Tripura sundari: ಆಮ್ರಪಾಲಿಯಿಂದಾನೇ ಸಂಕಷ್ಟಕ್ಕೆ ಸಿಲುಕುತ್ತಾನಾ ಪ್ರದ್ಯುಮ್ನ..?
ಪ್ರದ್ಯುಮ್ನ ಎಂದರೆ ಮಾಯಿಗೆ ಇನ್ನಿಲ್ಲದ ಪ್ರೀತಿ. ಮನೆಗೆ ಮಗನಾಗಿರುವ ಪ್ರದ್ಯುಮ್ನನನ್ನೇ ಉತ್ತರಾಧಿಕಾರಿಯಾಗಿ ಮಾಡಬೇಕೆಂಬ ಆಸೆ ಅವರದ್ದು. ಅವರ ಆಸೆಯಂತೆಯೇ ಈಗ ಪ್ರದ್ಯುಮ್ನನ ಉತ್ತರಾಧಿಕಾರ ನಡೆಯುತ್ತಿದೆ. ಇದನ್ನು ಛಾಯಾಳಿಂದ ಸಹಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಅದರಲ್ಲೂ ತಾನೇ ಎಲ್ಲಾ ಅಧಿಕಾರವನ್ನು ಅನುಭವಿಸಬೇಕು ಎಂಬ ಆಸೆಯನ್ನಿಟ್ಟುಕೊಂಡಿದ್ದಾಳೆ.
ಅದಕ್ಕಾಗಿಯೇ ಕಾಲು ಸರಿಯಿಲ್ಲ ಎಂಬ ನಾಟಕವಾಡುತ್ತಿದ್ದಾಳೆ. ಮನೆಯವರೆಲ್ಲಾ ಆ ನಾಟಕವನ್ನು ಚೆನ್ನಾಗಿಯೇ ನಂಬಿದ್ದಾರೆ. ಛಾಯಾಳಿಗೆ ಸುಮಾರು ಸಲ ಕೇಳಿದ್ದರು, ನನಗೆ ಯಾವುದೇ ಬೇಸರ ಇಲ್ಲ, ಪ್ರದ್ಯುಮ್ನನಿಗೆ ಉತ್ತರಾಧಿಕಾರ ಮಾಡಿ ಎಂದೇ ತಿಳಿಸಿದ್ದಾಳೆ. ಅವಳ ಮನಸ್ಸಲ್ಲಿ ಒಳ್ಳೆಯದ್ದೇ ಇದೆ ಅಂತ ಮನೆಯವರೆಲ್ಲಾ ಪ್ರದ್ಯುಮ್ನನಿಗೆ ಪಟ್ಟ ಕಟ್ಟಲು ಹೊರಟಿದ್ದಾರೆ. ಈ ದಿನಕ್ಕಾಗಿ ಹೊಂಚು ಹಾಕುತ್ತಿದ್ದ ಛಾಯಾ, ಸರಿಯಾದ ಸಮಯಕ್ಕೆ ಅಸ್ತ್ರ ಉಪಯೋಗಿಸಿದ್ದಾಳೆ. ಅದಕ್ಕೆ ಯುಕ್ತಿಯ ಸಾಥ್ ಕೂಡ ಸಿಕ್ಕಿದೆ.

ಆಮ್ರಪಾಲಿಯೇ ಮಾಡಿದ ವಿಡಿಯೋ
ಆಮ್ರಪಾಲಿ ಮತ್ತು ಪ್ರದ್ಯುಮ್ನ ಮಾತನಾಡುತ್ತಾ ಕುಳಿತಿದ್ದರು. ಈ ವೇಳೆ ಪ್ರದ್ಯುಮ್ನ, ಹಳೆಯ ಘಟನೆಯನ್ನು ಹೇಳಿದ್ದ. ಮೊದಲೇ ಆಮ್ರಪಾಲಿಗೆ ಫೋನನ್ನು ಹೇಗೆ ಬಳಸಬೇಕು ಎಂಬುದು ತಿಳಿದಿಲ್ಲ. ಹೀಗಾಗಿ ಅದು ಹೇಗೆ ರೆಕಾರ್ಡ್ ಆಯ್ತು ಎಂಬ ಅರಿವು ಇಲ್ಲ. ಆ ವಿಡಿಯೋ ಛಾಯಾಳ ಕೈಗೆ ಸಿಕ್ಕಿದೆ. ಅದರಲ್ಲಿ ಛಾಯಾಳ ಲವ್ವರ್‌ನನ್ನು ನಾನೇ ಕೊಂದೆ ಎಂಬುದಾಗಿ ಪ್ರದ್ಯುಮ್ನ ಮಾತನಾಡಿದ್ದ. ಮೊದಲೇ ಸಮಯಕ್ಕಾಗಿ ಕಾಯುತ್ತಿದ್ದ ಛಾಯಾಳಿಗೆ ದೊಡ್ಡ ಅಸ್ತ್ರವೇ ಸಿಕ್ಕಿದ್ದು ಮಾತ್ರ, ತನ್ನ ದುರಾಸೆಗೆ ಹಿಡಿದ ಕೈಗನ್ನಡಿಯಾಯಿತು.
ಛಾಯಾಳಿಂದ ಕಿತಾಪತಿ
ಆ ವಿಡಿಯೋವನ್ನು ತನ್ನ ಮೊಬೈಲ್‌ಗೂ ಕಳುಹಿಸಿಕೊಂಡಿದ್ದ ಛಾಯಾ, ಸಮಯಕ್ಕಾಗಿ ಹೊಂಚು ಹಾಕಿದ್ದಳು. ಉತ್ತರಾಧಿಕಾರಿಯಾಗಿ ಪ್ರದ್ಯುಮ್ನನನ್ನು ಮಾಡುವ ಸಮಯದಲ್ಲಿ ಆ ವಿಡಿಯೋವನ್ನು ಎಲ್ಲಿ ಬಿಡಬೇಕೋ ಅಲ್ಲಿಯೇ ಬಿಡಬೇಕು ಎಂದು ತೀರ್ಮಾನಿಸಿದ್ದಳು. ಇವತ್ತು ಪಟ್ಟ ಕಟ್ಟುವ ಮುನ್ನವೇ ಆ ವಿಡಿಯೋವನ್ನು, ಜಗದೀಶ್ ಎಂಬುವವರಿಗೆ ಕಳುಹಿಸಿದ್ದಾಳೆ. ಅದರಲ್ಲೂ ಆಮ್ರಪಾಲಿಯ ಫೋನಿನಿಂದಾನೇ ಕಳುಹಿಸಿರುವುದು ಮಾತ್ರ ವಿಶೇಷ. ಯಾರಿಗೂ ಅನುಮಾನ ಬಾರದಂತೆ ಕಳುಹಿಸಿದ್ದಾಳೆ. ನೋಡಿದವರಿಗೆ ಇದು ಯುಕ್ತಿ ಮಾಡಿರುವ ಕಿತಾಪತಿ ಎಂದೇ ಎನಿಸಿದೆ.

