ಜನಾರ್ಧನ್, ಮಾಧವನನ್ನು ಅಷ್ಟೊಂದು ದ್ವೇಷಿಸುವುದು ಏಕೆ? ಅದಕ್ಕೆ ಕಾರಣ ಹಳೆ ಪ್ರೇಮ!
ಈಗ ಕಿರುತೆರೆ ಯುಗ. ಅದ್ಧೂರಿತನ, ವೈಭವೀಕರಣ, ಶ್ರೀಮಂತಿಕೆಗೇನು ಕಡಿಮೆ ಇಲ್ಲ. ಧಾರಾವಾಹಿ ಲೋಕ ಈಗ ಬೇರೆಯದ್ದೇ ರೀತಿಯಲ್ಲಿ ಬೆಳೆದು ನಿಂತಿದೆ. ಸಿನಿಮಾಗೇನೆ ಆಫರ್‌ಗಳು ಬೇಕು ಅಂತ ಏನಿಲ್ಲ. ಧಾರಾವಾಹಿ ಅವಕಾಶ ಸಿಕ್ಕಿದರೆ ಇನ್ನು ಖುಷಿ ಎನ್ನುವಂತಹ ಮನಸ್ಥಿತಿ ಶುರುವಾಗಿದೆ.
ಅದಕ್ಕೆ ತಕ್ಕಂತೆ ಸ್ಟಾರ್ ನಟ, ನಟಿಯರು ಕೂಡ ಕಿರುತೆರೆಯತ್ತ ಬಂದಿದ್ದಾರೆ. 80-90ರ ದಶಕದಲ್ಲಿ ಮಿಂಚಿದ್ದಂತ ನಟಿಯರು ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾದಲ್ಲಿ ವಿಲನ್ ಆಗಿದ್ದವರು, ಈಗ ಧಾರಾಹಿಗಳಲ್ಲಿ ವಿಲನ್ ಆಗಿದ್ದಾರೆ. ಅಂದು ಪ್ರೀತಿಗಾಗಿ ಅಲೆದವರು, ಇಂದು ಬೀಗರ ಸ್ಥಾನದಲ್ಲಿ ನಿಂತಿದ್ದಾರೆ.

ಮನೆಯವರ ವಿರೋಧವೇ ಹೆಚ್ಚು
'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಮಾಧವ ಹಾಗೂ ತುಳಸಿ ಇಬ್ಬರು ಉತ್ತಮ ಸ್ನೇಹಿತರಾಗಿದ್ದರು. ವಯಸ್ಸು ಯಾವುದಾದರೇನು? ಜೀವನಕ್ಕೊಬ್ಬ ಸಂಗಾತಿ ಇರಲೇಬೇಕು ಎಂಬುದು ದತ್ತನ ಅಭಿಪ್ರಾಯವಾಗಿತ್ತು. ಹೀಗಾಗಿ ಒಳ್ಳೆ ಬಾಂಧವ್ಯ ಹೊಂದಿದ್ದ, ಉತ್ತಮ ಸ್ನೇಹಿತರಾಗಿದ್ದ, ಮಾಧವನ ಮನಸ್ಸಲ್ಲಿ ಅದಾಗಲೇ ಚಿಗುರಿದ್ಧ ಪ್ರೀತಿಯನ್ನು ಗಮನಿಸಿದ್ದ ದತ್ತ, ಇಬ್ಬರಿಗೂ ಮದುವೆ ಮಾಡಿಸಿದರು. ಇದಕ್ಕೆ ಮನೆಯವರೆಲ್ಲ ಸಾಕಷ್ಟು ವಿರೋಧ ವ್ಯಕ್ತಪಡಿಸಿದರು. ಅಷ್ಟೇ ಯಾಕೆ ತುಳಸಿಗೆ ಮಾಧವನ ಮನೆಯಲ್ಲಿ ನೆಮ್ಮದಿಯೇ ಇಲ್ಲದಂತೆ ನಡೆದುಕೊಳ್ಳುವುದಕ್ಕೆ ಆರಂಭಿಸಿದರು. ಈಗೀಗ ಕೊಂಚ ಸರಿಯಾಗುತ್ತಿದೆ.
ದ್ವೇಷಕ್ಕೆ ಮಗಳ ಮದುವೆ ಮುರಿದ ಜನಾರ್ಧನ
ಮಾಧವನಿಗೆ ಉದ್ಯಮದಲ್ಲಿ ದೊಡ್ಡ ಶತ್ರು ಎಂದರೆ ಅದು ಜನಾರ್ಧನ್. ಅದಕ್ಕೆ ತಕ್ಕ ಹಾಗೆ ಮಾಧವನ ಮಗ ಅಭಿ ಹಾಗೂ ಜನಾರ್ಧನ್ ಮಗಳು ದೀಪಿಕಾ ಪ್ರೀತಿ ಮಾಡುತ್ತಿದ್ದರು. ಮಗನ ನೆಮ್ಮದಿಗಾಗಿ ದ್ವೇಷ ಮರೆತು ಮದುವೆಗೂ ಒಪ್ಪಿ ಆಗಿತ್ತು, ತಯಾರಿಯೂ ನಡೆದಿತ್ತು. ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮಾಧವ ಮತ್ತು ತುಳಸಿ ಮದುವೆಯಾಗಿ ಬಂದಿದ್ದರು. ಜನಾರ್ಧನನಿಗೆ ಇದು ಹೆಚ್ವಿನ ಕೋಪ ತರಿಸಿತ್ತು. ಮಾಧವನ ಜೀವನ ಹಾಳು ಮಾಡುವುದಕ್ಕೆ ಮಗಳಿಗೆ ಮದುವೆ ಮಾಡಲು ಹೊರಟಿದ್ದ. ಆದರೆ ಮಾಡಿದ ಪ್ಲ್ಯಾನ್ ಎಲ್ಲವೂ ಉಲ್ಟಾ ಆಗಿತ್ತು.

