'ಬಿಗ್ ಬಾಸ್' ಎದುರು 'ಜೀ ಕನ್ನಡ' ಬಿಟ್ಟ ಬಾಣ : ಇದು TRP ಫೈಟ್
Recommended Video

ಕಿರುತೆರೆಯಲ್ಲಿ ಹೆಚ್ಚು ಜನ ಇಷ್ಟ ಪಡುವುದು ಸೀರಿಯಲ್ ಹಾಗೂ ರಿಯಾಲಿಟಿ ಶೋಗಳನ್ನ. ಅದೇ ಕಾರಣಕ್ಕೆ ಈ ಎರಡು ಕಾರ್ಯಕ್ರಮಗಳಿಗೆ ಒಳ್ಳೆಯ ಟಿ ಆರ್ ಪಿ ಬರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಕಲರ್ಸ್ ಹಾಗೂ ಜೀ ನಡುವೆ ನೇರ ಫೈಟ್ ಏರ್ಪಟಿದೆ.
ಕಲರ್ಸ್ ಸೂಪರ್ ವಾಹಿನಿ 'ಬಿಗ್ ಬಾಸ್' ಕಾರ್ಯಕ್ರಮದ ಮೂಲಕ ಮತ್ತೆ ಬಂದಿದೆ. ಈಗಾಗಲೇ ಕಾರ್ಯಕ್ರಮದ ದಿನಾಂಕ ನಿಗಧಿಯಾಗಿದೆ. ಕಿರುತೆರೆಯಲ್ಲಿ ದೊಡ್ಡ ಜನಪ್ರಿಯತೆ ಗಳಿಸಿರುವ ಈ ಕಾರ್ಯಕ್ರಮದ ಮೇಲೆ ನಿರೀಕ್ಷೆ ಹೆಚ್ಚಿದೆ. ಒಂದು ಕಡೆ ಬಿಗ್ ಬಾಸ್ ಕಾರ್ಯಕ್ರಮದ ಬರುತ್ತಿದ್ದರೆ ಮತ್ತೊಂದು ಕಡೆ ಜೀ ಕನ್ನಡದಲ್ಲಿಯೂ ದೊಡ್ಡ ಶೋ ಪ್ರಸಾರ ಆಗುತ್ತಿದೆ.
ಹೀಗಾಗಿ, ವೀಕೆಂಡ್ ನಲ್ಲಿ ಜೀ ಕನ್ನಡ ಹಾಗೂ ಕಲರ್ಸ್ ಸೂಪರ್ ವಾಹಿನಿಗಳ ನಡುವೆ ಸ್ಪರ್ಧೆ ನಡೆಯುತ್ತದೆ. ಮುಂದೆ ಓದಿ....

ಬಿಗ್ ಬಾಸ್ - ಸರಿಗಮಪ
'ಬಿಗ್ ಬಾಸ್' ಕಾರ್ಯಕ್ರಮ ಮತ್ತೆ ಬಂದಿದೆ. ಇದೇ ತಿಂಗಳ ರಿಂದ 'ಬಿಗ್ ಬಾಸ್ ಸೀಸನ್ 6' ಕಾರ್ಯಕ್ರಮ ಶುರು ಆಗುತ್ತಿದೆ. ಮತ್ತೊಂದು ಕಡೆ ಜೀ ಕನ್ನಡ ವಾಹಿನಿಯ 'ಸರಿಗಮಪ ಸೀಸನ್ 15' ಕಾರ್ಯಕ್ರಮ ಕೂಡ ಇದೇ ಸಮಯಕ್ಕೆ ಪ್ರಾರಂಭ ಆಗಿದೆ.

ವೀಕೆಂಡ್ ನಲ್ಲಿ ಮುಖಾಮುಖಿ
ವಾರದ ದಿನಗಳಲ್ಲಿ 'ಬಿಸ್ ಬಾಸ್' ಗೆ ಎದುರಾಳಿಯಾಗಿ ಯಾವುದೇ ಕಾರ್ಯಕ್ರಮಗಳು ಇರದಿದ್ದರೂ, ವಾರಾಂತ್ಯದಲ್ಲಿ 'ಸರಿಗಮಪ' ಫೈಟ್ ನೀಡಲಿದೆ. ಶನಿವಾರ ಹಾಗೂ ಭಾನುವಾರ ಎರಡೂ ಕಾರ್ಯಕ್ರಮಗಳು ಮುಖಾಮುಖಿ ಆಗಲಿವೆ.

ವಾರಾಂತ್ಯದಲ್ಲಿ ಒಂದೇ ಸಮಯ
'ಸರಿಗಪಮ' ಶನಿವಾರ ಹಾಗೂ ಭಾನುವಾರ ಸಂಜೆ 7.30 ರಿಂದ 9 ಗಂಟೆವರೆಗೆ ಪ್ರಸಾರ ಆಗುತ್ತಿದೆ. 'ಬಿಗ್ ಬಾಸ್' ಕಾರ್ಯಕ್ರಮ ಕೂಡ ಸಂಜೆ 8 ಗಂಟೆಗೆ ಪ್ರಸಾರ ಆಗುತ್ತಿದೆ. ಒಂದೇ ಸಮಯಕ್ಕೆ ಈ ಎರಡೂ ದೊಡ್ಡ ಕಾರ್ಯಕ್ರಮಗಳು ಇರುವ ಕಾರಣ ಕಿರುತೆರೆ ವೀಕ್ಷಕರ ವಿಭಜನೆ ಆಗುವ ಸಾಧ್ಯತೆ ಹೆಚ್ಚು ಇರುತ್ತದೆ.

ಎರಡೂ ಶೋಗಳ ವೀಕ್ಷಕರ ಬಳಗ
'ಸರಿಗಮಪ' ಹಾಗೂ 'ಬಿಗ್ ಬಾಸ್' ಕಾರ್ಯಕ್ರಮಗಳು ಒಂದೇ ಸಮಯಕ್ಕೆ ಪ್ರಸಾರ ಆದರೂ, ಅದರದರ ವೀಕ್ಷಕರ ಬಳಗ ಬೇರೆ ಬೇರೆ ಇದೆ ಎನ್ನುವುದು ಕೆಲವರ ಅಭಿಪ್ರಾಯ. ಎರಡೂ ಕಾರ್ಯಕ್ರಮಗಳಗೆ ವೀಕ್ಷಕರನ್ನು ಸೆಳೆಯುವ ತನ್ನದೆ ಶಕ್ತಿ ಇದ್ದು, 'ಬಿಗ್ ಬಾಸ್' ಮತ್ತು 'ಸರಿಗಮಪ' ಎರಡೂ ಶೋಗಳು ಕ್ಲಿಕ್ ಆಗುತ್ತೆ ಅಂತಾರೆ ಕೆಲ ವೀಕ್ಷಕರರು.


Click it and Unblock the Notifications











