Tripura Sundari: ಕೊನೆಗೂ ಆ ಸಮಯ ಬಂದೇ ಬಿಟ್ಟಿತು.. ಸಾವುಗೆದ್ದ ಆಮ್ರಪಾಲಿ ರಾಜಕುಮಾರನನ್ನು ಗೆಲ್ಲುತ್ತಾಳಾ ?

By ಎಸ್ ಸುಮಂತ್

ಅಂತು ಇಂತು ಗಂದರ್ವ ಲೋಕದ ರಾಜಕುಮಾರ ಸಿಕ್ಕಂತಾಗಿದೆ. ಇಷ್ಟು ವರ್ಷ ಅವನಿಗಾಗಿಯೇ ಕಾಯುತ್ತಿದ್ದಳು. ಗಂದರ್ವ ಲೋಕವನ್ನು ಬಿಟ್ಟು ಭೂಲೋಕಕ್ಕೆ ಬಂದ ಆಮ್ರಪಾಲಿಗೆ ಎಲ್ಲಾ ಕಡೆಯಿಂದಾನೂ ಸೋಲು ಕಾಣುತ್ತಾ ಇತ್ತು. ಸೋತೇ ಬಿಡುತ್ತೀನಿ ಎಂದುಕೊಂಡ ಆಮ್ರಪಾಲಿಗೆ ಯಕ್ಷ ರಾಜನಿಂದ ದಾರಿ ಸಿಕ್ಕಿದೆ.

ಆಮ್ರಪಾಲಿಗೆ ರಾಜಕುಮಾರನನ್ನು ಹುಡುಕಲೇಬೇಕಾದ ಅನಿವಾರ್ಯತೆ ಇತ್ತು. ಯಾಕಂದ್ರೆ, ಗಂದರ್ವ ಲೋಕ ರಾಕ್ಷಸ ಧನಂಜಯ ಕೈಯಿಂದ ಹಾಳಾಗುತ್ತಿತ್ತು. ಆದ್ರೆ ರಾಜಕುಮಾರ ಪಕ್ಕದಲ್ಲಿಯೇ ಇದ್ದರು. ಮಿಸ್ಸಾಗಿದ್ದ ಪದಕದಿಂದ ಅವನನ್ನು ಹುಡುಕಲು ಸಾಧ್ಯವಾಗಲೇ ಇಲ್ಲ.

Tripura Sundari serial Written Update on May 24th episode

ಆಮ್ರಪಾಲಿಗೆ ಜೀವದಾನ ಮಾಡಿದ ಯಕ್ಷರಾಜ

ಆಮ್ರಪಾಲಿ ಒಬ್ಬರಿಬ್ಬರ ಸಹಾಯವನ್ನು ಕೇಳಲಿಲ್ಲ. ಎಲ್ಲರ ಸಹಾಯವನ್ನು ಕೇಳುತ್ತಾ ಬಂದಳು. ರಾಜಕುಮಾರನನ್ನು ಹುಡುಕಲು ನಾಗರಾಜನಿಂದಲೂ ಸಹಾಯ ಪಡೆದಳು. ಆಗಲೂ ಪ್ರಾಣಕ್ಕೆ ಕುತ್ತು ಬಂದಿತ್ತು. ಈಗ ಯಕ್ಷರಾಜನಿಂದ ಇದಕ್ಕೊಂದು ದಾರಿ ಸಿಗುತ್ತೆ ಎಂದು ಹೊರಟವಳಿಗೆ ಮತ್ತೆ ಅಪಾಯ ಎದುರಾಗಿತ್ತು. ಆಮ್ರಪಾಲಿ ಸ್ವಾರ್ಥದವಳಲ್ಲ. ಅಪ್ಪನ - ಆಪತ್ಭಾಂಧವನ ಎಂದು ಕೇಳಿದಾಗ ತನ್ನ ಪ್ರಾಣವನ್ನೇ ಕೊಡುವುದಕ್ಕೆ ಮುಂದಾದಳು. ಆಗ ಯಕ್ಷರಾಜನಿಂದ ಮತ್ತೆ ಸಹಾಯ ಸಿಕ್ಕಿತು. ಯಕ್ಷರಾಜ ಯಾರ ಪ್ರಾಣವನ್ನು ತೆಗೆಯದೆ‌ ಮತ್ತೆ ಅವಕಾಶಗಳ ಬಾಗಿಲನ್ನು ತೆರೆದನು. ಆಮ್ರಪಾಲಿ ಅದನ್ನು ಹುಡುಕುತ್ತಾ ಹೊರಟಳು.

ಚಂದ್ರ ಬಿಂಬದಿಂದ ತಿಳಿಯುತ್ತಾ ಸತ್ಯ?

ತಂದೆಯನ್ನು ಕಾಣುವುದಕ್ಕೇನೆ ಆಮ್ರಪಾಲಿ ಸಾಕಷ್ಟು ಹರಸಾಹಸ ಪಟ್ಟಿದ್ದಳು. ಧನಂಜಯನಿಂದ ಅದೆಲ್ಲವೂ ತಪ್ಪಿ ಹೋಗಿತ್ತು. ದಿನೇ ದಿನೇ ಆಮ್ರಪಾಲಿಯ ಶಕ್ತಿಯೂ ಕುಂದುತ್ತಾ ಸಾಗಿತ್ತು. ಈಗ ತಂದೆಯವರನ್ನು ಭೇಟಿ ಮಾಡಿ, ರಾಜಕುಮಾರನನ್ನು ಹುಡುಕುವ ಪ್ರಯತ್ನಕ್ಕೆ ಕೈ ಹಾಕಿದ್ದಳು. ಅದಕ್ಕೆ ಜೊತೆಯಾದವನೇ ಯಕ್ಷರಾಜ. ಈಗ ತಂದೆಯ ಜೊತೆಗಿನ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದಾನೆ. ಆಮ್ರಪಾಲಿಗೆ ಅದೊಂದು ನೆಮ್ಮದಿ. ರಾಜಕುಮಾರನನ್ನು ಹುಡುಕುವುದಕ್ಕೆ ಅದೊಂದು ದಾರಿ. ಈಗ ತಂದೆಯ ಸಲಹೆಯಂತೆಯೇ ಎಲ್ಲವನ್ನು ಮಾಡುತ್ತಿದ್ದಾಳೆ. ಆಮ್ರಪಾಲಿಯ ಮುಂದೆ ಒಂದು ದೊಡ್ಡ ಬಟ್ಟಲಿನಲ್ಲಿ ನೀರು ಇದೆ. ಆ ನೀರಿನಲ್ಲಿ ಚಂದ್ರ ಕಂಡರೆ ರಾಜಕುಮಾರನು ಸಿಗುತ್ತಾನೆ. ಅದರಂತೆ ಆಮ್ರಪಾಲಿಗೆ ಚಂದಿರನನ್ನು ಕಂಡಿದ್ದಾನೆ.

Tripura Sundari serial Written Update on May 24th episode

ರಾಜಕುಮಾರ ಸಿಕ್ತಾನಾ?

ರಾಜಕುಮಾರನಿಗಾಗಿ ಗಂಧರ್ವ ಲೋಕದ ರಾಜಕುಮಾರಿ 23 ವರ್ಷಗಳ ಕಾಲ ಕಾದಿದ್ದಾಳೆ. ಭೂಮಿಯಲ್ಲಿಯೇ ಇರುವುದು ಎಂದು ಗೊತ್ತಾದ ಮೇಲೆ ಆಮ್ರಪಾಲಿ ಮನುಷ್ಯನ ರೂಪ ತಾಳಿ ಭೂಮಿಗೆ ಬಂದಿದ್ದಾಳೆ‌. ಬರುವ ಸೂರ್ಯನ ಪದಕವೊಂದನ್ನು ತಂದಿದ್ದಳು. ಆದರೆ ಆ ಪದಕವಿಲ್ಲದೆ ಸಮಸ್ಯೆ ಎದುರಿಸಬೇಕಾಯಿತು. ಈಗ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಂತಿದ್ದಾಳೆ. ಗಂಧರ್ವ ಲೋಕದ ರಾಜಕುಮಾರ ಸಿಗುವ ಸಮಯ ಹತ್ತಿರ ಬಂದಿದೆ. ಆತನನ್ನು ಗುರಿತಿಸಬೇಕಾದದ್ದು ಈಗ ಆಮ್ರಪಾಲಿಯದ್ದೇ ಕರ್ತವ್ಯವಾಗಿದೆ.

ಪ್ರದ್ಯುಮ್ನನನ್ನು ಕಂಡು ಶಾಕ್

ಆಮ್ರಪಾಲಿ ಯಾವಾಗಲೇ ಸಂಕಷ್ಟಕ್ಕೆ ಸಿಲುಕಿದರೆ ಸಹಾಯಕ್ಕೆ ಬರುತ್ತಾ ಇದ್ದದ್ದು ಪ್ರದ್ಯುಮ್ನ. ಅದಕ್ಕೆ ಆಮ್ರಪಾಲು ಅವನಿಗೆ ಆಪತ್ಭಾಂಧವ ಎಂದೇ ಕರೆಯುತ್ತಿದ್ದಳು. ಆಗಾಗ ತಾನು ಮನುಷ್ಯನಲ್ಲಿ, ತನ್ನಲ್ಲೂ ಯಾವುದೋ ಶಕ್ತಿ ಇದೆ ಎಂಬುದು ಪ್ರದ್ಯುಮ್ನನಿಗೆ ತಿಳಿಯುತ್ತಲೇ ಇತ್ತು. ಆದರೆ ಅದನ್ನು ಗಮನದರ್ವ ಲೋಕದ ಇಬ್ಬರು ಗುರುತಿಸಲೇ ಇಲ್ಲ. ಈಗ ಪ್ರದ್ಯುಮ್ನ ರಾಜಕುಮಾರನಾಗಿ ಬದಲಾಗಿದ್ದಾನೆ. ಇನ್ನು ಮುಂದೆ ಗಂಧರ್ವ ಲೋಕಕ್ಕೆ ಯಾರ ಕಾಟವೂ ಇರುವುದಿಲ್ಲ. ಈಗ ಸರಿಯಾದ ಸಮಯಕ್ಕೆ ರಾಜಕುಮಾರ ಸಿಗದೆ ಹೋಗಿದ್ದಲ್ಲಿ ಗಂಧರ್ವ ಲೋಕ ಸಂಪೂರ್ಣವಾಗಿ ಧನಂಜಯನ ಪಾಲಾಗುತ್ತಾ ಇತ್ತು.

More from Filmibeat

English summary
colors kannada Tripura sundari serial Written Update on May 24th episode. Here is the details about Rajakumara entry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X