Tripura sundari: ಪ್ರದ್ಯುಮ್ನನಿಗೆ ರಾಜಕುಮಾರಿ ಮೇಲೆಯೇ ಲವ್ವಾಗಿದೆ.. ಆದರೂ ಒಪ್ಪಿಕೊಳ್ಳುತ್ತಿಲ್ಲ..!
ಗಂಧರ್ವ ಲೋಕದ ರಾಜಕುಮಾರ ಸಿಗದ ಹೊರತು ಗಂಧರ್ವ ಲೋಕ ಉಳಿಯುವುದಿಲ್ಲ. ಧನಂಜಯ ಈಗಾಗಲೇ ಅತಿಕ್ರಮಣ ಮಾಡಿಕೊಳ್ಳುವುದಕ್ಕೆ ಬಂದು ಕೂತಿದ್ದಾನೆ. ಇದಕ್ಕೆಲ್ಲಾ ಪರಿಹಾರ ಸಿಗಬೇಕಾದರೆ ರಾಜಕುನಾರನ ಆಗಮನವಾಗಬೇಕಾಗಿದೆ. ಅದಕ್ಕೂ ಸಮಯ ದೂರವಿಲ್ಲ. ಆದರೆ ಬುದ್ದಿವಂತಿಕೆಯಿಂದ ನೋಡಬೇಕಾಗಿದೆ ಅಷ್ಟೆ.
ಆಮ್ರಪಾಲಿ ಮಾಡದೆ ಇದ್ದ ತಪ್ಪಿಗೆ ರಾಜಕುಮಾರನ ಮನೆಯಿಂದ ಹೊರ ನಡೆದಳು. ಯಾರ ಸಹಾಯವೂ ಇಲ್ಲದೆ ಒಂದಿಷ್ಟು ಏಳು ಬೀಳುಗಳನ್ನು ನೋಡಿದಳು. ಆದರೂ, ರಾಜಕುಮಾರನಿಗೆ ತಡೆಯಲಾಗಲಿಲ್ಲ. ಕಡೆಗೂ ಆಮ್ರಪಾಲಿಯನ್ನು ಹುಡುಕಿಕೊಂಡು ಬಂದು, ನೇರ ಮನೆಗೆ ಕರೆದುಕೊಂಡು ಬಂದಿದ್ದಾನೆ. ಆಮ್ರಪಾಲಿಯದ್ದು ಯಾವ ತಪ್ಪು ಇಲ್ಲ ಎಂದು ಎಲ್ಲರ ಮುಂದೆ ಸಾಬೀತು ಪಡಿಸಿದ್ದಾನೆ. ಈಗ ಮತ್ತೆ ಆಮ್ರಪಾಲಿ ಮನೆಯ ಸದಸ್ಯಳಾಗಿದ್ದಾಳೆ.

ಆಮ್ರಪಾಲಿಗೆ ಸಿಕ್ಕಿದೆ ರಾಜಕುಮಾರನ ಹೆಜ್ಜೆ ಗುರುತು
ತನ್ನ ತಂದೆಯನ್ನು ಕಾಣಲು ಆಮ್ರಪಾಲಿ ಕಾಡಿಗೆ ಹೋಗಿದ್ದಳು. ಅಲ್ಲಿ ಒಂದು ಅದ್ಭುತವೇ ನಡೆದಿತ್ತು. ಒಂದು ಬಟ್ಟಲಿನ ನೀರಿನಲ್ಲಿ ಇನ್ನೇನು ಚಂದ್ರಕಾರದಲ್ಲಿ ಎಲ್ಲಾ ಸತ್ಯವೂ ತಿಳಿಯಬೇಕಿತ್ತು. ಅಷ್ಟರಲ್ಲಿ ಏನೋ ಒಂದು ಅಡ್ಡಿಯಾಗಿತ್ತು. ಆ ಕ್ಷಣದಲ್ಲಿ ರಾಜಕುಮಾರನಾಗಿ ಪ್ರದ್ಯುಮ್ನ ಕೂಡ ಬದಲಾಗಿದ್ದ. ಆ ಸಮಯದಲ್ಲಿಯೇ ರಾಜಕುಮಾರ ನಡೆದ ಹಾದಿಯೆಲ್ಲವೂ ಅಚ್ಚಾಗಿ ಉಳಿದಿತ್ತು. ಒಂದು ದೊಡ್ಡ ಎಲೆಯ ಮೇಲೆ ರಾಜಕುಮಾರನ ಪಾದದ ಗುರುತು ಮೂಡಿತ್ತು. ಆ ಎಲೆಯನ್ನು ಮನೆಗೆ ತಂದಿರುವ ಆಮ್ರಪಾಲಿ, ಮತ್ತೊಂದು ಹೆಜ್ಜೆಯನ್ನು ಹುಡುಕುವುದಾಗಿ ತಿಳಿಸಿದ್ದಾಳೆ.
ಪ್ರದ್ಯುಮ್ನನಿಗೆ ಆಮ್ರಪಾಲಿ ಮೇಲೆ ಲವ್ವಾಗಿದೆಯಾ..?
ಪ್ರದ್ಯುಮ್ನ ಯಾವತ್ತಿದ್ದರೂ ಆಮ್ರಪಾಲಿಗೆ ಸೇರಿದವನಾಗಿದ್ದಾನೆ. ಅವನು ರಾಜಕುಮಾರ ಎಂಬ ಸತ್ಯ ಮರೆತಿದ್ದಾನೆ. ಆದರೆ ಪ್ರೀತಿ ಯಾರ ಮೇಲೆ ಮೂಡಬೇಕೋ ಅವರ ಮೇಲೆ ಮೂಡಿದೆ. ಆಮ್ರಪಾಲಿಯ ಮೇಲೆ ಲವ್ವಾಗಿದ್ದರೂ ಸಹ ಅದನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ಸೋತಿದ್ದಾನೆ. ಆದ್ರೆ ಪ್ರದ್ಯುಮ್ನನ ಸ್ನೇಹಿತ ಹರ್ಷನಿಗೆ ಅದು ಅರ್ಥವಾಗಿದೆ. ಆಮ್ರಪಾಲಿಗೋಸ್ಕರ ಕಾಡು ಮೇಡು ಅಲೆದಿದ್ದನ್ನು ಕಂಡ ಹರ್ಷನಿಗೆ ಆ ಅನುಮಾನ ಮೂಡಿದೆ. ಹೀಗಾಗಿಯೇ ಪ್ರದ್ಯುಮ್ನನಿಗೆ ತಿಳಿಸಿ ಹೇಳಿದ್ದಾನೆ.

