ಖ್ಯಾತ ನಟಿಯ ಸಂಸಾರದಲ್ಲಿ ಬಿರುಕು, 9 ವರ್ಷದ ದಾಂಪತ್ಯಕ್ಕೆ ಅಂತ್ಯ ಹಾಡಿ 'ಬಿಗ್ ಬಾಸ್‌' ಮನೆಗೆ ಬರಲು ರೆಡಿಯಾದ ಚೆಲುವೆ?

ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಬಹುತೇಕರ ವ್ಯೆಯಕ್ತಿಕ ಜೀವನದಲ್ಲಿ ಪ್ರೀತಿ-ಪ್ರೇಮ-ಪ್ರಣಯ-ಮದುವೆ ಮತ್ತು ವಿಚ್ಛೇದನ ಮಾಮೂಲು. ಇಲ್ಲಿ ಮದುವೆಯಾದ ಆರಂಭದಲ್ಲಿ ಬದುಕು ತುಂಬಾ ಸಂತೋಷಮಯವಾಗಿರುತ್ತೆ. ಆದರೆ ದಾಂಪತ್ಯ ಜೀವನ ನಡೆಸುತ್ತಾ ಒಬ್ಬರನ್ನೊಬ್ಬರು ಹುಚ್ಚರಂತೆ ಪ್ರೀತಿಸುವ ಅನೇಕರು ಆ ನಂತರ ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳಿ ಹೊರ ಬಂದಿದ್ದಾರೆ. ಪರಸ್ಪರ ಮುಖ ನೋಡಲು ಕೂಡ ಥೂ ಅಸಹ್ಯ ಎಂದುಕೊಂಡವರು ಇದ್ದಾರೆ.

ಬೆಳ್ಳಿತೆರೆ ಇರಲಿ.. ಕಿರುತೆರೆ ಇರಲಿ.. ಬಹುತೇಕರ ಬದುಕಿನಲ್ಲಿ ಲವ್‌ಗಿಂತ ಹೆಚ್ಚು ಅಹಂಗೆ ಬೆಲೆ ಇರುತ್ತೆ. ದಾಂಪತ್ಯದಲ್ಲಿ ಜಗಳ..ಮನಸ್ತಾಪ.. ಸರ್ವೇ ಸಾಮಾನ್ಯವಾಗಿರುತ್ತೆ. ಎಷ್ಟೇ ಜತನದಿಂದ ಆ ಸಂಬಂಧವನ್ನು ಕಾಪಾಡಿಕೊಳ್ಳುವ ಪ್ರಯತ್ನವನ್ನು ಮಾಡಿದರು ಕೂಡ ಅದು ಸಾಧ್ಯವಾಗುವುದೇ ಇಲ್ಲ. ಬದಲಿಗೆ ಈ ಸಾಲಿನಲ್ಲಿರುವ ಕೆಲವರು ಒಂದಿಲ್ಲೊಂದು ರೀತಿಯಲ್ಲಿ ನರಕಯಾತನೆಯನ್ನು ಅನುಭವಿಸಿಯೇ ಅನುಭವಿಸಿರುತ್ತಾರೆ. ಉದಾಹರಣೆಗೆ ''ಹುನರ್ ಅಲಿ''.

trouble-in-paradise-did-bigg-boss-19-led-to-the-hunar-hali-mayank-gandhi-separation-rumours

ಹೌದು.. ಹುನರ್ ಅಲಿ.. ಹಿಂದಿಯ ಖ್ಯಾತ ಕಿರುತೆರೆ ನಾಯಕಿ. 2007ರಿಂದ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಹುನರ್ ಅಲಿ ಜಗದ್ವಿಖ್ಯಾತ ''ಕಹಾನಿ ಘರ್ ಘರ್ ಕೀ'' ಧಾರಾವಾಹಿಯಲ್ಲಿ ಆಕ್ಟ್ ಮಾಡಿದ್ದರು.

''ಕೆಹ್ತಾ ಹೈ ದಿಲ್ ಜೀ ಲೇ ಜರಾ''.. ''ಟಿವಿ ಬಿವಿ ಔರ್ ಮೈ''.. ''ಪಟಿಯಾಲಾ ಬೇಬಿಸ್'' .. ''ದಿವಾನಿ''.. ಇವರು ಅಭಿನಯದ ಕೆಲ ಪ್ರಸಿದ್ಧ ಸೀರಿಯಲ್‌ಗಳು. ಸದ್ಯ ''ವೀರ್‌ ಹನುಮಾನ್‌'' ಧಾರಾವಾಹಿಯಲ್ಲಿ ''ಕೈಕೇಯಿ'' ಪಾತ್ರ ನಿರ್ವಹಿಸುತ್ತಿರುವ ಹುನರ್ ಅಲಿ ಆಗಸ್ಟ್ 28-2016ರಂದು ''ಮಯಾಂಕ್ ಗಾಂಧಿ'' ಅವರನ್ನು ಮದುವೆಯಾಗಿದ್ದರು.