ತುಳಸಿ -ಜನಾರ್ದನನದ್ದು ಹಳೇ ಲವ್ ಸ್ಟೋರಿ
ಎಲ್ಲಾ ದ್ವೇಷ ಮರೆತು ಜನಾರ್ಧನ್ ಮದುವೆಗೆ ಒಪ್ಪಿದ ಮೇಲೆ ಮಾಧವನ ಮದುವೆ ಅಷ್ಟೊಂದು ಮುಖ್ಯ ಯಾಕೆ ಆಗಬೇಕು? ಅದಕ್ಕೆ ಕಾರಣವೂ ಇದೆ. ಮಾಧವ ಬೇರೆ ಯಾರನ್ನೇ ಮದುವೆಯಾಗಿದ್ದರು, ಜನಾರ್ಧನನಿಗೆ ಅಷ್ಟೊಂದು ನೋವಾಗುತ್ತಿರಲಿಲ್ಲವೇನೋ. ಮತ್ತಷ್ಟು ದ್ವೇಷ ಹೆಚ್ಚಾಗುತ್ತಿರಲಿಲ್ಲವೇನೊ. ಮಾಧವ ಒಲಿಸಿಕೊಂಡಿದ್ದು, ಪಾಪ ಜನಾರ್ಧನನ ಹಳೇ ಗರ್ಲ್ ಫ್ರೆಂಡ್. ಹೀಗಾಗಿ ಜನಾರ್ಧನನ ಮನಸ್ಸಲ್ಲಿ ಕೋಪ ಮತ್ತಷ್ಟು ಹೆಚ್ಚಾಗಿ, ಮಗಳ ಮದುವೆ ನಡೆಯದೆ ಇದ್ದರು ಚಿಂತೆ ಇಲ್ಲ, ಮಗಳ ಸಂತೋಷಕ್ಕಿಂತ ತನ್ನ ಹಳೆ ಪ್ರೀತಿಯೇ ಹೆಚ್ಚೆಂದು ಮದುವೆಯನ್ನು ನಿಲ್ಲಿಸಿಯೇ ಬಿಟ್ಟಿದ್ದಾನೆ.
ಜನಾರ್ಧನ ದ್ವೇಷಕ್ಕೆ ಟ್ರೋಲರ್ಸ್ ಉತ್ತರ
'ಆನಂದ' ಸಿನಿಮಾದಲ್ಲಿ ಗುರುದತ್ ಹಾಗೂ ಸುಧಾರಾಣಿ ಅಭಿನಯಿಸಿದ್ದಾರೆ. ಆ ಸಿನಿಮಾದಲ್ಲಿ ತುಳಸಿಯನ್ನು ಜನಾರ್ದನ ಇಷ್ಟಪಡುತ್ತಿದ್ದರು. ತುಳಸಿ ಮಾತ್ರ ಕ್ಯಾರೆ ಎನ್ನಲಿಲ್ಲ. ಇದನ್ನು ಗಮನಿಸಿದವರು ಮೀಮ್ಸ್ ಮಾಡಿದ್ದಾರೆ. ಜನಾರ್ಧನ್ ದ್ವೇಷಕ್ಕೆ ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ. ಈ ಮೀಮ್ಸ್ ಸಾಕಷ್ಟು ವೈರಲ್ ಆಗಿದೆ. ಸುಧಾರಾಣಿ ಫ್ಯಾನ್ಸ್ ಈ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ನೋಡಿದವರಿಗೆ ವಾವ್ ಹೌದಲ್ವಾ ಅಂತ ಅನ್ನಿಸುತ್ತದೆ. ಇನ್ನು ಒಮ್ಮೆ ಆ ಪೋಸ್ಟ್ ನೋಡಿ ಮನಪೂರ್ವಕವಾಗಿ ನಕ್ಕು ನಲಿದಿದ್ದಾರೆ.


Click it and Unblock the Notifications