ಪ್ರೀತಿ ಇದ್ದರೂ ಒಪ್ಪುವುದಕ್ಕೆ ಸಿದ್ಧವಿಲ್ಲ
ಪ್ರದ್ಯುಮ್ನನಿಗೆ ಮನೆಯಲ್ಲಿ ಈಗಾಗಲೇ ನಿಶ್ಚಿತಾರ್ಥದ ಮಾತು ಆಡಿದ್ದಾರೆ. ಯುಕ್ತಿಯ ಜೊತೆಗೆ ಮದುವೆ ಎಂಬುದನ್ನು ತಿಳಿಸಿದ್ದಾರೆ. ಆದರೆ ಪ್ರದ್ಯುಮ್ನನಿಗೆ ಯುಕ್ತಿ ಮೇಲೆ ಆ ಭಾವನೆ ಬಂದೇ ಇಲ್ಲ. ಆಮ್ರಪಾಲಿ ಕಂಡರೆ ಏನೋ ಒಂದು ಸೆಳೆತ. ಆಗಾಗ ಆಮ್ರಪಾಲಿಯ ಕಣ್ಣೋಟಕ್ಕೆ ಪ್ರದ್ಯುಮ್ನ ಬಿದ್ದಿದ್ದನ್ನು ಕಂಡಿದ್ದೇವೆ. ಈಗ ಹರ್ಷ ಹೇಳಿದ ಮಾತನ್ನು ಪ್ರದ್ಯುಮ್ನನಿಗೆ ಒಪ್ಪುವುದಕ್ಕೂ ಸಾಧ್ಯವಾಗುತ್ತಿಲ್ಲ, ತಿರಸ್ಕರಿಸುವುದಕ್ಕೂ ಸಾಧ್ಯವಾಗುತ್ತಿಲ್ಲ.
ಪುಟಾಣಿ ಮಾತು ಅರ್ಥವಾಗುತ್ತಿಲ್ಲವಾ..?
ಇತ್ತ ಆಮ್ರಪಾಲಿ ಮನೆಗೆ ಬಂದ ಖುಷಿಯಲ್ಲಿದ್ದಾಳೆ ಪುಟಾಣಿ. ಕಾಡಿನಲ್ಲಿ ಓಡಾಡಿದ್ದಕ್ಕೆ ಕುತ್ತಿಗೆ ಭಾಗದಲ್ಲಿ ಆದ ಸಣ್ಣ ಗಾಯಕ್ಕೆ ಪ್ಲಾಸ್ಟರ್ ಹಾಕಿದ ಪುಟಾಣಿ, ಅಣ್ಣನ ಬಗ್ಗೆ ಗುಣಗಾನ ಮಾಡುತ್ತಿದ್ದಳು. ಆಮ್ರಪಾಲಿಗೂ ಅನುಮಾನ, ಆ ನಾಗಬನಕ್ಕೆ ಹೇಗೆ ಬಂದಿರಿ ಎಂದು. ಆಗ ಪುಟಾಣಿ "ಅದು ನಮಗೂ ಗೊತ್ತಿಲ್ಲ. ಆದರೆ ನಿಂಗೆ ಏನೇ ತೊಂದರೆಯಾದರೂ ಅಣ್ಣನಿಗೆ ಬೇಗ ಗೊತ್ತಾಗಿ ಬಿಡುತ್ತದೆ. ಅವತ್ತ ಆಕ್ಸಿಡೆಂಟ್ ಆದಾಗಲೂ ಅಷ್ಟೇ, ಮುರುಡೇಶ್ವರದಲ್ಲಿ ನೀನು ಸಂಕಷ್ಟಕ್ಕೆ ಸಿಲುಕಿದಾಗಲೂ ಅಷ್ಟೇ. ಅಣ್ಣನಿಗೆ ಏನೋ ಒಂದು ರೀತಿಯ ತಳಮಳ ಶುರುವಾಗುತ್ತೆ. ಆಗ ಅವನು ಹುಡುಕಿಕೊಂಡು ಬಂದಿದ್ದಾನೆ. ಈಗ ಆಗಿದ್ದು ಅದೇ" ಎಂದಿದ್ದಾಳೆ. ಆಮ್ರಪಾಲಿಗೆ ಅದು ಸಣ್ಣ ಅನುಮಾನವನ್ನು ಹುಟ್ಟಿಸಿದೆ. ನಾಗಬನಕ್ಕೆ ಮನುಷ್ಯ ರೂಪದವರು ಬರುವುದಕ್ಕೆ ಸಾಧ್ಯವಿಲ್ಲ ಎಂಬ ಸಣ್ಣ ಅನುಮಾನ ಮೂಡಿದೆ. ಆಗಲೇ, ಆಪತ್ಭಾಂಧವನ ಬಳಿ ಮಾತನಾಡಬೇಕು ಎಂದು ಹೊರಟಿದ್ದಾಳೆ.


Click it and Unblock the Notifications