ವಿಶೇಷ ಅಂದರೆ ಇವರಿಬ್ಬರದ್ದು ಲವ್ ಮ್ಯಾರೇಜ್ ಅಲ್ಲ ಬದಲಿಗೆ ಅರೆಂಜ್ ಮ್ಯಾರೇಜ್ ಆಗಿತ್ತು. ಆದರೆ ಈಗ 09 ವರ್ಷದ ನಂತರ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಯನ್ನು '' ಟೈಮ್ಸ್ ನೌ'' ವರದಿ ಮಾಡಿದೆ. '' ಮಿಡ್‌ ಡೇ'' ಪತ್ರಿಕೆ ಕೂಡ ಕೇಳಿ ಬರುತ್ತಿರುವ ಮಾತುಗಳು ನಿಜಾ ಎಂದು ಎಕ್ಸ್‌ಕ್ಲೂಸಿವ್ ವರದಿಯನ್ನು ಮಾಡಿದೆ.

trouble-in-paradise-did-bigg-boss-19-led-to-the-hunar-hali-mayank-gandhi-separation-rumours

ಇಷ್ಟೇ ಅಲ್ಲ ತಮ್ಮ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಲು ಮುಂದಾಗಿರುವ ಹುನರ್ ಅಲಿ ಈ ಬಾರಿಯ ''ಬಿಗ್‌ ಬಾಸ್‌'' ಹಿಂದಿ 19ನೇ ಸೀಸನ್‌ನಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಕೂಡ ಇದೇ ''ಮಿಡ್ ಡೇ'' ಪತ್ರಿಕೆ ವರದಿಯನ್ನು ಕೂಡ ಮಾಡಿದೆ.

ತಮ್ಮ ''ದಾಂಪತ್ಯ ಜೀವನ''ದ ಕುರಿತಾಗಲಿ ಅಥವಾ ''ಬಿಗ್ ಬಾಸ್'' ಮನೆಗೆ ಹೋಗುತ್ತಿರುವ ಈ ಸುದ್ದಿಗಾಗಲಿ, ಹುನರ್ ಅಲಿ ಅಥವಾ ಮಯಾಂಕ್ ಗಾಂಧಿ ಸದ್ಯ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲವಾದರು ಕಳೆದ ಕೆಲ ದಿನಗಳ ಹಿಂದೆ ಹುನರ್ ಅಲಿ ನೀಡಿದ್ದ ಸಂದರ್ಶನದ ತುಣುಕು ಈ ಅಂತೆ-ಕಂತೆಯ ನಡುವೆ ಸದ್ಯ ವೈರಲ್ ಆಗುತ್ತಿದೆ.

''E Times''ಗೆ ನೀಡಿದ್ದ ಈ ಸಂದರ್ಶನದಲ್ಲಿ ಹಲವು ವಿಚಾರಗಳ ಕುರಿತು ಮಾತನಾಡಿದ್ದ ಹುನರ್ ಅಲಿ ನಾವು LAT ಮದುವೆ ಅಂದರೆ ''ಲಿವಿಂಗ್ ಅಪಾರ್ಟ್ ಟುಗೆದರ್'' ಎಂದು ಕರೆಯಲ್ಪಡುವ ಮದುವೆಯಲ್ಲಿದ್ದೇವೆ ಎಂದು ಹೇಳಿದ್ದರು. ಮುಂಬೈನಲ್ಲಿ ನನ್ನ ಪಾಡಿಗೆ ನಾನಿದ್ದೇನೆ, ಮಯಾಂಕ್ ಕೆಲಸದ ಪ್ರಯುಕ್ತ ಅಲ್ಲಿ ಇಲ್ಲಿ ಓಡಾಡುತ್ತಿರುತ್ತಾರೆ ಎಂದು ಹೇಳಿದ್ದ ಹುನರ್ ಅಲಿ ಅಗತ್ಯ ಇದ್ದಾಗ, ಅವಶ್ಯಕತೆ ಇದ್ದಾಗ ಮಾತ್ರ ನಾವು ಒಬ್ಬರನ್ನೊಬ್ಬರು ಸಂಪರ್ಕ ಮಾಡುತ್ತೇವೆ ಎಂದು ಹೇಳಿದ್ದರು. ಉಳಿದ ದಿನ ನಮ್ಮ ನಮ್ಮ ಜೀವನ ನಮ್ಮದು ಎಲ್ಲಾ ಮದುವೆಯನ್ನು ಒಂದೇ ಸೂರಿನಡಿ ಅಳೆಯಲು ಸಾಧ್ಯ ಇಲ್ಲ ಎಂದು ಹೇಳಿದ್ದ ಹುನರ್ ಅಲಿ ನಮ್ಮ ನಡುವೆ ಇರುವ ಅನ್ಯೋನ್ಯತೆಯನ್ನು ನಾನು ಸೋಶಿಯಲ್ ಮೀಡಿಯಾದಲ್ಲಿ ಪ್ರದರ್ಶನಕ್ಕಿಡಲಾರೆ ಎಂದು ಕೂಡ ಹೇಳಿದ್ದರು.

ಒಟ್ನಲ್ಲಿ ಸದ್ಯ ಹುನರ್ ಅಲಿ ಮತ್ತು ಮಯಾಂಕ್ ಗಾಂಧಿ ದಾಂಪತ್ಯ ಜೀವನದ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ಈ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದ ಇಬ್ಬರು ಸದ್ಯ ಮೌನಕ್ಕೆ ಶರಣಾಗಿದ್ಧಾರೆ. ಇದರ ನಡುವೆ ಹುನರ್ ಅಲಿ ''ಬಿಗ್ ಬಾಸ್‌''ನಲ್ಲಿ ಭಾಗವಹಿಸುತ್ತಿದ್ದಾರೆ ಎನ್ನುವ ಸುದ್ದಿ ಕೂಡ ಹಬ್ಬಿದೆ. ನಿಜಕ್ಕೂ ಹುನರ್ ಅಲಿ ಮತ್ತು ಮಯಾಂಕ್ ಗಾಂಧಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರಾ ? ಹುನರ್ ಈ ಬಾರಿಯ ''ಬಿಗ್ ಬಾಸ್‌'' ಮನೆಗೆ ಬರುತ್ತಾರಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

English summary
Is it over for Hunar Hali and Mayank Gandhi? As their marriage faces a crisis, we dig into the details and find out if the couple is officially calling it quits.
Read more about: divorce marriage ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X