»   » 'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.!

'ಬೆಟ್ಟದ ಮೇಲಿಂದ ಬಿದ್ದ ಪುಟ್ಟಗೌರಿ': ಆಮೇಲೆ ಆದ ಅದ್ಭುತಗಳು ಇವು.!

Posted By:
Subscribe to Filmibeat Kannada

'ಪುಟ್ಟಗೌರಿ'........ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆಯಾಗುತ್ತಿರುವ ಹೆಸರು. ಫೇಸ್ ಬುಕ್, ಟ್ವಿಟ್ಟರ್, ವಾಟ್ಸಪ್ ಗಳಲ್ಲಿ ಪುಟ್ಟಗೌರಿಯ ಸಾಹಸದ ಬಗ್ಗೆಯೇ ಸುದ್ದಿ.

ಪುಟ್ಟಗೌರಿಯನ್ನ ಸಾಯಿಸುವುದೇ ಒಂದು ಥ್ರಿಲ್ಲಿಂಗ್ ಕಥೆಯಾಗಿದೆ. ಕ್ಯಾನ್ಸರ್ ಬಂದ್ರು ಸಾಯಲಿಲ್ಲ, ಮಣ್ಣಲ್ಲಿ ಜೀವಂತ ಸಮಾಧಿ ಮಾಡಿದ್ರು ಸಾಯಲಿಲ್ಲ. ಪಾಪ ಗೌರಿನ ಏನೇ ಮಾಡಿದ್ರು ಸಾಯಿಸೋಕೆ ಆಗ್ತಿಲ್ಲ.

ಆದ್ರೆ, ಕಳೆದ ಎರಡು ದಿನದ ಹಿಂದಿನ ಎಪಿಸೋಡ್ ನಲ್ಲಿ ಗೌರಿಯನ್ನ ಅತಿ ಎತ್ತರದ ಬೆಟ್ಟದಿಂದ ತಳ್ಳಲಾಗಿದೆ. ಹೀಗೆ, ಬೆಟ್ಟದಿಂದ ಬಿದ್ದ ಗೌರಿ ಸಾಯಲೇ ಇಲ್ಲ. ಅಲ್ಲಿಂದ ಆದ ಅದ್ಭುತಗಳು ಒಂದೆರಡಲ್ಲ. ಇದನ್ನ ಕಂಡು ಟ್ರೋಲ್ ಪೇಜ್ ಗಳು ಪುಟ್ಟಗೌರಿಯನ್ನ ಟ್ರೋಲ್ ಮಾಡಿದ್ದಾರೆ. ಅದೇನೇನೂ ಮಾಡಿದ್ದಾರೆ ಅಂತ ಮುಂದೆ ಓದಿ.......

ಗೌರಿ ಮೇಲೆ ಹುಲಿ ಅಟ್ಯಾಕ್

ಬೆಟ್ಟದಿಂದ ಬಿದ್ದ ಗೌರಿಗೇನೂ ಆಗಲಿಲ್ಲ. ಮುಖದಲ್ಲಿ ಹಾಗೂ ಕೈಮೇಲೆ ಒಂದಿಷ್ಟು ರಕ್ತ ಬಿಟ್ಟರೇ ಗಾಯವೂ ಆಗಿಲ್ಲ. ಇದರ ಮಧ್ಯೆ ಕಾಡಿನಲ್ಲಿ ಗೌರಿ ಮೇಲೆ ಹುಲಿ ಅಟ್ಯಾಕ್ ಮಾಡಿತ್ತು. ಆದ್ರೆ, ಹುಲಿಯ ವಿರುದ್ಧ ಹೋರಾಡಿ ತಪ್ಪಿಸಿಕೊಂಡ ಗೌರಿಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗೌರಿ ಸಾಹಸಕ್ಕೆ ಹಾವು ಮಟಾಶ್.!

ಬೆಟ್ಟದಿಂದ ಬಿದ್ದ ಗೌರಿ ಮರದ ಕೊಂಬೆ ಮೇಲೆ ಬೀಳುತ್ತಾಳೆ. ಆ ಸಮಯದಲ್ಲೊಂದು ದೊಡ್ಡ ಹಾವು ಕಣ್ಣೆದುರಿಗೆ ಬಂದು ಬುಸುಗುಡುತ್ತೆ. ಆದ್ರೆ, ಗೌರಿ, ಹಾವಿನ ಕಪಾಳಕ್ಕೆ ಹೊಡೆದು ಅಲ್ಲಿಂದ ಎಸ್ಕೆಪ್ ಆಗುತ್ತಾಳೆ.