ಆಪತ್ಭಾಂದವನ ಬಗ್ಗೆ ಗೊತ್ತಾಯ್ತು ಸತ್ಯ
ನಿನಾದ್, ಆಮ್ರಪಾಲಿಯ ಮೊಬೈಲ್ ಚೆಕ್ ಮಾಡಿದಾಗ ವಿಚಾರ ಹೊರಗೆ ಬಂದಿದೆ. ಆಮ್ರಪಾಲಿಯನ್ನು ಕೇಳಿದಾಗ ನಾನು ಮಾಡಿಲ್ಲ. ಫೋನ್ ಬಳಕೆಯೂ ಗೊತ್ತಿಲ್ಲ ಎಂದು ಹೇಳಿದ್ದಾಳೆ. ಅದು ಮನೆಯವರಿಗೂ ಗೊತ್ತಿರುವ ವಿಚಾರ. ಆಮ್ರಪಾಲಿಗೆ ಮೊಬೈಲ್ ಬಳಕೆ ಅಷ್ಟಾಗಿ ಗೊತ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಜೊತೆಗೆ ಆ ಜಗದೀಶ್ ಎಂಬ ವ್ಯಕ್ತಿಯೂ ಯಾರು ಎಂಬುದು ಗೊತ್ತಿಲ್ಲ ಎಂದಿದ್ದಾಳೆ. ಇದರಿಂದ ಆಪತ್ಭಾಂಧವನಿಗೆ ತೊಂದರೆ ಇದೆ. ಆ ಜಗದೀಶ್ ಎಂಬುವವರು ಮೀಡಿಯಾದವರಾಗಿದ್ದರೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಆಮ್ರಪಾಲಿ ಎಲ್ಲರಿಗೂ ಮಾತು ಕೊಟ್ಟಿದ್ದಾಳೆ. ಯಾವುದೇ ಕಾರಣಕ್ಕೂ ಆಪತ್ಭಾಂಧವನಿಗೆ ಕೆಟ್ಟದಾಗುವುದಕ್ಕೆ ಬಿಡಲ್ಲ ಎಂದಿದ್ದಾಳೆ.
ಛಾಯಾಳ ಕನಸು ನನಸಾಗುತ್ತಾ..?
ಛಾಯಾಳ ಪ್ಲ್ಯಾನ್ ಸಕ್ಸಸ್ ಆದ್ರೆ ಪ್ರದ್ಯುಮ್ನನ ಉತ್ತರಾಧಿಕಾರಿಯಾಗಲ್ಲ ಬದಲಿಗೆ ಜೈಲಿನಲ್ಲಿ ಕೂರುತ್ತಾನೆ. ಯಾಕಂದ್ರೆ ಆ ವಿಡಿಯೋದಲ್ಲಿ ತಾನೇ ಕೊಲೆ ಮಾಡಿರುವುದು ಎಂಬುದಾಗಿ ಪ್ರದ್ಯುಮ್ನ ಹೇಳಿರುವುದು ವಿಡಿಯೋ ಸಮೇತ ರೆಕಾರ್ಡ್ ಆಗಿದೆ. ಹೀಗಾಗಿ ಪ್ರದ್ಯುಮ್ನನಿಗೆ ಕಂಟಕ ಗ್ಯಾರಂಟಿ. ಛಾಯಾಳ ಆಸೆಯಂತೆ ಪ್ರದ್ಯುಮ್ನ ಅರೆಸ್ಟ್ ಆದರೆ, ತಾನೂ ಉತ್ತರಾಧಿಕಾರಿಯಾಗಬಹುದು ಎಂಬ ಕನಸು ಕಾಣುತ್ತಿದ್ದಾಳೆ. ಆದರೆ ಗಂಧರ್ವ ಕನ್ಯೆಯಾಗಿರುವ ಆಮ್ರಪಾಲಿ ಇದಕ್ಕೆಲ್ಲ ಅವಕಾಶ ಕೊಡಲ್ಲ.


Click it and Unblock the Notifications











