್ಯುಮ್ನನ ಕಣ್ಣೀರ ಹನಿ ಅವಳನ್ಬು ಎಚ್ಚರಿಸಿದೆ. ಆ ಕಡೆ ಪುಟಾಣಿ ಕೂಡ ಆಮ್ರಪಾಲಿಗಾಗಿ ಸೂರ್ಯದೇವನನ್ನು ಕೇಳಿಕೊಂಡಿದ್ದಾಳೆ.

ಆಮ್ರಪಾಲಿಯ ಹಿಂದೆ ಹೋಗ್ತಾನಾ ಪ್ರದ್ಯುಮ್ನ..?
ಆಮ್ರಪಾಲಿಗೆ ಪ್ರದ್ಯುಮ್ನನ ಕಣ್ಣೀರ ಹನಿಯ ಸ್ಪರ್ಶವಾಗುತ್ತಲೇ ಜೀವ ಬಂದಿದೆ. ಜೀವ ಹೋದಾಗ ತಂದೆಯನ್ನು ಭೇಟಿ ಮಾಡಿದ್ದಳು. ಅವರು ಒಂದಷ್ಟು ಸಲಹೆಯನ್ನು ನೀಡಿದ್ದರು. ಎಲ್ಲಿ ಹೋಗಬೇಕು? ಬಿಡಬೇಕು ಎಂಬುದನ್ನು ಹೇಳಿದ್ದರು. ಪ್ರಾಣ ಬಂದ ಕೂಡಲೇ ಆಮ್ರಪಾಲಿಗೇನೆ ಶಾಕ್ ಆಗಿದೆ. ನನಗೆ ಮತ್ತೆ ಜೀವ ಬಂತಾ ಎಂದು ಪ್ರಶ್ನಿಸಿಕೊಂಡು, ತಂದೆ ಹೇಳಿದ ದೇವಸ್ಥಾನದ ಮೂಲ ಹುಡುಕಿಕೊಂಡು ಹೊರಟಿದ್ದಾಳೆ. ಆಮ್ರಪಾಲಿಯನ್ನು ಕಾಪಾಡು ದೇವರೇ ಅಂತ ಮನವಿ ಮಾಡಿಕೊಂಡು, ವಾಪಾಸ್ ಬರುವುದರೊಳಗೆ ಆಮ್ರಪಾಲಿ ಆ ಜಾಗದಲ್ಲಿ ಇರಲಿಲ್ಲ. ಇದನ್ನು ಕಂಡ ಪ್ರದ್ಯುಮ್ನ ಶಾಕ್ ಆಗಿದ್ದಾನೆ. ತಕ್ಷಣ ಅವಳನ್ನು ಹುಡುಕುತ್ತಾ ಹೊರಟಿದ್ದಾನೆ.


Click it and Unblock the Notifications