'ಸೂಪರ್ ಮ್ಯಾನ್' ಮೀರಿಸಿದ 'ಗೌರಿ'

ಜಗತ್ತಿನಲ್ಲಿ 'ಸ್ಪೈಡರ್ ಮ್ಯಾನ್', 'ಸೂಪರ್ ಮ್ಯಾನ್' ಸಾಹಸ ಕಂಡು ಚಪ್ಪಾಳೆ ಹೊಡೆದಿರುವ ಪ್ರೇಕ್ಷಕರು ಈಗ ಅದೇ ಸಾಲಿಗೆ 'ಪುಟ್ಟಗೌರಿ'ಯನ್ನ ಹೋಲಿಸಿದ್ದಾರೆ.

ಜಂಗಲ್ 'ಗೌರಿ'

'ಜಂಗಲ್ ಬುಕ್' ಸಿನಿಮಾ ನೋಡಿದವರಿಗೆ 'ಪುಟ್ಟಗೌರಿ'ಯ ಸನ್ನಿವೇಶ ಖುಷಿ ಕೊಡುತ್ತೆ ಎನ್ನುವುದಕ್ಕೆ ಈ ಟ್ರೋಲ್ ಸಾಕ್ಷಿ. ಯಾಕಂದ್ರೆ, ಗೌರಿಯನ್ನ 'ಜಂಗಲ್ ಗೌರಿ' ಎಂದು ಬಿಂಬಿಸಲಾಗ್ತಿದೆ.

ಬಾಲಯ್ಯ ಮೆಚ್ಚಿದ ಗೌರಿ ಸಾಹಸ

ತೆಲುಗು ಸಿನಿಮಾಗಳಲ್ಲಿ ಬಾಲಕೃಷ್ಣ ಅವರ ಸಾಹಸಗಳನ್ನ ಕಂಡು ಬೆರಗಾಗಿದ್ದವರಿದ್ದಾರೆ. ಆದ್ರೆ, ಪುಟ್ಟಗೌರಿಯ ಸಾಹಸಕ್ಕೆ ಸ್ವತಃ ಬಾಲಯ್ಯನವರೇ ಶಬ್ಬಾಶ್ ಎಂದಿದ್ದಾರೆ ಎಂಬ ಟ್ರೋಲ್ ಗಮನ ಸೆಳೆಯುತ್ತಿದೆ.

'ಗೌರಿ' ಧೈರ್ಯ ಕಂಡು ಡಾ.ರಾಜ್ ಶಾಕ್.!

ಗೌರಿಯ ಸಾಹಸ ಕಂಡು ನಟಸಾರ್ವಭೌಮ ಡಾ.ರಾಜ್ ಕುಮಾರ್ ಕೂಡ ಒಂದು ಕ್ಷಣ ಆಶ್ಚರ್ಯವಾಗಿದ್ದಾರೆ. 'ಭಕ್ತ ಪ್ರಹ್ಲಾದ' ಚಿತ್ರದ 'ಹಿರಣ್ಯಕಶಿಪು' ಪಾತ್ರದಲ್ಲಿ ರಾಜ್ ಕುಮಾರ್ ಎಕ್ಸ್ ಪ್ರೆಶನ್ ಕೊಟ್ಟಿರುವ ಟ್ರೋಲ್ ಆಕರ್ಷಣೆಯಾಗಿದೆ.

ಯಾರು ಈ ದಿಟ್ಟ ಮಹಿಳೆ?

ಹುಲಿಯನ್ನೇ ಬೆಚ್ಚಿಬೀಳಿಸಿದ ಈ ದಿಟ್ಟ ಮಹಿಳೆ ಯಾರು ಎಂದು ಟ್ರೋಲ್ ಪೇಜ್ ಗಳು ಟ್ರೋಲ್ ಮಾಡುತ್ತಿದೆ.

ಚಪ್ಪಲಿ ಏನೂ ಆಗಿಲ್ಲ, ಹೂವು ಬಾಡಿಲ್ಲ.!

ಅತಿ ಎತ್ತರದ ಬೆಟ್ಟದಿಂದ ಕೆಳಗೆ ಬಿದ್ದ ಪುಟ್ಟಗೌರಿ ಮರದ ಕೊಂಬೆಗಳ ಮೇಲೆ ಬಿದ್ದು, ಹುಲಿಯಿಂದ ತಪ್ಪಿಸಿಕೊಂಡು ಬಂದರೂ, ತಲೆಯಲ್ಲಿನ ಹೂವು ಬಾಡಿಲ್ಲ, ಚಪ್ಪಲಿ ಕಳೆದುಕೊಂಡಿಲ್ಲ ಎನ್ನುವುದು ಗಮನಾರ್ಹ.

ಚಿತ್ರಕೃಪೆ: ಟ್ರೋಲ್ ಪೇಜ್ ಗಳು

English summary
Puttagowri maduve serial gets trolled on social media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada