BBK 11 Grand Finale ; ಬಿಗ್ ಬಾಸ್ ಕ್ಲೈಮ್ಯಾಕ್ಸ್‌ನಲ್ಲಿ ಸೋತ ತ್ರಿವಿಕ್ರಮ್...!
ಅವರಾ ಇವರಾ ? ಬಿಗ್ ಬಾಸ್ ಮನೆಯ ವಿನ್ನರ್ ಯಾರು ? ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಬಿಗ್ ಬಾಸ್ ಸೀಸನ್ 11ಕ್ಕೆ ತೆರೆ ಬಿದ್ದಿದೆ. ಹನುಮಂತ ಮತ್ತು ತ್ರಿವಿಕ್ರಮ್ ನಡುವೆ ಯಾರು ದಿ ಬೆಸ್ಟ್ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆ ವ್ಯಕ್ತಿ ಬೇರೆ ಯಾರು ಅಲ್ಲ ಬದಲಿಗೆ ಹನುಮಂತ ಅನ್ನುವುದು ಈ ಕ್ಷಣದ ಬ್ರೇಕಿಂಗ್ ನ್ಯೂಸ್.
ನಿಜಾ. ಪಂದ್ಯ ಅಂದ ಮೇಲೆ ಅಲ್ಲಿ ಸೋಲು ಗೆಲುವು ಇದ್ದೇ ಇರುತ್ತೆ. ಸೋಲನ್ನು ಸ್ಫರ್ಧಾತ್ಮಕವಾಗಿ ತೆಗೆದುಕೊಳ್ಳುವ ಭಾವನೆ ಇರಬೇಕಷ್ಟೇ. ಬಿಗ್ ಬಾಸ್ ವೇದಿಕೆಯಲ್ಲಿ ತ್ರಿವಿಕ್ರಮ್ ಈ ಗುಣದ ಪ್ರದರ್ಶನವನ್ನು ಮಾಡಿದರು. ಸೋತರು ಕೂಡ ಮುಗುಳುನಗೆಯೊಂದಿಗೆ ಹನುಮಂತನ ಗೆಲುವನ್ನೂ ಸಂಭ್ರಮಿಸಿದರು. ಹನುಮಂತು ಈ ಕಾರ್ಯಕ್ರಮ ಗೆಲ್ಲುವ ಅರ್ಹತೆಯನ್ನು ಹೊಂದಿರುವ ನಿಜವಾದ ವ್ಯಕ್ತಿ ಎಂದರು ತ್ರಿವಿಕ್ರಮ್.

ಇನ್ನು ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಕೊನೆಯ ದಿನ ಸ್ಫರ್ಧಿಗಳು ಹಾಕಿಕೊಳ್ಳುವ ಬಟ್ಟೆಯ ಮೇಲೆ ಗೆಲ್ಲುವುದು ಯಾರು ಎನ್ನುವುದನ್ನು ಆರಾಮಾಗಿ ಹೇಳಬಹುದು ಎನ್ನುವ ಮಾತು ಈ ವರ್ಷ ಕೇಳಿ ಬಂದಿತ್ತು. ಸಂಶೋಧನೆಯನ್ನು ಮಾಡಿ ಹಳೆಯ ಸೀಸನ್‌ನ ಉದಾಹರಣೆಯನ್ನು ಕೂಡ ನೀಡಲಾಗಿತ್ತು.
ಈ ಥಿಯರಿ ಅಡಿ ಅನೇಕರು ಈ ವರ್ಷ ತ್ರಿವಿಕ್ರಮ್ ಕಪ್‌ಗೆ ಮುತ್ತಿಡುವುದು ಗ್ಯಾರಂಟಿ ಎಂದೇ ಅಂದುಕೊಂಡಿದ್ದರು. ತ್ರಿವಿಕ್ರಮ್ ಧರಿಸಿರುವ ಜಾಕೆಟ್‌ನಲ್ಲಿ ಪಕ್ಷಿಯ ರೆಕ್ಕೆಯ ಚಿತ್ರವನ್ನು ಡಿಸೈನ್ ಮಾಡಲಾಗಿತ್ತು.ಇನ್ನು ಕಾಕತಾಳೀಯ ಎನ್ನುವಂತೆ ಈ ಬಾರಿಯ ವಿನ್ನರ್ ಟ್ರೋಫಿಯಲ್ಲೂ ಕೂಡ ಪಕ್ಷಿಯ ರೆಕ್ಕೆಯ ಚಿತ್ರವನ್ನು ಡಿಸೈನ್ ಮಾಡಲಾಗಿತ್ತು. ಹೀಗಾಗಿ ವಿನ್ನರ್‌ಗಾಗಿಯೇ ಆ ಬಟ್ಟೆಯನ್ನು ಡಿಸೈನ್ ಮಾಡಲಾಗಿದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ವರದಿಗಳು ಕೂಡ ಪ್ರಸಾರವಾಗಿದ್ದವು. ಆದರೆ. ಈ ವಾದವನ್ನು ಈ ಬಾರಿಯ ಬಿಗ್ ಬಾಸ್ ಸುಳ್ಳು ಮಾಡಿತು. ತ್ರಿವಿಕ್ರಮ್ ಬಟ್ಟೆಯ ಮೇಲೆ ರೆಕ್ಕೆ ಇದ್ದರೂ ಕೂಡ ರೆಕ್ಕೆಯುಳ್ಳ ಟ್ರೋಫಿ ಹನುಮಂತನ ಪಾಲಾಯ್ತು.
ಇನ್ನು ತ್ರಿವಿಕ್ರಮ್ ಕೈಯಿಂದ ಕಪ್ ಜಾರಿದ ಬೆನ್ನಲ್ಲೇ ಅನೇಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆ ಪ್ರಕಾರ ಇಡೀ ಮನೆಯಲ್ಲಿ ತ್ರಿವಿಕ್ರಮ್ ತುಂಬಾ ತಪ್ಪು ಮಾಡಿದ್ದಾರೆ. ಅದರಲ್ಲಿಯೂ ಭವ್ಯಾ ಗೌಡ ಅವರ ಸ್ನೇಹದ ಬಗ್ಗೆ ಅನೇಕರಿಗೆ ಈ ಕ್ಷಣಕ್ಕೂ ಕೂಡ ಅಸಮಾಧಾನ ಇದೆ. ಭವ್ಯಾ ಗೌಡ ಅವರ ಕಡೆ ಗಮನ ಕೊಡುವ ಬದಲು ಆಟದ ಕಡೆ ಗಮನವನ್ನು ತ್ರಿವಿಕ್ರಮ್ ನೀಡಿದ್ದರೆ ಗೆಲ್ಲಬಹುದಿತ್ತೇನೋ ಎನ್ನುವುದು ಅನೇಕರ ಅಭಿಪ್ರಾಯ.
ಇನ್ನುಳಿದಂತೆ ತ್ರಿವಿಕ್ರಮ್ ಯಾವಾಗಲೂ ಕೇವಲ ಲೆಕ್ಕಾಚಾರ ಹಾಕುವುದರಲ್ಲೇ ಕಾಲ ಹರಣ ಮಾಡಿದರು, ಯಾರನ್ನು ಎಲಿಮಿನೇಟ್ ಮಾಡಬೇಕು ? ಯಾರು ಸ್ಟ್ರಾಂಗ್ ? ಯಾರು ವೀಕ್ ? ಈ ಕುರಿತು ಹೆಚ್ಚು ತಲೆಕೆಡಿಸಿಕೊಂಡರು. ಇದರಿಂದಾಗಿಯೇ ಹನುಮಂತನಿಂದ ಒಂದು ಹೆಜ್ಜೆ ತ್ರಿವಿಕ್ರಮ್ ಹಿಂದೆ ಉಳಿದರು ಎನ್ನುವ ಮಾತನ್ನು ಕೂಡ ಸದ್ಯ ಅನೇಕರು ಹೇಳುತ್ತಿದ್ದಾರೆ. ತ್ರಿವಿಕ್ರಮ್ ಸೋಲಿಗೆ ಕಾರಣವೇನು ಎನ್ನುವುದನ್ನು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಅಂದ್ಹಾಗೇ ತ್ರಿವಿಕ್ರಮ್ ಮಧ್ಯಮ ವರ್ಗದ ಕುಟುಂಬದ ಹುಡುಗ. ಸಿನಿಮಾ ಮತ್ತು ಧಾರಾವಾಹಿಯಲ್ಲಿ ಮಿಂಚಬೇಕು ಎನ್ನುವುದು ಇವರ ಬಹುದೊಡ್ಡ ಕನಸು. ಈ ಕನಸೆಂಬ ಕುದುರೆಯ ಬೆನ್ನೇರಿ ಈಗಾಗಲೇ ಒಂದೊಂದೆ ಮೆಟ್ಟಿಲನ್ನೇರುತ್ತಿರುವ ತ್ರಿವಿಕ್ರಮ್ ಅವರಿಗೆ ಬಿಗ್ ಬಾಸ್ ನಿಜಕ್ಕೂ ಒಂದೊಳ್ಳೆ ವೇದಿಕೆಯಾಗಿತ್ತು. ಈ ವೇದಿಕೆಯಲ್ಲಿ ತ್ರಿವಿಕ್ರಮ್ ಮೊದಲ ಸ್ಥಾನ ಅಲಂಕರಿಸದಿದ್ದರೂ ಕೂಡ ಎರಡನೇ ಸ್ಥಾನ ಪಡೆಯುವ ಮೂಲಕ ಕರುನಾಡಿನ ಜನತೆಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಅದರಲ್ಲಿ ಎರಡನೇ ಮಾತಿಲ್ಲ.


Click it and Unblock the Notifications











